ದೇವಸ್ಥಾನ ದ್ವಂಸ ಮಾಡಿದ‌ ಕಿಡಿಗೇಡಿಗಳು : ಆಕ್ರೋಶಕೊಂಡ ಭಕ್ತರಿಂದ ಪ್ರತಿಭಟನೆ

ಲಾಕ್ ಡೌನ್ ಸಮಯ ನೋಡಿ ರಾತ್ರಿ ವೇಳೆ ಕಟ್ಟಿದ್ದ ದೇವಾಲಯಕ್ಕೆ ನುಗ್ಗಿ ಕಟ್ಟಡ, ತಡೆ ಗೋಡೆ ನೆಲಸಮ ಮಾಡಿ ಪರಾರಿ ಆಗಿದ್ದಾರೆ.

ಪ್ರತಿಭಟನೆ ನಡೆಸುತ್ತಿರುವ ಭಕ್ತರು

ಪ್ರತಿಭಟನೆ ನಡೆಸುತ್ತಿರುವ ಭಕ್ತರು

  • Share this:
ಯಲಹಂಕ(ಜುಲೈ 13): ಆರು ತಿಂಗಳ ಹಿಂದೆ ನಿರ್ಮಾಣವಾಗಿ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದ್ದ ದೇವಸ್ಥಾನವನ್ನ ರಾತ್ರೋ ರಾತ್ರಿ ಜೆಸಿಬಿ ಮುಖಾಂತರ ಕೆಡವಿ ಗೂಂಡಾವರ್ತನೆ ಮಾಡಿರುವ ಘಟನೆ ಯಲಹಂಕದ ಕೋಗಿಲು ಬಳಿಯ ಪ್ರಕೃತಿ ನಗರದಲ್ಲಿ ನಡೆದಿದೆ. 

ಪ್ರಕೃತಿ ನಗರದ 28 ಗುಂಟೆ ಜಮೀನಿನಲ್ಲಿ ಕಳೆದ ಆರು ತಿಂಗಳಿನಿಂದ ಸ್ಥಳಿಯರು ಹುಲಿಯೂರು ದುರ್ಗಾ ವಿದ್ಯಾ ಸಂಸ್ಥಾನ ಮಠದ ಜೊತೆ ಸೇರಿ ವಿದ್ಯಾ ಚೌಡೇಶ್ವರಿ ದೇವಸ್ಥಾನವನ್ನ ನಿರ್ಮಾಣ ಮಾಡಿ ಧಾರ್ಮಿಕ ಕಾರ್ಯಗಳನ್ನ ಮಾಡಿಕೊಂಡು ಬರುತ್ತಿರು. ಆದರೆ, ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಏಕಾಏಕಿ ಜೆಸಿಬಿ ಮತ್ತು ಕಾರುಗಳ ಮುಖಾಂತರ 30 ಕ್ಕೂ ಅಧಿಕ ಜನ ಗೂಂಡಾಗಳನ್ನ ಕರೆದುಕೊಂಡು ಬಂದ ತಿಪ್ಪಣ್ಣ ಎಂಬುವನು ದೇವಸ್ಥಾನವನ್ನ ದ್ವಂಸಗೊಳಸಿದ್ದಾನೆ ಅಂತ ಸ್ಥಳಿಯರು ಆರೋಪಿಸಿದ್ದಾರೆ.

ಜತೆಗೆ ದೇವಸ್ಥಾನ ದ್ವಂಸಗೊಳಿಸುತ್ತಿದ್ದನ್ನ ತಡೆಯಲು ಹೋದರೆ ನಮ್ಮ ಮೇಲೆಯೆ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿದ್ದು, ಈ ಬಗ್ಗೆ ದೂರು ನೀಡಿದ್ದರು. ಪೊಲೀಸರು ಸ್ವಂಧಿಸುತ್ತಿಲ್ಲ ಅಂತ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ದೇವಸ್ಥಾನವನ್ನ ಕೆಡವಿದ ದುಷ್ಕ್ರಮಿಗಳನ್ನ ಬಂಧಿಸಿ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದೇವಸ್ಥಾನದ ಶ್ರೀ  ಬಾಲಮಂಜುನಾಥ ಸ್ವಾಮಿಜಿ, ಮಠದ‌ಕಿರಿಯ ಸ್ವಾಮೀಜಿ  ಜೊತೆ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಈ ದೇವಸ್ಥಾನ ಯಲಹಂಕದ‌ ಪ್ರಮುಖ ಬಡಾವಣೆಯಲ್ಲಿದ್ದು ಇಲ್ಲಿನ ಸಾರ್ವಜನಿಕರು ಉದ್ಯಾನವನಕ್ಕಾಗಿ ಮೀಸಲು ಇಟ್ಟಿದ್ದರು, ಇದನ್ನ ಸಾರ್ವಜನಿಕರ ಮನವಿ ಮೇರೆಗೆ ದೇವಸ್ಥಾನ ಮತ್ತು ಮಠ ನಿರ್ಮಾಣದ ಹೊರೆ ಶ್ರೀ ಮಠದ ಹೆಗಲಿಗೆ ಹೊರಿಸಿ 20 ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಉಪಯೋಗಿಸಲು ಬಡಾವಣೆ ಜನರೆ ನಿರ್ಣಯಿಸಿದ್ದರು. ಇದರ ಮೇಲೆ ಕಣ್ಣು ಒಟ್ಟಿದ್ದ ಕೆಂಪಣ್ಣ ಮತ್ತವರ ಟೀಂ ಕಬಳಿಸಲು ಹೊಂಚು ಹಾಕುತ್ತಿದ್ದರು.

ಲಾಕ್ ಡೌನ್ ಸಮಯ ನೋಡಿ ರಾತ್ರಿ ವೇಳೆ ಕಟ್ಟಿದ್ದ ದೇವಾಲಯಕ್ಕೆ ನುಗ್ಗಿ ಕಟ್ಟಡ, ತಡೆ ಗೋಡೆ ನೆಲಸಮ ಮಾಡಿ ಪರಾರಿ ಆಗಿದ್ದಾರೆ. ತಡೆಯಲು ಬಂದ ವೇಣುಗೋಪಾಲ ರೆಡ್ಡಿ ಅವರಿಗೂ ಥಳಿಸಿ ಅರ್ಚಕರಾದ ರಾಜಣ್ಣ ಹೊರಗೆ ದಬ್ಬಿ ಕಟ್ಟಡ ಕೆಡವಿದ 30 ಕ್ಕೂ ಹೆಚ್ಚು ಜನರ ಗುಂಪು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಇನ್ನು ಸ್ಥಳಕ್ಕೆ ಭೇಟಿ ನೀಡಿದ ನಂಜಾವದೂತ ಶ್ರೀಗಳು ಅಧಿಕಾರಿಗಳಿಗೆ ಚಾಟಿ ಬೀಸುವ ಮೂಲಕ ತಕ್ಷಣವೇ ಪರಿಹಾರ ಕಲ್ಪಿಸಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ : ಕಲಬುರ್ಗಿಯಲ್ಲಿ ಕೊರೋನಾ ರುದ್ರನರ್ತನ ; ನಗರ ಪ್ರದೇಶದ ಸಂಪೂರ್ಣ ಲಾಕ್ ಡೌನ್ ಗೆ ಸರ್ಕಾರಕ್ಕೆ ಡಿಸಿ ಪತ್ರ

ಈ ಭೂಮಿ ಸುಮಾರು 30 ಸಾವಿರ ಅಡಿ ಇದ್ದು ಈ ಜಾಗದಲ್ಲಿ ಅಡಿಗೆ ಸರಿ ಸುಮಾರು 4 ಸಾವಿರಕ್ಕೂ ಹೆಚ್ಚು ಬೆಲೆ ಇದೆ. ಅದಾಗಿ ಕೋಟಿ ಕೋಟಿ ಬೆಲೆಬಾಳುವ ಜಾಗ ಕಬಳಿಸಲು ಪಟ್ಟಬದ್ದ ಹಿತಾಸಕ್ತಿ ಗಳು ಹೊಂಚು ಹಾಕುತ್ತಿದ್ದಾರೆ ಎಂದು ಸ್ಥಳೀಯ ಪಾಲಿಕೆ ಸದಸ್ಯ ಮುನೀಂದ್ರ ಮಾಹಿತಿ ಹೇಳಿದ್ದಾರೆ.

ಜಾಗದ ಮೂಲ ಮಾಲೀಕರು ಮಾತನಾಡಿ ನಮ್ಮ ಹೆಸರಿನಲ್ಲಿ ಅನೇಕ ಮೋಸ ವಂಚನೆ ಮಾಡಿರುವ ಕೆಂಪಣ್ಣ ವಿರುದ್ದ ಕ್ರಮಕ್ಕೆ ಆಗ್ರಹಿಸಿದರು. ಸ್ಥಳದಲ್ಲೆ ಪ್ರತಿಭಟನೆ ನಡೆಸಿದ ಬಡಾವಣೆಯ 300 ಹೆಚ್ಚು ಮನೆಗಳ ನಿವಾಸಿಗಳು ಶೀಘ್ರವಾಗಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯ ಮಾಡಿದರು.
Published by:G Hareeshkumar
First published: