HOME » NEWS » District » MONKEYS VISIT TO JUMMA MASJID IN GADAG SURPRISES VILLAGERS OF BOTH HINDU AND MUSLIM COMMUNITY SNVS

ಗದಗ್​ನ ಸೊರಟೂರಿನ ಜುಮ್ಮಾ ಮಸೀದಿಯಲ್ಲಿ ಮೊಹರಂನಲ್ಲಿ ಪಾಲ್ಗೊಂಡ ವಾನರಗಳ ಗುಂಪು

ಗದಗ್​ನ ಸೊರಟೂರಿನ ಜುಮ್ಮಾ ಮಸೀದಿಯಲ್ಲಿ ಮೊಹರಂ ಆಚರಣೆಯಲ್ಲಿ ಅಷ್ಟೊಂದು ಜನ ಜಾತ್ರೆಯಿದ್ದರೂ ಮಂಗಗಳು ಯಾರಿಗೂ ಹೆದರದೆ ಕುಳಿತುಕೊಂಡು ಅಚ್ಚರಿಗೆ ಕಾರಣವಾಗಿದೆ. ನಂತರ ಮೌಲಾನಾ ಲೋಭಾನ ಹಾಕಿದ ನಂತರ ಮಂಗಗಳು ಸ್ಥಳದಿಂದ ಖಾಲಿ ಮಾಡಿವೆ. ಈ ಅಚ್ಚರಿ ಕಂಡು ಜನರು ಬೆರಗಾಗಿದ್ದಾರೆ.

news18-kannada
Updated:August 30, 2020, 6:07 PM IST
ಗದಗ್​ನ ಸೊರಟೂರಿನ ಜುಮ್ಮಾ ಮಸೀದಿಯಲ್ಲಿ ಮೊಹರಂನಲ್ಲಿ ಪಾಲ್ಗೊಂಡ ವಾನರಗಳ ಗುಂಪು
ಗದಗ್​ನ ಸೊರಟೂರಿನ ಜುಮ್ಮಾ ಮಸೀದಿಯಲ್ಲಿ ಮಂಗಗಳು
  • Share this:
ಗದಗ: ಮುಸ್ಲಿಂ ಪ್ರಾರ್ಥನಾ ಮಂದಿರಕ್ಕೆ ತೆರಳಿದ ವಾನರ ಸೈನ್ಯ.. ಅಲ್ಲಿ ದೇವರ ಮುಂದೆ ಕುಳಿತು ಪ್ರಾರ್ಥನೆ ಮಾಡಿದ ಮಂಗಗಳು... ಲೋಭಾನ ಹಾಕಿದ ನಂತರ ಸ್ಥಳ ಖಾಲಿ ಮಾಡಿದ ವಾನರ ಸೈನ್ಯ…. ಈ ಎಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಗದಗ ತಾಲೂಕಿನ ಸೊರಟೂರ ಗ್ರಾಮ.

ಸೊರಟೂರಿನ ಜುಮ್ಮಾ ಮಸೀದಿಯಲ್ಲಿ ಮೊಹರಂ ಹಬ್ಬದ ಅಂಗವಾಗಿ ಇಡೀ ಗ್ರಾಮದ ಜನರು ಮಸೀದಿಗೆ ಬಂದು ಲೋಭಾನ ಹಾಕಿ ದೇವರ ದರ್ಶನ ಪಡೆಯೋದು ವಾಡಿಕೆ.‌ ಈ ವೇಳೆ ನಾಲ್ಕೈದು ಮಂಗಗಳ ಗುಂಪು ಮಸೀದಿ ಪ್ರವೇಶಿಸಿದೆ. ಒಂದು ಮಂಗ ಮಾತ್ರ ಮನುಷ್ಯರು ಹೇಗೆ ಲೋಭಾನದ ಮುಂದೆ ಕಳಿತ್ತುಕೊಳ್ಳುತ್ತಾರೆ ಹಾಗೇ ಕೆಲವೊತ್ತು ಕುಳಿತುಕೊಂಡಿದೆ. ಅದು ಸಹ ಲೋಭಾನ ಹಾಕಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಅಷ್ಟೊಂದು ಜನ ಜಾತ್ರೆಯಿದ್ದರೂ ಮಂಗಗಳು ಯಾರಿಗೂ ಹೆದರದೆ ಕುಳಿತುಕೊಂಡು ಅಚ್ಚರಿಗೆ ಕಾರಣವಾಗಿದೆ. ನಂತರ ಮೌಲಾನಾ ಲೋಭಾನ ಹಾಕಿದ ನಂತರ ಮಂಗಗಳು ಸ್ಥಳದಿಂದ ಖಾಲಿ ಮಾಡಿವೆ. ಈ ಅಚ್ಚರಿ ಕಂಡು ಜನರು ಬೆರಗಾಗಿದ್ದಾರೆ.

ಇದನ್ನೂ ಓದಿ: ಕೆಜಿಎಫ್​ನಲ್ಲಿ ಪುಡಿರೌಡಿಗಳ ಅಟ್ಟಹಾಸ; ಕುಡಿದ ಮತ್ತಿನಲ್ಲಿ ಲಾಂಗ್ ಹಿಡಿದು ಜನರನ್ನು ಹೆದರಿಸುತ್ತಿದ್ದವರ ಬಂಧನ

ಸೊರಟೂರ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಹಿಂದು ಮುಸ್ಲಿಂ ಬಾಂಧವರು ಸೇರಿಕೊಂಡು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡ್ತಾರೆ. ನೂರಾರು ವರ್ಷಗಳಿಂದ ಮೊಹರಂ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಆದ್ರೆ ಈ ಬಾರಿ ಕರೊನಾ ಹಾವಳಿ ಇರುವುದರಿಂದ ಜನಪದ ಕಲೆಗಳ ಪ್ರದರ್ಶನದ ಬದಲು ಸರಳವಾಗಿ ಮೊಹರಂ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಆದರೆ, ಈ ಬಾರಿ ಏಕಾಏಕಿ ವಾನರ ಸೈನ್ಯ ಜುಮ್ಮಾ ಮಸೀದಿಗೆ ಬಂದಿರೋದು ಅಚ್ಚರಿಗೆ ಕಾರಣವಾಗಿದೆ. ಈ ಅಚ್ಚರಿಯನ್ನು ಹಿಂದು- ಮುಸ್ಲಿಂ ಬಾಂಧವರು ಕಣ್ತುಂಬಿಕೊಂಡಿದ್ದಾರೆ. ಮಂಗಗಳು ಮಸೀದಿಗೆ ಬಂದಿರೋ ಸುದ್ದಿಯನ್ನು ತಿಳಿದ ಗ್ರಾಮಸ್ಥರು ಹಾಗೂ ಅಕ್ಕಪಕ್ಕ ಗ್ರಾಮಗಳ ಜನರು ಸಹ ಕುತೂಹಲದಿಂದ ಮಸೀದಿಗೆ ಬಂದು ದೇವರ ದರ್ಶನ ಪಡೆಯುತ್ತಿದ್ದಾರೆ.

Youtube Video


ಕಾಕತಾಳೀಯ ಎನ್ನುವಂತೆ ಆಂಜನೇಯ ಸ್ವರೂಪಿಯಾದ ವಾನರಗಳು ಅಲ್ಲಾಹುನ ಬಳಿ ಬಂದಿರೋದು ವಿಸ್ಮಯ ಎನ್ನಲಾಗುತ್ತದೆ. ಹಿಂದು ಮುಸ್ಲಿಂ ಸಾಮರಸ್ಯದ ಹಬ್ಬ ಮೊಹರಂದಲ್ಲಿ ವಾನರ ಸೈನ್ಯ ಮಾಡಿದ ಅಚ್ಚರಿಯಿಂದ ಜನರು ಭಕ್ತಿ ಸಾಗರದಲ್ಲಿ ಮುಳಗಿದ್ದಾರೆ.

ವರದಿ: ಸಂತೋಷ ಕೊಣ್ಣೂರ
Published by: Vijayasarthy SN
First published: August 30, 2020, 6:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories