ಶಿವಮೊಗ್ಗ(ಆಗಸ್ಟ್. 17): ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ ಕೆ ಸಂಗಮೇಶ್ ಸಹೋದರ ಬಿ ಕೆ ಶಿವಕುಮಾರ್ ಮಗಳು ಹಿತಾ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಗ ಮೃಣಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ಗಡಿ ಜಿಲ್ಲೆ ಬೆಳಗಾವಿಗೂ ಮಲೆನಾಡು ಜಿಲ್ಲೆ ಶಿವಮೊಗ್ಗಕ್ಕೂ ಬಾಂಧವ್ಯದ ಬೆಸುಗೆ ಬೆಸೆದಿದೆ.
ಬೆಳಗಾವಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕ್ಷೇತ್ರದ ಶಾಸಕ ಬಿ.ಕೆ. ಸಂಗಮೇಶ್ ಕುಟುಂಬ ಇಂದು ಸಂಬಂಧದ ಬಾಂಧವ್ಯದೊಂದಿಗೆ ಒಂದಾಗಿವೆ. ಶಿವಮೊಗ್ಗದ ಸರ್ಜಿ ಕನ್ವೆನ್ಷನ್ ಹಾಲ್ ನಲ್ಲಿ, ಈ ಎರಡು ಕುಟುಂಬಗಳು ನೆಂಟಸ್ತನದ ಬಾಂಧವ್ಯ ಬೆಸೆದುಕೊಂಡಿತು.
ಭದ್ರಾವತಿಯ ಶಾಸಕ ಬಿ.ಕೆ. ಸಂಗಮೇಶ್ವರ್ ಅವರ ಸಹೋದರ ಬಿ.ಕೆ. ಶಿವಕುಮಾರ್ ಅವರ ಮಗಳು ಹಿತಾ ಅವರೊಂದಿಗೆ, ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಅವರ ನಿಶ್ಚಿತಾರ್ಥ ಇಂದು ನೆರವೇರಿತು. ಮಲೆನಾಡಿನ ಭದ್ರಾ ದಂಡೆಯ ಮಗಳು, ನಮ್ಮ ಮನೆಯ ಸೊಸೆಯಾಗುತ್ತಿರುವುದಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಂತಸ ವ್ಯಕ್ತಪಡಿಸಿದ್ದಾರೆ. ಇದೊಂದು ಋಣಾನುಬಂಧವಾಗಿದ್ದು, ಹುಡುಗ, ಹುಡುಗಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಈ ಮದುವೆ ನಿಶ್ಚಯವಾಗಿದ್ದು, ಎರಡೂ ಕುಟುಂಬಗಳು, ಸಂತೋಷದಿಂದ ಒಪ್ಪಿ ನಿಶ್ಚಿತಾರ್ಥ ನೆರವೇರಿಸಿವೆ.
ನಿಶ್ಚಿತಾರ್ಥದಲ್ಲಿ ಬಂದ ಅತಿಥಿಗಳು ಮತ್ತು ಆಹ್ವಾನಿತರಿಗೆಲ್ಲರಿಗೂ ಸಂಗಮೇಶ್ ಕುಟುಂಬ ಮೈಸೂರು ಪೇಟ ತೊಡಿಸಿ, ಬರ ಮಾಡಿಕೊಂಡಿದ್ದಲ್ಲದೇ, ಅತಿಥ್ಯ ಕೂಡ ಭರ್ಜರಿಯಾಗಿಯೇ ನೀಡಿದ್ದಾರೆ.
ಇದನ್ನೂ ಓದಿ : ಫೇಸ್ ಬುಕ್ ಮತ್ತು ಡೇಟಿಂಗ್ ಆ್ಯಪ್ ಮೂಲಕ ಯುವತಿಯರಿಗೆ ವಂಚನೆ : ಆರೋಪಿ ಬಂಧಿಸಿದ ಪೊಲೀಸರು
ಇನ್ನು ನಿಶ್ಚಿತಾರ್ಥಕ್ಕೆ ಜಿಲ್ಲೆಯ ಮತ್ತು ಹೊರ ಜಿಲ್ಲೆಯ ವಿವಿಧ ಪಕ್ಷಗಳ ಮುಖಂಡರುಗಳು ಸಹ ಆಗಮಿಸಿದ್ದರೂ, ಎರಡು ಕುಟುಂಬಗಳಿಗೆ ಶುಭ ಕೋರಿದರು. ಪರಸ್ಪರ ವಜ್ರದುಂಗುರ ಬದಲಾಯಿಸಿಕೊಂಡ ಹಿತಾ ಹಾಗೂ ಮೃಣಾಲ್ ಆಹ್ವಾನಿತ ಗಣ್ಯರು ಮತ್ತು ಹಿರಿಯರಿಂದ ಆಶೀರ್ವಾದ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ