Handicraft Course: ಕುಶಲಕರ್ಮಿಗಳ ಉತ್ತೇಜನಕ್ಕಾಗಿ ಕನ್ನಡದಲ್ಲಿ ಲೋಕಾರ್ಪಣೆಗೊಂಡಿದೆ ಹ್ಯಾಂಡಿಕ್ರಾಫ್ಟ್ ಕೋರ್ಸ್

ಕುಶಲಕರ್ಮಿಗಳಾಗಲು ಬಯಸುವವರಿಗೆ ಪ್ರತ್ಯೇಕವಾಗಿ ಕನ್ನಡದಲ್ಲಿ ಒಂದು ಹ್ಯಾಂಡಿಕ್ರಾಫ್ಟ್ ಕೋರ್ಸ್ ವಿನ್ಯಾಸಗೊಳಿಸಲಾಗಿದೆ.

Anitha E | news18-kannada
Updated:October 17, 2020, 3:44 PM IST
Handicraft Course: ಕುಶಲಕರ್ಮಿಗಳ ಉತ್ತೇಜನಕ್ಕಾಗಿ ಕನ್ನಡದಲ್ಲಿ ಲೋಕಾರ್ಪಣೆಗೊಂಡಿದೆ ಹ್ಯಾಂಡಿಕ್ರಾಫ್ಟ್ ಕೋರ್ಸ್
ಹ್ಯಾಂಡಿ ಕ್ರಾಫ್ಟ್ಸ್ ಕೋರ್ಸ್ ಲೋಕಾರ್ಪಣೆ ಮಾಡಿದ ಕಾಸಿಯಾ ಅಧ್ಯಕ್ಷ ಅರಸಪ್ಪ
  • Share this:
ಕುಶಲಕರ್ಮಿಗಳಾಗಬೇಕು, ಅದೇ ಕ್ಷೇತ್ರದಲ್ಲಿ ಸ್ವಂತ ಉದ್ಯಮ ಕಟ್ಟಬೇಕು ಎನ್ನುವವರಿಗಾಗಿ ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಶಿಯಲ್ ಫ್ರೀಡಂ ಆ್ಯಪ್​ನಲ್ಲಿ ಕನ್ನಡದಲ್ಲಿ ರೂಪಿಸಲಾಗಿರುವ ಹ್ಯಾಂಡಿಕ್ರಾಫ್ಟ್ ಕೋರ್ಸ್ ಅನ್ನು ಕಾಸಿಯಾ ಅಧ್ಯಕ್ಷ ಕೆ.ಬಿ. ಅರಸಪ್ಪ ಲೋಕಾರ್ಪಣೆಗೊಳಿಸಿದರು. ಬೆಂಗಳೂರಿನ ಶಾಂತಿನಗರದ ಇಂಡಿಯನ್ ಮನಿ ಡಾಟ್ ಕಾಂ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕೋರ್ಸ್​ ಅನ್ನು ಲಾಂಚ್​ ಮಾಡಿ, ಮಾತನಾಡಿದ ಅವರು, ಕೋವಿಡ್​ನಿಂದಾಗಿ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ. ಈಗ ಉದ್ಯೋಗದ ಹುಡುಕಾಟ ಮಾಡುವ ಬದಲು ಉದ್ಯಮಿಗಳಾಗುವ ಬಗ್ಗೆ ಯೋಚಿಸಬೇಕಿದೆ. ಉದ್ಯಮಿಗಳ ಸಂಖ್ಯೆ ಹೆಚ್ಚಳವಾದಾಗ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುವ ಜತೆಗೆ ಉದ್ಯೋಗ ಸೃಷ್ಟಿಯಾಗಿ ಆರ್ಥಿಕತೆ ಸರಿದಾರಿಗೆ ಬರುತ್ತದೆ. ಈ ನಿಟ್ಟಿನಲ್ಲಿ ಫೈನಾನ್ಶಿಯಲ್ ಫ್ರೀಡಂ ಆ್ಯಪ್​ನಲ್ಲಿ ಕುಶಲಕರ್ಮಿಗಳಾಗಲು ಬಯಸುವವರಿಗೆ ಪ್ರತ್ಯೇಕವಾಗಿ ಕನ್ನಡದಲ್ಲಿ ಹ್ಯಾಂಡಿಕ್ರಾಫ್ಟ್ ಕೋರ್ಸ್ ವಿನ್ಯಾಸಗೊಳಿಸಿರುವುದು ಅರ್ಥಪೂರ್ಣವಾಗಿದೆ. ಕೋರ್ಸ್​ನಲ್ಲಿ ಹಂತ ಹಂತವಾಗಿ ಎಲ್ಲವನ್ನೂ ವಿವರಿಸಲಾಗಿದೆ.

ದೊಡ್ಡ ನಗರಗಳಿಂದ ಹಿಡಿದು ಸಣ್ಣ ಪಟ್ಟಣಗಳು ಹಾಗೂ ಹಳ್ಳಿಗಳಲ್ಲಿ ವಾಸ ಮಾಡುತ್ತಿರುವ ಜನರು ಕೂಡ ಈ ಕೋರ್ಸ್​ನ ಅನುಕೂಲ ಪಡೆಯಬಹುದಾಗಿದೆ. ಉತ್ಸಾಹಿ ಯುವಕರು ಈ ರೀತಿಯ ಕಲಿಕೆ ಆ್ಯಪ್​ಗಳ ಸಹಾಯದಿಂದ ಹೊಸ ಉದ್ಯಮಗಳನ್ನು ಸ್ಥಾಪಿಸಲು ಜ್ಞಾನ ಸಂಪಾದಿಸಿಕೊಳ್ಳುವ ಅಗತ್ಯವಿದೆ ಎಂದು ಅರಸಪ್ಪ ಹೇಳಿದರು.

Many handicrafts bloomed in throwing coconut shells achievement of Uttara Kannada district artist
ತೆಂಗಿನ ಚಿಪ್ಪಿನಲ್ಲಿ ಮೂಡಿದ ಕಲಾಕೃತಿಗಳು (ಸಾಂದರ್ಭಿಕ ಚಿತ್ರ)


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇಂಡಿಯನ್ ಮನಿ ಡಾಟ್ ಕಾಂನ ಸಿಇಒ ಸಿ ಎಸ್ ಸುಧೀರ್, ಕರುಕುಶಲ ಉದ್ಯಮಕ್ಕೆ ಜಾಗತಿಕವಾಗಿ ರೂ. 75 ಲಕ್ಷ ಕೋಟಿ ಮಾರುಕಟ್ಟೆ ಇದೆ. ಆದರೆ ಇಷ್ಟು ದೊಡ್ಡ ಮಾರುಕಟ್ಟೆಯಲ್ಲಿ ಭಾರತದ ಪಾಲು 45,000 ಕೋಟಿ ಮಾತ್ರ. ಈ ಸ್ಥಿತಿಯನ್ನು ಬದಲಾಯಿಸುವ ಉದ್ದೇಶದಿಂದ ಫೈನಾನ್ಸಿಯಲ್ ಫ್ರೀಡಂ ಆಪ್ ನಲ್ಲಿ ಹ್ಯಾಂಡಿಕ್ರಾಫ್ಟ್ ಕೋರ್ಸ್ ವಿನ್ಯಾಸಗೊಳಿಸಲಾಗಿದೆ. ಪ್ರಾದೇಶಿಕ ಭಾಷೆಯಲ್ಲೇ ಕೋರ್ಸ್ ಇರುವುದರಿಂದ ಎಲ್ಲರಿಗೂ ಇದು ತಲುಪುವ ನಿರೀಕ್ಷೆಯಿದೆ. ಭಾರತದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸುವುದೇ ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಶಿಯಲ್ ಫ್ರೀಡಂ ಆ್ಯಪ್​ನ ಉದ್ದೇಶವಾಗಿದೆ ಎಂದು ವಿವರಿಸಿದರು.
Published by: Anitha E
First published: October 17, 2020, 3:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading