news18-kannada Updated:June 2, 2020, 3:05 PM IST
ಪ್ರಭಾಕರ್ ಕೋರೆ ಅವರು ರಾಜ್ಯದ ಹಿರಿಯರು ಅವರು ಮತ್ತೊಮ್ಮೆ ರಾಜ್ಯಸಭೆ ಸದಸ್ಯರಾದರೆ ನಮಗೆಲ್ಲ ಗೌರವ ರಾಜ್ಯದ ಹಾಗೂ ಪಕ್ಷದ ಹಿತದೃಷ್ಟಿಯಿಂದ ಅವರನ್ನ ರಾಜ್ಯಸಭೆಗೆ ಕಳಿಸುವುದು ಸೂಕ್ತ.
ಚಿಕ್ಕೋಡಿ(ಜೂ.02): ರಾಜ್ಯಸಭಾ ಚುನಾವಣೆ ಘೋಷಣೆ ಆಗಿ ಚುನಾವಣಾ ದಿನಾಂಕ ಕೂಡ ಪ್ರಕಟವಾಗಿದೆ. ರಾಜ್ಯದ ನಾಲ್ಕು ಹಾಲಿ ಸದಸ್ಯರಾದ ಡಾ.ಕುಪೇಂದ್ರ ರೆಡ್ಡಿ, ಡಾ.ಪ್ರಭಾಕರ್ ಕೋರೆ, ರಾಜೀವ್ ಗೌಡ ಹಾಗೂ ಬಿ.ಕೆ ಹರಿಪ್ರಸಾದ್ ಅವರ ಅವಧಿ ಇದೆ ತಿಂಗಳ 25 ರಂದು ಮುಗಿಯಲಿದ್ದು, ಕೇಂದ್ರ ಚುನಾವಣಾ ಆಯೋಗ ನಾಲ್ಕು ಸ್ಥಾನಗಳನ್ನ ಭರ್ತಿ ಮಾಡಲು ಜೂನ 19 ರಂದು ಚುನಾವಣೆ ಘೋಷಣೆ ಮಾಡಿದೆ.
ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯಸಭೆ ಸದಸ್ಯ ಸ್ಥಾನಕ್ಕಾಗಿ ಪೈಪೋಟಿ ಶುರುವಾಗಿದ್ದು, ಬಣ ರಾಜಕೀಯದಾಟ ಶುರುವಾಗಿದೆ. ಒಬ್ಬರ ಪರ ಒಬ್ಬರು ನಿಂತಿದ್ದು, ತಮ್ಮ ನಾಯಕರನ್ನ ರಾಜ್ಯಸಭೆಗೆ ಕಳಿಸಲು ಲಾಭಿ ನಡೆಸಲು ಶುರು ಮಾಡಿದ್ದಾರೆ. ಹಾಲಿ ಸದಸ್ಯ ಪ್ರಭಾಕರ್ ಕೋರೆಗೆ ಟಿಕೇಟ್ ನೀಡಬೇಕು ಎಂದು ಒಂದು ಬಣ ನಿಂತಿದ್ದು. ಇತ್ತ ಉಮೇಶ್ ಕತ್ತಿ ತನ್ನ ಸಹೋದರ ರಮೇಶ್ ಕತ್ತಿಗೆ ಟಿಕೇಟ್ ಕೊಡಿಸಲು ಎಲ್ಲಿಲ್ಲದ ಪ್ರಯತ್ನ ನಡೆಸಿದಾರೆ.
ಎರಡು ಬಾರಿ ರಾಜ್ಯಸಭೆಗೆ ಈಗಾಗಲೇ ಪ್ರಭಾಕರ್ ಕೋರೆಯವರಿಗೆ ಅವಕಾಶ ನೀಡಲಾಗಿದೆ. ಲೋಕಸಭೆಗೂ ನಮ್ಮ ತಮ್ಮನ ಟಿಕೇಟ್ ತಪ್ಪಿಸಿಲಾಗಿದೆ. ಹಾಗಾಗಿ ತಮ್ಮ ರಮೇಶ್ ಕತ್ತಿಗೆ ಟಿಕೇಟ್ ನೀಡಬೇಕು ಎಂದು ಉಮೇಶ್ ಕತ್ತಿ ಪಟ್ಟು ಹೀಡಿದು ಕೋತಿದ್ದಾರೆ. ಇತ್ತ ಡಿಸಿಎಂ ಲಕ್ಷ್ಮಣ ಸವದಿ ಉಮೇಶ್ ಕತ್ತಿ ವಿರುದ್ದವಾಗಿ ಪ್ರಭಾಕರ್ ಕೋರೆಗೆ ಟಿಕೇಟ್ ಕೊಡಿಸಲು ಮುಂದಾಗಿದ್ದು ತಮ್ಮ ಬೆಂಬಲಿಗ ಶಾಸಕರ ಬಣದಿಂದ ಒತ್ತಡ ಹೇರಲು ಮುಂದಾಗಿದ್ದಾರೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳ 30 ಕ್ಕೂ ಹೆಚ್ವು ಶಾಸಕರು ಪ್ರಭಾಕರ್ ಕೋರೆ ಪರ ಇದ್ದಾರೆ ಎಂದು ನಿನ್ನಯಷ್ಟೆ ಹೇಳಿದರು.
ಆದರೆ, ಇಂದು ಕೋರೆ ಪರ ಎಂ.ಎಲ್.ಸಿ ಹಾಗೂ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ನಿಂತಿದ್ದಾರೆ. ಪ್ರಭಾಕರ್ ಕೋರೆ ಅವರು ರಾಜ್ಯದ ಹಿರಿಯರು ಅವರು ಮತ್ತೊಮ್ಮೆ ರಾಜ್ಯಸಭೆ ಸದಸ್ಯರಾದರೆ ನಮಗೆಲ್ಲ ಗೌರವ ರಾಜ್ಯದ ಹಾಗೂ ಪಕ್ಷದ ಹಿತದೃಷ್ಟಿಯಿಂದ ಅವರನ್ನ ರಾಜ್ಯಸಭೆಗೆ ಕಳಿಸುವುದು ಸೂಕ್ತ. ಬೆಳಗಾವಿಯು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲು ಕೋರೆ ಕೊಡುಗೆ ದೊಡ್ಡದು ಎಂದಿದ್ದಾರೆ.
ಇದನ್ನೂ ಓದಿ :
ಜೂ.19ಕ್ಕೆ ರಾಜ್ಯಸಭಾ ಚುನಾವಣೆ: ವಾರಾಂತ್ಯದಲ್ಲಿ ಬಿಜೆಪಿಯಿಂದ ಅಭ್ಯರ್ಥಿ ಆಯ್ಕೆ
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಭಾಕರ್ ಕೋರೆ ಅವರು ಸಹ ಲೋಕಸಭೆ ಟಿಕೇಟ್ ಆಕಾಂಕ್ಷೆ ಆಗಿದ್ದರು. ಆಗ ಮುಖ್ಯಮಂತ್ರಿಗಳು ಪ್ರಭಾಕರ್ ಕೋರೆ ಅವರಿಗೆ ರಾಜ್ಯಸಭೆಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವ ಮೂಲಕ ಕೋರೆ ಪರ ಬ್ಯಾಟ್ ಬೀಸಿದ್ದಾರೆ.
First published:
June 2, 2020, 2:46 PM IST