HOME » NEWS » District » MINOR BOY MURDER HIS FRIEND FOR CHICKEN CURRY IN KODAGU SESR RSK

ಕೋಳಿ ಸಾರು ಕಡಿಮೆಯಾಗಿದ್ದಕ್ಕೆ ಸ್ನೇಹಿತನ ಕೊಲೆ ಮಾಡಿದ ಅಪ್ರಾಪ್ತ ಬಾಲಕ

ರಾತ್ರಿ  ಊಟಕ್ಕೆ ಕುಳಿತಾಗ ಅಪ್ರಾಪ್ತ ಬಾಲಕ ತನಗೆ ಕೋಳಿ ಸಾರು ಕಡಿಮೆ ಹಾಕಿದ್ದೀಯ ಎಂದು ಕುಮಾರನ ಕೊರಳುಪಟ್ಟಿ ಹಿಡಿದು ಗಲಾಟೆ ಶುರು ಮಾಡಿದ್ದಾನೆ.

news18-kannada
Updated:December 30, 2020, 6:57 AM IST
ಕೋಳಿ ಸಾರು ಕಡಿಮೆಯಾಗಿದ್ದಕ್ಕೆ ಸ್ನೇಹಿತನ ಕೊಲೆ ಮಾಡಿದ ಅಪ್ರಾಪ್ತ ಬಾಲಕ
ಸಾಂದರ್ಭಿಕ ಚಿತ್ರ
  • Share this:
ಕೊಡಗು: ಆಸ್ತಿಗಾಗಿ ಕೊಲೆ ನಡೆಯುವುದನ್ನು ನೋಡಿದ್ದೇವೆ. ಇಲ್ಲ ಹಣಕ್ಕಾಗಿ ಕೊಲೆ, ಸುಲಿಗೆ ನಡೆಸುವುದನ್ನು ಕೇಳಿರುತ್ತೇವೆ. ಆದರೆ ಇಲ್ಲಿ ಕೇವಲ ಕೋಳಿ ಸಾಂಬರಿಗಾಗಿಯೇ ವ್ಯಕ್ತಿಯೊಬ್ಬನ ಕೊಲೆ ನಡೆದು ಹೋಗಿದೆ. ಅಚ್ಚರಿಯಾದರೂ ಇದು ನಿಜ.   ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ನಾಲ್ಕೇರಿ ಗ್ರಾಮದಲ್ಲಿ ಕೋಳಿ ಸಾಂಬರಿಗಾಗಿ ಕೊಲೆ ನಡೆದಿದೆ. 25 ವರ್ಷದ  ಕುಮಾರ್ ಕೋಳಿಸಾರಿಗಾಗಿ ಕೊಲೆಯಾದ ನತದೃಷ್ಟ ಯುವಕ.  ಇತನ ಸ್ನೇಹಿತ ಅಪ್ರಾಪ್ತ ಬಾಲಕ ಕೊಲೆ ಆರೋಪಿಯಾಗಿದ್ದಾನೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕೊತ್ತೇನಹಳ್ಳಿಯ ಕುಮಾರ್, ಸುರೇಶ್, ದಾಸಾ ಮತ್ತು ಅಪ್ರಾಪ್ತ ಬಾಲಕರು ಸ್ನೇಹಿತರಾಗಿದ್ದು ದುಡಿಮೆಗಾಗಿ ಜಿಲ್ಲೆಗೆ ವಲಸೆ ಬಂದಿದ್ದರು.  ಪೊನ್ನಂಪೇಟೆ ತಾಲ್ಲೂಕಿನ ನಾಲ್ಕೇರಿ ಗ್ರಾಮದ ನಿವಾಸಿ ಮಹೇಶ್ ಎಂಬುವರ ಕಾಫಿ ತೋಟದಲ್ಲಿ  ಇವರೆಲ್ಲಾ ಕೆಲಸ ಮಾಡುತ್ತಿದ್ದರು. ಈ ನಾಲ್ವರ ಮಧ್ಯೆ ಉತ್ತಮ ಬಾಂಧವ್ಯವೂ ಇತ್ತು. ಆದರೆ ,ಅದು ಏನು ಆಯಿತೋ ಸಾರಿನ ಕ್ಷುಲಕ ಕಾರಣಕ್ಕೆ ಕೊಲೆ ಮಟ್ಟಕ್ಕೆ ಇಳಿದಿದ್ದಾರೆ. 

ಸೋಮವಾರ ಸಂಬಳ ಸಿಕ್ಕ ಹಿನ್ನಲೆ ಕೋಳಿ ತಂದು ಸಾಂಬರ್​ ಮಾಡಿ ಪಾರ್ಟಿ ಮಾಡಲು ಈ ನಾಲ್ವರು ನಿರ್ಧರಿಸಿದ್ದರು. ಅದರಂತೆ ಸಾಂಬರು ಮಾಡಿ ಊಟ ಮಾಡಿದ್ದಾರೆ. ರಾತ್ರಿ  ಊಟಕ್ಕೆ ಕುಳಿತಾಗ ಅಪ್ರಾಪ್ತ ಬಾಲಕ ತನಗೆ ಕೋಳಿ ಸಾರು ಕಡಿಮೆ ಹಾಕಿದ್ದೀಯ ಎಂದು ಕುಮಾರನ ಕೊರಳುಪಟ್ಟಿ ಹಿಡಿದು ಗಲಾಟೆ ಶುರು ಮಾಡಿದ್ದಾನೆ. ಗಲಾಟೆಯನ್ನು  ಬಿಡಿಸಲು  ಸುರೇಶ್ ಮತ್ತು ದಾಸಾ ಪ್ರಯತ್ನಿಸಿದ್ದಾರೆ. ಗಲಾಟೆ ಬಿಡಿಸಲು ಮುಂದಾದ ಇಬ್ಬರ ಮೇಲೂ ಅಪ್ರಾಪ್ತ ಹಲ್ಲೆ ಮಾಡಿದ್ದಾನೆ.

ಇದನ್ನು ಓದಿ: ಕೊಡಗು ಜಿಲ್ಲೆಯಲ್ಲಿ ಮುಂದುವರೆದ ಆನೆ-ಮಾನವ ಸಂಘರ್ಷ; ಓರ್ವ ಸಾವು, ಮೂವರಿಗೆ ಗಾಯ

ಈ ಅಪ್ರಾಪ್ತ ಅಷ್ಟಕ್ಕೇ ಸುಮ್ಮನಾಗಿಲ್ಲ, ಇನ್ನಷ್ಟು ಕೋಪಗೊಂಡು ತಾವು ನಿತ್ಯ ಕೂಲಿ ಕೆಲಸ ಮುಗಿಸಿ ಸಂಜೆ ಕ್ರಿಕೆಟ್ ಆಟವಾಡುತ್ತಿದ್ದ ಬ್ಯಾಟ್ ನಿಂದ ಕುಮಾರಿಗೆ ಮನಸ್ಸೋ ಇಚ್ಚೆ ಥಳಿಸಿದ್ದಾನೆ. ಕುಮಾರನ ದವಡೆಯ ಭಾಗ ಕಿತ್ತುಹೋಗಿದೆ. ಮತ್ತೊಂದು ಏಟು ಕೊಟ್ಟಾಗ ತಲೆಗೆ ಗಂಭೀರ ಪೆಟ್ಟು ಬಿದ್ದಿದೆ. ಈ ಪಾಪಿ ಅಪ್ರಾಪ್ತ ಅಷ್ಟಕ್ಕೂ ಸುಮ್ಮನಾಗಿಲ್ಲ. ಅಡುಗೆ ಮಾಡುತ್ತಿದ್ದ ಒಲೆಯಲ್ಲಿ ಉರಿಯುತ್ತಿದ್ದ ಸೌದೆಯ ಕೊಳ್ಳಿಯನ್ನೇ ತೆಗೆದುಕೊಂಡು ಕುಮಾರನ ಹೊಟ್ಟೆ ಭಾಗಕ್ಕೆ ತೀವ್ರ ಪೆಟ್ಟು ಬೀಳುವಂತೆ ಹೊಡೆದಿದ್ದಾನೆ. ಹೀಗಾಗಿ ಕುಮಾರ್ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ವಿಷಯ ತಿಳಿದು ಸ್ಥಳಕ್ಕೆ ಹೋದ ಕುಟ್ಟ ಪೊಲೀಸ್ ಠಾಣೆ ಪೊಲೀಸರು ಎಲ್ಲವನ್ನೂ ಪರಿಶೀಲನೆ ಮಾಡಿ, ಆರೋಪಿ ಅಪ್ರಾಪ್ತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ಒಟ್ಟಿನಲ್ಲಿ ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರು ಎನ್ನುವ ಹಾಗೆ ಆಗಿದೆ.
Published by: Seema R
First published: December 30, 2020, 6:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories