ಕಲಬುರಗಿ: ಮಾಜಿ ಸಿಎಂ ಮತ್ತು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ( Former CM Siddaramaiah) ನವರು ತಮ್ಮ ರಾಜಕೀಯ ಅನುಭವವನ್ನು ಗಾಳಿಗೆ ತೂರಬಾರದು ಎಂದು ಹೇಳುವ ಮೂಲಕ ಸಚಿವ ವಿ.ಸೋಮಣ್ಣ (Minister V Somanna) ಬಿಟ್ ಕಾಯಿನ್ ಹಗರಣ (Bitcoin Scam) ಆರೋಪದ ಕುರಿತು ಪ್ರತಿಕ್ರಿಯಿಸಿದ್ದಾರೆ. ಸುಳ್ಳನ್ನ ಸಾವಿರ ಸಲ ಹೇಳಿದರೂ ಅದನ್ನು ಸತ್ಯ ಮಾಡೋಕೆ ಆಗಲ್ಲ. ಈ ಸಂಬಂಧ ಸಚಿವ ಕೆ.ಸುಧಾಕರ್ (Minister K Sudhakar) ಮತ್ತು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಕಡ್ಡಿ ಮುರಿದ ಹಾಗೆ ಹೇಳಿದ್ದಾರೆ. ಸರ್ಕಾರ ನಿಂತ ನೀರಲ್ಲ, ಅದು ಹರಿಯುವ ನೀರು. ಕಾನೂನಿನ ಚೌಕಟ್ಟಿನಲ್ಲಿ ಏನೇನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಮುಖ್ಯಮಂತ್ರಿಗಳು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.
ನಿಮ್ಮ ಅನುಭವವನ್ನು ಮರೆಯಬೇಡಿ
ಸಿದ್ದರಾಮಯ್ಯನವರೇ ನಿಮ್ಮ ರಾಜಕೀಯ ಅನುಭವ ಗಾಳಿಗೆ ತೂರಬೇಡಿ. ನಿಮ್ಮ ಇತಿಹಾಸ ಮರೆಮಾಚೋಕೆ ಹೋಗಬೇಡಿ. ರಾಜ್ಯದ ಮುಖ್ಯಮಂತ್ರಿ ಆಗಿ ಎಷ್ಟು ಒಳ್ಳೆಯ ಕೆಲಸ, ಕೆಟ್ಟ ಕೆಲಸ ಮಾಡಿದ್ದಾರೆ ಅನ್ನೋದರ ಬಗ್ಗೆ ಚರ್ಚೆ ಮಾಡಲ್ಲ. ಬಸವರಾಜ್ ಬೊಮ್ಮಯಿ ಸಿಎಂ ಆದ ಮೇಲೆ ಈ ಸರ್ಕಾರ ಟೇಕ್ ಆಫ್ ಆಗೋದಿಲ್ಲ ಅಂತ ಸಿದ್ದರಾಮಯ್ಯ ಅಂದುಕೊಂಡಿದ್ದರು ಎಂದು ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯನವರೇ ನಿಮ್ಮ ಹತ್ತಿರ ಏನಾದ್ರು ಮಾಹಿತಿ ಇದ್ದರೆ ಅದನ್ನ ಬಹಿರಂಗವಾಗಿ ತನ್ನಿ. ಹಿಟ್ ಆಂಡ್ ರನ್ ಮಾಡಬೇಡಿ. ನಿಮ್ಮ ಬಳಿ ಏನು ದಾಖಲೆ ಇದೆ ಬಿಡುಗಡೆ ಮಾಡಿ. ಕಾನೂನಿನ ಚೌಕಟ್ಟಿನಲ್ಲಿ ಏನು ಕ್ರಮ ಕೈಗೊಳ್ಳಬೇಕು ಎಂಬುವುದನ್ನು ಸಿಎಂ ನಿರ್ಧಾರ ಮಾಡುತ್ತಾರೆ.
ನಮ್ಮ ಅಭಿವೃದ್ಧಿ ಅವರಿಗೆ ನುಂಗಲಾರದ ತುಪ್ಪವಾಗಿದೆ
ಎರಡು ವರ್ಷ ಅಧಿಕಾರ ಇಲ್ಲದೆ ಇರೋದಕ್ಕೆ ಮೈ ಪರಚುಕೊಳ್ಳೊಕೆ ಮುಂದಾಗಿದ್ದಾರೆ. 75 ವರ್ಷ ಅಧಿಕಾರದಲ್ಲಿ ಮಜಾ ಮಾಡಿಕೊಂಡು ಅರಾಜಕತೆ ಸೃಷ್ಡಿಸಿದ್ದಾರೆ . ಬಸವರಾಜ್ ಬೊಮ್ಮಾಯಿ ಅಧಿಕಾರಕ್ಕೆ ಬಂದ ಮೇಲೆ ವಿಫಲರಾಗುತ್ತಾರೆ ಎಂದು ಅಂದುಕೊಂಡಿದ್ದರು. ನಮ್ಮ ಅಭಿವೃದ್ದಿ ಕೆಲಸ ಕಾಂಗ್ರೆಸ್ ನವರಿಗೆ ನುಂಗಲಾರದ ತುತ್ತಾಗಿದೆ ಎಂದು ವ್ಯಂಗ್ಯ ಮಾಡಿದರು. ಚುನಾವಣೆ ಕೂಡ ಬೊಮ್ಮಾಯಿ ನಾಯಕತ್ವದಲ್ಲೇ ಹೋಗುತ್ತೇವೆ. ನಿಮಗೆ ಗಂಭೀರತೆ ಇದ್ದರೆ ಯಾರು ಯಾರು ಇದ್ದಾರೆ ಅಂತ ಹೇಳಿ. ಕಾಂಗ್ರೆಸ್ ನಾಯಕರಿಗೆ ಬಸವರಾಜ್ ಬೊಮ್ಮಾಯಿ , ಮೋದಿ ನುಂಗಲಾರದ ತುಪ್ಪ ಆಗಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ: ಇಷ್ಟು ವಯಸ್ಸಾಗಿದೆ ಏನು ಮಾತಾಡಬೇಕು ಅನ್ನೋ ಬಗ್ಗೆ ಬುದ್ಧಿ ಇಲ್ವಾ? Hamsalekha ಹೇಳಿಕೆಗೆ ಮುತಾಲಿಕ್ ಕಿಡಿ
ತೆಲುಗಿನಲ್ಲಿ ಒಂದು ಕಥೆ ಹೇಳ್ತಾರೆ ಹಾಗಾಗಿದೆ ಕಾಂಗ್ರೆಸ್ ಕಥೆ. ಒಂದು ರಾತ್ರಿ ತುಂಬಾ ಮಳೆ ಬಂದು ಮನೆ ಸೋರುತ್ತಿರುತ್ತೆ. ಆಗ ಅವನ ಹೆಂಡತಿ ಬೈಯುವಾಗ ಬೆಳಗ್ಗೆ ನೋಡು ಅರಮನೆ ಕಟ್ಟತ್ತೆನೆ ಅಂತಾ ಹೇಳ್ತಾನೆ ಗಂಡ ಹಾಗಾಗಿದೆ ಇವರ ಕಥೆ. ರಾಜ್ಯದ ಪ್ರತಿಷ್ಠಿತ ನಾಯಕನಾಗಿ ಸಿದ್ದರಾಮಯ್ಯ ಭಾಷೆ ಮೇಲೆ ಹಿಡಿತ ಇಲ್ಲದ ಹಾಗೆ ಮಾತಾಡ್ತಿದ್ದಾರೆ. ಬೊಮ್ಮಾಯಿ ಸರ್ಕಾರ ತುಂಬಾ ಎತ್ತರಕ್ಕೆ ತೆಗೆದುಕೊಂಡು ಹೋಗ್ತಿದ್ದಾರೆ ಎಂದು ವಿ.ಸೋವಣ್ಣ ಮುಖ್ಯಮಂತ್ರಿಗಳನ್ನು ಹಾಡಿ ಹೊಗಳಿದರು.
ರೇಣುಕಾಚಾರ್ಯ ಸುದ್ದಿಗೋಷ್ಠಿ
ಇನ್ನು ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು, ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಎಲ್ಲೂ ಗಲಾಟೆ ಆಗಿಲ್ಲ. ಕೆಲವು ಘಟನೆ ಹೊರತುಪಡಿಸಿದರೆ, ಗಂಭೀರ ಪ್ರಕರಣ ಆಗಿಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ನವರು ಮೂಲೆಗುಂಪು ಮಾಡಿದ್ದಾರೆ. ಕಾಂಗ್ರೆಸ್ ನಲ್ಲಿ ಅಗ್ರಗಣ್ಯ ನಾಯಕಿ ಸೋನಿಯಾ, ಎರಡು ಬಾರಿ ಸೋತರೂ ಅಗ್ರಗಣ್ಯ ನಾಯಕಿಯಾಗಿದ್ದಾರೆ. ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರನ್ನು ಮೂಲೆ ಗುಂಪು ಮಾಡಲಾಗುತ್ತಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ