ಅನಾರೋಗ್ಯದಿಂದ ಕೋತಿ ಸಾವು; ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಿ ಸಮಾಧಿ ನಿರ್ಮಿಸಿದ ಗ್ರಾಮಸ್ಥರು

ಎಲ್ಲಕ್ಕಿಂತಲೂ ಮುಖ್ಯವಾಗಿ ನಾವು ರಸ್ತೆಯಲ್ಲಿ ಓಡಾಡುವ ಸಂದರ್ಭದಲ್ಲಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ನಾವು ಪ್ರಾಣಿ, ಪಕ್ಷಿಗಳ ಮೇಲೆ ವಾಹನಗಳನ್ನ ಹರಿಸಿಬಿಡುತ್ತೇವೆ. ಅಂತಹ ಸಂದರ್ಭದಲ್ಲಿ ನಾವು ಅವುಗಳಿಗೆ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆಯಬೇಕು. ಯಾಕೆಂದರೆ ಪ್ರಾಣಿ, ಪಕ್ಷಿಗಳು ನಮ್ಮ ಬದುಕಿನ ಭಾವನಾತ್ಮಕ ಸೆಳೆತಗಳು. ಹಾಗಾಗಿ ನಾವು ಅವುಗಳನ್ನ ಕಾಪಾಡಿಕೊಳ್ಳಬೇಕಿದೆ ಎಂದರು.

ಕೋತಿಗೆ ಸಮಾಧಿ ನಿರ್ಮಿಸಿರುವುದು.

ಕೋತಿಗೆ ಸಮಾಧಿ ನಿರ್ಮಿಸಿರುವುದು.

  • Share this:
ರಾಮನಗರ (ಚನ್ನಪಟ್ಟಣ): ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ತಗಚಗೆರೆ ಗ್ರಾಮದಲ್ಲಿ ಕಳೆದ ವಾರ ಕೋತಿಯೊಂದು ಅನಾರೋಗ್ಯದಿಂದ ಸಾವನ್ನಪ್ಪಿತ್ತು. ಕೋತಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಗ್ರಾಮದ ಶಿಕ್ಷಕರಾಗಿರುವ ನಾಗರಾಜು ಅವರು ಗ್ರಾಮದ ಜನರೊಂದಿಗೆ ಸೇರಿ ಕೋತಿಯ ಅಂತ್ಯಕ್ರಿಯೆ ನಡೆಸಿದ್ದರು. ಇನ್ನು ಇವತ್ತಿಗೆ 11 ದಿನದ ತಿಥಿ ಕಾರ್ಯ ನೆರವೇರಿಸಿದ ನಾಗರಾಜು ಹಾಗೂ ಗ್ರಾಮದ ಜನರು ಪ್ರಸಾದ ವಿನಿಯೋಗ ಸಹ ಮಾಡಿದರು.

ಗ್ರಾಮದ ಮಾಸ್ತಮ್ಮ ತಾಯಿಯ ದೇವಸ್ಥಾನದ ಆವರಣದಲ್ಲಿ ಮೃತ ಕೋತಿಗೆ ಸಮಾಧಿ ನಿರ್ಮಾಣ ಮಾಡಿ, ಜೈ ಭಜರಂಗಿ ಎಂಬ ಕಲ್ಲನ್ನು ಪ್ರತಿಸ್ಥಾಪನೆ ಮಾಡುವ ಮೂಲಕ ಪುಟ್ಟದಾಗಿ ಗುಡಿ ನಿರ್ಮಾಣ ಮಾಡಲು ಚಿಂತನೆ ನಡೆಸಿದ್ದಾರೆ. ಅಂತ್ಯಕ್ರಿಯೆಯಲ್ಲಿ ಗ್ರಾಮದ ಮಕ್ಕಳು, ಹಿರಿಯರು ಭಾಗವಹಿಸಿದ್ದರು. ಬೆಲ್ಲದನ್ನ, ಮೊಸರನ್ನ ಎಡೆಯಿಟ್ಟು ಪೂಜೆ ಸಲ್ಲಿಸಿ ಜನ ಕೋತಿಯ ಆತ್ಮಕ್ಕೆ ಶಾಂತಿ ಸಿಗಲೆಂದು ಒಂದು ನಿಮಿಷಗಳ ಕಾಲ ಮೌನಾಚರಣೆ ನಡೆಸಿದರು.

ಇದನ್ನು ಓದಿ: Schools Reopening: ಕರ್ನಾಟಕದಲ್ಲಿ ಜನವರಿ 1ರಿಂದ ಶಾಲೆಗಳು ಪುನರಾರಂಭ

ಇನ್ನು ಈ ವಿಚಾರವಾಗಿ ಮಾತನಾಡಿದ ಶಿಕ್ಷಕ ನಾಗರಾಜು ನಮ್ಮ ಮನೆಯ ಹತ್ತಿರದಲ್ಲಿಯೇ ಕೋತಿಯೊಂದು ಅನಾರೋಗ್ಯದಿಂದ ಸಾವನ್ನಪ್ಪಿತ್ತು. ಗ್ರಾಮದ ಜನರೊಂದಿಗೆ ಸೇರಿ ಕೋತಿಯ ಅಂತ್ಯಕ್ರಿಯೆಯನ್ನು ಶಾಸ್ತ್ರಗಳೊಂದಿಗೆ ಮಾಡಿದೆವು. ನಂತರ 11 ದಿನದ ತಿಥಿ ಕಾರ್ಯವನ್ನು ನೆರವೇರಿಸಿ ಕೋತಿ ಸಮಾಧಿಗೆ ಎಡೆಯಿಟ್ಟು ಪೂಜೆ ಸಲ್ಲಿಸಿಲಾಗಿದೆ. ಈ ಮೂಲಕ ನಮ್ಮ ಸಂದೇಶ ಏನೆಂದರೆ ಯಾವುದೇ ಪ್ರಾಣಿ, ಪಕ್ಷಿ ಸಾವನ್ನಪ್ಪಿದ ಸಂದರ್ಭದಲ್ಲಿ ಮನುಷ್ಯರಾದ ನಾವು ಅವುಗಳಿಗೆ ಶಾಸ್ತ್ರಗಳ ಪ್ರಕಾರವಾಗಿ ಅಂತ್ಯಕ್ರಿಯೆ ನೆರವೇರಿಸಬೇಕು. ಸತ್ತ ಪ್ರಾಣಿಗಳ ಆತ್ಮಕ್ಕೆ ಶಾಂತಿ ಕೋರಿದರೆ ಮಾನವೀಯ ಮೌಲ್ಯಗಳಿಗೆ ಬೆಲೆಯಿರುತ್ತದೆ. ಹಾಗಾಗಿ ಪ್ರತಿರೊಬ್ಬರು ಸಹ ಇಂತಹ ಮಾನವೀಯ ಗುಣಗಳನ್ನ ಮೈಗೂಡಿಸಿಕೊಳ್ಳಬೇಕು, ಇದರಿಂದಾಗಿ ನಮ್ಮ ಆಚಾರ, ವಿಚಾರಗಳ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಎಲ್ಲಕ್ಕಿಂತಲೂ ಮುಖ್ಯವಾಗಿ ನಾವು ರಸ್ತೆಯಲ್ಲಿ ಓಡಾಡುವ ಸಂದರ್ಭದಲ್ಲಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ನಾವು ಪ್ರಾಣಿ, ಪಕ್ಷಿಗಳ ಮೇಲೆ ವಾಹನಗಳನ್ನ ಹರಿಸಿಬಿಡುತ್ತೇವೆ. ಅಂತಹ ಸಂದರ್ಭದಲ್ಲಿ ನಾವು ಅವುಗಳಿಗೆ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆಯಬೇಕು. ಯಾಕೆಂದರೆ ಪ್ರಾಣಿ, ಪಕ್ಷಿಗಳು ನಮ್ಮ ಬದುಕಿನ ಭಾವನಾತ್ಮಕ ಸೆಳೆತಗಳು. ಹಾಗಾಗಿ ನಾವು ಅವುಗಳನ್ನ ಕಾಪಾಡಿಕೊಳ್ಳಬೇಕಿದೆ ಎಂದರು.

ವರದಿ : ಎ.ಟಿ.ವೆಂಕಟೇಶ್
Published by:HR Ramesh
First published: