news18-kannada Updated:September 11, 2020, 3:51 PM IST
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ(ಸೆಪ್ಟೆಂಬರ್.11): ಶಾಸಕಿಯಾದ ಮೇಲೆ ಎಲ್ಲಾ ಒಳ್ಳೆಯದು ಆಗುತ್ತದೆ ಅಂದುಕೊಂಡಿದೆ. ಆದರೆ, ಶಾಸಕಿಯಾದ ಮೆಲೆ ಸಂಘರ್ಷಗಳು ಹೆಚ್ಚಾಗಿವೆ. ಒಬ್ಬ ಹೆಣ್ಣುಮಗಳಿಗೆ ಎಲ್ಲಾ ಕಷ್ಟಗಳು ಒಮ್ಮೆಲೆ ಬಂದಿವೆ. ಆದರು, ಇಡೀ ಕ್ಷೇತ್ರದ ಅಭಿವೃದ್ಧಿಗೆ ಪಣ ತೊಟ್ಟಿದ್ದೇನೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಶಾಲಾ ಕೊಠಡಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಹೆಬ್ಬಾಳ್ಕರ್ ಪಾಲ್ಗೊಂಡಿದ್ದರು. ನಂತರ ಸ್ಥಳೀಯರನ್ನು ಉದ್ದೇಶಿಸಿ ಹೆಬ್ಬಾಳ್ಕರ್ ಮಾತನಾಡಿದ್ದಾರೆ. ನಿಮಗೆಲ್ಲ ಗೊತ್ತು ನನಗೆ ಯಾರು ಕಷ್ಟು ಕೊಡುತ್ತಿದ್ದಾರೆ ಅಂತ. ಶಾಸಕಿಯಾಗಿ ಒಳ್ಳೆಯ ಕೆಲಸ ಮಾಡಿದ್ದರೆ ಹೆಸರು ಬರುತ್ತದೆ ಅಂತ ಈ ರೀತಿಯಲ್ಲಿ ಕಷ್ಟ ಕೊಡುತ್ತಿದ್ದಾರೆ. ಆದರೇ ನಾನು ಇದ್ಯಾವುದಕ್ಕೂ ಜಗ್ಗಲ್ಲ ಎಂದು ಪರೋಕ್ಷವಾಗಿ ಸಚಿವ ರಮೇಶ್ ಜಾರಕಿಹೊಳಿ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಪತನ, ಕೊರೋನಾ ವೈರಸ್ ಹಾವಳಿಯಿಂದ ಅನೇಕ ಸಮಸ್ಯೆಗಳು ಎದುರಾಗಿದ್ದಾವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 5 ಲಕ್ಷ ರೂಪಾಯಿ ಹಣ ಮಂಜೂರು ಮಾಡಿಸೋದು ಸಹ ಕಷ್ಟವಾಗಿದೆ. ಅವರದೇ ಸಚಿವರು, ಅವರದೇ ಸರ್ಕಾರ ಇದೆ. ಇಷ್ಟಲ್ಲ ಇದ್ದರು ಅಧಿಕಾರಿಗಳಿಗೆ ಕ್ಷೇತ್ರದ ಸಮಸ್ಯೆ ಬಗ್ಗೆ ಗಮನ ಸೆಳೆದು ಅಭಿವೃದ್ಧಿ ಕೆಲಸಕ್ಕೆ ಹಣ ಮಂಜೂರು ಮಾಡಿಸುತ್ತಿದ್ದೇನೆ ಎಂದರು.
ಪ್ರತಿ ದಿನ ಕ್ಷೇತ್ರದಲ್ಲಿ ಒಂದಲ್ಲ ಒಂದು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡುತ್ತಿದ್ದೇನೆ. ಕ್ಷೇತ್ರದ ಜನರ ಆಶೀರ್ವಾದ ನನ್ನ ಮೇಲಿದೆ. ಕಳೆದ ಮೂರು ವರ್ಷದಲ್ಲಿ ಇಡೀ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಆರಂಭವಾಗಿವೆ. ಇನ್ನೂ ಅನೇಕ ಕೆಲಸಗಳು ಮಾಡಲು ಬದ್ಧವಾಗಿದ್ದೇನೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಶಾಸಕಿ ಹೆಬ್ಬಾಳ್ಕರ್ ಹಾಗೂ ಸಚಿವ ರಮೇಶ್ ಜಾರಕಿಹೊಳಿ ನಡುವೆ ರಾಜಕೀಯ ಸಂಘರ್ಷದಿಂದಲೇ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಾಗಿತ್ತು. ಇದೀಗ ಗ್ರಾಮೀಣ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ರಮೇಶ್ ಜಾರಕಿಹೊಳಿ ಅನೇಕ ಕಸರತ್ತನ್ನು ಆರಂಭಿಸಿದ್ದಾರೆ. ಮುಂದಿನ ಚುನಾವಣೆಯ ಅಭ್ಯರ್ಥಿಯನ್ನು ಹುಡುಕಾಟದಲ್ಲಿ ರಮೇಶ್ ಜಾರಕಿಹೊಳಿ ತೊಡಗಿಕೊಂಡಿದ್ದಾರೆ.
ಇದನ್ನೂ ಓದಿ :
ಬ್ಲೂ ಫಿಲಂ ನೋಡುವವರು ಈ ರಾಜ್ಯದ ಡಿಸಿಎಂ ಆಗುತ್ತಿದ್ದಾರೆ ಎಂದಾಗ ಜನರಿಗೆ ನಗು ಬಂದಿತ್ತು : ಸವದಿಗೆ ಸಾ ರಾ ಮಹೇಶ್ ತಿರುಗೇಟು
ಮುಂದಿನ ಚುನಾವಣೆಗು ಮೊದಲೇ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹೆಬ್ಬಾಳ್ಕರ್ ಹಾಗೂ ರಮೇಶ ಜಾರಕಿಹೊಳಿ ತಮ್ಮ ಶಕ್ತಿ ಪ್ರದರ್ಶನ ನಡೆಸಲು ಸಿದ್ದತೆಯನ್ನು ಮಾಡಿಕೊಂಡಿದ್ದಾರೆ.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಚನ್ನರಾಜ್ ಹಟ್ಟಿಹೊಳಿ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಸಚಿವ ರಮೇಶ್ ಜಾರಕಿಹೊಳಿ ಸಹ ರಾಜೇಂದ್ರ ಅಂಕಲಗಿ ಪರ ಬ್ಯಾಟಿಂಗ್ ಮಾಡಲು ತಯಾರಿಯನ್ನು ನಡೆಸಿಕೊಂಡಿದ್ದಾರೆ.
Published by:
G Hareeshkumar
First published:
September 11, 2020, 3:51 PM IST