ತುಮಕೂರು : ಅದು ಒಂಟಿ ಹೆಂಗಸಿನ ಕೊಲೆ, ತನ್ನ ಹೆಂಡತಿಯ ಮೃತ ದೇಹ ಇದ್ದ ಸ್ಥಿತಿ ನೋಡಿ ಗಂಡನೇ ಬೆಚ್ಚಿ ಬಿದ್ದಿದ್ದ. ಮಹಿಳೆಯ ಮೇಲೆ ಭೀಕರ ಗಾಯ, ಕೆಲವೊಂದು ಕಲೆಗಳು ಸಾರಿ ಸಾರಿ ಹೇಳ್ತಿದ್ವು ರೇಪ್ & ಮರ್ಡರ್ ನಡೆದಿದೆ ಅಂತ. ಘಟನೆ ನಡೆದು ಮೂರು ದಿನ ಕಳೆದಿದ್ರೂ ಆರೋಪಿಗಳನ್ನ ಮಾತ್ರ ಪೊಲೀಸರು ಬಂಧಿಸಿಲ್ಲ. ಆ.24ರಂದು ತುಮಕೂರು ಗ್ರಾಮಾಂತರದ ಚೋಟಸಾಬರ ಪಾಳ್ಯದಲ್ಲಿ ನಡೆದಿದ್ದ ಅತ್ಯಾಚಾರ ಹಾಗೂ ಕೊಲೆ ಶಂಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಗ್ರಾಮಾಂತರ ಶಾಸಕ ಡಿ.ಸಿ ಗೌರಶಂಕರ್ ನೇತೃತ್ವದಲ್ಲಿ ಇಂದು ತುಮಕೂರು ಜಿಲ್ಲಾ ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ರು.
ತುಮಕೂರು ಗ್ರಾಮಾಂತರದ ಯಾವ ಪೊಲೀಸ್ ಆಧಿಕಾರಿಯ ಮೇಲೆಯೂ ನಮಗೆ ನಂಬಿಕೆ ಇಲ್ಲ ಎಂದು ಆರೋಪ ಮಾಡಿದ್ರು.. ತುಮಕೂರು ವಿವಿ ಮುಂಭಾಗದಿಂದ ಹೊರಟ ಪ್ರತಿಭಟನಾ ಮೆರವಣಿಗೆ ತುಮಕೂರು ಜಿಲ್ಲಾ ಎಸ್ಪಿ ಕಚೇರಿವರೆಗೂ ಬಂದು ನಡೆಯಿತು. ಎಸ್ಪಿ ಕಚೇರಿ ಮುಂದೆ ಸುಮಾರು ಒಂದು ಗಂಟೆಗಳಕಾಲ ಪ್ರತಿಭಟನೆ ನಡೆಸಿದ್ರು. ಈ ವೇಳೆ ತುಮಕೂರು ನಗರದ ಕ್ಯಾತಸಂದ್ರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರ್ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಗೌರಿಶಂಕರ್, ನಾನಿವತ್ತು ಸರ್ಕಾರದ ಗಮನ ಸೆಳೆಯಬೇಕು. ನನ್ನ ತಾಲೂಕಿನಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ವಿಶ್ವಾಸ ಇಲ್ಲ, ನಮ್ಮ ತಾಲೂಕಿನಲ್ಲಿ ನಡೆಯುತ್ತಿರುವ ಜೂಜು, ಮದ್ಯ ಮಾರುವಂತಹದ್ದು ಜಾಸ್ತಿಯಾಗಿದೆ, ಇದಕ್ಕೆ ಕುಮ್ಮಕ್ಕು ನೀಡುತ್ತಿರುವವರೇ ಕ್ಯಾತ್ಸಂದ್ರ ಸಿಪಿಐ ಹಾಗೂ ಪಿಎಸ್ ಐ ಎಂದು ಆರೋಪ ಮಾಡಿದ್ರು.
ಅಲ್ಲದೇ ಇದು ನಡೆದಾಡುವ ದೇವರು ಶಿವಕುಮಾರ್ ಸ್ವಾಮಿಗಳು ಇರುವ ಸ್ಥಳ ಈ ಸ್ಥಳದ ವ್ಯಾಪ್ತಿಯಲ್ಲಿ ಎರಡು ಕೊಲೆಗಳಾಗಿವೆ.. ಈ ವರ್ಷದಲ್ಲಿ ಎರಡೂ ಕೊಲೆಗಳಾಗಿವೆ. ಕಳೆದ ಮಂಗಳವಾರ ಮಧ್ಯಾಹ್ನ ಕೊಲೆ ಹಾಗೂ ಸಾಮೂಹಿಕ ಅತ್ಯಾಚಾರ ನಡೆದಿದೆ.. ಗ್ರಾಮೀಣ ಕುಟುಂಬಕ್ಕೆ ಅನ್ಯಾಯವಾಗಿದೆ ಎಂದ ಶಾಸಕ ಸರ್ಕಾರದ ಮೇಲೂ ಕೂಡ ವಾಗ್ದಾಳಿ ನಡೆಸಿದ್ರು.. ಚಾಮುಂಡಿ ಬೆಟ್ಟದಲ್ಲಿ ನಡೆದ ಗ್ಯಾಂಗ್ ರೇಪ್ ಗೆ ಸರ್ಕಾರ ಗಮನಕೊಟ್ಟು ಆರೋಪಿಗಳನ್ನ ಹಿಡಿಯಲು ಪ್ರಯತ್ನ ಮಾಡುತ್ತಿದೆ.ಇದೇ ರೀತಿಯಲ್ಲಿ ಗಮನಹರಿಸಿ ತನಿಖೆ ತಂಡ ರಚಿಸಿ ಆರೋಪಿಗಳನ್ನ ಬಂಧಿಸಬೇಕು. ಆಗಿರುವ ಅನ್ಯಾಯಕ್ಕೆ ಪರಿಹಾರ ನೀಡಬೇಕು.ಮತ್ತೆ ಈಂತಹ ಪ್ರಕರಣ ಗಳು ಮರುಕಳಿಸಬಾರದು. 15 ದಿನಗಳಲ್ಲಿ ಆರೋಪಿಗಳನ್ನ ಬಂದಿಸದೇ ಇದ್ದಲ್ಲಿ. ಕುಮಾರಸ್ವಾಮಿ ಹಾಗೂ ದೇವೇಗೌಡರ ಸಮ್ಮುಖದಲ್ಲಿ ಪ್ರತಿಭಟನೆ ಮಾಡುತ್ತೇವೆ.
ಇದನ್ನೂ ಓದಿ: Man Kidnapped by Friends: ಹಣ ಇದೆ ಅಂತ ಹೇಳಿದ್ದೇ ತಪ್ಪಾಯ್ತು, ಸ್ನೇಹಿತರಿಂದಲೇ ಕಿಡ್ನ್ಯಾಪ್!
ಆರೋಪಿಗಳನ್ನ ಬಂಧಿಸೋವರೆಗೂ ಪ್ರತಿಭಟನೆ.ತುಮಕೂರು ಎಸ್ ಪಿ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತೇವೆ.ಶೀಘ್ರವಾಗಿ ಅತ್ಯಾಚಾರ ಕೊಲೆ ಮಾಡಿರೋ ಆರೋಪಿಗಳನ್ನ ಬಂಧಿಸಬೇಕು ಎಂದು ಆಗ್ರಹ ಮಾಡಿದ್ರು. ಬಳಿಕ ನೇರ ಸಿಎಂಗೆ ಮನವಿ ಮಾಡಿದಕೆಲವೊಂದುಸನ್ಮಾನ್ಯ ಮುಖ್ಯಮಂತ್ರಿ ಗಳೇ, ಸನ್ಮಾನ್ಯ ಗೃಹ ಮಂತ್ರಿಗಳೆ ದಯವಿಟ್ಟು ಚಾಮುಂಡಿ ಬೆಟ್ಟದಲ್ಲಿ ನಡೆದ ಪ್ರಕರಣ ಕ್ಕೆ ತಾವೇ ಖುದ್ದಾಗಿ ಹೋಗಿದಿರಿ. ದೆಹಲಿಯಿಂದ ಸಿಎಂ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಆರೋಪಿಗಳನ್ನ ಬೇಗ ಬಂದಿಸಿ ಅಂತಾ ಹೇಳಿದ್ದಿರಿ. ಬರೀ ಸಿಟಿ ಹೆಣ್ಣು ಮಕ್ಕಳನ್ನ ನೋಡಬೇಡಿ.ಗ್ರಾಮೀಣ ಹೆಣ್ಣು ಮಕ್ಕಳಿಗೂ ಜೀವವಿದೆ ಅನ್ನೋದು ಮರಿಬೇಡಿ.
ಸಿಎಂ ಹಾಗೂ ಗೃಹ ಸಚಿವರು ತಾವು ಕೂಡ ಗ್ರಾಮೀಣ ಭಾಗದಿಂದ ಬಂದಿದಿರಾ ಅಂತಾ ಮರಿಯಬೇಡಿ. ಗ್ರಾಮೀಣ ಹೆಣ್ಣು ಮಗಳಿಗೆ ಅನ್ಯಾಯವಾಗಿದೆ. ಇದನ್ನೂ ಗಮನಹರಿಸುವಂತೆ ಶಾಸಕ ಗೌರಿಶಂಕರ್ ಒತ್ತಾಯ ಮಾಡಿದ್ರು.. ಇನ್ನು ಈಗಾಗಲೇ ಆರೋಪಿಗಳ ತಲಾಶ್ ಗಾಗಿ ವಿಶೇಷ ಮೂರು ತಂಡಗಳನ್ನ ರಚಿಸಿದ್ದೇವೆ ಕೆಲವೇ ದಿನಗಳಲ್ಲಿ ಆರೋಪಿಗಳನ್ನ ಬಂಧಿಸುತ್ತೇವೆ, ಅಲ್ಲದೇ ಈಗಾಗಲೇ ಮೇಲಾಧಿಕಾರಿಗಳೂ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಕೆಲವೇ ದಿನಗಳಲ್ಲಿ ಆರೋಪಿಗಳನ್ನ ಬಂಧಿಸುತ್ತೇವೆ ಅಂತಾರೆ ತುಮಕೂರು ಎಸ್ಪಿ ರಾಹುಲ್ ಕುಮಾರ್ ಶಹಾಪುರ್ ವಾಡ್.. ಸಧ್ಯ ತುಮಕೂರು ಗ್ರಾಮಾಂತರದ ಹಿರೇಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮಹಿಳೆಯರು ಮತ್ತು ಯುವತಿಯರು ಮನೆಯಿಂದ ಈಚೆ ಬರೋಕೆ ಹೆದರುತ್ತಿದ್ದಾರೆ, ಶೀಘ್ರದಲ್ಲೇ ಆರೋಪಿಗಳನ್ನ ಬಂಧಿಸುತ್ತೇವೆ ಎಂದು ವಾಗ್ದಾನ ಕೊಟ್ಟಿರೋ ಪೊಲೀಸರು ಇನ್ನೆಷ್ಟುದಿನದಲ್ಲಿ ಆರೋಪಿಗಳನ್ನ ಬಂಧಿಸುತ್ತಾರೆ ಎಂಬುದನ್ನ ಕಾದು ನೋಡ್ಬೇಕಿದೆ..
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ