HOME » NEWS » District » MLA ARVIND BELLAD SLAMS PRO KANNADA ACTIVIST VATAL NAGARAJ PTH HK

ವಾಟಾಳ್ ನಾಗರಾಜ್ ರೋಲ್‌ಕಾಲ್ ಹೋರಾಟಗಾರ: ಶಾಸಕ ಅರವಿಂದ ಬೆಲ್ಲದ್

ಬೀದರ್‌ನಿಂದ ಬೆಂಗಳೂರಿನವರೆಗೆ ಮರಾಠಾ ಸಮಾಜದವರು ನೆಲೆಸಿದ್ದಾರೆ. ಶೇಕಡಾ 90ರಷ್ಟು ಮರಾಠರಿಗೆ ಮರಾಠಿ ಭಾಷೆ ಬರಲ್ಲಾ. ಅವರೆಲ್ಲಾ ನಮ್ಮ ನೆಲದ ಕನ್ನಡಿಗರೇ ಆಗಿದ್ದಾರೆ

news18-kannada
Updated:November 24, 2020, 10:41 PM IST
ವಾಟಾಳ್ ನಾಗರಾಜ್ ರೋಲ್‌ಕಾಲ್ ಹೋರಾಟಗಾರ: ಶಾಸಕ ಅರವಿಂದ ಬೆಲ್ಲದ್
ಶಾಸಕ ಅರವಿಂದ ಬೆಲ್ಲದ್
  • Share this:
ಹುಬ್ಬಳ್ಳಿ(ನವೆಂಬರ್​.24): ಕನ್ನಡ ಚಳವಳಿ ಪಕ್ಷದ  ವಾಟಾಳ್ ನಾಗರಾಜ್ ಒಬ್ಬ ರೋಲ್ ‌ಕಾಲ್ ಹೋರಾಟಗಾರ. ಕನ್ನಡದ ಹೆಸರಿನಲ್ಲಿ ವಸೂಲಿ ದಂಧೆ ಮಾಡುತ್ತಾರೆ ಎಂದು ಶಾಸಕ ಅರವಿಂದ ಬೆಲ್ಲದ್ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಣೆ ಸ್ವಾಗತಾರ್ಹ. ಮರಾಠಾ ಸಮುದಾಯದ ಅಭಿವೃದ್ಧಿಗೆ ನಿಗಮ ಸ್ಥಾಪಿಸಲಾಗಿದೆ ಎಂದಿದ್ದಾರೆ. ಬೀದರ್‌ನಿಂದ ಬೆಂಗಳೂರಿನವರೆಗೆ ಮರಾಠಾ ಸಮಾಜದವರು ನೆಲೆಸಿದ್ದಾರೆ. ಶೇಕಡಾ 90ರಷ್ಟು ಮರಾಠರಿಗೆ ಮರಾಠಿ ಭಾಷೆ ಬರಲ್ಲಾ. ಅವರೆಲ್ಲಾ ನಮ್ಮ ನೆಲದ ಕನ್ನಡಿಗರೇ ಆಗಿದ್ದಾರೆ. ವಾಟಾಳ್ ನಾಗರಾಜ್ ತಂಡ ದುರುದ್ದೇಶದಿಂದ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದಾರೆ.ಇವರೆಲ್ಲಾ ನಕಲಿ ಹೋರಾಟಗಾರರು. ಹೊರ ರಾಜ್ಯಗಳಿಂದ ಬರುವ ಉದ್ಯಮಿಗಳನ್ನು ಸುಲಿಗೆ ಮಾಡುವುದೇ ಇವರ ಕೆಲಸ. ವಾಟಾಳ್‌ ನಾಗರಾಜ್ ವಸೂಲಿ ದಂಧೆಯ ಬಗ್ಗೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದವರು ಗುಡುಗಿದ್ದಾರೆ.

ನಾನೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ. ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಲು ಹೋಗಲ್ಲಾ. ಯಾರಿಗೆ ಯಾವ ಸ್ಥಾನ ಕೊಡಬೇಕೆಂದು ಪಕ್ಷದ ವರಿಷ್ಠರಿಗೆ ಗೊತ್ತಿದೆ. ಪಕ್ಷ ಸೂಕ್ತ ಸಂದರ್ಭದಲ್ಲಿ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಅರವಿಂದ್ ಬೆಲ್ಲದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ಯೋಜನೆ:‌ ಹತ್ತಿ ಖರೀದಿ ರೈತರ ನೋಂದಣಿ ಪ್ರಾರಂಭ

ಭಾರತೀಯ ಹತ್ತಿ ನಿಗಮದ ವತಿಯಿಂದ ಕನಿಷ್ಠ ಬೆಂಬಲ ಯೋಜನೆಯಡಿ  ಹತ್ತಿ ಖರೀದಿಸಲು ಅಣ್ಣಿಗೇರಿಯಲ್ಲಿ  ಸ್ಥಾಪಿಸಲಾಗಿರುವ ಹತ್ತಿ ಖರೀದಿ ಕೇಂದ್ರದಲ್ಲಿ ನಾಳೆ ನ.25 ರಿಂದ  ರೈತರ ನೋಂದಣಿ ಪ್ರಾರಂಭಿಸಲಾಗುತ್ತಿದೆ. ಭಾರತೀಯ ಹತ್ತಿ ನಿಗಮ( ಸಿಸಿಐ) ಕ್ಕೆ  ಹತ್ತಿ ಮಾರಾಟ ಮಾಡಲು ಇಚ್ಛಿಸುವ ರೈತಬಾಂಧವರು ಆರ್.ಟಿ.ಸಿ., ಬೆಳೆ ದೃಢೀಕರಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ ಕಾರ್ಡ ಗಳನ್ನು ನೀಡಿ ನೋಂದಣಿ ಮಾಡಿಕೊಂಡು ತಮಗೆ ನಿಗದಿಗೊಳಿಸುವ ದಿನಾಂಕದಂದು ತಮ್ಮ ಹತ್ತಿಯನ್ನು ಮಾರಾಟಕ್ಕೆ ತರಲು ಕೋರಲಾಗಿದೆ.

ಕೋವಿಡ್ ಜಾಗೃತಿ ಅಭಿಯಾನ ಕಾರ್ಯಕ್ರಮ

ಹುಬ್ಬಳ್ಳಿಯ ಗಂಗಾಧರ ನಗರದ ಕೆಡಿಓ ಜೈನ್ ಶಾಲೆಯಲ್ಲಿ, ತಾಲೂಕು ಕಾನೂನು ಸೇವಾ ಸಮಿತಿ , ವಕೀಲರ ಸಂಘ, ಆರೋಗ್ಯ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ ಕೋವಿಡ್ ಕುರಿತಾಗಿ ಸಾರ್ವಜನಿಕರಿಗೆ ಆಯೋಜಿಸಲಾದ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ನ್ಯಾಯಾಧೀಶರ ಹಾಗೂ ಔದ್ಯಮಿಕ ನ್ಯಾಯಾಧಿಕರಣ ಅಧ್ಯಕ್ಷಧಿಕಾರಿ ಜಿ.ಎ.ಮೂಲಿಮನಿ ಉದ್ಘಾಟಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಮಾದೇಶ್ ವಿ.‌ ವೈದ್ಯಾಧಿಕಾರಿ ಸತೀಶ್ ಸೇರಿದಂತೆ ಮತ್ತಿತರು ಭಾಗವಹಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಲಾಯಿತು ಕೋವಿಡ್ ಜಾಗೃತಿ ಮೂಡಿಸಲಾಯಿತು.
Published by: G Hareeshkumar
First published: November 24, 2020, 10:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories