• Home
  • »
  • News
  • »
  • district
  • »
  • Lockdown | ರಾಜ್ಯದಲ್ಲಿ ಲಾಕ್​ಡೌನ್ ಜಾರಿಗೆ ಸಚಿವ ಸುರೇಶ್ ಕುಮಾರ್ ಸಹಮತ!

Lockdown | ರಾಜ್ಯದಲ್ಲಿ ಲಾಕ್​ಡೌನ್ ಜಾರಿಗೆ ಸಚಿವ ಸುರೇಶ್ ಕುಮಾರ್ ಸಹಮತ!

ಸಚಿವ ಸುರೇಶ್ ಕುಮಾರ್

ಸಚಿವ ಸುರೇಶ್ ಕುಮಾರ್

ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್  ನಲ್ಲಿ ಸಮಸ್ಯೆ ಇರುವುದನ್ನು ಸರಿಪಡಿಸಲು ಇಂಜಿನಿಯರ್ ಗಳ ತಂಡ ಬರುತ್ತಿದೆ ಎಂದ ಸಚಿವ ಸುರೇಶ್ ಕುಮಾರ್ ಅವರು, ಚಾಮರಾಜನಗರ ಜಿಲ್ಲೆಗೆ ನಿಗಧಿಯಾಗಿರುವಷ್ಟೇ ಪ್ರಮಾಣದ ಆಕ್ಸಿಜನ್ ಪೂರೈಸಬೇಕು. ಆಕ್ಸಿಜನ್ ಪೂರೈಕೆ ಉಸ್ತುವಾರಿ ಅಧಿಕಾರಿ ಮೌನೀಶ್ ಮುದ್ಗಲ್  ಅವರಿಗೂ ಸಹ ತಿಳಿಸಿದ್ದೇನೆ ಎಂದು ತಿಳಿಸಿದರು.

ಮುಂದೆ ಓದಿ ...
  • Share this:

ಚಾಮರಾಜನಗರ (ಏ.07): ರಾಜ್ಯದಲ್ಲಿ  ಕೊರೋನಾ ಅಬ್ಬರಕ್ಕೆ ಕಡಿವಾಣ ಹಾಕಲು ಲಾಕ್ ಡೌನ್ ಮಾಡುವ ವಿಚಾರಕ್ಕೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ  ಸಚಿವ ಸುರೇಶ್ ಕುಮಾರ್ ಸಹಮತ ವ್ಯಕ್ತಪಡಿಸಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಈಗಾಗಲೇ ಜಾರಿಗೆ ತಂದಿರುವ ಜನತಾ ಕರ್ಫ್ಯೂನಿಂದ  ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಸೋಂಕಿತರ ಸಂಖ್ಯೆ  ಕಡಿಮೆಯಾಗಿಲ್ಲ. ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ಸೋಂಕಿನ ಸರಪಳಿ ಕಡಿತಗೊಳಿಸಲು ಲಾಕ್ ಡೌನ್ ಮಾಡಬೇಕೆಂಬ ಅಭಿಪ್ರಾಯ ಎಲ್ಲಾ ಕಡೆ ಕೇಳಿ ಬರುತ್ತಿದೆ. ಈ ಬಗ್ಗೆ ಇಂದು ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪ ಸಭೆ ಕರೆದಿದ್ದು ಲಾಕ್ ಡೌನ್ ಮಾಡಬೇಕೇ, ಬೇಡವೇ ಎಂಬ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.


ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಮೂರು ಗಂಟೆ ಅವಕಾಶ ನೀಡಲಾಗಿದೆ. ಕೊಡಗು ಜಿಲ್ಲೆಯಲ್ಲು ಸಹ ದಿನಬಿಟ್ಟು ದಿನ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.  ಲಾಕ್ ಡೌನ್ ಗೆ ಸಂಬಂಧಿಸಿದಂತೆ  ಇಂದು ಸಂಜೆ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ ಚಾಮರಾಜನಗರ  ಜಿಲ್ಲೆಯ ಅಂಕಿ ಅಂಶಗಳನ್ನು ಅವರಿಗೆ ನೀಡಲಿದ್ದೇನೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.


ಕೊರೋನಾ ತಡೆಗೆ ಲಾಕ್ ಡೌನ್  ಮಾಡುವುದು ಪರಿಹಾರವಾದರೂ ಸಹ ಅದರ ಸಾಧಕ ಬಾಧಕಗಳ ಬಗ್ಗೆಯು ಯೋಚಿಸಬೇಕಿದೆ. ಪ್ರತಿದಿನದ ದುಡಿಮೆಯನ್ನೇ ನಂಬಿಕೊಂಡು ಜೀವನ ನಡೆಸುವ  ಕೂಲಿ ಕಾರ್ಮಿಕರ ಪರಿಸ್ಥಿತಿ ಏನಾಗಲಿದೆ  ಎಂಬ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ಲಾಕ್ ಡೌನ್ ನಿಂದಾಗುವ ಬಾಧಕಗಳನ್ನು ಯಾವ ರೀತಿ ಎದುರಿಸಬೇಕು ಎಂಬ ಬಗ್ಗೆಯು ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಅವರು ತಿಳಿಸಿದರು.


ಚಾಮರಾಜನಗರದಲ್ಲಿ ಸದ್ಯಕ್ಕೆ ಆಕ್ಸಿಜನ್ ಕೊರತೆ ಇಲ್ಲ


ಚಾಮರಾಜನಗರದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 6 ಮಂದಿ ಕೋವಿಡ್ ರೋಗಿಗಳು ಇಬ್ಬರು ನಾನ್ ಕೋವಿಡ್ ರೋಗಿಗಳು ಸತ್ತಿದ್ದಾರೆ ಎಂದು ಮಾಹಿತಿ ನೀಡಿದ ಅವರು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ  ನಾಲ್ಕು ಮಂದಿ, ಕೊಳ್ಳೇಗಾಲ ತಾಲೂಕು ಆಸ್ಪತ್ರೆಯಲ್ಲಿ ಇಬ್ಬರು ಕೊರೋನಾ ರೋಗಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದಲ್ಲದೆ ಕೊರೋನಾ ಲಕ್ಷಣ ಇರುವ ಆದರೆ ಕೊರೋನಾ ಅಲ್ಲದ ಇಬ್ಬರು ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ವಿವರಿಸಿದರು.


ಜಿಲ್ಲಾಸ್ಪತ್ರೆಯ ಐಸಿಯು ವಿಭಾಗದಲ್ಲಿ  26 ಮಂದಿ ವೆಂಟಿಲೇಟರ್ ನಲ್ಲಿದ್ದಾರೆ. ಈ ಪೈಕಿ ಮೂವರು ವೆಂಟಿಲೇಟರ್ ನಲ್ಲಿದ್ದರು. ಅವರ ಸ್ಯಾಚುರೇಷನ್ ಪ್ರಮಾಣ 90 ಕ್ಕಿಂತಲೂ ಕಡಿಮೆ ಇದೆ ಎಂದ ಅವರು, ಜಿಲ್ಲೆಯಲ್ಲಿ ಕೋವಿಡ್ ಸಾವಿನ ಪ್ರಮಾಣ ಹೆಚ್ಚಾಗುತ್ತಿರುವ ಬಗ್ಗೆ ವಿಶ್ಲೇಷಣೆ ಮಾಡಿ ಪರಿಹಾರ ಕಂಡು ಹಿಡಿಯಲು ಬೆಂಗಳೂರಿನಿಂದ ಪರಿಣಿತರ ತಂಡ ಬರುತ್ತಿದೆ ಎಂದು ತಿಳಿಸಿದರು.


ಇದನ್ನು ಓದಿ: ಬೆಡ್ ಬ್ಲಾಕಿಂಗ್; ಸಂಸದ ತೇಜಸ್ವಿ ಸೂರ್ಯರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ; ಶಾಸಕ ಉದಯ್ ಗರುಡಾಚಾರ್


ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸದ್ಯಕ್ಕೆ ಆಕ್ಸಿಜನ್ ಕೊರತೆ ಇಲ್ಲ.  ಪ್ರಸ್ತುತ 200 ಜಂಭೋ ಸಿಲಿಂಡರ್  ಆಕ್ಸಿಜನ್ ಲಭ್ಯವಿದೆ. ಇನ್ನೂ 100 ಜಂಭೋ ಸಿಲಿಂಡರ್‌  ಭರ್ತಿಯಾಗಿ ಮೈಸೂರಿನಿಂದ ಬರುತ್ತಿದೆ. ಇದಲ್ಲದೆ 700 ಲೀಟರ್ ಲಿಕ್ವಿಡ್ ಆಕ್ಸಿಜನ್ ಸಹ  ಇದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.


ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್  ನಲ್ಲಿ ಸಮಸ್ಯೆ ಇರುವುದನ್ನು ಸರಿಪಡಿಸಲು ಇಂಜಿನಿಯರ್ ಗಳ ತಂಡ ಬರುತ್ತಿದೆ ಎಂದ ಸಚಿವ ಸುರೇಶ್ ಕುಮಾರ್ ಅವರು, ಚಾಮರಾಜನಗರ ಜಿಲ್ಲೆಗೆ ನಿಗಧಿಯಾಗಿರುವಷ್ಟೇ ಪ್ರಮಾಣದ ಆಕ್ಸಿಜನ್ ಪೂರೈಸಬೇಕು. ಆಕ್ಸಿಜನ್ ಪೂರೈಕೆ ಉಸ್ತುವಾರಿ ಅಧಿಕಾರಿ ಮೌನೀಶ್ ಮುದ್ಗಲ್  ಅವರಿಗೂ ಸಹ ತಿಳಿಸಿದ್ದೇನೆ ಎಂದು ತಿಳಿಸಿದರು.

  • ವರದಿ: ಎಸ್.ಎಂ.ನಂದೀಶ್

Published by:HR Ramesh
First published: