ಸ್ಮಶಾನದಲ್ಲಿ ಹೊಸ ಕಾರಿನ ಚಾಲನಾ ಸಮಾರಂಭ ; ಮೂಢ ನಂಬಿಕೆ ವಿರುದ್ಧ ಶಾಸಕ ಸತೀಶ್ ಜಾರಕಿಹೊಳಿ ಮತ್ತೊಂದು ಹೆಜ್ಜೆ...!

ಸದ್ಯ ಮತ್ತೊಂದು ಐತಿಹಾಸಿಕ ಹೆಜ್ಜೆಗೆ ಸತೀಶ್ ಜಾರಕಿಹೊಳಿ ಮುಂದಾಗಿದ್ದಾರೆ. ತಮ್ಮ ಹೊಸ ಕಾರನ್ನು ಸ್ಮಶಾನದಲ್ಲಿ ಚಾಲನೆ ನೀಡಲಿದ್ದಾರೆ. ಇದೇ ತಿಂಗಳ 13ರಂದು ಬೆಳಗ್ಗೆ 11ಕ್ಕೆ ಕಾರ್ಯಕ್ರಮವನ್ನು ನಿಗದಿ ಮಾಡಲಾಗಿದೆ.

news18-kannada
Updated:July 10, 2020, 8:43 PM IST
ಸ್ಮಶಾನದಲ್ಲಿ ಹೊಸ ಕಾರಿನ ಚಾಲನಾ ಸಮಾರಂಭ ; ಮೂಢ ನಂಬಿಕೆ ವಿರುದ್ಧ ಶಾಸಕ ಸತೀಶ್ ಜಾರಕಿಹೊಳಿ ಮತ್ತೊಂದು ಹೆಜ್ಜೆ...!
ಶಾಸಕ ಸತೀಶ್ ಜಾರಕಿಹೊಳಿ
  • Share this:
ಬೆಳಗಾವಿ(ಜುಲೈ. 10): ಸ್ಮಶಾನದಲ್ಲಿ ವಾಸ್ತವ್ಯ ಮಾಡುವ ಮೂಲಕ ರಾಜ್ಯದಲ್ಲಿಯೇ ಶಾಸಕ ಸತೀಶ್ ಜಾರಕಿಹೊಳಿ ಗಮನ ಸೆಳೆದಿದ್ದರು. ಸದ್ಯ ಮತ್ತೊಂದು ಮೂಢನಂಬಿಕೆ ವಿರುದ್ಧ ಹೆಜ್ಜೆಯನ್ನು ಇಟ್ಟಿದ್ದಾರೆ. ಈ ಸಲ ತಮ್ಮ ಹೊಸ ವಾಹವನ್ನು ಸ್ಮಶಾನದಲ್ಲಿ ಚಾಲನೆ ನೀಡುವ ಮೂಲಕ ಗಮನ ಸೆಳೆಯಲು ನಿರ್ಧರಿಸಿದ್ದಾರೆ.

ಡಿಸೆಂಬರ್​ 6 ರಂದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಹಣ ದಿನ. ಈ ದಿನವನ್ನು ಮಾನವ ಬಂಧುತ್ವ ವೇದಿಕೆ ಪ್ರತಿ ವರ್ಷ ಬೆಳಗಾವಿಯ ಸದಾಶಿವ ನಗರದ ಸ್ಮಶಾನದಲ್ಲಿ ಆಯೋಜನೆ ಮಾಡುತ್ತ ಬಂದಿದೆ. ಸ್ಮಶಾನದಲ್ಲಿ 24 ಗಂಟೆಗಳ ಕಾಲ ನಿರಂತರ ವಿವಿಧ ಕಾರ್ಯಕ್ರಮಗಳ ನಡೆಯುತ್ತಿದ್ದವು.

ಶಾಸಕ ಸತೀಶ್ ಜಾರಕಿಹೊಳಿ ಸ್ಮಶಾನದಲ್ಲಿ ವಾಸ್ತವ್ಯ ಮಾಡುವ ಮೂಲಕ ಮೂಢ ನಂಬಿಕೆ ವಿರುದ್ಧ ಹೋರಾಟ ನಡೆಸುತ್ತಿದ್ದರು. ಸದ್ಯ ಮತ್ತೊಂದು ಐತಿಹಾಸಿಕ ಹೆಜ್ಜೆಗೆ ಸತೀಶ್ ಜಾರಕಿಹೊಳಿ ಮುಂದಾಗಿದ್ದಾರೆ. ತಮ್ಮ ಹೊಸ ಕಾರನ್ನು ಸ್ಮಶಾನದಲ್ಲಿ ಚಾಲನೆ ನೀಡಲಿದ್ದಾರೆ. ಇದೇ ತಿಂಗಳ 13ರಂದು ಬೆಳಗ್ಗೆ 11ಕ್ಕೆ ಕಾರ್ಯಕ್ರಮವನ್ನು ನಿಗದಿ ಮಾಡಲಾಗಿದೆ.

ಫೋಟೋ ಕೃಪೆ : ಸತೀಶ್ ಜಾರಕಿಹೊಳಿ ಅಭಿಮಾನಿ ಬಳಕ ಫೆಸ್​ಬುಕ್​​ ಪೇಜ್​​


ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಹೆಚ್ಚು ಕಾರ್ಯಕರ್ತರು ಆಗಮಿಸದಂತೆ ಸೂಚನೆ ಸಹ ನೀಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಕಾರ್ಯಕ್ರಮದ ನೇರ ಪ್ರಸಾರ ನಡೆಸುವ ಬಗ್ಗೆ ಮಾನವ ಬಂಧುತ್ವ ವೇದಿಕೆ ಸಂಚಾಲಕ ರವೀಂದ್ರ ನಾಯ್ಕರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಕೊರೋನಾ ಭೀತಿ : ಗ್ರಾಮಸ್ಥರಿಗೆ ಮಾತ್ರ ಹೇರ್ ಕಟಿಂಗ್, ಶೇವಿಂಗ್..!

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೂತನ ಕಾರಿನ ಸಂಖ್ಯೆ ಕೆಎ 49- ಎನ್- 2023 ರ ಸಂಖ್ಯೆಯ ನೋಂದಣಿಯನ್ನು ಹೊಂದಿದೆ. ಇದು ಮುಂಬರುವ ವಿಧಾನಸಭೆ ಚುನಾವಣೆ ನಡೆಯುವ ವರ್ಷವು ಆಗಿದೆ. ಮುಂದಿನ ದಿನದಲ್ಲಿ ಮುಖ್ಯಮಂತ್ರಿ ಆಗುವ ಕನಸು ಹೊಂದಿರುವ ಸತೀಶ್ ಜಾರಕಿಹೊಳಿ ಈ ಕಾರಿನ ನಂಬರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ನಡೆದಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಘಟಾನುಘಟಿ ನಾಯಕರೇಲ್ಲ ಸೋತು ಸುಣ್ಣವಾಗಿದ್ದರು. ಇನ್ನೂ ಅನೇಕ ನಾಯಕರು ಗೆಲುವುಗಾಗಿ ಹೋಮ, ಹವನದ ಮೊರೆ ಹೋಗಿದ್ದರು. ಆದರೇ ಸತೀಶ್ ಜಾರಕಿಹೊಳಿ ಮಾತ್ರ ಚುನಾವಣೆ ನಾಮಪತ್ರವನ್ನು ರಾಹುಕಾಲದಲ್ಲಿ ಸಲ್ಲಿಕೆ ಮಾಡಿದ್ದರು. ಈ ಮೂಲಕ ಚುನಾವಣೆಯಲ್ಲಿ ಮೂಢ ನಂಬಿಕೆ ವಿರುದ್ಧ ಜಾಗೃತಿಯನ್ನು ಮಾಡಿದ್ದರು. ಜತೆಗೆ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ನಡೆಸದೇ ಗೆದ್ದು ಬರುವ ಮೂಲಕ ಇತಿಹಾಸ ಸೃಷ್ಠಿ ಮಾಡಿದರು.
Published by: G Hareeshkumar
First published: July 10, 2020, 8:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading