• Home
  • »
  • News
  • »
  • district
  • »
  • ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಗೆ ಆತ್ಮರತಿ ಖಾಯಿಲೆ ಇದೆ: ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್

ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಗೆ ಆತ್ಮರತಿ ಖಾಯಿಲೆ ಇದೆ: ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್

ವಿಧಾನ ಪರಿಷತ್​ ಸದಸ್ಯ ಆಯನೂರು ಮಂಜುನಾಥ್

ವಿಧಾನ ಪರಿಷತ್​ ಸದಸ್ಯ ಆಯನೂರು ಮಂಜುನಾಥ್

  • Share this:

ಶಿವಮೊಗ್ಗ (ಅಕ್ಟೋಬರ್​. 31): ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ನಮ್ಮ ನಾಯಕನಲ್ಲ ಎಂಬ ಬಸವನಗೌಡ ಪಾಟಿಲ ಯತ್ನಾಳ್ ಹೇಳಿಕೆಗೆ ಕಿಡಿಕಾರಿದರು. ಯತ್ನಾಳ್ ಗೆ ಯಾವಾಗ ರಾಜಕೀಯವಾಗಿ ಅಭದ್ರತೆ ಕಾಡುತ್ತೋ ಆಗ ಇಂತಹ ಹೇಳಿಕೆ ನೀಡುತ್ತಾರೆ. ತಾವು ಕಳೆದು ಹೋಗುತ್ತಿದ್ದೇನೆ ಅನಿಸುತ್ತೋ ಆಗ ಇಂತಹ ಅಸಂಬದ್ಧ ಮತ್ತು ಅಸಂದರ್ಭಿಕ ಮಾತುಗಳನ್ನು ಆಡುತ್ತಾರೆ. ಖಾಯಿಲೆಗಳಲ್ಲಿ ಆತ್ಮರತಿ ಎಂಬ ಖಾಯಿಲೆ ಇದ್ದು, ಇದು ಯತ್ನಾಳ್ ಗೆ  ಇದೆ, ತನ್ನನ್ನು ತಾನು ವೈಭವಿಕರಿಸಿಕೊಂಡು ಹೇಳಿಕೆ ನೀಡುವ ಖಾಯಿಲೆ ಯತ್ನಾಳ್ ಗೆ ಇದೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಯತ್ನಾಳ್ ತಾನು ಏನಲ್ಲವೋ ಅದನ್ನು ಭ್ರಮಿಸಿಕೊಳ್ಳುವ ಖಾಯಿಲೆ ಅವರಿಗಿದೆ. ಅವರಿಗೆ ಯಾರು ಕೂಡ ಹೊಗಳುವುದಿಲ್ಲ ಎಂದು ಲೇವಡಿ ಮಾಡಿದರು.


ಯತ್ನಾಳ್ ಮತ್ತು ನಾನು ಆತ್ಮೀಯ ಸ್ನೇಹಿತರು. ಆದರೆ, ಅವರಿಗಿರುವ ಮಾನಸಿಕ ಖಾಯಿಲೆ ಅವರಿಗೆ ಅಪಾಯಕಾರಿಯಾಗಿದೆ. ಸ್ನೇಹಿತನ ಹಿತದೃಷ್ಟಿಯಿಂದ ಹೇಳುತ್ತಿದ್ದೇನೆ, ಅವರಿಗೆ ಮಾನಸಿಕ ಆರೋಗ್ಯ ಹದಗೆಟ್ಟಿದೆ, ಅವರು ಶಿವಮೊಗ್ಗಕ್ಕೆ ಆದಷ್ಟು ಬೇಗನೆ ಬರಲಿ ಎಂದು ಆಹ್ವಾನಿಸುತ್ತೇನೆ. ನಮ್ಮಲ್ಲಿ ಮೂರ್ನಾಲ್ಕು ಜನ ಒಳ್ಳೆಯ ವೈದ್ಯರಿದ್ದಾರೆ, ಇಲ್ಲಿ ಚಿಕಿತ್ಸೆ ಕೊಡಿಸುತ್ತೇನೆ ಎಂದರು.


ನನ್ನ ಜೊತೆ ಅವರು ಇನ್ನಷ್ಟು ದಿನ ಇರಬೇಕು. ಆತ್ಮರತಿಯ ರೋಗದಿಂದ ನರಳುತ್ತಿರುವ ಮಾನಸಿಕ ಖಾಯಿಲೆಯಿಂದ ಹೊರತರಲು ಚಿಕಿತ್ಸೆ ಅಗತ್ಯವಿದೆ. ಯತ್ನಾಳ್ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧವೇ, ಪಕ್ಷದ ಚೌಕಟ್ಟು ಮೀರಿ ಮಾತನಾಡುತ್ತಿದ್ದಾರೆ. ಚುನಾವಣೆ ಬಳಿಕ ಯತ್ನಾಳ್ ವಿರುದ್ಧ ಪಕ್ಷ  ಶಿಸ್ತು ಕ್ರಮ ಜರುಗಿಸುತ್ತದೆ ಎಂದು ತಿಳಿಸಿದರು.


ಇನ್ನು ರಾಜ್ಯದಲ್ಲಿ ಸಿ.ಎಂ. ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ವಿಚಾರ, ಇಂತಹ ಮಾತಿಗೆ ಅರ್ಥವಿರುವಂತೆ ಕಾಣುತ್ತಿಲ್ಲ. ಸಿಎಂ ಬದಲಾವಣೆ ಎಂಬುದು ಅಸಾಧ್ಯವಾದ ಮಾತು. ಇದೊಂದು ಅರ್ಥಹೀನ ಹಗಲುಗನಸು. ಇಂತಹ ಮಾತುಗಳು ಅಶಕ್ತರ ಬಡ ಬಡಿಕೆಯಾಗಿದೆಯಷ್ಟೇ. ರಾಜ್ಯದಲ್ಲಿ ಸಿಎಂ ಸ್ಥಾನದಿಂದ ಯಡಿಯೂರಪ್ಪ ರನ್ನು ಇಳಿಸುವಂತಹ ಸ್ಥಿತಿಯಾಗಲಿ, ಆಲೋಚನೆಯಾಗಲೀ ಯಾರಿಗೂ ಇಲ್ಲ. ಯಡಿಯೂರಪ್ಪ ಒಬ್ಬ ಸಮರ್ಥ ನಾಯಕರಾಗಿದ್ದಾರೆ, ಅವರು ಸಾಮೂಹಿಕ ನಾಯಕರಾಗಿದ್ದು, ಬೆಂಬಲಿಗರು ಇದ್ದಾರೆ. ಕೆಲವರ ಕನಸುಗಳನ್ನು ಮಾಧ್ಯಮಗಳ ಮೂಲಕ ಹೊರ ಹಾಕಿ ಸಮಾಜದ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದರು.


ಇದನ್ನೂ ಓದಿ : ಶಿರಾದಲ್ಲಿ ಅಭಿವೃದ್ಧಿ ಮಂತ್ರ; ಅಭ್ಯರ್ಥಿ ಗೆದ್ದರೆ ಕ್ಷೇತ್ರವನ್ನು ದತ್ತು ಪಡೆಯುತ್ತೇನೆಂದ ಜೆಡಿಎಸ್​ ವರಿಷ್ಠ ದೇವೇಗೌಡ


ರಾಜ್ಯ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಾದರೆ, ನಾನು ಸಚಿವನಾಗಬೇಕು ಆಸೆ ಇದೆ. ಸಚಿವ ಸ್ಥಾನ ನೀಡಿದರೆ ಉನ್ನತ ಶಿಕ್ಷಣ ಸಚಿವ ಸ್ಥಾನ ನೀಡಲಿ ಎಂದರು. ಅದರೆ, ಬಹಳಷ್ಟು ಜನ ಶಾಸಕರು ಹೊರಗಿನಿಂದ ಬಂದಿದ್ದಾರೆ. ಬೇರೆ ಪಕ್ಷದಿಂದ ಬಂದವರಿಂದ ಸರ್ಕಾರ ರಚನೆಯಾಗಿದೆ. ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ರಿಸ್ಕ್ ತೆಗೆದುಕೊಂಡು ಬಂದವರಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕೆಂಬ ಆಸೆ ಇಟ್ಟುಕೊಂಡು ಬಂದವರಿಗೆ ಮೊದಲ ಆದ್ಯತೆ ನೀಡಬೇಕಿದೆ ಎಂದು ಅಭಿಪ್ರಾಯ ಪಟ್ಟರು.




ನಾವು ಸರ್ಕಾರದ ಒಂದು ಭಾಗವಾಗಿದ್ದರೆ ಮಾತ್ರ ಸಾಕು. ನನಗೆ ಮಂತ್ರಿ ಸ್ಥಾನದ ಅವಕಾಶ ನೀಡಿದರೆ ಬೇಡ ಅನ್ನೊಲ್ಲಾ ಎಂದು ಇದೇ ವೇಳೆ ಅವರ ಮಂತ್ರಿ ಸ್ಥಾನದ ಆಸೆಯನ್ನು ವ್ಯಕ್ತಪಡಿಸಿದರು.

Published by:G Hareeshkumar
First published: