ಯಡಿಯೂರಪ್ಪ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಯತ್ನಾಳ್ ವಾಗ್ದಾಳಿ; ಮುಂದುವರಿದ ಬಿಜೆಪಿ ಜಟಾಪಟಿ

ವಿಜಯಪುರ ಶಾಸಕ ಯತ್ನಾಳ್ ಅವರ ಶಿಷ್ಯ ರಾಘವ ಅಣ್ಣಿಗೇರಿ ಮತ್ತು ಇತರರು ಮಾಡಿರುವ ಫೇಸ್ ಬುಕ್ ಪೋಸ್ಟ್ ಗಳನ್ನು ಯತ್ನಾಳ ಹೆಸರಿನಲ್ಲಿರುವ ಫೇಸ್‌ಬುಕ್ ಪೇಜ್ ನಲ್ಲಿ ಶೇರ್ ಮಾಡಲಾಗಿರುವುದು ಇದೀಗ ವ್ಯಾಪಕ ಚರ್ಚೆಗೆ ಗುರಿಯಾಗಿದೆ.

ಬಸನಗೌಡ ಪಾಟೀಲ ಯತ್ನಾಳ ಮತ್ತು ಸಿಎಂ ಬಿಎಸ್​ವೈ

ಬಸನಗೌಡ ಪಾಟೀಲ ಯತ್ನಾಳ ಮತ್ತು ಸಿಎಂ ಬಿಎಸ್​ವೈ

  • Share this:
ವಿಜಯಪುರ (ಅಕ್ಟೋಬರ್​. 21); ಸೋಮವಾರ ರಾತ್ರಿ ಸಿಎಂ ಯಡಿಯೂರಪ್ಪ ಅಧಿಕಾರಿದಲ್ಲಿ ಹೆಚ್ಚು ದಿನ ಮುಂದುವರೆಯುವುದಿಲ್ಲ ಎಂದು ವಾಗ್ದಾಳಿ ನಡೆಸುವ ಮೂಲಕ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಇಂದು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸಿಎಂ ಬಿಎಸ್​ವೈ ವಿರುದ್ಧದ ತಮ್ಮ ಆಕ್ರೋಶವನ್ನು ಮುಂದುವರೆಸಿದ್ದಾರೆ. ಫೇಸ್​ಬುಕ್ ಮೂಲಕ ಯತ್ನಾಳ್ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಪುತ್ರ ವ್ಯಾಮೋಹದ ಬಗ್ಗೆ ಟಾಂಗ್ ನೀಡಿದ್ದಾರೆ.  ಯತ್ನಾಳ್ ಅವರ ಶಿಷ್ಯ ರಾಘವ ಅಣ್ಣಿಗೇರಿ ಮತ್ತು ಇತರರು ಮಾಡಿರುವ ಫೇಸ್ ಬುಕ್ ಪೋಸ್ಟ್ ಗಳನ್ನು ಯತ್ನಾಳ ಹೆಸರಿನಲ್ಲಿರುವ ಫೇಸ್‌ಬುಕ್ ಪೇಜ್ ನಲ್ಲಿ ಶೇರ್ ಮಾಡಲಾಗಿರುವುದು ಇದೀಗ ವ್ಯಾಪಕ ಚರ್ಚೆಗೆ ಗುರಿಯಾಗಿದೆ.

ಈ ಪೋಸ್ಟ್ ನಲ್ಲಿ :ರಾಘವ ಅಣ್ಣಿಗೇರಿ, ಅಪ್ಪನ ಹೆಸರಿಂದ ರಾಜ್ಯಭಾರ ಮಾಡುತ್ತಿರುವವರೇ ಉತ್ತರ ಕರ್ನಾಟಕದವರ ಬಗ್ಗೆ ಹಗುರವಾಗಿ ಮಾತನಾಡಿದರೆ ಜನರು ಕ್ಷಮಿಸುವುದಿಲ್ಲ ಎಚ್ಚರ" ಎಂದು ಫೇಸ್ ಬುಕ್ ಪೋಸ್ಟ್ ಮಾಡಿದ್ದಾರೆ.  ಅಲ್ಲದೇ, ಪತ್ರಿಕೆಯ ವರದಿಯೊಂದನ್ನು ಟ್ಯಾಗ್ ಮಾಡಿ, "ವಿಜಯೇಂದ್ರ ಒಬ್ಬನೇ ಎಲ್ಲ ಚುನಾವಣೆಗಳನ್ನು ಗೆಲ್ಲಿಸುವುದಾದರೆ ವಿಜಯೇಂದ್ರ ನೇತೃತ್ವದಲ್ಲಿ ಎರಡೂ ಕ್ಷೇತ್ರ ಗೆಲ್ಲುತ್ತೇವೆ" ಎಂದು ಯಡಿಯೂರಪ್ಪ ಹೇಳಿಕೆ ನೀಡಿರುವ ಪತ್ರಿಕಾ ವರದಿಯನ್ನು ಈ ಪೋಸ್ಟ್ ಗೆ ಟ್ಯಾಗ್ ಮಾಡಿದ್ದಾರೆ.

ಶಾಸಕ ಯತ್ನಾಳ್ ಶೇರ್ ಮಾಡಿಕೊಂಡಿರುವ ಫೇಸ್​ಬುಕ್ ಪೋಸ್ಟ್​.


ಈ ವರದಿಯಲ್ಲಿ ಬೈ ಎಲೆಕ್ಷನ್ ನಲ್ಲಿ ಎರಡೂ ಕ್ಷೇತ್ರಗಳನ್ನು ವಿಜಯೇಂದ್ರ ನೇತೃತ್ವದಲ್ಲಿ ಗೆಲ್ಲತ್ತೇವೆ ಎಂದು ಯಡಿಯೂರಪ್ಪ ಅವರ ಹೇಳಿಕೆಯನ್ನು ಪ್ರಸ್ತಾಪಿಸಲಾಗಿದೆ.  ಈ ಹಿನ್ನೆಲೆ ಯತ್ನಾಳ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಕೇಂದ್ರದ ಕೃಷಿ ಕಾಯ್ದೆಗೆ ಪರ್ಯಾಯ ಮಸೂದೆಗಳನ್ನು ಜಾರಿಗೊಳಿಸಿದ ಪಂಜಾಬ್ ಸರ್ಕಾರ: ಇಲ್ಲಿದೆ ವಿವರ!

"ನರೇಂದ್ರ ಮೋದಿಯವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೀ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ, ಬಿಜೆಪಿ ರಾಷ್ಟ್ರೀಯ, ರಾಜ್ಯ ಪದಾಧಿಕಾರಿಗಳ ಪಾತ್ರವೇನು? ಮಾನ್ಯ ಮುಖ್ಯಮಂತ್ರಿಗಳೇ ಉತ್ತರಿಸುವಿರಾ? ಹಗಲಿರುಳು ಪಕ್ಷಕ್ಕಾಗಿ ಶ್ರಮಿಸುತ್ತಿರುವ ನಿಷ್ಠಾವಂತ ಕಾರ್ಯಕರ್ತರ ಗತಿಯೇನು? ಪುತ್ರ ವ್ಯಾಮೋಹದ ಹೇಳಿಕೆಗಳನ್ನು ಕೊಡುವುದು ಬಿಟ್ಟು ತಕ್ಷಣ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೆರವಾಗಿ" ಎಂದು ಫೇಸ್ ಬುಕ್ ನಲ್ಲಿ ಯತ್ನಾಳ ಬೆಂಬಲಿಗ ರಾಘವ ಅಣ್ಣಿಗೇರಿ ಪೋಸ್ಟ್ ಮಾಡಿದ್ದಾರೆ.  ಇದನ್ನು ಯತ್ನಾಳ್ ಶೇರ್ ಮಾಡುವ ಮೂಲಕ ಮುಖ್ಯಮಂತ್ರಿಗ ಯತ್ನಾಳ್ ಟಾಂಗ್ ನೀಡಿದ್ದಾರೆ.

ಟ್ವೀಟ್ ಮೂಲಕವೂ ಕಾಲೆಳೆದ ಯತ್ನಾಳ:

ಈ ಮಧ್ಯೆ ಟ್ವೀಟ್ ಮೂಲಕವೂ ಯತ್ನಾಳ್ ಸಿಎಂ ಹೆಸರು ಹೇಳದೆ ಯಡಿಯೂರಪ್ಪ ಅವರ ಕಾಲೆಳೆದಿರುವ ಯತ್ನಾಳ್, "ಕರ್ನಾಟಕದ ಅಭಿವೃಧ್ಧಿ ಹಾಗೂ ಜನರ ಧ್ವನಿಯಾಗಿ ಆತ್ಮಸಾಕ್ಷಿಯಾಗಿ ಜನಪ್ರತಿನಿಧಿಯಾಗಿ ಕೆಲ ಮಾಡುತ್ತಿದ್ದೇನೆ ಹೊರತು ಸಚಿವನಾಗುವುದಕ್ಕೆ ಯಾರದೋ ಕಾಲು ಹಿಡಿದು ತಲೆ ಹಿಡಿಯುವ ಕೆಲಸ ಮಾಡಿಲ್ಲ. ಅದು ನನ್ನ ಜಾಯಮಾನ ಅಲ್ಲ" ಎಂದು ತಮ್ಮ ವಿರುದ್ಧ ಮಾತನಾಡಿರುವ ಬಿಜೆಪಿ ಶಾಸಕ ಎಂ. ರೇಣುಕಾಚಾರ್ಯ ಮತ್ತು ಸಚಿವ ಆರ್. ಅಶೋಕ ಅವರ ಹೆಸರು ಹೇಳದೆ ಕಟು ಟೀಕೆ ಮಾಡಿದ್ದಾರೆ.
Published by:MAshok Kumar
First published: