ನಾನು ಸಚಿವ ಸ್ಥಾನದ ಆಕಾಂಕ್ಷಿ; ಬಂಡಾಯದ ಗುಂಪಿಗೆ ಶಾಸಕ ನೆಹರು ಓಲೇಕಾರ ಹೊಸ ಸೇರ್ಪಡೆ

ರಾಜ್ಯದಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ. ಚಲವಾದಿ ಸಮಾಜದ ಯಾರೊಬ್ಬರಿಗೂ ಸಂಪುಟದಲ್ಲಿ ಅವಕಾಶ ನೀಡದೆ ಇರುವುದಕ್ಕೆ ನಮ್ಮ ಜನರು ಆಕ್ರೋಶಗೊಂಡಿದ್ದಾರೆ. ಬಲಗೈ ಸಮುದಾಯಕ್ಕೆ ಒಂದು ಸಚಿವ ಸ್ಥಾನದ ಅವಕಾಶ ನೀಡಬೇಕು ಎಂದು ಶಾಸಕ ನೆಹರು ಓಲೇಕಾರ ಒತ್ತಾಯಿಸಿದ್ದಾರೆ.

news18-kannada
Updated:June 2, 2020, 7:08 AM IST
ನಾನು ಸಚಿವ ಸ್ಥಾನದ ಆಕಾಂಕ್ಷಿ; ಬಂಡಾಯದ ಗುಂಪಿಗೆ ಶಾಸಕ ನೆಹರು ಓಲೇಕಾರ ಹೊಸ ಸೇರ್ಪಡೆ
ಶಾಸಕ ನೆಹರೂ ಓಲೇಕಾರ.
  • Share this:
ಹಾವೇರಿ; ಸಮಾನವಾಗಿ ಅವಕಾಶ ಮಾಡಿಕೊಟ್ಟರೆ ಸರ್ಕಾರ ಸುಭದ್ರವಾಗಿರುತ್ತದೆ, ಇಲ್ಲವಾದರೆ ಈ ಬಂಡಾಯದ ಬಿಸಿ ಮೇಲಿಂದ ಮೇಲೆ ತಟ್ಟುತ್ತಲ್ಲಿರುತ್ತದೆ ಎಂದು ಹೇಳುವ ಮೂಲಕ ಸಂಪುಟ ವಿಸ್ತರಣೆಯಾಗುತ್ತಿರುವ ಈ ಸಂದರ್ಭದಲ್ಲಿ ತಾನೂ ಸಚಿವ ಸ್ಥಾನದ ಆಕಾಂಕ್ಷಿ ಎಂದು ಹಾವೇರಿ ಶಾಸಕ ನೆಹರೂ ಓಲೇಕಾರ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಸಂಪುಟ ವಿಸ್ತರಣೆ ಕಸರತ್ತು ಜೋರಾಗಿದೆ. ಈಗಾಗಲೇ ಉಮೇಶ್‌ ಕತ್ತಿ ಮತ್ತು ಟೀಮ್ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿರುವ ಬೆನ್ನಿಗೆ ಹಾವೇರಿ ಜಿಲ್ಲೆಯ ಪ್ರಬಲ ಬಿಜೆಪಿ ನಾಯಕ ನೆಹರೂ ಓಲೇಕಾರ ತಮಗೂ ಸಚಿವ ಸ್ಥಾನ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಕುರಿತು ಮಾತನಾಡಿರುವ ಅವರು, "ಸಹಜವಾಗಿ ಎಲ್ಲರೂ ಅಧಿಕಾರ ಬೇಕು ಎಂದು ಕೇಳುತ್ತಾರೆ. ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಹಿರಿಯರು ಏನು ಮಾಡುತ್ತಾರೆ ಎಂಬುದನ್ನು ನಾವೆಲ್ಲ ಕಾದು ನೋಡುತ್ತಿದ್ದೇವೆ.

ರಾಜ್ಯದಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ. ಚಲವಾದಿ ಸಮಾಜದ ಯಾರೊಬ್ಬರಿಗೂ ಸಂಪುಟದಲ್ಲಿ ಅವಕಾಶ ನೀಡದೆ ಇರುವುದಕ್ಕೆ ನಮ್ಮ ಜನರು ಆಕ್ರೋಶಗೊಂಡಿದ್ದಾರೆ. ಬಲಗೈ ಸಮುದಾಯಕ್ಕೆ ಒಂದು ಸಚಿವ ಸ್ಥಾನದ ಅವಕಾಶ ನೀಡಬೇಕು,ಇದು ಹಿರಿಯರ ಕರ್ತವ್ಯ ಹೀಗಾಗಿ ಅವರು ನೀಡುತ್ತಾರೆ ಎಂಬ ವಿಶ್ವಾಸ ನಮಗಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಬಂಡಾಯ ಶಾಸಕರ ಕುರಿತು ಮಾತನಾಡಿರುವ ಅವರು, "ಬಸವನ ಗೌಡ ಪಾಟೀಲ್ ಯತ್ನಾಳ್ ಮತ್ತು ಉಮೇಶ್ ಕತ್ತಿ ಹಿರಿಯರು. ಅವರಿಗೆ ಅವಕಾಶ ಮಾಡಿಕೊಡಬೇಕು. ಸದ್ಯ ಯಾರಿಗೆಲ್ಲಾ ಅವಕಾಶ ನೀಡಲಾಗಿದೆ, ಅಂಥವರನ್ನು ಕೈಬಿಡಬೇಕು. ಹೊಸಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಕೇವಲ ಕೆಲವೇ ಜನರಿಗೆ ಅವಕಾಶ ಮಾಡಿಕೊಡುವಂತಹದ್ದು ಸರಿಯಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಸಚಿವ ಸ್ಥಾನದಂತೆ ಪರಿಷತ್‌ ಸ್ಥಾನವೂ ಸಿ.ಪಿ. ಯೋಗೇಶ್ವರ್‌ ಕೈತಪ್ಪಲಿದೆಯಾ?; ಹೌದು ಎನ್ನುತ್ತಿವೆ ಬಿಜೆಪಿ ಮೂಲಗಳು!
First published: June 2, 2020, 7:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading