ಯಥಾ ರಾಜ ತಥಾ ಪ್ರಜಾ ಎನ್ನುವಂತಿದ್ದಾನೆ ಶಾಸಕ ಪ್ರೀತಂ ಗೌಡ : ಸಚಿವ ವಿ. ಸೋಮಣ್ಣ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ತಮ್ಮ ಇಳಿ ವಯಸ್ಸಿನಲ್ಲಿ ಸಹ ತಮ್ಮ ಜವಾಬ್ದಾರಿ ನಿರ್ವಹಣೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿಯ ಎಲ್ಲಾ ಕಾರ್ಯಕರ್ತರು ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು

ಸಚಿವ ವಿ. ಸೋಮಣ್ಣ

ಸಚಿವ ವಿ. ಸೋಮಣ್ಣ

  • Share this:
ಹಾಸನ(ಸೆಪ್ಟೆಂಬರ್​.11): ಹಾಸನ ಕ್ಷೇತ್ರದಲ್ಲಿ ರಾಜಕೀಯಕ್ಕೆ ತಕ್ಕ ಹಾಗೆ ಶಾಸಕನಾಗಿ ಪ್ರೀತಂ ಗೌಡರು ಇದ್ದಾರೆ ಎಂದು ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಹಾಸನ ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜಕೀಯ ಹೇಗೆ ಮಾಡಬೇಕು ಎಂಬುದು ನನಗೆ ಗೊತ್ತಿದೆ. ಹಾಸನದಲ್ಲಿನ ರಾಜಕೀಯಕ್ಕೆ ತಕ್ಕಹಾಗೆ ಯಥಾರಾಜ ತಥಾ ಪ್ರಜಾ ಎನ್ನುವ ರೀತಿಯಲ್ಲಿ ಶಾಸಕ ಪ್ರೀತಂ ಗೌಡರು ಇದ್ದು, ಹಾಸನದಲ್ಲಿನ ರಾಜಕೀಯ ನನಗೆ ಗೊತ್ತಿದೆ. ಪ್ರೀತಮ್ ಗೌಡರು ಯುವಕರಿದ್ದು, ಹಾಸನ ಕ್ಷೇತ್ರಕ್ಕೆ ಹೇಳಿ ಮಾಡಿಸಿದಾಗೆ ರಾಜಕೀಯಕ್ಕೆ ಬರುವವರಿಗೆ ಹಾಸನ ತರಬೇತಿ ಕೇಂದ್ರ ಆಗಿದೆ. ಈ ಹಿಂದೆ ಪ್ರೀತಂ ಗೌಡರಿಗೆ ಟಿಕೆಟ್ ಕೊಡಿ ಶಾಸಕ ಆಗುತ್ತಾನೆ ಎಂದು ನಾನೇ ಹೇಳಿದ್ದೆ. ಈಗ ಹೇಳಿದಂತೆ ಈಗ ಪ್ರೀತಂ ಗೌಡರು ಶಾಸಕನಾಗಿದ್ದಾರೆ ಎಂದು ತಿಳಿಸಿದರು‌. ಯಾವ ಅಭಿವೃದ್ಧಿ ಕೆಲಸವಾಗಿಲ್ಲಾ ಎಂದು ಬೇಸರ ಮಾಡಿಕೊಳ್ಳಬೇಡಿ. ಅವನು ಸಾಕಷ್ಟು ಕೆಲಸ ಮಾಡುತ್ತಿದ್ದಾನೆಂದು ಶಾಸಕ ಪ್ರೀತಂ ಗೌಡರನ್ನು ಇದೇ ವೇಳೆ ಸಚಿವ ವಿ. ಸೋಮಣ್ಣ ಹೊಗಳಿದ ಪ್ರಸಂಗ ನಡೆಯಿತು.

ಹಾಸನ ಕ್ಷೇತ್ರದ ಶಾಸಕನನ್ನು ಅನಿಸರಿಸಿಕೊಂಡು ಎಲ್ಲಾರು ಹೋಗಬೇಕೆಂದು ಈ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಕರೆ ಕೊಟ್ಟರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಮ್ಮ ಇಳಿ ವಯಸ್ಸಿನಲ್ಲಿ ಸಹ ತಮ್ಮ ಜವಾಬ್ದಾರಿ ನಿರ್ವಹಣೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿಯ ಎಲ್ಲಾ ಕಾರ್ಯಕರ್ತರು ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಇನ್ನು ವೆಂಕ -ನಾಣಿ- ಸೀನ ಬರಲಿ ಹೋಗಲಿ ನಮಗೆಲ್ಲಾ ಪಕ್ಷದ ಸಂದೇಶ ಮುಖ್ಯ, ಹಳ್ಳಿಗಳಿಗೆ ಮನೆ ನೀಡುವುದು ದೊಡ್ಡದಲ್ಲಾ. ಜಿಲ್ಲಾ ಕೇಂದ್ರದಲ್ಲಿ ಮನೆ ನೀಡುವುದು ಒಂದು ಸವಾಲು. ನಗರ ಪ್ರದೇಶಗಳಲ್ಲಿ ಜಮೀನು ನೀಡಿದರೆ ಶೇ. 50 ರಷ್ಟು ಅನುಪಾತದಲ್ಲಿ ಅಭಿವೃದ್ಧಿ ಮಾಡಿ ನಿವೇಶನ ಹಂಚುವ ಕೆಲಸ ಮಾಡುವುದಾಗಿ ಇದೆ ವೇಳೆ ಹೇಳಿದರು.

ಇದನ್ನೂ ಓದಿ : ಶಾಸಕಿಯಾದ ಮೇಲೆ ಸಂಘರ್ಷಗಳು ಹೆಚ್ಚಾಗಿವೆ - ನನಗೆ ಯಾರು ಕಷ್ಟ ಕೊಡುತ್ತಿದ್ದಾರಂತ ನಿಮಗೇ ಗೊತ್ತು : ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

ಶಾಸಕ ಪ್ರೀತಂ ಜೆ. ಗೌಡ ಮಾತನಾಡಿ, ವಸತಿ ಸಚಿವರಾಗಿರುವ ವಿ. ಸೋಮಣ್ಣನವರು ಪಕ್ಷವನ್ನು ಹೇಗೆ ಗಟ್ಟಿಗೊಳಿಸಬಹುದು ಎಂಬುದನ್ನು ತೋರಿಸಿ ಎಲ್ಲಾರಿಗೂ ಮಾರ್ಗದರ್ಶಕರಾಗಿ ಇಂದು ನಾನು ಕೂಡ ಶಾಸಕನಾಗಲು ಕಾರಣಕರ್ತರಾಗಿದ್ದಾರೆ ಎಂದರು.ಹಾಸನ ನಗರಕ್ಕೆ ಸದ್ಯಕ್ಕೆ ಸಾವಿರ ಮನೆಗಳನ್ನು ನಗರ ಆಶ್ರಯ ಯೋಜನೆಯಡಿ ಮಂಜೂರಾತಿ ಮಾಡಲಾಗಿದೆ. ಸ್ಥಳ ಲಭ್ಯವಿದ್ದು ಬೇಡಿಕೆ ಇದ್ದಲ್ಲಿ ಇನ್ನಷ್ಟು ಒದಗಿಸಲಾಗುವುದು. ಅದೇ ರೀತಿ ಇತರ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಿಗೂ ಹೊಸದಾಗಿ ನಗರ ಆಶ್ರಯ ಯೋಜನೆಯಡಿ 200 ಮನೆಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದು ಎಂದು ಸಚಿವ ವಿ ಸೋಮಣ್ಣ ತಿಳಿಸಿದರು.
Published by:G Hareeshkumar
First published: