MLC Election: ಬಿಜೆಪಿಗೆ ವರ್ತೂರು ಪ್ರಕಾಶ್ ಬೆಂಬಲ; ಕಣ್ಣೀರು ಹಾಕಿ ಶಪಥ ಮಾಡಿದ ಮಾಜಿ ಸಚಿವ

Former minister Varthur Prakash: ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡುವ ವೇಳೆ ವೇದಿಕೆಯಲ್ಲೇ ವರ್ತೂರು ಪ್ರಕಾಶ್ ಕಣ್ಣೀರು ಹಾಕಿದರು. ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ನನ್ನನ್ನು ಹಿಂದೆ ಸೋಲಿಸಿದ್ರು. ಅದೇ ರೀತಿ ನಾನು ಅವರನ್ನು ಸೋಲಿಸುವವರೆಗೂ ಸಮಾಧಾನವಿಲ್ಲ ಎಂದು ಗದ್ಗದಿತರಾದರು.

ವರ್ತೂರು ಪ್ರಕಾಶ್​

ವರ್ತೂರು ಪ್ರಕಾಶ್​

  • Share this:
ಕೋಲಾರ: ವಿಧಾನ ಪರಿಷತ್ ಚುನಾವಣೆ (Council Elections) ಹಿನ್ನೆಲೆಯಲ್ಲಿ ಜಿಲ್ಲೆಯ ಮಾಜಿ ಸಚಿವ ವರ್ತೂರು ಪ್ರಕಾಶ್ (Varthur Prakash) ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು (CM Basavaraj Bommai) ಭೇಟಿ ಮಾಡಿ ಮಾತುಕತೆ ನಡೆಸಿದರು. ನಂತರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದರು. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೇಣುಗೋಪಾಲ್ ಗೆ  ವರ್ತೂರು ಪ್ರಕಾಶ್ ಬೆಂಬಲ ನೀಡುವುದಾಗಿ ಕೋಲಾರದ ಪೂಜಾ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಘೋಷಿಸಿದರು. ಕಾರ್ಯಕ್ರಮದಲ್ಲಿ ಸಚಿವರಾದ ಸುಧಾಕರ್, ಮುನಿರತ್ನ, ಸಂಸದ ಮುನಿಸ್ವಾಮಿ, ಬಿಜೆಪಿ ಅಭ್ಯರ್ಥಿ ವೇಣುಗೋಪಾಲ ಭಾಗಿಯಾಗಿದ್ದರು.

ವರ್ತೂರು ಪ್ರಕಾಶ್ ಕಣ್ಣೀರು

ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡುವ ವೇಳೆ ವೇದಿಕೆಯಲ್ಲೇ ವರ್ತೂರು ಪ್ರಕಾಶ್ ಕಣ್ಣೀರು ಹಾಕಿದರು. ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ನನ್ನನ್ನು ಹಿಂದೆ ಸೋಲಿಸಿದ್ರು. ಅದೇ ರೀತಿ ನಾನು ಅವರನ್ನು ಸೋಲಿಸುವವರೆಗೂ ಸಮಾಧಾನವಿಲ್ಲ ಎಂದು ಗದ್ಗದಿತರಾದರು. ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಎಂದು ಕಾರ್ಯಕರ್ತರ ಮುಂದೆ ಕಣ್ಣೀರು ಸುರಿಸಿ ಮನವಿ ಮಾಡಿಕೊಂಡರು. ಸಿಎಂ ಬಸವರಾಜ ಬೊಮ್ಮಾಯಿ ಸಹ ನನ್ನನು ಒಳ್ಳೆಯ ರೀತಿ ನಡೆಸಿಕೊಳ್ತಾರೆ ಅನ್ನೋ ನಂಬಿಕೆ ಇದೆ ಎಂದು ವರ್ತೂರು ಪ್ರಕಾಶ್ ವಿಶ್ವಾಸ ವ್ಯಕ್ತಪಡಿಸಿದರು. ಸದ್ಯ ಎಂಎಲ್ ಸಿ ಚುನಾವಣೆಗೆ ಬೆಂಬಲಿಗರ ಒತ್ತಾಸೆ ಮೇರೆಗೆ ಬಿಜೆಪಿ ಅಭ್ಯರ್ಥಿ ಡಾ. ವೇಣುಗೋಪಾಲ್ ಗೆ ಬಾಹ್ಯ ಬೆಂಬಲ ನೀಡಿದ್ದಾರೆ.

ಅಧಿಕೃತವಾಗಿ ಬಿಜೆಪಿ ಸೇರ್ಪಡೆ ಸಾಧ್ಯತೆ

ಇದಕ್ಕ ಮುನ್ನ ಆರೋಗ್ಯ ಸಚಿವ ಸುಧಾಕರ್,ಮುನಿರತ್ನ ನೇತೃತ್ವದಲ್ಲಿ ಸಿಎಂ ಬೊಮ್ಮಾಯಿ ಅವರನ್ನು ವರ್ತೂರು ಪ್ರಕಾಶ್ ಭೇಟಿ ಮಾಡಿದರು. ಈ ವೇಳೆ ಬಿಜೆಪಿ ಸೇರ್ಪಡೆ ಕುರಿತು ಸಹ ಚರ್ಚೆ ಆಗಿದೆ ಎನ್ನಲಾಗುತ್ತಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕೋಲಾರ ಭಾಗದಲ್ಲಿ ಗುರುತಿಸಿಕೊಂಡಿರುವ ಪ್ರಕಾಶ್ ಅವರು ಬಿಜೆಪಿ ಸೇರ್ಪಡೆ ಆಗುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಕೋಲಾರ ಭಾಗದಲ್ಲಿ ಕುರುಬ ಸಮುದಾಯದಲ್ಲಿ ಗುರುತಿಸಿಕೊಂಡಿರುವ ಮಾಜಿ ಶಾಸಕ ವರ್ತೂರ್ ಪ್ರಕಾಶ್, ಸದ್ಯ ಪರಿಷತ್​ ಚುನಾವಣೆಯಲ್ಲಿ ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ.

ಇದನ್ನೂ ಓದಿ: Kolar: ರಮೇಶ್ ಕುಮಾರ್ ಕಾಂಗ್ರೆಸ್ ನ ಮಹಾನ್, ನಮಗೆ ಮಾತನಾಡಲು ಬರಲ್ಲ: HDK ಮಾತಿನೇಟು

ಪರಿಷತ್ ಚುನಾವಣೆ ಫೈಟ್​

ಭಯೋತ್ಪಾದನೆಗೆ (Terrorism) ಬಡ್ತಿ ನೀಡುವ ಪಕ್ಷ ಕಾಂಗ್ರೆಸ್ (Cngress) ಎಂಬ ಬಿಜೆಪಿ (BJP) ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel) ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದರು. ನಳೀನ್ ಕುಮಾರ್ ಕಟೀಲ್ ಒಬ್ಬ ಭಯೋತ್ಪಾದಕ, ಕಟೀಲ್ ಮಾತಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ ಎಂದು ಲೇವಡಿ ಮಾಡಿದರು. ರಾಜ್ಯದ ಜನ ತೀರ್ಮಾನ ಮಾಡಿದ್ದಾರೆ, ಬಿಜೆಪಿಯನ್ನು ಕಿತ್ತೋಗೆಯುತ್ತಾರೆ ಎಂದು ವಾಗ್ದಾಳಿ ನಡೆಸಿದರು. ನಾವು A ಟೀಂ ಅಲ್ಲ B ಟೀಂ ಕೂಡ ಅಲ್ಲ ಎಂಬ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮತ್ತೆ ಎಲ್ಲಾ ಕಡೆ ಯಾಕೆ ಅಭ್ಯರ್ಥಿ ಹಾಕಿಲ್ಲ. ಉಳಿದ ಕಡೆಗಳಲ್ಲಿ ಈಗ ಏನೂ ಮಾಡುತ್ತಾರೆ. ಪರಿಷತ್​ ಚುನಾವಣೆಯಲ್ಲಿ ಜೆಡಿಎಸ್​ ಪಕ್ಷ ಬಿಜೆಪಿಯ ಬಿ ಟೀಂ ಎಂದು ಟೀಕಿಸಿದರು.

ಕುಮಾರಸ್ವಾಮಿ ಆಗ್ರಹ

ಕೋಲಾರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್​ಡಿ ಕುಮಾರಸ್ವಾಮಿ,  ಬಿಜೆಪಿ ಶಕ್ತಿಯೇ ಇಲ್ಲ, ಆದರೂ ಚುನಾವಣೆಗೆ ನಿಲ್ಲಿಸಿದ್ದಾರೆ.  ಬಿಜೆಪಿ ಅಭ್ಯರ್ಥಿ ಹಾಕಲು ಕಾಂಗ್ರೆಸ್ ನ ಓರ್ವ ಮುಖಂಡನ ಪಾತ್ರವಿದೆ ಎಂದು ಸ್ಪೋಟಕ ಹೇಳಿಕೆ ನೀಡಿದರು. ಬೆಳೆನಾಶದ ಬಗ್ಗೆ ಸರ್ಕಾರ ನಿಖರ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದ ಕುಮಾರಸ್ವಾಮಿ ಅವರು,  ಬೆಳೆಹಾನಿಗೆ ಸರ್ಕಾರ ನೀಡುವ ಪರಿಹಾರ ಸಾಕಾಗಲ್ಲ. ಹಾಗಾಗಿ ಹೆಚ್ಚಿನ ಪರಿಹಾರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
Published by:Kavya V
First published: