ಸುಮಲತಾರ ಅಹಂಕಾರ, ಮದ ಎರಡೂ ಕಮ್ಮಿ ಆಗಬೇಕು: ಕಟುವಾಗಿ ಟೀಕಿಸಿದ ಶಾಸಕ ರವೀಂದ್ರ ಶ್ರೀಕಂಠಯ್ಯ

ಅಂಬರೀಶ್​ ಅವರು ಸತ್ತಾಗ ಡಾ.ರಾಜ್​ಕುಮಾರ್​ ಅವರಿಗೂ ಸಿಗದಷ್ಟು ಗೌರವವನ್ನ ಕುಮಾರಸ್ವಾಮಿ ತಂದು ಕೊಟ್ಟಿದ್ದಾರೆ. ಅದರ ಸಿಂಪತಿ ಮೇಲೆ ಸುಮಲತಾ ಅಂಬರೀಶ್ ಎಲೆಕ್ಷನ್ ಗೆದ್ದಿದ್ದಾರೆ ಎಂದು ಕಿಡಿಕಾರಿದರು.

ರವೀಂದ್ರ ಶ್ರೀಕಂಠಯ್ಯ, ಸುಮಲತಾ

ರವೀಂದ್ರ ಶ್ರೀಕಂಠಯ್ಯ, ಸುಮಲತಾ

  • Share this:
ಮಂಡ್ಯ : ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​​ ನಡುವಿನ ವಾಗ್ಯುದ್ಧ ರಾಜಕೀಯ ಮೇಲಾಟಕ್ಕೆ ಎಡೆ ಮಾಡಿದೆ. ಕುಮಾರಸ್ವಾಮಿ ಅವರನ್ನು ಟೀಕಿಸಿದ ಸುಮಲತಾ ಅವರ ವಿರುದ್ಧ ಜೆಡಿಎಸ್​ ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸುಮಲತಾ ಹೇಳಿಕೆಗಳು ಅವರ ಅಪ್ರಬುದ್ಧತೆಯನ್ನು ಸೂಚಿಸುತ್ತದೆ. ಕುಮಾರಸ್ವಾಮಿ ಅವರಿಗೆ ತಲೆ ಕೆಟ್ಟೋಗಿದೆ ಅನ್ನೋ ಪದ ಬಳಸಿದ್ದಾರೆ. ಹಾಗಾದರೆ ಈಗ ಸುಮಲತಾ ದೊಡ್ಡವರಾ? ಬೇರೆಯವರ ಬಗ್ಗೆ ಮಾತನಾಡೋ ನಿಮ್ಮದು ದೊಡ್ಡ ತನನಾ. ಸುಮಲತಾರ ಅಹಂಕಾರ, ಮದ ಎರಡೂ ಕಮ್ಮಿ ಆಗಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸುಮಲತಾರ ಪತಿ ಅಂಬರೀಶ್ ಅವರನ್ನ ರಾಜಕೀಯಕ್ಕೆ ಪರಿಚಯಿಸಿದ್ದೇ ಜೆಡಿಎಸ್ ಪಕ್ಷ‌. ಅಂತಾದ್ರಲ್ಲಿ ಈ ರೀತಿ ದುರಂಕಾರ ತೋರಿಸಿದ್ರೆ ಇದಕ್ಕೆ ಮದ ಅಂತಾರೆ. ದುರಂಕಾರ ಮತ್ತು ಮದ ಇವೆರಡು ಸುಮಲತಾಗೆ ಕಮ್ಮಿ ಆಗಬೇಕು. ನೀವು ಚಿತ್ರರಂಗದಲ್ಲಿ ಹೆಸರು ಮಾಡಿದ್ದೀರಾ ಅಷ್ಟೇ. ರಾಜಕೀಯ ರಂಗದಲ್ಲಿ ಇನ್ನು ಹೆಸರು ಮಾಡಿಲ್ಲ. ಅಂಬರೀಶ್​ ಅವರು ಸತ್ತಾಗ ಡಾ.ರಾಜ್​ಕುಮಾರ್​ ಅವರಿಗೂ ಸಿಗದಷ್ಟು ಗೌರವವನ್ನ ಕುಮಾರಸ್ವಾಮಿ ತಂದು ಕೊಟ್ಟಿದ್ದಾರೆ. ಅದರ ಸಿಂಪತಿ ಮೇಲೆ ಸುಮಲತಾ ಅಂಬರೀಶ್ ಎಲೆಕ್ಷನ್ ಗೆದ್ದಿದ್ದಾರೆ ಎಂದು ಕಿಡಿಕಾರಿದರು.

ಸುಮಲತಾ ಈಗ ಕೆಆರ್‌ಎಸ್ ಹೇಳಿಕೆ ಬಿಟ್ಟಿದ್ದಾರೆ. ಈಗ ಅಕ್ರಮ ಗಣಿಗಾರಿಕೆ ವಿಚಾರ ಪ್ರಾರಂಭ ಮಾಡಿದ್ದಾರೆ. ಅವರ ಉದ್ದೇಶ ಅಕ್ರಮ ಗಣಿಗಾರಿಕೆ ಅಷ್ಟೇ. ಕಾವೇರಿ ನೀರಾವರಿ ನಿಗಮದ ಚೀಫ್ ಇಂಜಿನಿಯರ್ ಬಿರುಕು ಇಲ್ಲಾ ಅಂತ ಈಗಾಗಲೇ ವರದಿ ಕೊಟ್ಟಿದ್ದಾರೆ. ನ್ಯಾಷನಲ್ ಪ್ರಾಪರ್ಟಿ ಗೌಪ್ಯತೆ ಕಾಪಾಡುವ ಇಂಟರೆಸ್ಟ್ ಇವರಿಗೆ ಇದೆಯಾ? ಇಂಥ ಹೇಳಿಕೆಗಳಿಗೆ ಟೆರರಿಸ್ಟ್ ಗಳು ಕಾಯ್ತಾ ಇರ್ತಾರೆ . ಅವರಿಗೆ ಇಂಟ್ರಸ್ಟ್ ಇರೋದು ಅಕ್ರಮ ಗಣಿಗಾರಿಕೆಗಳ ಬಗ್ಗೆ ಅದರ ಬಗ್ಗೆ ಮಾತನಾಡಲಿ.

ಸುಮಲತಾರ ನಾಳಿನ ಟಿಪಿ ಬಂದಿದೆ ಅವರ ಮೊದಲ ವಿಸಿಟ್ ಕ್ರಷರ್ ಮೇಲೆ ಇದೆ. ಕಡೆಯಲ್ಲಿ ಬೇಬಿ ಬೆಟ್ಟದ ವೀಕ್ಷಣೆ ಇದೆ. ಅಂಗ್ರಳ್ಳಿ ಮತ್ತು ಚೆನ್ನನ ಕೆರೆ ಕ್ರಷರ್ ಇರೋದು ಬೇರೆ ಬೇರೆ ಸ್ಥಳಗಳಲ್ಲಿ ಇದಕ್ಕೂ ಕೆಆರ್‌ಎಸ್ ಗೆ ಸಂಬಂಧವಿಲ್ಲ. ಇವರು ಮೊದಲು ಅಲ್ಲಿ ವಿಸಿಟ್ ಮಾಡ್ತಿದ್ದಾರೆ ಕೊನೆಯಲ್ಲಿ ಬೇಬಿ ಬೆಟ್ಟದ ವಿಸಿಟ್ ಮಾಡ್ತಿದ್ದಾರೆ. ಇವರು ಕೆಆರ್‌ಎಸ್ ವೀಕ್ಷಣೆ ಮಾಡ್ತಿಲ್ಲ, ಇವ್ರು ಮಂಡ್ಯ ಜಿಲ್ಲೆಗೆ ಬರೋದು ಬರಿ ಗಣಿ ಬಗ್ಗೆ, ಎಲ್ಲೆಲ್ಲಿ ಯಾರನ್ನ ಎದುರಿಸ್ತಿದ್ದೀರಾ? ಗಣಿಗಾರಿಕೆ ನಂಬಿ ಜಿಲ್ಲೆಯಲ್ಲಿ ಸಾಕಷ್ಟು ಜನ ಜೀವನ ನಡೆಸ್ತಿದ್ದಾರೆ. ಅಕ್ರಮ ಇದ್ದರೆ ಅದನ್ನ ಕಾನೂನು ಬದ್ದವಾಗಿ ಸಕ್ರಮ ಮಾಡಿಕೊಡಿ. ಇದನ್ನ ಬಿಟ್ಟು ನೀವು ಎದುರಿಸುತ್ತಾ ಏನನ್ನೋ ನಿರಿಕ್ಷಿಸಿದ್ರೆ ನಾವೆಲ್ಲ ಕೈಕಟ್ಟಿಕೊಂಡು ಕೂತಿಲ್ಲ. ನಾವು ಜನರಿಂದ ಓಟ್ ಪಡೆದು ಗೆದ್ದಿರುವವರೇ. ನಮಗೂ ಗೊತ್ತಿದೆ ಏನು ಮಾಡಬೇಕು ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: Vinay Guruji: ಕುಮಾರಸ್ವಾಮಿ ಮತ್ತೆ ಸಿಎಂ ಆಗ್ತಾರೆ ಅಂತ ಭವಿಷ್ಯ ನುಡಿದಿಲ್ಲ; ಅವಧೂತ ವಿನಯ್​ ಗುರೂಜಿ ಸ್ಪಷ್ಟನೆ

ನೀವು ಈಡಿ ಜಿಲ್ಲೆಯನ್ನ ಅದ್ವಾನ ಮಾಡಲು ನಿಂತಿದ್ದೀರಾ. ಇವತು ನಿಮ್ಮಿಂದ ಅಭಿವೃದ್ಧಿ ನಿಧಾನಗತಿಯಲ್ಲಿ ಸಾಗಿದೆ. ಇವತ್ತು ಜನರಿಗೆ ಜೆಲ್ಲಿ ಸಿಕ್ತಿಲ್ಲ ಇದಕ್ಕೆಲ್ಲ ಕಾರಣ ನೀವು‌. ನಿಮ್ಮ ಅವಿವೇಕತನ ಎಂದು ಸುಮಲತಾ ಅವರ ವಿರುದ್ಧ ನೇರವಾಗಿ ಆರೋಪಿಸಿದರು. ನಿಮ್ಮಿಂದ ಅಧಿಕಾರಿಗಳು ಸುಲಿಗೆಗೆ ನಿಂತಿದ್ದಾರೆ. ಗೆದ್ದು ಎರಡು ವರ್ಷವಾಯ್ತು ನಿಮ್ಮ ಸಾಧನೆ ಏನು. ಕೋವಿಡ್ ಸಂದರ್ಭದಲ್ಲಿ ಜನರ ಕಷ್ಟ ಕೇಳಲಿಲ್ಲ, ಬರಿ ಡಿಸಿ ಬಳಿ ಸಭೆ ನಡೆಸಿ ಸುಮ್ಮನಾದ್ರಿ. ಅವರು ಈ ರೀತಿ ಜವಾಬ್ದಾರಿ ಇಲ್ಲದ ರೀತಿ ಮಾತನಾಡ್ತಿರೋದು ಬಹಳ ಸಮಸ್ಯೆ ಆಗ್ತಿದೆ. ಸುಮಲತಾ ವಿರುದ್ದ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಮನ್ಮುಲ್ ಭ್ರಷ್ಟಾಚಾರ ಕಂಡು ಹಿಡಿದಿದ್ದು ಜೆಡಿಎಸ್. ಆದ್ರೆ ಇದಾದ ಬಳಿಕ ಈ ಯಮ್ಮ ಬಂದು ವಿಸಿಟ್ ಮಾಡಿದ್ದಾರೆ ಅಷ್ಟೇ. ಮಂಡ್ಯಕ್ಕೆ ಬಂದ ತಕ್ಷಣ ಗಣಿ ಹತ್ತಿರ ಹೋಗಿ ನಿಲ್ತಿರಲ್ಲಾ, ನಿಮಗೆ ಮಂಡ್ಯ ಜನ ಕಾಣಿಸ್ತಿಲ್ವಾ. ನಿಮಗೆ ಮೈಶುಗರ್ ಕಾರ್ಖಾನೆ ಆರಂಭ ಆಗೋದು ಬೇಕಿಲ್ಲ. ಖಾಸಗಿಯವರ ಜೊತೆ ನೀವು ಟೈಯಪ್ ಮಾಡಿಕೊಂಡು ಖಾಸಗೀಕರಣಕ್ಕೆ ಒತ್ತಾಯ ಮಾಡ್ತಿದ್ದೀರಾ. ಇವರೆಲ್ಲ ಸೇರಿಕೊಂಡು ನಮ್ಮ ಜಿಲ್ಲೆಯ ಆಸ್ತಿಯನ್ನ ಯಾವನ್ನಿಗೋ ಮಾರಲು ಮುಂದಾದ್ರೆ ಅದನ್ನ ನೋಡಿಕೊಂಡು ಸುಮ್ಮನಿರಬೇಕಾ. ಇಂತದ್ದನೆಲ್ಲ ನೋಡಿಕೊಂಡು ಸುಮ್ಮನಿರುವ ಜಾಯಿಮಾನ ನಮ್ಮದಲ್ಲ. ರೈತರ ಜೊತೆ ಚೆಲ್ಲಾಟವಾಡ್ತಿರಾ ನೀವು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುಮ್ಮನೆ ಆವೇಶದಲ್ಲಿ ಅದ್ವಾನ ಮಾಡಬೇಡಿ, ನಿಮ್ಮಂತವರಿಂದ ಜಿಲ್ಲೆಗೆ ಕಳಂಕ ಬರೋದು ಬೇಡ ಎಂದು ಕಟುವಾಗಿ ಟೀಕಿಸಿದರು.
Published by:Kavya V
First published: