ಭೂ ಸೇನೆ ಅಥವಾ ಅಂಬೇಡ್ಕರ್ ನಿಗಮ ಮಂಡಳಿ ಸ್ಥಾನಕ್ಕೆ ಬೇಡಿಕೆ ಇಟ್ಟ ಶಾಸಕ ದುರ್ಯೋಧನ ಐಹೊಳೆ

ಸಿಎಂ ಯಡಿಯೂರಪ್ಪನವರನ್ನು ಒಂದು ಕಡೆ ಮಿತ್ರಮಂಡಳಿಯ ಶಾಸಕರು ಸಚಿವ ಸ್ಥಾನಕ್ಕಾಗಿ ಕೇಳುತ್ತಿದ್ದರೆ ಇತ್ತ ಮೂಲ ಬಿಜೆಪಿ ಶಾಸಕರೂ ಸಹ ಸಚಿವ ಸ್ಥಾನ ಹಾಗೂ ನಿಗಮ ಮಂಡಳಿಯ ಸ್ಥಾನಗಳಿಗೆ ಬೇಡಿಕೆ ಇಡುತ್ತಿದ್ದಾರೆ. ಈಗ ಸಿಎಂ ಬಿಎಸ್​ವೈ ಇವರನ್ನು ಹೇಗೆ ಸರಿದೂಗಿಸಿಕೊಂಡು ಹೋಗುತ್ತಾರೆ ಅನ್ನೋದೆ ಸದ್ಯಕ್ಕಿರುವ ಪ್ರಶ್ನೆಯಾಗಿದೆ.

ಶಾಸಕ ದುರ್ಯೋಧನ ಐಹೊಳೆ

ಶಾಸಕ ದುರ್ಯೋಧನ ಐಹೊಳೆ

  • Share this:
ಚಿಕ್ಕೋಡಿ; ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸಚಿವಾಕಾಂಕ್ಷಿಗಳ ಪಟ್ಟಿ ಹಿಡಿದು ದೆಹಲಿಗೆ ಹೊಗಿದ್ದೆ ಹೋಗಿದ್ದು ಸಚಿವಾಕಾಂಕ್ಷಿಗಳ ಬಾಯಲ್ಲಿ ನೀರು ಬಂದಿದೆ. ಅದರಲ್ಲೂ ಸರ್ಕಾರ ರಚನೆಗೆ ಸಾಥ್ ನೀಡಿದ್ದ ಮಿತ್ರ ಮಂಡಳಿಯಂತೂ ಜರೂರ್ ನಮಗೆ ಸಚಿವ ಸ್ಥಾನ ಬೇಕೇ ಬೇಕು ಅಂತಿದೆ. ಆದರೆ ಇತ್ತ ಮೂಲ ಬಿಜೆಪಿಗರೂ ಸಹ ಸಚಿವ ಸ್ಥಾನ ಹಾಗೂ ಪ್ರಮುಖ ನಿಗಮ ಮಂಡಳಿ ಸ್ಥಾನಗಳ‌ ಮೇಲೆ ಕಣ್ಣಿಟ್ಟಿದ್ದು ಅನುದಾನ ಇರದ ನಿಗಮ ಮಂಡಳಿ ಬೇಡವೇ ಬೇಡ ನಮಗೆ ಇಂತಹದ್ದೇ ನಿಗಮ ಮಂಡಳಿ ಬೇಕು ಅಂತಿದ್ದಾರೆ. ಈಗ ಸಿ ಎಂ ಬಿಎಸ್​ವೈ ಅವರು ಎಲ್ಲರನ್ನೂ ಹೇಗೆ ಸಮಾಧಾನ ಪಡಿಸುತ್ತಾರೆ ಅನ್ನೊ ಚರ್ಚೆಗಳು ಶುರುವಾಗಿವೆ.

ಬಿಜೆಪಿ ಸರ್ಕಾರ ರಚನೆ ಆಗಿದ್ದೆ ಆಗಿದ್ದು ಎಲ್ಲರಿಗೂ ಸಚಿವ ಸ್ಥಾನದ ಕನಸು ಬೀಳಲಾರಂಭಿಸಿದೆ. ನಿಗಮ ಮಂಡಳಿಗಳ ಕನಸು ಬೀಳೋಕೆ ಶುರುವಾಗಿದೆ.‌ ಕೋವಿಡ್ ಹಾಗೂ ನೆರೆಯಿಂದ  ತತ್ತರಿಸಿ ಹೋಗಿದ್ದರೂ ಸರ್ಕಾರ ಇನ್ನೂ ಟೇಕ್ ಅಫೇ ಆಗಿಲ್ಲ ಅಂತ ವಿರೋಧ ಪಕ್ಷದ ಆರೋಪದ ನಡುವೆಯೂ ಹಾಗೋ ಹಿಗೋ ಸರ್ಕಾರ ನಡೆಸ್ಕೊಂಡು ಹೋಗ್ತಿರೊ ಸಿ ಎಂ ಯಡಿಯೂರಪ್ಪನವರಿಗೆ ಈಗ ಯಾರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವ ಪೀಕಲಾಟ ಶುರುವಾಗಿದೆ.

ಒಂದು ಕಡೆ ಕಾಂಗ್ರೆಸ್​ನಿಂದ ಹಾರಿ ಬಿಜೆಪಿಗೆ ಬಂದ ಶಾಸಕರು ತಮ್ಮ ನಾಯಕರ ಜತೆಗೆ ಸಚಿವ ಸ್ಥಾನಕ್ಕಾಗಿ ಲಾಭಿ ಮುಂದುವರೆಸಿದ್ದಾರೆ. ಇತ್ತ ಮೂಲ ಬಿಜೆಪಿ ಶಾಸಕರು ತಮಗೆ ಕೊಟ್ಟ ನಿಗಮ ಮಂಡಳಿಯ ಸ್ಥಾನವನ್ನೂ ಸಹ ಸ್ವೀಕಾರ ಮಾಡದೆ ಲಾಭದಾಯಕ ನಿಗಮ ಮಂಡಳಿ ಸ್ಥಾನಕ್ಕಾಗಿ ಸಿಎಂ ಬಳಿ ಪಟ್ಟು ಹಿಡಿದಿದ್ದಾರೆ. ಅದಕ್ಕೆ ತಾಜಾ ಉದಾಹರಣೆ ರಾಯಭಾಗ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ.

ಇದನ್ನು ಓದಿ: ಬಿಜೆಪಿಯಿಂದ ಕಾಂಗ್ರೆಸ್‌ಗೆ ಯಾರ್ಯಾರು ಬರ್ತಾರೆ ನೋಡ್ತಾ‌ ಇರಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಈಗಾಗಲೇ ಸರ್ಕಾರ ಐಹೊಳೆಗೆ ಖಾದಿ ಗ್ರಾಮೋದ್ಯೋಗ ನಿಗಮ ಮಂಡಳಿ ಸ್ಥಾನವನ್ನು ನೀಡಿತ್ತು. ಆದರೆ ಅದನ್ನು ಸುತಾರಾಂ ಒಪ್ಪದ ಐಹೊಳೆ ಈಗ ಬೇರೆ ನಿಗಮ ಮಂಡಳಿ ಸ್ಥಾನಕ್ಕೆ ಸಿಎಂ ಬಳಿ ಬೇಡಿಕೆ ಇಟ್ಟಿದ್ದಾರೆ. ಕರ್ನಾಟಕ ಭೂ ಸೇನಾ ನಿಗಮ ಮಂಡಳಿ ಅಥವಾ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೇಲೆ ಐಹೊಳೆ ಕಣ್ಣು ಹಾಕಿದ್ದಾರೆ. ಈಗಾಗಲೇ ನೀಡಿರುವ ಖಾದಿ ನಿಗಮದಲ್ಲಿ ಯಾವುದೇ ಹಣ ಬರುವುದಿಲ್ಲ ಅದರಿಂದ ಅಭಿವೃದ್ಧಿ ಸಾಧ್ಯವಿಲ್ಲ. ಹಾಗಾಗಿ ಅನುದಾನ ಬರುವ ನಿಗಮ ಮಂಡಳಿಯೇ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಒಟ್ಟಿನಲ್ಲಿ ಸಿಎಂ ಯಡಿಯೂರಪ್ಪನವರನ್ನು ಒಂದು ಕಡೆ ಮಿತ್ರಮಂಡಳಿಯ ಶಾಸಕರು ಸಚಿವ ಸ್ಥಾನಕ್ಕಾಗಿ ಕೇಳುತ್ತಿದ್ದರೆ ಇತ್ತ ಮೂಲ ಬಿಜೆಪಿ ಶಾಸಕರೂ ಸಹ ಸಚಿವ ಸ್ಥಾನ ಹಾಗೂ ನಿಗಮ ಮಂಡಳಿಯ ಸ್ಥಾನಗಳಿಗೆ ಬೇಡಿಕೆ ಇಡುತ್ತಿದ್ದಾರೆ. ಈಗ ಸಿಎಂ ಬಿಎಸ್​ವೈ ಇವರನ್ನು ಹೇಗೆ ಸರಿದೂಗಿಸಿಕೊಂಡು ಹೋಗುತ್ತಾರೆ ಅನ್ನೋದೆ ಸದ್ಯಕ್ಕಿರುವ ಪ್ರಶ್ನೆಯಾಗಿದೆ.
Published by:HR Ramesh
First published: