HOME » NEWS » District » MODEL GOVERNMENT HOSPITAL AT DHANNURA VILLAGE IN BIDAR SSBDR SNVS

ಯಾವ ದೊಡ್ಡಾಸ್ಪತ್ರೆಗೂ ಕಡಿಮೆ ಇಲ್ಲ; ಬೀದರ್​ನ ಭಾಲ್ಕಿಯ ಗ್ರಾಮದಲ್ಲೊಂದು ಮಾದರಿ ಸರ್ಕಾರಿ ಆಸ್ಪತ್ರೆ

ಭಾಲ್ಕಿ ತಾಲೂಕಿನ ಧನ್ನೂರ ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ ಸ್ವಚ್ಛ ಹಾಗೂ ಉತ್ತಮ ಸೇವೆಯ ಮೂಲಕ ದಿನವೂ ಸಾವಿರಾರು ಜನರನ್ನು ಆಕರ್ಷಿಸುತ್ತಿದೆ.

news18-kannada
Updated:October 23, 2020, 7:21 AM IST
ಯಾವ ದೊಡ್ಡಾಸ್ಪತ್ರೆಗೂ ಕಡಿಮೆ ಇಲ್ಲ; ಬೀದರ್​ನ ಭಾಲ್ಕಿಯ ಗ್ರಾಮದಲ್ಲೊಂದು ಮಾದರಿ ಸರ್ಕಾರಿ ಆಸ್ಪತ್ರೆ
ಬೀದರ್​ನ ಭಾಲ್ಕಿ ತಾಲೂಕಿನ ಧನ್ನೂರ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ
  • Share this:
ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ಧನ್ನೂರ ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ ವಿಭಿನ್ನವಾಗಿದೆ. ಆವರಣದಲ್ಲಿ ಸ್ವಚ್ಛತೆ, ಪ್ಲಾಸ್ಟಿಕ್‌ ಮುಕ್ತ ಪ್ರದೇಶ, ಅರಣ್ಯೀಕರಣ, ಹಸಿರು ವಾತಾವರಣ ಸೃಷ್ಟಿ ಈ ಆಸ್ಪತ್ರೆಯ ಹೆಗ್ಗಳಿಕೆ. ಹಾಗಾಗಿ ಬರೀ ಅನಾನುಕೂಲ, ಅವ್ಯವಸ್ಥೆಗೆ ಹೆಸರಾಗಿರುವ ಸರಕಾರಿ ಆಸ್ಪತ್ರೆಗಳ ಮಧ್ಯೆ ಇದು ಮಾಡೆಲ್ ಹಾಸ್ಪಿಟಲ್. ಇಡೀ ಆಸ್ಪತ್ರೆಯ ಒಳಾಂಗಣ ಮತ್ತು ಹೊರಾಂಗಣದ ಸ್ವಚ್ಛತೆ ಸೇರಿದಂತೆ ರೋಗಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಗುರುತಿಸಿ ಈ ಸಮುದಾಯದ ಆರೋಗ್ಯ ಕೇಂದ್ರ ಕಾಯಕಲ್ಪ ಯೋಜನೆ ಅಡಿಯಲ್ಲಿ ಜಿಲ್ಲೆಗೆ ಮಹತ್ತರ ಸ್ಥಾನ ಗಳಿಸಿಕೊಂಡಿದೆ.

ಆಸ್ಪತ್ರೆಯಲ್ಲಿ ಅತ್ಯಧುನಿಕ ವೈದ್ಯಕೀಯ ಸಲಕರಣೆಗಳಿದ್ದು ಉಚಿತವಾಗಿ ಆಪರೇಷನ್ ಸಹ ನಡೆಸಲಾಗುತ್ತಿದೆ. ಇನ್ನು ನೌಕರರ ಕಾರ್ಯದ ಮೇಲೆ ಕಣ್ಣಿಡಲು ಸಿಸಿ ಟಿವಿ ಅಳವಡಿಸಿ ನಿಗಾ ವಹಿಸಲಾಗಿದೆ. ಆಸ್ಪತ್ರೆಯ ಹೊರಾವರಣದಲ್ಲಿ ಚಿಕ್ಕ ಗಾರ್ಡನ್​ನಲ್ಲಿಯೇ ಔಷಧೀಯ ಸಸ್ಯಗಳನ್ನು ಬೆಳೆಸಲಾಗಿದೆ. ಆಸ್ಪತ್ರೆಯ ಸುತ್ತಲೂ ಗಿಡಗಳನ್ನು ನೆಟ್ಟು ಕಲ್ಲುಗಳಿಂದ ಸಿಂಗರಿಸಲಾಗಿದೆ. ಸಾಮಾನ್ಯವಾಗಿ ದುರ್ನಾತದಿಂದಲೇ ಕೂಡಿರುವ ಸರಕಾರಿ ಆಸ್ಪತ್ರೆಗಳ ಮಧ್ಯೆ ಭಿನ್ನವಾಗಿರುವ ಧನ್ನೂರ ಆಸ್ಪತ್ರೆ ವಿಶಾಲವಾದ ಕೊಠಡಿಗಳನ್ನು ಹೊಂದಿದೆ. ಆವರಣ ಸ್ವಚ್ಛತೆಯ ಕಾರಣಕ್ಕೆ ಗಮನಸೆಳೆಯುವಂತಿದ್ದು, ಉತ್ತಮ ರಸ್ತೆ, ಉತ್ತಮ ಕುಡಿಯುವ ನೀರಿನ ಸೌಲಭ್ಯ ಜೊತೆಗೆ ಗುಣಮಟ್ಟದ ಚಿಕಿತ್ಸೆಯನ್ನು ಇಲ್ಲಿ ನೀಡಲಾಗುತ್ತಿದೆ.

ಇದನ್ನೂ ಓದಿ: ನ್ಯೂಸ್18 ಇಂಪ್ಯಾಕ್ಟ್; ಭೀಮಾ ಪ್ರವಾಹ ಉಲ್ಬಣಕ್ಕೆ ಕಾರಣವಾದ ಸಂಗತಿಗಳ ಬಗ್ಗೆ ಕ್ರಮಕ್ಕೆ ಮುಂದು

ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳು ಕಡಿಮೆ. ಆದರೆ, ಧನ್ನೂರ ಆಸ್ಪತ್ರೆ ಮಾತ್ರ ಅದಕ್ಕೆ ಅಪವಾದ. ಆಸ್ಪತ್ರೆ ಸುಸಜ್ಜಿತವಾಗಿ ನಿರ್ಮಾಣಗೊಂಡು 24 ಘಂಟೆಗಳ ಕಾಲ ಸೇವೆ ನೀಡುತ್ತಿರುವುದರಿಂದ ಪ್ರತಿ ದಿನ 30 ಹಳ್ಳಿಗಳ ಸಾವಿರಾರು ಜನರು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ. ಇಲ್ಲಿನ ಸಿಬ್ಬಂದಿವರ್ಗದ ಶ್ರಮದ ಫಲವಾಗಿ ಕಾಯಕಲ್ಪ ಯೋಜನೆ ಅಡಿ ಈ ಆಸ್ಪತ್ರೆ ರಾಜ್ಯ ಸರಕಾರದಿಂದ ಪ್ರಶಸ್ತಿ ಪಡೆದುಕೊಂಡಿದೆ.

ಇದನ್ನೂ ಓದಿ: ಭೀಮೆಯ ದಡದಲ್ಲಿ ದಿಢೀರ್ ಬಂದ್ ಆದ ಕಾಳಜಿ ಕೇಂದ್ರಗಳು ; ಮನೆಗಳತ್ತ ಮುಖ ಮಾಡಿದ ಸಂತ್ರಸ್ತರು

ಇನ್ನು ಚಿಕಿತ್ಸೆ ನಂತರ ಉಳಿಯುವ ವೈದ್ಯಕೀಯ ಉಪಕರಣಗಳ ತ್ಯಾಜ್ಯವನ್ನು ಉಳಿದ ಆಸ್ಪತ್ರೆಗಳಂತೆ ಎಲ್ಲೆಂದರಲ್ಲಿ ಎಸೆಯದೆ, ಸಂಗ್ರಹಿಸಿ ಜೈವಿಕ ಘಟಕಕ್ಕೆ ನೀಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಯೋಗ ಚಿಕಿತ್ಸೆಗೂ ಪ್ರತ್ಯೇಕ ಶೆಡ್ ನಿರ್ಮಿಸಿದ್ದು ತುರ್ತುಚಿಕಿತ್ಸೆಗೆ ಪ್ರತ್ಯೇಕ ಕೊಠಡಿ ನಿರ್ಮಿಸಲಾಗಿದ್ದು ದಿನದ 24 ಗಂಟೆಯೂ ಇಲ್ಲಿ ಸೇವೆ ಲಭ್ಯ ಎನ್ನುತ್ತಾರೆ ವೈದ್ಯರು.

ಇದನ್ನೂ ಓದಿ: ಮಂಡ್ಯದ ದಲಿತ ಯುವತಿ ನಾಪತ್ತೆ ಪ್ರಕರಣಕ್ಕೆ ಸಿಕ್ಕಿತು ಹೊಸ ತಿರುವು!ಈ ಆರೋಗ್ಯ ಕೇಂದ್ರದಲ್ಲಿ ಪ್ರತಿ ನಿತ್ಯ ನೂರಾರು ರೋಗಿಗಳು ಚಿಕಿತ್ಸೆಯನ್ನ ಪಡೆದುಕೊಳ್ಳುತ್ತಿದ್ದು ಉತ್ತಮವಾದ ಚಿಕಿತ್ಸೆ ಸಿಗುತ್ತಿದೆ. ಸಾಮಾನ್ಯವಾಗಿ ಸರಕಾರಿ ಆಸ್ಪತ್ರೆಗಳೆಂದರೆ ಅಲ್ಲಿ ಸರಿಯಾಗಿ ಚಿಕಿತ್ಸೆ ಸಿಗುವುದಿಲ್ಲ ಎಂಬುದು ಸಾಮಾನ್ಯ. ಆದರೆ ಧನ್ನೂರ ಸರಕಾರಿ ಆಸ್ಪತ್ರೆ ಆ ಮಾತಿಗೆ ಅಪವಾದ ಅಂತಾರೆ ಸ್ಥಳೀಯರು.

ವರದಿ: ಸಿದ್ದಪ್ಪ ಸತ್ಯಣ್ಣನವರ್
Published by: Vijayasarthy SN
First published: October 23, 2020, 7:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories