ಯಾದಗಿರಿ ಜಿಲ್ಲಾಧಿಕಾರಿ ಆದೇಶಕ್ಕಿಲ್ಲ ಕಿಮ್ಮತ್ತು: ದಲ್ಲಾಳಿಗಳಿಂದ ಭತ್ತ ಕಟಾವು ಯಂತ್ರಕ್ಕೆ ಹೆಚ್ಚಿನ ಹಣ ವಸೂಲಿ

ಜಿಲ್ಲಾಧಿಕಾರಿಗಳು ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 1900 ರೂ ನಿಗದಿ ಮಾಡಿದ್ದಾರೆ. ಆದರೆ ದಲ್ಲಾಳಿಗಳು 2500 ರೂ ಪ್ರತಿ ಗಂಟೆಗೆ ಬಾಡಿಗೆ ಹಣ ಪಡೆಯುತ್ತಿದ್ದಾರೆ.

ಭತ್ತ

ಭತ್ತ

  • Share this:
ಯಾದಗಿರಿ: ರೈತರ ಅನಿವಾರ್ಯತೆಯನ್ನೆ ಬಂಡವಾಳ ಮಾಡಿಕೊಂಡ ದಲ್ಲಾಳಿಗಳು  ಹೆಚ್ಚಿನ ಹಣ ವಸೂಲಿ ದಂಧೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಭತ್ತ ಕಟಾವು ಮಾಡುವ ಯಂತ್ರಗಳ ಬಾಡಿಗೆ ಹಣ ಹೆಚ್ಚಿನ ಪ್ರಮಾಣದಲ್ಲಿ ವಸೂಲಿ ಮಾಡಲಾಗುತ್ತಿದೆ. ದಲ್ಲಾಳಿಗಳು ಹೆಚ್ಚಿನ ಹಣ ವಸೂಲಿ ಮಾಡುವುದನ್ನು ಅರಿತು ಖುದ್ದು ಜಿಲ್ಲಾಧಿಕಾರಿ ಡಾ.ರಾಗಾಪ್ರಿಯಾ ಅವರು ಪ್ರತಿ ಗಂಟೆಗೆ ಭತ್ತ ಕಟಾವು ಮಾಡುವ ಯಂತ್ರದ ಬಾಡಿಗೆ ಹಣ 1900 ರೂ ನಿಗದಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಆದೇಶ ಮಾಡಿದರು ದಲ್ಲಾಳಿಗಳು ಮಾತ್ರ ಆದೇಶಕ್ಕೆ ಕಿಮ್ಮತ್ತು ನೀಡುತ್ತಿಲ್ಲ. ಅಲ್ಲದೇ ದುಬಾರಿ ಬೆಲೆ ಅಂದರೆ 2500 ರೂ ಪ್ರತಿ ಗಂಟೆಗೆ ಬಾಡಿಗೆ ಹಣ ಪಡೆಯುತ್ತಿದ್ದಾರೆ. ಪರಿಣಾಮ ಅನ್ನದಾತ ಕಂಗಲಾಗಿದ್ದು, ಭತ್ತ ಕಟಾವು ಮಾಡಲು ಹೆಚ್ಚಿನ ವೆಚ್ಚ ಮಾಡುವಂತಾಗಿದೆ. ಜಿಲ್ಲೆಯ ಸುರಪುರ, ಹುಣಸಗಿ, ವಡಗೇರಾ, ಶಹಾಪುರ,ಯಾದಗಿರಿ ಮೊದಲಾದ ಕಡೆ ಈಗ ಭತ್ತದ ಬೆಳೆ ಕಟಾವು ನಡೆದಿದ್ದು ರೈತರು ಯಂತ್ರಗಳ ಕೊರತೆಯಿಂದ ಸಂಕಷ್ಟ ಎದುರಿಸುತ್ತಿದ್ದಾರೆ.

ಜಿಲ್ಲೆಯಲ್ಲಿ 1 ಲಕ್ಷ ಹೆಕ್ಟೇರ್ ಪ್ರದೇಶದ  ಭೂಮಿಯಲ್ಲಿ ರೈತರು ಭತ್ತದ ಬೆಳೆ ಬೆಳೆದಿದ್ದಾರೆ.ದಲ್ಲಾಳಿಗಳು ಯಂತ್ರಗಳ ಕೊರತೆ ಸೃಷ್ಟಿ ಮಾಡಿ ಹೆಚ್ಚಿನ ಬಾಡಿಗೆ ಹಣ ಡಿಮ್ಯಾಂಡ್ ಮಾಡುತ್ತಿದ್ದಾರೆ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಶಿವನೂರ ಗ್ರಾಮದ ರೈತ ಶಂಕರ ಪಾಟೀಲ ಮಾತನಾಡಿ, ಕೃಷಿ ಇಲಾಖೆ ಆರಂಭಿಸಿರುವ ಯಂತ್ರಧಾರೆ ಕೇಂದ್ರ ಗಲ್ಲಿ ಒಂದು ಯಂತ್ರ ಬಾಡಿಕೆ ಸಿಗುತ್ತಿಲ್ಲ. ಹೀಗಾಗಿ ನಾವು ಖಾಸಗಿ ವ್ಯಕ್ತಿಗಳಿಂದ ಯಂತ್ರ ಬಾಡಿಗೆ ಪಡೆದರೆ 2500 ರೂ ನಂತೆ ಪ್ರತಿ ಗಂಟೆಗೆ ಹಣ ಪಡೆಯುತ್ತಿದ್ದಾರೆ .ಜಿಲ್ಲಾಧಿಕಾರಿ ಅವರು 1900 ರೂ ಬಾಡಿಗೆ ನಿಗದಿ ಮಾಡಿದರು ಹೆಚ್ಚಿನ ಹಣ ಪಡೆಯುತ್ತಿದ್ದಾರೆ.

ಜಿಲ್ಲಾಧಿಕಾರಿ ಅವರು ಬಾಡಿಗೆ ಹಣ ಕೂಡ ಕಡಿಮೆ ನಿಗದಿ ಮಾಡಬೇಕಿದೆ.ಈಗಾಗಲೇ ಕೃಷಿ ಇಲಾಖೆಯಿಂದ ಆರಂಭವಾದ ಯಂತ್ರಧಾರೆ ಕೇಂದ್ರಗಳಲ್ಲಿ ಕೃಷಿ ಇಲಾಖೆ ಪ್ರತಿ ಗಂಟೆಗೆ ಭತ್ತ ಕಟಾವು ಮಾಡುವ ಯಂತ್ರಗಳ ಬಾಡಿಗೆ 1300 ರೂ ನಿಗದಿ ಮಾಡಿದೆ. 10 ಯಂತ್ರಗಳು ಮಾತ್ರ ಲಭ್ಯವಿದ್ದು ರೈತರಿಗೆ ಸಮರ್ಪಕವಾಗಿ ಸರಿಹೋಗುತ್ತಿಲ್ಲ‌. ಹೆಚ್ಚಿನ ಯಂತ್ರಗಳ ಸಿಗುವಂತೆ ಮಾಡಬೇಕೆಂದು ರೈತರ ಒತ್ತಾಯವಾಗಿದೆ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ದೇವಿಕಾ ಮಾತನಾಡಿ, ಯಂತ್ರಧಾರೆ ಕೇಂದ್ರಗಳಲ್ಲಿ 10 ಬಾಡಿಗೆ ಯಂತ್ರಗಳು ಲಭ್ಯವಿದ್ದು ರೈತರಿಗೆ ಬಾಡಿಗೆ ನಿಡಲಾಗುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿ ಅವರು ಖಾಸಗಿ ವ್ಯಕ್ತಿಗಳ ಯಂತ್ರದ ಬಾಡಿಗೆ 1900 ರೂ ನಿಗದಿ ಮಾಡಿದ್ದು, ಇದನ್ನು ಕಡಿಮೆ ಮಾಡುವಂತೆ ರೈತರು ಒತ್ತಾಯ ಮಾಡುತ್ತಿದ್ದು ಇದನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದರು.
Published by:Seema R
First published: