ಕೊರೋನಾದಿಂದ ಕೆಲಸ ಕಳೆದ ಕೊಂಡವರ ಹಸಿವು ನೀಗಿಸಿದ ಯುವಕರ ತಂಡ ; ನೂರು ದಿನಗಳಿಂದ ನಡೆದಿರುವ ಅನ್ನದಾಸೋಹಕ್ಕೆ ಮೆಚ್ಚುಗೆ

ಬೆಳಗ್ಗೆ ಹಾಲು, ತಿಂಡಿ ಮತ್ತು ಮಧ್ಯಾಹ್ನ ಊಟವನ್ನು ನೂರು ದಿನಗಳಿಂದಲೂ ಮಾಡಿಕೊಂಡು ಬಂದಿದ್ದಾರೆ. ಇದರ ಜೊತೆಗೆ ವಾರದಲ್ಲಿ ಎರಡು ಬಾರಿ ತರಕಾರಿ ಕಿಟ್ ಗಳನ್ನು ಸಹ ವಿತರಣೆ ಮಾಡುತ್ತಿದ್ದಾರೆ

news18-kannada
Updated:July 11, 2020, 12:02 AM IST
ಕೊರೋನಾದಿಂದ ಕೆಲಸ ಕಳೆದ ಕೊಂಡವರ ಹಸಿವು ನೀಗಿಸಿದ ಯುವಕರ ತಂಡ ; ನೂರು ದಿನಗಳಿಂದ ನಡೆದಿರುವ ಅನ್ನದಾಸೋಹಕ್ಕೆ ಮೆಚ್ಚುಗೆ
ಅನ್ನದಾಸೋಹ ನಡೆಸುತ್ತಿರುವ ಯುವಕರ ತಂಡ
  • Share this:
ದೊಡ್ಡಬಳ್ಳಾಪುರ(ಜುಲೈ. 10): ಕೊರೋನಾ ವೈರಸ್ ನಿಂದ ಜಾರಿಯಾದ ಲಾಕ್ ಡೌನ್ ನಿಂದ ಲಕ್ಷಾಂತರ ಜನ ಉದ್ಯೋಗ ಕಳೆದು ಕೊಂಡಿದ್ದಾರೆ, ಕೆಲಸ ಇಲ್ಲದೆ  ಹಸಿವಿನಿಂದ ನರಳುತ್ತಿದ್ದಾರೆ, ಇಂತಹ ಜನರ ಹಸಿವು ನೀಗಿಸಲು ಯುವಕರ  ತಂಡ ಸತತ 100 ದಿನಗಳಿಂದ ಅನ್ನದಾಸೋಹ ನಡೆಸುತ್ತಿದೆ. ಸ್ವತಃ ಕೈಲಾದ ಹಣ, ದಿನಸಿ ಬರಿಸಿ ಯುವಕರೆ ಊಟ ತಯಾರಿಸಿ ಬಡಿಸುತ್ತಿದ್ದಾರೆ. ಯುವಕರ ತಮ್ಮ ಸುತ್ತಲಿನ ಪ್ರದೇಶ ಹೊರತುಪಡಿಸಿ ಯಾರೆ ಬಂದರು ಕೈಲಾದಷ್ಟು ಶಕ್ತಿ ಮೀರಿ ಮಾಡುತ್ತಿರುವ ಅನ್ನದಾನಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ದರ್ಗಾಜೋಗಹಳ್ಳಿಯಲ್ಲಿ ಬಹುತೇಕ ಗಾರ್ಮೆಂಟ್ಸ್ ಮತ್ತು  ಕೂಲಿ ಕಾರ್ಮಿಕರು  ವಾಸವಾಗಿರುವ, ಕೊರೋನಾದಿಂದ ಜಾರಿಯಾದ ಲಾಕ್ ಡೌನ್ ನಿಂದ ಕೆಲಸವಿಲ್ಲದೇ ಜನ ಕಷ್ಟ ಪಡುತ್ತಿದ್ದರು. ಇವರ ಕಷ್ಟಕ್ಕೆ ಮೀಡಿದ ಮಲ್ಲೇಶ್ ಮತ್ತು ಯುವಕರ ತಂಡ ಆಹಾರ ನೀಡಲು ಮುಂದಾದರು. ಪ್ರಾರಂಭದಲ್ಲಿ ತಮ್ಮ ಸ್ವಂತ ಹಣದಲ್ಲಿ ಅನ್ನದಾಸೋಹ ಶುರು ಮಾಡಿದ ಯುವಕರ ತಂಡ ಪ್ರತಿದಿನ ಏರಿಯಾದ ಮನೆ ಗಳಿಂದಲೂ ಸಹಾಯ ದೊರೆಯುತಿದ್ದು, ಕೈಲಾದಷ್ಟು ಏರಿಯಾ ಜನರ ಸಹಾಯದಿಂದ ನೂರು ದಿನಗಳಿಂದ ಆಹಾರ ನೀಡುತ್ತಿದ್ದಾರೆ.

ಲಾಕ್ ಡೌನ್ ಜಾರಿಯಾದ ಪ್ರಾರಂಭದಲ್ಲಿ ಬಹುತೇಕ ರಾಜಕಾರಣಿಗಳು, ಶ್ರೀಮಂತರು  ಬಡವರಿಗೆ ಆಹಾರ ಕಿಟ್ ಕೊಟ್ಟು ಮರೆಯಾದರು, ಆದರೆ, ಮಲ್ಲೇಶ್ ಮತ್ತು ಯುವಕರ  ತಂಡ ಮಾತ್ರ ಲಾಕ್ ಡೌನ್ ಶುರುವಾದ 8ನೇ ದಿನದಿಂದ ಇವತ್ತಿನವರೆಗೂ ಆಹಾರ ವಿತರಿಸುತ್ತಿದ್ದಾರೆ.

ಬೆಳಗ್ಗೆ ಹಾಲು, ತಿಂಡಿ ಮತ್ತು ಮಧ್ಯಾಹ್ನ ಊಟವನ್ನು ನೂರು ದಿನಗಳಿಂದಲೂ ಮಾಡಿಕೊಂಡು ಬಂದಿದ್ದಾರೆ. ಇದರ ಜೊತೆಗೆ ವಾರದಲ್ಲಿ ಎರಡು ಬಾರಿ ತರಕಾರಿ ಕಿಟ್ ಗಳನ್ನು ಸಹ ವಿತರಣೆ ಮಾಡುತ್ತಿದ್ದಾರೆ. ಯುವಕರ ಸೇವಾ ಮನೋಭಾವಕ್ಕೆ  ದುರ್ಗಾಜೋಗಹಳ್ಳಿಯ ಜನರ ಋಣಿಯಾಗಿದ್ದಾರೆ.

ಏರಿಯಾದ ಜನರೆ ಖುದ್ದು ಜೊತೆಯಾಗಿ ನಿಂತು ಪ್ರತಿ ದಿನ ಅನ್ನದಾಸೋಹದಕ್ಕೆ ಸಹಾಯ ಮಾಡುತ್ತಿದ್ದು, ತರಕಾರಿ, ಬೇಳೆ, ಉಪ್ಪು, ಕಾರದಂತಹ ಅಡುಗೆ ಸಾಮಗ್ರಿಗಳನ್ನು ಒಗ್ಗೂಡಿಸಿ ಅಡುಗೆ ಮಾಡುತ್ತಿದ್ದಾರೆ. ಇದೇ ವೇಳೆ ಬದಲಾದಲ್ಲಿ ಒಬ್ಬರಲ್ಲದೆ ಮತ್ತೊಬ್ಬರು ಜೊತೆ ಸೇರಿ ಹಸಿದ ಜನರಿಗಾಗಿ ಕೈಲಾದ ಸೇವೆ ಮಾಡುತ್ತಿರುವುದರ ಜೊತೆಗೆ ಹಣ ಇಲ್ಲದಿದ್ದಾಗ ಏರಿಯಾದ ಮನೆಗಳಿಂದಲೇ ಖುದ್ದು ಸಾಮಾಗ್ರಿಗಳನ್ನು ಸಂಗ್ರಹಿಸಿ ತಂಡ ತಂಡವಾಗಿ ದಾಸೋಹ ಕೆಲಸಗಳನ್ನು ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ.

ಇದನ್ನೂ ಓದಿ : ಕೊರೋನಾ ಭೀತಿ : ಗ್ರಾಮಸ್ಥರಿಗೆ ಮಾತ್ರ ಹೇರ್ ಕಟಿಂಗ್, ಶೇವಿಂಗ್..!

ಮಧ್ಯಮ ವರ್ಗ, ಬಡವರೇ ಹೆಚ್ಚಾಗಿರುವ ಪ್ರದೇಶದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮಲ್ಲೇಶ್ ಸ್ನೇಹಿತರು ತಮ್ಮ ಕಷ್ಟದ ದಿನಗಳನ್ನ ನೆನಪಿಸುತ್ತದೆ ಎಂದು ಭಾವುಕ ನುಡಿಗಳಿಂದ ನೆಮ್ಮದಿ ಸಿಗುತ್ತಿರುವ ಬಗ್ಗೆ ಹರ್ಷ ವ್ಯಕ್ತ ಪಡಿಸಿದ್ದಾರೆ.

ಸುತ್ತಮುತ್ತಲಿನ ಪ್ರದೇಶಗಳ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ. ಸ್ವತಃ ಅನೇಕ ಯುವಕರು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದವರೆ, ಕಾರ್ಮಿಕರ ಕಷ್ಟ ಗೊತ್ತಿದ್ದು ನಮ್ಮಲ್ಲೂ ಕೆಲವರು ಕೆಲಸ ಕಳೆದುಕೊಂಡು ಕಷ್ಟದಲ್ಲಿ ಇರುವುದನ್ನ ಕಣ್ಣೆದುರೆ ನೋಡಿ ಕೈಲಾದ ಸಹಾಯವನ್ನ ಮಾಡಲು ಮುಂದಾಗಿರುವುದಾಗಿ ಮಲ್ಲೇಶ್ ಅಭಿಪ್ರಾಯ ಪಟ್ಟಿದ್ದಾರೆ.
Published by: G Hareeshkumar
First published: July 10, 2020, 11:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading