HOME » NEWS » District » MLA D C GOWRISHANKAR SAYS THAT I KNOW HOW TO HANDLE ELECTION VKTMK HK

ಚುನಾವಣೆ ನಡೆಸೋದು ಹೇಗೆಂದು ನನಗೆ ಗೊತ್ತಿದೆ - ಹೆದರದೇ ಸಂಘಟನಾ ಕಾರ್ಯದಲ್ಲಿ ತೊಡಗಿ: ಶಾಸಕ ಡಿ.ಸಿ.ಗೌರಿಶಂಕರ್

ವಿರೋಧ ಪಕ್ಷಗಳು ಚೆನ್ನಿಗಪ್ಪ ಕುಟುಂಬಕ್ಕೆ ಚುನಾವಣೆ ನಡೆಸುವುದನ್ನು ಹೇಳಿಕೊಡುವ ಅವಶ್ಯಕತೆ ಇಲ್ಲ. ಕಾರ್ಯಕರ್ತರು ವಿಧವಾ ವೇತನ, ಪಿಂಚಣಿ ಸೌಲಭ್ಯವನ್ನು ಅರ್ಹರಿಗೆ ಪ್ರಾಮಾಣಿಕವಾಗಿ ಕೊಡಿಸುವ ಕೆಲಸ ಮಾಡಬೇಕು

news18-kannada
Updated:November 29, 2020, 3:05 PM IST
ಚುನಾವಣೆ ನಡೆಸೋದು ಹೇಗೆಂದು ನನಗೆ ಗೊತ್ತಿದೆ - ಹೆದರದೇ ಸಂಘಟನಾ ಕಾರ್ಯದಲ್ಲಿ ತೊಡಗಿ: ಶಾಸಕ ಡಿ.ಸಿ.ಗೌರಿಶಂಕರ್
ಶಾಸಕ ಡಿ.ಸಿ ಗೌರಿಶಂಕರ್
  • Share this:
ತುಮಕೂರು(ನವೆಂಬರ್​. 29): ಮುಂದಿನ ಇಪ್ಪತ್ತೈದು ವರ್ಷಗಳ ಕಾಲ ಗ್ರಾಮಾಂತರ ಕ್ಷೇತ್ರ ಜೆಡಿಎಸ್ ಭದ್ರಕೋಟೆ ಎನ್ನುವುದನ್ನು ಜೆಡಿಎಸ್ ಕಾರ್ಯಕರ್ತರು ಅರಿತುಕೊಳ್ಳಬೇಕು. ಚುನಾವಣೆ ನಡೆಸುವುದು ಹೇಗೆ ಎನ್ನುವುದು ನನಗೆ ಗೊತ್ತಿದೆ , ಕಾರ್ಯಕರ್ತರು ಹೆದರದೇ ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್ ತಿಳಿಸಿದರು. ತಾಲೂಕಿನ ಸಾತಘಟ್ಟದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿ ಹಾಗೂ ಪಳೆಕಮ್ಮ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಎರಡು ಸಾವಿರ ಮಹಿಳೆಯರಿಗೆ ಬಾಗಿನ ವಿತರಿಸಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿರೋಧ ಪಕ್ಷಗಳು ಚೆನ್ನಿಗಪ್ಪ ಕುಟುಂಬಕ್ಕೆ ಚುನಾವಣೆ ನಡೆಸುವುದನ್ನು ಹೇಳಿಕೊಡುವ ಅವಶ್ಯಕತೆ ಇಲ್ಲ. ಕಾರ್ಯಕರ್ತರು ವಿಧವಾ ವೇತನ, ಪಿಂಚಣಿ ಸೌಲಭ್ಯವನ್ನು ಕಾರ್ಯಕರ್ತರು, ಅರ್ಹರಿಗೆ ಪ್ರಾಮಾಣಿಕವಾಗಿ ಕೊಡಿಸುವ ಕೆಲಸ ಮಾಡಬೇಕು. ಕಳೆದ ಎರಡೂವರೆ ವರ್ಷಗಳಲ್ಲಿ ಸಾಧಿಸಿರುವ ಕಾರ್ಯಗಳನ್ನು ಜನರಿಗೆ ತಲುಪಿಸಬೇಕು ಎಂದರು.

ಊರ್ಡಿಗೆರೆ ವ್ಯಾಪ್ತಿಯ ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಡಿ ನೀರನ್ನು ಹರಿಸಲು ಯೋಜಿಸಲಾಗಿದ್ದು, ಈಗಾಗಲೇ ಕೆರೆಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲು ಅಗತ್ಯ ಕ್ರಮಗಳನ್ನು ವಹಿಸಲಾಗಿದೆ. ಇದರಿಂದ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವುದರೊಂದಿಗೆ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು .

ದೇವರಾಯನದುರ್ಗಕ್ಕೆ 12 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ, ಶೌಚಾಲಯವನ್ನು ನಿರ್ಮಿಸಲಾಗಿದೆ. ಸ್ನಾನ ಗೃಹ ಮಾಡಲಾಗಿದೆ. ಸಾತಘಟ್ಟದ ಅಭಿವೃದ್ಧಿಗಾಗಿ ಒಂದು ಕೋಟಿ ಅನುದಾನವನ್ನು ನೀಡಿದ್ದೇನೆ ಎಂದು ತಿಳಿಸಿದರು..

ಗ್ರಾಮ ಪಂಚಾಯತಿಯಲ್ಲಿ 1.5 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಸೀತಕಲ್ಲು ಗ್ರಾಮ ಪಂಚಾಯತಿಯಲ್ಲಿ 9 ಕೋಟಿ ರೂಪಾಯಿ ಹಾಗೂ ಬೈಲಾಂಜನೇಯ ಸ್ವಾಮಿ ದೇಗುಲದ ಆವರಣದಲ್ಲಿ 12 ಲಕ್ಷ ರೂ ವೆಚ್ಚದಲ್ಲಿ ಶುದ್ಧ ನೀರಿನ ಘಟಕ ಹಾಗೂ 80 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ , ಸ್ನಾನಗೃಹ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ : ಸಚಿವ ಸಂಪುಟ ವಿಸ್ತರಣೆ ಕುರಿತು ಸಿಎಂ ಶೀಘ್ರ ನಿರ್ಧಾರ; ಸಚಿವ ಬಿ. ಶ್ರೀರಾಮುಲು

ತಾಲೂಕಿನ ಯಾವುದೇ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾದರೆ ಮೂರೇ ದಿನದಲ್ಲಿ ಕೊಳವೆ ಬಾವಿ ಕೊರೆಸುವ ಕೆಲಸ ಮಾಡಿದ್ದೇನೆ , ಕ್ಷೇತ್ರದ ಅಭಿವೃದ್ಧಿಗೆ ಮಂಜೂರಾಗಿದ್ದ 10 ಕೋಟಿ ರೂಪಾಯಿ ಅನುದಾನ ವಾಪಾಸ್ ಹೋಗಿತ್ತು, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ನೆರವಿನಿಂದ ಅನುದಾನ ವಾಪಾಸ್ ತಂದಿದ್ದು, ಈ ಭಾಗದಲ್ಲಿ ಬಾಕಿ ಇರುವ ಕೆಲಸಗಳನ್ನು ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆಯೊಳಗೆ ಮಾಡಲಾಗುವುದು ಎಂದರು.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ 500 ಕೋಟಿ ರೂಪಾಯಿ ಅನುದಾನದಲ್ಲಿ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ. ನಾಗಯ್ಯನಪಾಳ್ಯ ಗ್ರಾಮಕ್ಕೆ 1.5 ಕೋಟಿ ರೂ . ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಚುನಾವಣೆಗೆ ಇನ್ನೂ ಮೂರು ವರ್ಷ ಇದೆ. ಆದರೆ, ಮಹಿಳೆಯರಿಗೆ ಬಾಗಿನ ವಿತರಿಸುತ್ತಿರುವುದು ಬಾಂಧವ್ಯ ವೃದ್ಧಿಗಾಗಿ ಎಂದು ಹೇಳಿದರು .
Published by: G Hareeshkumar
First published: November 29, 2020, 3:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading