HOME » NEWS » District » MIYAPADAVU FIRING INCIDENT MANGALORE POLICE ARREST SEVEN PERSONS KKM SNVS

ಪೊಲೀಸರ ಮೇಲೆ ಫೈರಿಂಗ್; ಮಂಗಳೂರಿನಲ್ಲಿ ಡಿ ಸ್ಕ್ವಾಡ್ ಗ್ಯಾಂಗ್​ನ 7 ಮಂದಿ ಬಂಧನ

ಡಿ ಸ್ಕ್ವಾಡ್ ಹೆಸರಿನಲ್ಲಿ ಗ್ಯಾಂಗ್ ಕಟ್ಟಿಕೊಂಡಿದ್ದ ಕಾಸರಗೋಡಿನ ಯುವಕರ ತಂಡವೊಂದು ಇತ್ತೀಚೆಗೆ ಕಾಸರಗೋಡು ಮತ್ತು ಮಂಗಳೂರು ಪೊಲೀಸರ ಮೇಲೆ ಫೈರಿಂಗ್ ನಡೆಸಿತ್ತು. ಇದೀಗ ದಕ್ಷಿಣ ಕನ್ನಡ ಪೊಲೀಸರು ಈ ಗ್ಯಾಂಗ್ ಸದಸ್ಯರನ್ನು ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಟಿದ್ದಾರೆ.

news18-kannada
Updated:April 6, 2021, 1:42 PM IST
ಪೊಲೀಸರ ಮೇಲೆ ಫೈರಿಂಗ್; ಮಂಗಳೂರಿನಲ್ಲಿ ಡಿ ಸ್ಕ್ವಾಡ್ ಗ್ಯಾಂಗ್​ನ 7 ಮಂದಿ ಬಂಧನ
ಡಿ ಸ್ಕ್ವಾಡ್ ಗ್ಯಾಂಗ್​ನಿಂದ ವಶಪಡಿಸಿಕೊಂಡ ಕಾರು ಮತ್ತಿತರ ವಸ್ತುಗಳು
  • Share this:
ಮಂಗಳೂರು: ಪೊಲೀಸರ ಮೇಲೆಯೇ ಫೈರಿಂಗ್ ಮಾಡಿ ಪರಾರಿಯಾಗಿದ್ದ ಗ್ಯಾಂಗ್ ಅನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ತಂಡ ಹೆಡೆಮುರಿ ಕಟ್ಟಿದೆ. ಈ ಮೂಲಕ ಡಿ ಗ್ಯಾಂಗ್ ಹೆಸರಲ್ಲಿ ಮಂಗಳೂರು-ಕೇರಳ ಗಡಿಭಾಗದಲ್ಲಿ ರೌಡಿಸಂ ಮಾಡುತ್ತಾ ಮೆರೆದಾಡುತ್ತಿದ್ದ ತಂಡ ಅಂದರ್ ಆಗಿದೆ. ಸಮಾಜ ಕಂಟಕರಾಗಿ ಬೆಳೆಯುತ್ತಿದ್ದ ಗ್ಯಾಂಗ್ ಅನ್ನು ಪೊಲೀಸರು ಮಟ್ಟ ಹಾಕಿದ್ದು, ಜನರೂ ಪ್ರಶಂಸಿಸಿದ್ದಾರೆ.

ಪ್ರಕರಣದ ಹಿನ್ನಲೆ: ಇತ್ತೀಚೆಗೆ ಕಾಸರಗೋಡು ಜಿಲ್ಲೆ ಮಂಜೇಶ್ವರ ಠಾಣಾ ವ್ಯಾಪ್ತಿಯ ಮಿಯಪದವು ಪರಿಸರದಲ್ಲಿ ಕ್ರಿಮಿನಲ್ ಹಿನ್ನೆಲೆ ಉಳ್ಳಂತಹ ಕೆಲವು ಯುವಕರು ಡಿ ಸ್ಕ್ವಾಡ್ (D squad) ಎಂಬ ಹೆಸರಿನಲ್ಲಿ ಮಾರಕಾಯುಧಗಳಾದ ಪಿಸ್ತೂಲ್​ಗಳನ್ನು ಗುರಿ ಅಭ್ಯಾಸ ಮಾಡುವ ರೀತಿಯಲ್ಲಿ ವಿಡಿಯೋ ಚಿತ್ರೀಕರಣಗೊಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಕೇರಳ ರಾಜ್ಯದ ಪ್ರಮುಖ ದೃಶ್ಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಕೂಡ ಆಗಿತ್ತು. ಮೀಯಾಪದವು ಪರಿಸರವು ವಿಟ್ಲ ಠಾಣಾ ಗಡಿ ಭಾಗದಲ್ಲಿ ಇರುವುದರಿಂದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಕೂಡ ಕಟ್ಟು ನಿಟ್ಟಿನ ನಿಗಾ ಇಡುವಂತೆ ಉನ್ನತ ಪೊಲೀಸ್ ಅಧಿಕಾರಿಗಳು ಸೂಚಿಸಿದ್ದರು.

ಕಳೆದ ಮಾರ್ಚ್ 25ರಂದು ಮಿಯಪದವು D squad ಗ್ಯಾಂಗ್ ರೌಡಿಗಳು ಮಂಜೇಶ್ವರದ ಉಪ್ಪಳ ಹಿದಾಯತ್ ನಗರ ಎಂಬಲ್ಲಿ ಕ್ಷುಲ್ಲಕ ಕಾರಣಕ್ಕೆ ಒಂದು ಕ್ಲಬ್ ಮೇಲೆ ಫೈರಿಂಗ್ ನಡೆಸಿದ್ದರು. ಕಾಸರಗೋಡು ಜಿಲ್ಲಾ ಪೊಲೀಸರು ಈ ಗ್ಯಾಂಗ್ ಅನ್ನು ಹಿಡಿಯಲು ಪ್ರಯತ್ನಿಸಿದ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಆರೋಪಿಗಳು ಗುಂಡು ಹಾರಿಸಿ ತಪ್ಪಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಗಡಿ ಭಾಗದ ಕಡೆಗೆ ಸಂಚರಿಸಿದ್ದರು.
ಈ ವೇಳೆ ವಿಟ್ಲ ಸಬ್ ಇನ್ಸ್​ಪೆಕ್ಟರ್ ವಿನೋದ್ ರೆಡ್ಡಿ ಮತ್ತು ಸಿಬ್ಬಂದಿಯ ಅವರು ಕೋಡಂಗೆ ಎಂಬಲ್ಲಿ ತಾತ್ಕಾಲಿಕ ಚೆಕ್ ಪೋಸ್ಟ್ ನಿರ್ಮಿಸಿ ಬೆಳಗಿನ ಜಾವ 4 ಗಂಟೆಗೆ ಕಾರ್​ವೊಂದನ್ನು ತಡೆದು ನಿಲ್ಲಿಸಿದಾಗ ಪೊಲೀಸರ ಮೇಲೆಯೇ ರೌಡಿಗಳು ಒಂದು ಸುತ್ತು ಗುಂಡು ಹಾರಿಸಿ ಪರಾರಿಯಾಗಲು ಪ್ರಯತ್ನಿಸಿದ್ದರು. ಆಗ ತಕ್ಷಣ ಕಾರ್ಯಪೃವೃತ್ತರಾದ ಪೊಲೀಸ್ ತಂಡವು ಆಸ್ಫಕ್, ಶಾಕಿರ್, ಲತೀಫ್ ಎಂಬುವವರನ್ನು ವಶಕ್ಕೆ ಪಡೆದು ಒಂದು ಪಿಸ್ತೂಲ್ ಮತ್ತು ಮದ್ದು ಗುಂಡುಗಳು ಮತ್ತು ಕೊಡಲಿ, ಡ್ರಾಗರ್, ಮಾದಕ ದ್ರವ್ಯಗಳನ್ನು ಕಾರ್ ಸಮೇತ ವಶಕ್ಕೆ ಪಡೆದಿದ್ದರು. ಈ ವೇಳೆ ಕಾರ್​ನಲ್ಲಿದ್ದ ಇತರ ಆರೋಪಿಗಳಾದ ರಹೀಂ ಮತ್ತು ರಾಕೇಶ್ ಪರಾರಿ ಆಗಿದ್ದರು.

ಇದನ್ನೂ ಓದಿ: ಆರನೇ ವೇತನ ಜಾರಿ ಸಾಧ್ಯವೇ ಇಲ್ಲ ಎಂದ ಸರ್ಕಾರ; ಸಾರಿಗೆ ಮುಷ್ಕರ ನಡೆಸಿದರೆ ಎಸ್ಮಾ ಜಾರಿಗೂ ಸಜ್ಜು

ತನಿಖೆಯನ್ನು ಮುಂದುವರೆಸಿದ ವಿಟ್ಲ ಠಾಣಾ ಪೊಲೀಸರು ತಲೆ ಮರೆಸಿಕೊಂಡಿದ್ದ ಆರೋಪಿಗಳು ಸೇರಿದಂತೆ ಮತ್ತಿಬ್ಬರನ್ನು ಬಂಧನ ಮಾಡಿದ್ದಾರೆ. ಪ್ರಕರಣದಲ್ಲಿ ಒಟ್ಟು ಏಳು ಮಂದಿಯನ್ನು ಬಂಧನ ಮಾಡಲಾಗಿದ್ದು ಅವರನ್ನು ಮಿಯಾಪದವು ಪ್ರದೇಶದ ಅಸ್ಫಾಖ್, ಶಾಕಿರ್, ಲತೀಫ್, ರೆಹಮಾನ್, ಮಹಾರಾಷ್ಟ್ರದ ಜಲಗಾಂವ್​ನ ರಾಕೇಶ್, ಕೂವಾ ಫಯಾಜ್, ಹೈದರ್ ಆಲಿ ಅಲಿಯಾಸ್ ಹೈದರ್ ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 4 ಪಿಸ್ತೂಲುಗಳು, 27 ರೌಂಡ್ ಬುಲೆಟ್, 1 SBML ಕೋವಿ, ಕೊಡಲಿ, ಡ್ರಾಗರ್, ಹ್ಯಾಂಡ್ ಪಂಚ್, MDMA ಮಾದಕ ದ್ರವ್ಯ, LSD ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ.ವರದಿ: ಕಿಶನ್ ಕುಮಾರ್
Published by: Vijayasarthy SN
First published: April 6, 2021, 1:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories