ಸೋಲೋ ಕಡೆ ಟಿಕೆಟ್ ಕೊಟ್ಟು HDK ಮುಸ್ಲಿಮರನ್ನು ಬಲಿ ಪಡೆಯುತ್ತಿದ್ದಾರೆ: MLA Zameer ಆರೋಪ

ಕುಮಾರಸ್ವಾಮಿ ಅವರಿಗೆ ಮುಸ್ಲಿಮರ ಮೇಲೆ ಅಷ್ಟೊಂದು ಪ್ರೀತಿ ಇದ್ದಿದ್ದರೆ ಹಾಸನದಲ್ಲಿ ರೇವಣ್ಣ ಅವರ ಪುತ್ರ ಸೂರಜ್​ಗೆ ಟಿಕೆಟ್ ನೀಡುವ ಬದಲು ಒಬ್ಬ ಮುಸ್ಲಿಮ್​ಗೆ ನೀಡಬೇಕಿತ್ತು. ಅಥವಾ ಮಂಡ್ಯ, ಮೈಸೂರು ಹಾಗೂ ತುಮಕೂರಿನಲ್ಲಿ ಕೊಡಬೇಕಿತ್ತು.

ಶಾಸಕ ಜಮೀರ್​

ಶಾಸಕ ಜಮೀರ್​

 • Share this:
  ಮಂಡ್ಯ : ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (Former CM HD Kumarasamy)ಹಾಗೂ ಶಾಸಕ ಜಮೀರ್ ಅಹಮದ್ ಖಾನ್ (MLA Zameer Ahmed Khan)ನುಡುವೆ ವಾಕ್ ಸಮರಕ್ಕೆ ಅಂತ್ಯವೇ ಇಲ್ಲ ಎಂಬಂತಾಗಿದೆ. ಸಕ್ಕರೆನಾಡಿನಲ್ಲಿ ಜಮೀರ್ ಅಹಮದ್ ಖಾನ್ ಅವರು ಕುಮಾರಸ್ವಾಮಿ ಅವರ ವಿರುದ್ದ ಅಸಮಧಾನ ಹೊರ ಹಾಕಿದ್ದು, ಕುಮಾರಸ್ವಾಮಿ ಮುಸಲ್ಮಾನರನ್ನ ಬಲಿ ತೆಗೆದುಕೊಳ್ಳುತ್ತಿದ್ದಾರೆ ಅಂತ ಕಿಡಿಕಾರಿದ್ರು. ಒಂದು ಕಾಲದಲ್ಲಿ ಇಬ್ಬರು ಒಬ್ಬರೆ ಎಂಬಂತೆ ಹೆಚ್.ಡಿ ಕುಮಾರಸ್ವಾಮಿ ಹಾಗೂ ಜಮೀರ್ ಅಹಮದ್ ಖಾನ್ ಅವರು ಒಟ್ಟಿಗಿದ್ದರು. ಆದ್ರೆ ಕಾಲಕ್ರಮೇಣ ಬದಲಾದ ಸನ್ನಿವೇಶದಲ್ಲಿ ಈಗ ಕುಮಾರಸ್ವಾಮಿ ಹಾಗೂ ಜಮೀರ್ ಅಹಮದ್ ಖಾನ್ ಅವರು ಹಾವು, ಮುಂಗುಸಿಯಂತೆ ರಾಜಕೀಯ ವೈರಿಗಳಾಗಿದ್ದಾರೆ. ಅಲ್ಲದೆ ಬಲಿ ಕೊಡೋಕೆ ಕುಮಾರಸ್ವಾಮಿ ಅವರಿಗೆ ಸಿಗೋದು ಅಲ್ಪ ಸಂಖ್ಯಾತರು ಮಾತ್ರ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

  ರೇವಣ್ಣ ಮಗನಿಗೆ ಟಿಕೆಟ್ ಕೊಡುವ ಬದಲು‌ ಮುಸ್ಲಿಮರಿಗೆ ಕೊಡಬಹುದಿತ್ತು

  ಜೆಡಿಎಸ್ ಪಕ್ಷದವರು ಬಿಜೆಪಿ ಪಕ್ಷದ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಹೀಗಾಗಿ ಮಡಿಕೇರಿಯಲ್ಲಿ ಮುಸ್ಲಿಂ ವ್ಯಕ್ತಿಗೆ ಟಿಕೆಟ್ ನೀಡಿದ್ದಾರೆ. ಆದ್ರೆ ಮಡಿಕೇರಿಯಲ್ಲಿ ಮುಸ್ಲಿಂ ಗೆಲ್ಲಲು ಸಾಧ್ಯನಾ ಅಂತ ಪ್ರಶ್ನಿಸಿದರು. ಅಲ್ಲದೆ ಕುಮಾರಸ್ವಾಮಿ ಅವರಿಗೆ ಮುಸ್ಲಿಮರ ಮೇಲೆ ಅಷ್ಟೊಂದು ಪ್ರೀತಿ ಇದ್ದಿದ್ದರೆ ಹಾಸನದಲ್ಲಿ ರೇವಣ್ಣ ಅವರ ಪುತ್ರ ಸೂರಜ್​ಗೆ ಟಿಕೆಟ್ ನೀಡುವ ಬದಲು ಒಬ್ಬ ಮುಸ್ಲಿಮ್​ಗೆ ನೀಡಬೇಕಿತ್ತು. ಅಥವಾ ಮಂಡ್ಯ, ಮೈಸೂರು ಹಾಗೂ ತುಮಕೂರಿನಲ್ಲಿ ಕೊಡಬೇಕಿತ್ತು. ಆದ್ರೆ ಇವರು ಬಿಜೆಪಿಗೆ ಸಹಾಯ ಮಾಡಿದ್ದಂಗೆ ಆಗಬೇಕು ಜೊತೆಗೆ ಮುಸ್ಲಿಮರಿಗೂ ಟಿಕೆಟ್ ಕೊಟ್ಟಂತೆಯೂ ಇರಬೇಕು. ಹೀಗಾಗಿ ಮುಸ್ಲಿಮರಿಗೆ ಸೋಲೋ ಕಡೆ ಟಿಕೆಟ್ ಕೊಡ್ತಾರೆ. ಎಚ್​ಡಿಕೆ ಮುಸ್ಲಿಮರನ್ನ ಬಲಿ  ಪಡೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  HDK ಸಿಎಂ ಆಗಿದ್ದಾಗಲೇ ನಿಖಿಲ್ ಗೆಲ್ಲೋದಕ್ಕೆ ಸಾಧ್ಯವಾಗಲಿಲ್ಲ

  ಮಂಡ್ಯ ಜನರು ಈಗಾಗಲೆ ಜೆಡಿಎಸ್ ಪಕ್ಷವನ್ನ ತಿರಸ್ಕರಿಸಿದ್ದಾರೆ. ಜಮಾನದಲ್ಲಿ ಜೆಡಿಎಸ್ ಭದ್ರಕೋಟೆ ಆಗಿತ್ತು. ಅಲ್ಲದೆ ಕುಮಾರಸ್ವಾಮಿ ಬಗ್ಗೆ ಜನರು ನಿರೀಕ್ಷೆ ಇಟ್ಟುಕೊಂಡಿದ್ರು. 2006 ರಲ್ಲಿ ಕುಮಾರಸ್ವಾಮಿ ಒಳ್ಳೆ ಸರ್ಕಾರ ಕೊಟ್ರು, ಇಲ್ಲ ಅಂತ ಹೇಳಲ್ಲ. ಆ ವೇಳೆ ಪಾಫುಲರ್ ಕೂಡ ಆದ್ರು. ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾದ್ರೆ ರಾಜ್ಯಕ್ಕೆ ಒಳ್ಳೆದಾಗುತ್ತೆ ಎಂದು ಎಲ್ಲಾ ವರ್ಗದ ಜನರು ನಿರೀಕ್ಷೆ ಇಟ್ಟಿಕೊಂಡಿದ್ರು. ಆದ್ರೆ 2018 ರಲ್ಲಿ ತಾಜ್ ವೆಸ್ಟನ್ ಹೋಟೆಲ್ ನಲ್ಲಿ ಉಳಿದುಕೊಂಡು ಎಕ್ಸ್ ಪೋಸ್ ಆದ್ರು ಅಂತ ಕುಮಾಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ರು.

  ಒಟ್ಟಾರೆ ಒಂದು ಕಾಲದಲ್ಲಿ ಅತ್ಯಂತ ಆತ್ಮೀಯರಾಗಿದ್ದ ಕುಮಾರಸ್ವಾಮಿ ಹಾಗೂ ಜಮೀರ್ ಅಹಮದ್ ಖಾನ್ ಈಗ ಹಾವು ಮುಂಗೂಸಿಯಂತಾಗಿದ್ದು, ರಾಜಕೀಯದಲ್ಲಿ ಯಾರು ಮಿತ್ರರಲ್ಲ, ಯಾರು ಶತ್ರುವಲ್ಲ ಎಂಬುದು ಸಾಬೀತಾಗಿದೆ.

  ಇದನ್ನು ಓದಿ: ಎ.ಮಂಜು ಹೆಗಲ ಮೇಲಿಂದ ರಾಜಕೀಯ ವೈರಿ ರಮೇಶ್ ಜಾರಕಿಹೊಳಿಗೆ ಗುರಿಯಿಟ್ಟ DK Shivakumar

  ಇನ್ನು ನಿನ್ನೆ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಏಳು ಸ್ಥಾನದಲ್ಲಿ ಸ್ಪರ್ಧಿಸಿರುವ ವಿಚಾರಕ್ಕೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್  ಪ್ರತಿಕ್ರಿಯಿಸಿದ್ದರು. ಜೆಡಿಎಸ್, ಬಿಜೆಪಿ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿರುವ ಸಾಧ್ಯತೆ ಇದೆ. ಎಲ್ಲಾ 25 ಸ್ಥಾನಕ್ಕೂ ಅಭ್ಯರ್ಥಿ ಹಾಕಬೇಕಿತ್ತು. ಕೇವಲ 7 ಸ್ಥಾನಕ್ಕೆ ಹಾಕಿರುವುದು ಅನುಮಾನಸ್ಪದವಾಗಿ ಕಾಣುತ್ತಿದೆ. ಅವರಿಗೆ ಅಭ್ಯರ್ಥಿಗಳು ಇಲ್ಲವಾ? ಇಲ್ಲದಿದ್ದರೆ ಸ್ಪಷ್ಟಪಡಿಸಲಿ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಒತ್ತಾಯಿಸಿದ್ದಾರೆ. ಬಿಜೆಪಿಗೆ ಲಾಭ ಮಾಡಿಕೊಡಲು ಜೆ.ಡಿ.ಎಸ್ ಮಾಡಿರುವ ತಂತ್ರ ಅಂತ ಅನಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು. 123 ಸ್ಥಾನ ಗೆದ್ದು ಅಧಿಕಾರ ಹಿಡಿಯುತ್ತೇವೆ ಅನ್ನೋ ಹೆಚ್.ಡಿ.ಕುಮಾರಸ್ವಾಮಿ  ಹೇಳಿಕೆಗ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿಂಗಲ್ ಡಿಜಿಟ್ ಮಾತ್ರ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.

  ವರದಿ: ಸುನೀಲ್ ಗೌಡ 
  Published by:Kavya V
  First published: