ನ್ಯೂಸ್ 18 ಕನ್ನಡ ವರದಿ ಫಲಶೃತಿ; ಡೋಂಗ್ರಿ ಗ್ರಾಮದ ನದಿಗೆ ಸೇತುವೆ ನಿರ್ಮಿಸಿಕೊಡುವುದಾಗಿ ಶಾಸಕಿ ರೂಪಾಲಿ ನಾಯ್ಕ್ ಭರವಸೆ

ಪ್ರಕೃತಿಯ ಮುನಿಸಿಗೆ ಇದ್ದ ಮೂಲಸೌಕರ್ಯವೂ ಬಲಿ ಆಗಿ ಹೋಯಿತು. ಬಳಿಕ ಇಲ್ಲಿ ಮತ್ತದೇ ಹಳೆ ದಿನಗಳಂತೆ ಗ್ರಾಮದ ಜನರು ನದಿಯಲ್ಲಿ ತೆಪ್ಪದ ಮೂಲಕ ಸಂಚಾರ ಆರಂಭಿಸಿದ್ದರು. ಶಾಲೆಯ ವಿದ್ಯಾರ್ಥಿಗಳು ಕೂಡಾ ತೆಪ್ಪವನ್ನೇ ಅವಲಂಬಿಸಿ ಶಾಲೆಗೆ ಹೋಗುತ್ತಿದ್ದರು. ಊರಿನ ಹಿರಿಯರು ಪರಿಣಿತಿ ಹೊಂದಿದವರು ನದಿಯಲ್ಲಿ ತೆಪ್ಪ ಚಲಾಯಿಸುತ್ತಾರೆ. ಈ ಎಲ್ಲ ಸಮಸ್ಯೆ ಕುರಿತು ನ್ಯೂಸ್​ 18 ಕನ್ನಡ ಬೆಳಕು ಚೆಲ್ಲಿತ್ತು. ಇದೀಗ ವರದಿಗೆ ಸ್ಪಂದಿಸಿರುವ ಸ್ಥಳೀಯ ಶಾಸಕರು ಶೀಘ್ರದಲ್ಲಿ ಸೇತುವೆ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ. 

ಕಚ್ಚಾ ತೆಪ್ಪದಲ್ಲಿ ಸಾಗುತ್ತಿರುವ ವಿದ್ಯಾರ್ಥಿಗಳು.

ಕಚ್ಚಾ ತೆಪ್ಪದಲ್ಲಿ ಸಾಗುತ್ತಿರುವ ವಿದ್ಯಾರ್ಥಿಗಳು.

  • Share this:
ಕಾರವಾರ; ಕಳೆದ 2019 ರಲ್ಲಿ ಸಂಭವಿಸಿದ ಪ್ರವಾಹಕ್ಕೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮದಲ್ಲಿ ಹರಿಯುವ ಗಂಗಾವಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ತೂಗು ಸೇತುವೆ ಕೊಚ್ಚಿ ಹೋಗಿತ್ತು. ಇದರಿಂದಾಗಿ ಇಲ್ಲಿನ ಜನ ಪರ್ಯಾಯ ವ್ಯವಸ್ಥೆ ಇಲ್ಲದೆ ತೆಪ್ಪದ ಮೇಲೆ ಸಂಚರಿಸುತ್ತಿದ್ದರು. ಇವರ ಸಮಸ್ಯೆ ಕುರಿತು ನ್ಯೂಸ್ 18 ಕನ್ನಡ ವಿಸ್ತೃತ ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ್ ಅವರು ಡೋಂಗ್ರಿ ಗ್ರಾಮದ ಗಂಗಾವಳಿ ನದಿಗೆ ಸೇತುವೆ ನಿರ್ಮಾಣಕ್ಕೆ 1 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಮುಂದಿನ ಎರಡು ತಿಂಗಳಲ್ಲಿ ತೂಗು ಸೇತುವೆ ಕಾಮಗಾರಿ ಆರಂಭಿಸುವುದಾಗಿ ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮದ ತೂಗು ಸೇತುವೆ ಕಳೆದ 2019ರಲ್ಲಿ ಸಂಭವಿಸಿದ ಗಂಗಾವಳಿ ನದಿ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು. ಈ ಗ್ರಾಮದ ಜನರು ಕಳೆದ ಒಂದೂವರೆ ವರ್ಷದಿಂದ ನದಿಯಲ್ಲಿ ತೆಪ್ಪದ ಮೂಲಕ ಓಡಾಡುತ್ತಿದ್ದರು. ಈ ಬಗ್ಗೆ ನ್ಯೂಸ್ 18 ಕನ್ನಡ ವಿಸ್ತೃತ ವರದಿ ಮಾಡಿ ಜನಪ್ರತಿನಿಧಿಗಳ ಗಮನ ಸೆಳೆದಿತ್ತು. ವರದಿ ನೋಡಿದ ಶಾಸಕಿ ರೂಪಾಲಿ ನಾಯ್ಕ್ ಪ್ರತಿಕ್ರಿಯೆ ನೀಡಿ ತೂಗು ಸೇತುವೆ ನಿರ್ಮಾಣ ಮಾಡಿಕೊಡುವುದಾಗಿ ಹೇಳಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಕಾಮಗಾರಿ ಆರಂಭಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.

ಶಾಸಕಿ ರೂಪಾಲಿ ನಾಯ್ಕ್


ಇದನ್ನು ಓದಿ: ಕಾರವಾರ: ಡೋಂಗ್ರಿ ಗ್ರಾಮದ ಜನರ ಗೋಳು ಕೇಳೋರ್ಯಾರು? ಈ ಊರಿಗೆ ಸೇತುವೆಯೂ ಇಲ್ಲ, ತೆಪ್ಪವೂ ಇಲ್ಲ!

ಕಾರವಾರದಲ್ಲಿ ನ್ಯೂಸ್ 18 ಕನ್ನಡದ ಜತೆ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ್, ಡೋಂಗ್ರಿ ಗ್ರಾಮದ ಜನರ ಸಮಸ್ಯೆ ನನಗೆ ಗೊತ್ತಿದೆ. ಮುಖ್ಯಮಂತ್ರಿ ಜತೆ ಮತ್ತು ಸಂಬಂಧಿಸಿದ ಮಂತ್ರಿಗಳ ಜತೆ ಮಾತನಾಡಿ ಈಗಾಗಲೇ 1ಕೋಟಿ ರೂ. ಹಣ ಬಿಡುಗಡೆ ಮಾಡಿಸಲಾಗಿದೆ. ಮುಂದಿನ ದಿನದಲ್ಲಿ ಸೇತುವೆ ಕಾಮಗಾರಿ ಆರಂಭವಾಗಲಿದೆ. ಈ ಹಿಂದೆ ದೋಣಿ ನೀಡಲಾಗಿತ್ತು. ಆದರೆ ಅಲ್ಲಿ ಮರದ ದಿಮ್ಮಿಗಳು ಮತ್ತು ಬೃಹತ್ ಕಲ್ಲುಗಳು ಇರುವುದರಿಂದ ದೋಣಿ ಓಡಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಲ್ಲಿನ ಜನ ತಾವೇ ತೆಪ್ಪ ಸಿದ್ದ ಮಾಡಿಕೊಂಡು ಓಡಾಡುತ್ತಿದ್ದಾರೆ. ಕೂಡಲೇ ಇಲ್ಲಿ ತೂಗು ಸೇತುವೆ ನಿರ್ಮಾಣ ಕಾರ್ಯ ಆರಂಭವಾಗುತ್ತೆ ಎಂಬ ಭರವಸೆ ನೀಡಿದ್ದಾರೆ.

ಡೋಂಗ್ರಿ ಜನರ ಬಹುವರ್ಷದ ಹೋರಾಟದ ಫಲವಾಗಿ 201 6ರಲ್ಲಿ ಡೋಂಗ್ರಿ ಗ್ರಾಮದ ಜನರಿಗೆ ಓಡಾಡಲು ಕರಾವಳಿ ಅಭಿವೃದ್ದಿ ಪ್ರಾಧಿಕಾರದಿಂದ ತೂಗು ಸೇತುವೆ ನಿರ್ಮಾಣ ಮಾಡಿಕೊಡಲಾಗಿತ್ತು. ಆದರೆ ಆ ತೂಗು ಸೇತುವೆ ಕೇವಲ ಮೂರೇ ವರ್ಷ ಗ್ರಾಮದ ಜನರಿಗೆ ಉಪಯೋಗವಾಯಿತು. ಪ್ರಕೃತಿಯ ಮುನಿಸಿಗೆ ಇದ್ದ ಮೂಲಸೌಕರ್ಯವೂ ಬಲಿ ಆಗಿ ಹೋಯಿತು. ಬಳಿಕ ಇಲ್ಲಿ ಮತ್ತದೇ ಹಳೆ ದಿನಗಳಂತೆ ಗ್ರಾಮದ ಜನರು ನದಿಯಲ್ಲಿ ತೆಪ್ಪದ ಮೂಲಕ ಸಂಚಾರ ಆರಂಭಿಸಿದ್ದರು. ಶಾಲೆಯ ವಿದ್ಯಾರ್ಥಿಗಳು ಕೂಡಾ ತೆಪ್ಪವನ್ನೇ ಅವಲಂಬಿಸಿ ಶಾಲೆಗೆ ಹೋಗುತ್ತಿದ್ದರು. ಊರಿನ ಹಿರಿಯರು ಪರಿಣಿತಿ ಹೊಂದಿದವರು ನದಿಯಲ್ಲಿ ತೆಪ್ಪ ಚಲಾಯಿಸುತ್ತಾರೆ. ಈ ಎಲ್ಲ ಸಮಸ್ಯೆ ಕುರಿತು ನ್ಯೂಸ್​ 18 ಕನ್ನಡ ಬೆಳಕು ಚೆಲ್ಲಿತ್ತು. ಇದೀಗ ವರದಿಗೆ ಸ್ಪಂದಿಸಿರುವ ಸ್ಥಳೀಯ ಶಾಸಕರು ಶೀಘ್ರದಲ್ಲಿ ಸೇತುವೆ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ.
Published by:HR Ramesh
First published: