ಹಾಸನ: ಕಳೆದ ಐದು ವರ್ಷಗಳಿಂದ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿರುವ ಹೇಮಾವತಿ ಸಕ್ಕರೆ ಕಾರ್ಖಾನೆ ಕಾರ್ಯಾರಂಭ ಮಾಡದಿರುವುದನ್ನು ವಿರೋಧಿಸಿ ಎಂಎಲ್‌ಸಿ ಗೋಪಾಲಸ್ವಾಮಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯ್ತು. ಇಂದು ಹೇಮಾವತಿ ಸಕ್ಕರೆ ಕಾರ್ಖಾನೆ ಬಳಿ ಎಂಎಲ್ ಸಿ ಗೋಪಾಲಸ್ವಾಮಿ ನೇತೃತ್ವದಲ್ಲಿ ಎತ್ತಿನಗಾಡಿ, ಟ್ರ್ಯಾಕ್ಟರ್‌ನಲ್ಲಿ ಜಮಾಯಿಸಿದ ಸಾವಿರಾರು ಜನ ಸರ್ಕಾರ ಮತ್ತು ಸ್ಥಳೀಯ ಶಾಸಕ ಬಾಲಕೃಷ್ಣ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯವರಿಗೆ ಗುತ್ತಿಗೆ ನೀಡಲಾಗಿದೆ. ಅವರು ಕಾರ್ಖಾನೆಯನ್ನು ಐದು ವರ್ಷದಿಂದ ಆರಂಭ ಮಾಡದ ಪರಿಣಾಮ ಎರಡು ಲಕ್ಷ ಟನ್‌ಗೂ ಹೆಚ್ಚು ಕಬ್ಬು ಗದ್ದೆಯಲ್ಲೇ ಒಣಗುತ್ತಿದೆ. ಅಷ್ಟೇ ಅಲ್ಲದೆ ಕಾರ್ಖಾನೆ ವಹಿಸಿಕೊಂಡವರು ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಹಣ ಪಾವತಿಸಬೇಕಿದ್ದು ಅದನ್ನೂ ಕೂಡ ನೀಡಿಲ್ಲ. ಈ ಅವ್ಯವಸ್ಥೆಗೆ ಸ್ಥಳೀಯ ಶಾಸಕ ಬಾಲಕೃಷ್ಣ ಅವರೂ ಕೂಡ ಕಾರಣರಾಗಿದ್ದಾರೆ ಎಂದು ಎಂಎಲ್‌ಸಿ ಗೋಪಾಲಸ್ವಾಮಿ ವಾಗ್ದಾಳಿ ನಡೆಸಿದರು.
ಚನ್ನರಾಯಪಟ್ಟಣದಲ್ಲಿ ಪಾದಯಾತ್ರೆ ಮಾಡುತ್ತ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಎಂಎಲ್‌ಸಿ ಗೋಪಾಲಸ್ವಾಮಿ, ತಹಶಿಲ್ದಾರ್ ಮಾರುತಿ ಪ್ರಸನ್ನ ಅವರಿಗೆ ಮನವಿ ಪತ್ರ ಸಲ್ಲಿಸಿ ತಕ್ಷಣ ಕಾರ್ಖಾನೆ ಆರಂಭಿಸಲು ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸೋದಾಗಿ ಎಚ್ಚರಿಕೆ ನೀಡಿದ್ದಾರೆ
ಹಾಸನ ಜಿಲ್ಲೆಯ ಕೀಲಿಕೈ ಯಾರೋ ಒಬ್ಬರ ಕೈಲಿದ್ದು, ಆ ಕೀಲಿಕೈ ಕಿತ್ತುಕೊಂಡರೆ ದೇಶಕ್ಕೆ 1947 ರಲ್ಲಿ ಸ್ವಾತಂತ್ರ್ಯ ಸಿಕ್ಕಂತೆ ಹಾಸನ ಜಿಲ್ಲೆಗೆ ಸ್ವಾತಂತ್ರ್ಯ ಸಿಗಲಿದೆ ಎಂದು ಮಾಜಿ ಶಾಸಕ ಪುಟ್ಟೇಗೌಡ ಮಾಜಿ ಸಚಿವ ರೇವಣ್ಣ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನೆ ವೇಳೆ ಆಕ್ರೋಶ ಹೊರಹಾಕಿದ ಮಾಜಿ ಶಾಸಕ ಪುಟ್ಟೇಗೌಡ, ಹಾಸನ ಜಿಲ್ಲೆಯ ಈ ಸ್ಥಿತಿಗೆ ಪ್ರಧಾನಿ ದೇವೇಗೌಡರು ಹಾಗೂ ಅವರ ಮನೆಯವರೇ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಕೀಲಿಕೈ ಅವರಿಗೆ ಕೊಟ್ಟು ಜಿಲ್ಲೆಯ ಜನ ಶಿಕ್ಷೆ ತಗೊಂಡ್ರು. ಎಲ್ಲರಿಗಿಂತ ಮೊದಲು ದೇವೇಗೌಡರೇ ಶಿಕ್ಷೆ ತಗೊಂಡ್ರು. ಈ ವಯಸ್ಸಲ್ಲಿ ಅವರ ಮನೆಯವರ ವಿರುದ್ಧ ಅವರೇ ಮಾತನಾಡಲಾಗದೇ ದೇವೇಗೌಡರು ಸುಮ್ಮನಾಗಿದ್ದಾರೆ. ಕೈ ಮದ್ದು ಹಾಕಲು ಬೇರೆಯವರು ಸಿಗದಿದ್ದರೆ, ತಮ್ಮ ಮನೆಯವರಿಗೇ ಹಾಕುತ್ತಾರೆ. ಅದರಂತೆ ಈ ಜಿಲ್ಲೆಯಲ್ಲಿ ನಿಮ್ಮನ್ನು ಸೋಲಿಸಲು ಯಾರಿದ್ದರು ದೇವೇಗೌಡರೇ. ಈ ಕೀಪಿನ್‌ನಿಂದ ಸಣ್ಣಪುಟ್ಟ ಹುಡುಗರಿಗೆಲ್ಲ ಅಧಿಕಾರ ಸಿಕ್ಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ