ಜೈಲಿಗೆ ಹೋಗಿ ಬಂದವರಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ಸತ್ಕಾರ; ಸಚಿವ ಸಿ.ಸಿ. ಪಾಟೀಲ್ ಗುಡುಗು

ಕಾಂಗ್ರೆಸ್ ಪಕ್ಷಕ್ಕೆ ತಮ್ಮ ದಲಿತ ಶಾಸಕರಿಗೆ ರಕ್ಷಣೆ ಕೊಡಲು ಆಗಿಲ್ಲ. ಎಷ್ಟು ಜನ ಕಾಂಗ್ರೆಸ್ ಶಾಸಕರು ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಸಾಂತ್ವಾನ ಹೇಳುವ ಪ್ರಯತ್ನ ಮಾಡಿದ್ದಾರೆ. ಮತ ಬ್ಯಾಂಕ್ ಗಾಗಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ಸಿಸಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ

ಸಚಿವ ಸಿ.ಸಿ. ಪಾಟೀಲ್.

ಸಚಿವ ಸಿ.ಸಿ. ಪಾಟೀಲ್.

  • Share this:
ಗದಗ: ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಚ್ಚಿ ಗಲಭೆ ಸೃಷ್ಟಿಸಿ ಜೈಲಿಗೆ ಹೋಗಿ ಬಂದವರಿಗೆ ಶಾಸಕ ಜಮೀರ್‌ ಅಹಮದ್‌ ಖಾನ್ ಸತ್ಕಾರ ಮಾಡುತ್ತಾರೆ ಎಂದು ಸಚಿವ ಸಿ.ಸಿ. ಪಾಟೀಲ್ ಗುಡುಗಿದ್ದಾರೆ.

ಬೆಂಗಳೂರಿನ ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ಪ್ರಕರಣ ಹಿನ್ನಲೆಯಲ್ಲಿ ಇಂದು ಗದಗದಲ್ಲಿ ಮಾತನಾಡುತ್ತಾ ಶಾಸಕ ಜಮೀರ್‌ ಅಹಮದ್‌ ಖಾನ್ ವಿರುದ್ಧ ಟೀಕಾಪ್ರಹಾರ ನಡೆಸಿರುವ ಸಿ.ಸಿ. ಪಾಟೀಲ್, "ಜಮೀರ್‌ ಅಹಮದ್‌ ಈ ಹಿಂದೆ ಯಡಿಯೂರಪ್ಪ ಸಿಎಂ ಆದ್ರೆ ತಾನು ಅವರ ಮನೆ ವಾಚ್ ಮನ್ ಆಗ್ತೀನಿ ಅಂದಿದ್ದರು. ಆದರೆ, ವಾಚ್‌ಮನ್ ಕೆಲಸ ಮಾಡಿಲ್ಲ. ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಅವರ ನಾಲಿಗೆಗೆ ಇತಿ ಮಿತಿಯೇ ಇಲ್ಲದಂತಾಗಿದೆ. ಇನ್ನೂ ಡಿಜೆ ಹಳ್ಳಿ ಗಲಭೆಯಲ್ಲಿ ಜೈಲು ಸೇರಿದವರಿಗೆ ಇದೀಗ ಸತ್ಕಾರ ಮಾಡಲು ಮುಂದಾಗಿದ್ದಾರೆ" ಎಂದು ಕಿಡಿಕಾರಿದ್ದಾರೆ.

ಇನ್ನೂ ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡಿಕೆ ಕುರಿತು ಕಿಡಿಕಾರಿರುವ ಸಿ.ಸಿ. ಪಾಟೀಲ್, "ಶಾಸಕರ‌ ಮನೆ, ಪೊಲೀಸ್ ಠಾಣೆ ಹಾಗೂ ಸಾರ್ವಜನಿಕರ ಆಸ್ತಿಪಾಸ್ತಿ ಹಾನಿ ಮಾಡಿದವರು ಸಾವನ್ನಪ್ಪಿದ್ದಾರೆ. ಯಾವ ಹೋರಾಟ ಮಾಡಿದ್ದಕ್ಕಾಗಿ ಅವರಿಗೆ ಪರಿಹಾರ ನೀಡಿದ್ದಾನೆ. ಹನುಮಾನ್ ದೇವಸ್ಥಾನ ರಕ್ಷಣೆ ಮಾಡಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ : Covid-19 Vaccine - ವಿಜ್ಞಾನಿಗಳು ಒಪ್ಪಿದರೆ ದೊಡ್ಡ ಪ್ರಮಾಣದಲ್ಲಿ ಕೊರೋನಾ ವ್ಯಾಕ್ಸಿನ್ ತಯಾರಿಸಲು ಭಾರತ ಸಿದ್ಧ: ಪ್ರಧಾನಿ ಮೋದಿ

ನಾಟಕ ಮಾಡಲು ಇತಿಮಿತಿ ಇರಬೇಕು. ಪೆಟ್ರೋಲ್ ಬಾಂಬ್, ಲಾಂಗು, ಮಚ್ಚು ಎಲ್ಲಿಂದ ಬಂದವು ಎಂದು ಪ್ರಶ್ನೆ ಮಾಡಿರುವ ಅವರು, ಕಾಂಗ್ರೆಸ್ ಪಕ್ಷಕ್ಕೆ ತಮ್ಮ ದಲಿತ ಶಾಸಕರಿಗೆ ರಕ್ಷಣೆ ಕೊಡಲು ಆಗಿಲ್ಲ. ಎಷ್ಟು ಜನ ಕಾಂಗ್ರೆಸ್ ಶಾಸಕರು ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಸಾಂತ್ವಾನ ಹೇಳುವ ಪ್ರಯತ್ನ ಮಾಡಿದ್ದಾರೆ. ಮತ ಬ್ಯಾಂಕ್ ಗಾಗಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.
Published by:MAshok Kumar
First published: