• Home
  • »
  • News
  • »
  • district
  • »
  • Monkey Menace: ಆಸ್ಪತ್ರೆ ವಾರ್ಡ್ ಒಳಗೆ ಕೋತಿ ಕಾಟ, ಮಕ್ಕಳ ಆಸ್ಪತ್ರೆಯಲ್ಲಿ ಮಂಚದಿಂದ ಮಂಚಕ್ಕೆ ಜಿಗಿಯುತ್ತಿವೆ ಮಂಗಗಳು!

Monkey Menace: ಆಸ್ಪತ್ರೆ ವಾರ್ಡ್ ಒಳಗೆ ಕೋತಿ ಕಾಟ, ಮಕ್ಕಳ ಆಸ್ಪತ್ರೆಯಲ್ಲಿ ಮಂಚದಿಂದ ಮಂಚಕ್ಕೆ ಜಿಗಿಯುತ್ತಿವೆ ಮಂಗಗಳು!

ಹಾಸಿಗೆ ಮೇಲೆ ಮಂಗ-ಹೌಹಾರಿದ ರೋಗಿಗಳು

ಹಾಸಿಗೆ ಮೇಲೆ ಮಂಗ-ಹೌಹಾರಿದ ರೋಗಿಗಳು

Monkey Problem in Hospital: ಚಿಕ್ಕ ಮಕ್ಕಳ ವಾರ್ಡ್ ಗೆ ನುಗ್ಗಿದ ಮಂಗ ಎಲ್ಲೆದರಲ್ಲಿ ಓಡಾಡಿ ಮಕ್ಕಳು ಮತ್ತು ಬಾಣಂತಿಯರನ್ನ ಭಯಭೀತಗೊಳಿಸಿತ್ತು. ಮುಖ್ಯದ್ವಾರದಿಂದಲೇ ಬಂದ ಮಂಗ ವಾರ್ಡ್ ಒಳಗಡೆ ನುಗ್ಗಿ ಅಡ್ಡಾದಿಡ್ಡಿ ಓಡಾಡಿ ತನ್ನ ಉಪಟಳ ಮೆರೆದಿದೆ. ಇದರಿಂದ ವೈದ್ಯರು ಕೂಡಾ ಚಿಕಿತ್ಸೆ ನೀಡೋಕೆ ಭಯಪಡುವಂತಾಗಿದೆ.

ಮುಂದೆ ಓದಿ ...
  • Share this:

ಗದಗ: ಮುದ್ರಣ ಕಾಶಿ ಗದಗನ ಮಕ್ಕಳ ಆಸ್ಪತ್ರೆಯಲ್ಲಿ ಮಂಗಗಳ ಹಾವಳಿ(Monkey Menace) ಹೆಚ್ಚಾಗಿದೆ. ಅವುಗಳ ಉಪಟಳ ಎಷ್ಟೆಂದರೆ ಬೆಡ್ ನಲ್ಲಿ ಸಲೈನ್ ಸಮೇತ ಮಲಗಿಕೊಂಡ ಮಕ್ಕಳು (Children) ಎದ್ದು ಓಡಾಡುವಂತಾಗಿದೆ. ಆಪರೇಷನ್ ಮಾಡಿಸಿಕೊಂಡು ನಿದ್ರೆಯಲ್ಲಿದ್ದ ಬಾಣಂತಿ ಎದ್ದು ಚಡಪಟಿಸುವಂತಾಗಿದೆ. ಇವುಗಳ ಉಪಟಳ ಮಕ್ಕಳಿಗೆ ಬಾಣಂತಿಯರಿಗೆ ಭಯ ಹುಟ್ಟಿಸಿದೆ. ಮಂಗಗಳ ಕಾಟದಿಂದ ಮುಕ್ತಿಗೊಳಿಸಿ ಅಂತ ಬಾಣಂತಿಯರು ಮಕ್ಕಳು ಅಂಗಲಾಚಿದರೂ ವೈದ್ಯಾಧಿಕಾರಿಗಳು (Health Officials) ಮಾತ್ರ ಗಪ್ ಚುಪ್ ಆಗಿದ್ದಾರೆ..ಹೌದು ಒಂದು ದಿನ ಅಲ್ಲ ಎರಡು ದಿನ ಅಲ್ಲ... ಎಷ್ಟೋ ತಿಂಗಳಾಯ್ತು, ವರ್ಷಗಳೇ ಕಳೆದವು ಇಲ್ಲಿನ ಮಂಗಗಳ ಹಾವಳಿಯನ್ನ ವೈದ್ಯಾಧಿಕಾರಿಗಳು ಮಾತ್ರ ತಪ್ಪಿಸ್ತಿಲ್ಲ. ಇದು ಗದಗ ನಗರದ ಕೆ ಸಿ ರಾಣಿ ರಸ್ತೆಯಲ್ಲಿರುವ ದಂಡಪ್ಪ ಮಾನ್ವಿ ಸರಕಾರಿ ಹೆರಿಗೆ ಆಸ್ಪತ್ರೆಯ (Government Hospital Gadag) ರೋಗಿಗಳ ಭಯದ ಕಥೆ ಇದು.  ಆಸ್ಪತ್ರೆಗೆ ರೋಗಿಗಳು ಬರ್ತಾರೋ ಇಲ್ವೋ ಆದ್ರೆ ದಿನದ 24 ಗಂಟೆಗಳ ಕಾಲ ಮಂಗಗಳ ದಂಡು ಇಲ್ಲಿ ಬೀಡುಬಿಟ್ಟಿರ್ತವೆ.


ಅವುಗಳ ಉಪಟಳ ಎಷ್ಟಿದೆ ಅಂದ್ರೆ ಇಲ್ಲಿಗೆ ಚಿಕಿತ್ಸೆಗೆ ಬಂದವರು ನೆಮ್ಮದಿಯಿಂದ ಗುಣವಾಗಿ ಹೋಗುವಂತಿಲ್ಲ. ಯಾಕೆಂದರೆ ರೋಗಿಗಳು ಮಲಗುವ ಬೆಡ್ ಗಳ ಮೇಲೆ ಮಂಗಗಳೂ ಓಡಾಡ್ತಿವೆ. ಇಂದು ಇದೇ ಭಯದ ವಾತಾವರಣ ಇಲ್ಲಿ ನಿರ್ಮಾಣವಾಗಿತ್ತು. ಚಿಕ್ಕ ಮಕ್ಕಳ ವಾರ್ಡ್ ಗೆ ನುಗ್ಗಿದ ಮಂಗ ಎಲ್ಲೆದರಲ್ಲಿ ಓಡಾಡಿ ಮಕ್ಕಳು ಮತ್ತು ಬಾಣಂತಿಯರನ್ನ ಭಯಭೀತಗೊಳಿಸಿತ್ತು. ಮುಖ್ಯದ್ವಾರದಿಂದಲೇ ಬಂದ ಮಂಗ ವಾರ್ಡ್ ಒಳಗಡೆ ನುಗ್ಗಿ ಅಡ್ಡಾದಿಡ್ಡಿ ಓಡಾಡಿ ತನ್ನ ಉಪಟಳ ಮೆರೆದಿದೆ. ಇದರಿಂದ ವೈದ್ಯರು ಕೂಡಾ ಚಿಕಿತ್ಸೆ ನೀಡೋಕೆ ಭಯಪಡುವಂತಾಗಿದೆ.


ಇನ್ನು ಕಳೆದ ಐದಾರು ತಿಂಗಳ ಹಿಂದೆ ಮಗುವಿನ ಮೇಲೆ ದಾಳಿ ಮಾಡಿ ಮಗುವಿನ ಹೊಟ್ಟೆ ಹರಿದಿತ್ತು. ಇದರಿಂದ ಆ ಮಗು ಸಾವು ಬದುಕಿನ ನಡುವೆ ಹೋರಾಟ ನಡೆಸಿತ್ತು. ಇಂತಹ ಘಟನೆ ನಡೆದರೂ ಸಹ ಸಿಬ್ಬಂದಿ ಎಚ್ಚೆತ್ತುಕೊಂಡಿರಲಿಲ್ಲ. ಆದರೆ ಈಗ ಮತ್ತೆ ಆಸ್ಪತ್ರೆಯಲ್ಲಿ ಮಂಗಗಳು ದಾಳಿ ಮಾಡ್ತಿವೆ. ರೋಗಿಗಳಿಗೆ ತಂದಿರುವ ಹಣ್ಣು ಹಂಪಲು ತಿನ್ನೋದಕ್ಕೆ ಆಹಾರ ಅರಿಸಿ ಬಂದು ರೋಗಿಗಳ ಮೇಲೆ ದಾಳಿ ಮಾಡ್ತಿವೆ. ಆದ್ರೆ ಇದ್ಯಾವುದಕ್ಕೂ ಕ್ಯಾರೆ ಎನ್ನದೆ ವೈದ್ಯಾಧಿಕಾರಿಗಳು ಗಪ್ ಚುಪ್ ಆಗಿದ್ದಾರೆ. ಕಳೆದ ಎರಡ್ಮೂರು ದಿನಗಳ ಹಿಂದೆ ಒಂದೇ ಬೆಡ್ ನಲ್ಲಿ ಇಬ್ಬರು ಮಕ್ಕಳನ್ನು ಹಾಕಿ ಎಡವಟ್ಟು ಮಾಡಿದ್ದರು.


ಇದನ್ನೂ ಓದಿ: Gadag Govt Hospital: ಒಂದೇ ಬೆಡ್ ಮೇಲೆ ಇಬ್ಬರು ಮಕ್ಕಳಿಗೆ ಚಿಕಿತ್ಸೆ.. ಗದಗ ಸರ್ಕಾರಿ ಆಸ್ಪತ್ರೆಯ ಅವಸ್ಥೆ!


ಮೊದಲೇ ಹೆಚ್ಚಿನ ಮಕ್ಕಳ ನೆಗಡಿ, ಕೆಮ್ಮು ಜ್ವರದಂತ ಕಾಯಿಲೆಗಳಿಂದ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರ್ತಾಯಿದ್ದಾರೆ. ಸರಿಯಾಗಿ ವೈದ್ಯರು ಇರೋದಿಲ್ಲ ಎನ್ನುವ ಆರೋಪ ಕೂಡಾ ಇದೆ. ಇದರ ನಡುವೆ ಈಗ ಮಂಗಗಳ ಕಾಟ ಬೇರೆ. ಮಂಗಗಳ ನಿಯಂತ್ರಣ ಮಾಡುವಂತೆ ರೋಗಿಗಳ ಸಂಬಂಧಿಕರು ಹೇಳಿದರು ಕ್ಯಾರೆ ಎನ್ನುತ್ತಿಲ್ಲ. ಇನ್ನೂ ರೋಗಿಗಳು ಎಷ್ಟೋ ಬಾರಿ ಅಲ್ಲಿನ ಸಿಬ್ಬಂದಿಗೆ ತಿಳಿಸಿದರು ಕಿವಿಗೊಡುತ್ತಿಲ್ಲ.


ಇದರಿಂದ ಇಂತಹ ಅವ್ಯವಸ್ಥೆಯನ್ನ ಸರಿಪಡಿಸಬೇಕೆಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಒಂದು ಕಡೆ ಬೆಡ್ ಗಳ ಅಭಾವದಿಂದ ಕಂಗಾಲಾಗಿದ್ದ ರೋಗಿಗಳು ಈಗ ಮಂಗಗಳ ಹಾವಳಿವೆ ಬೆಚ್ಚಿಬಿದ್ದಿದ್ದಾರೆ. ಎಲ್ಲಿ ಏನಾಗಿಬಿಡುತ್ತೋ ಅಂತ ಭಯಭೀತರಾಗಿದ್ದಾರೆ. ಇನಾದ್ರು ಗದಗ ಜಿಮ್ಸ್ ನಿರ್ದೆಶಕರಾದ ಡಾ: ಪಿ ಎಸ್ ಭೂಸರೆಡ್ಡಿ ಅವರು ಇಲ್ಲಿನ ಅವ್ಯವಸ್ಥೆಯನ್ನ ಹೋಗಲಾಡಿಸಬೇಕಿದೆ.


ಇದನ್ನೂ ಓದಿ: ಕೂಡಿಟ್ಟ ವ್ಯಾಕ್ಸಿನ್ ಖರ್ಚಾಗದೆ ಗೋಳಾಟ : ಲಸಿಕೆ‌ ವಾಪಾಸ್ ಖರೀದಿಸುವಂತೆ ಖಾಸಗಿ ಆಸ್ಪತ್ರೆಗಳ ದುಂಬಾಲು


ಒಟ್ಟಿನಲ್ಲಿ ಅನಾರೋಗ್ಯ ಉಂಟಾದಾಗ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಹೋಗೋ ಆಲೋಚನೆಯಲ್ಲಿ ಆಸ್ಪತ್ರೆಗೆ ಬಂದ ರೋಗಿಗಳು ಹೀಗೆ ಮಂಗಗಳ ಆರ್ಭಟ ನೋಡಿ ಮತ್ತಷ್ಟು ಆತಂಕಕ್ಕೆ ಒಳಗಾಗೋದಂತೂ ಸತ್ಯ. ಇನ್ನು ಪುಟ್ಟ ಮಕ್ಕಳು ಮತ್ತು ಬಾಣಂತಿಯರ ಆರೋಗ್ಯ ಬಹಳ ಸೂಕ್ಷ್ಮವಾಗಿರುತ್ತದೆ. ಪ್ರಾಣಿಗಳೆಲ್ಲಾ ಒಳಬಂದರೆ ಅದರಿಂದ ಅವರ ಆರೋಗ್ಯ ಮತ್ತು ಸುರಕ್ಷತೆಗೂ ಅಪಾಯ ಖಂಡಿತಾ ಎನ್ನುವ ಮಾತು ಸಾರ್ವಜನಿಕರದ್ದು. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕಿದೆ.

Published by:Soumya KN
First published: