HOME » NEWS » District » MINISTER SURESH KUMAR LED MEETING OF BOMMANAHALLI ZONE TO FIGHT COVID CRISIS SNVS

ಪ್ರತೀ ವಾರ್ಡ್​ಗೆ ಆಂಬುಲೆನ್ಸ್ ವ್ಯವಸ್ಥೆ: ಬೊಮ್ಮನಹಳ್ಳಿ ವಲಯ ಕೋವಿಡ್ ಉಸ್ತುವಾರಿ ಸುರೇಶ್ ಕುಮಾರ್

ಕೊರೋನಾ ನಿಯಂತ್ರಣ ಮಾಡಲು ಖಾಸಗಿ ಆಸ್ಪತ್ರೆಗಳು ಸರಕಾರದ ಸೂಚನೆಯಂತೆ ನಿಗದಿತ ಸಂಖ್ಯೆಯ ಬೆಡ್​ಗಳನ್ನು ನೀಡುತ್ತಿಲ್ಲದಿರುವ ಬಗ್ಗೆ ಸಚಿವ ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

news18-kannada
Updated:July 12, 2020, 5:59 PM IST
ಪ್ರತೀ ವಾರ್ಡ್​ಗೆ ಆಂಬುಲೆನ್ಸ್ ವ್ಯವಸ್ಥೆ: ಬೊಮ್ಮನಹಳ್ಳಿ ವಲಯ ಕೋವಿಡ್ ಉಸ್ತುವಾರಿ ಸುರೇಶ್ ಕುಮಾರ್
ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಬೊಮ್ಮನಹಳ್ಳಿ ಕೋವಿಡ್ ವಲಯದ ಸಭೆ
  • Share this:
ಬೆಂಗಳೂರು(ಜುಲೈ 12): ಕೊರೋನಾ ಅಪಾಯದ ಮಧ್ಯೆ ಧೈರ್ಯ ವಹಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನ ಆಯೋಜಿಸಿ ಮಿಶ್ರ ಪ್ರತಿಕ್ರಿಯೆ ಪಡೆದಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇದೀಗ ಕೊರೋನಾ ವಿರುದ್ಧದ ಹೋರಾಟದಲ್ಲಿ ಬಹಳ ಸಕ್ರಿಯವಾಗಿದ್ದಾರೆ. ಬೆಂಗಳೂರು ನಗರದಲ್ಲಿ ಕೊರೋನಾ ನಿಯಂತ್ರಣಕ್ಕೆ ರಚಿಸಲಾಗಿರುವ ಎಂಟು ವಲಯಗಳ ಪೈಕಿ ಬೊಮ್ಮನಹಳ್ಳಿ ವಲಯಕ್ಕೆ ಸುರೇಶ್ ಕುಮಾರ್ ಅವರು ಉಸ್ತುವಾರಿಯಾಗಿ ನಿಯುಕ್ತಿಯಾಗಿದ್ದಾರೆ. ಇವತ್ತು ವಲಯದ ಸಭೆ ನಡೆಸಿದ ಅವರು ವಿವಿಧ ವಿಚಾರಗಳನ್ನ ಚರ್ಚಿಸಿದ್ಧಾರೆ.

ತಮ್ಮ ಬೊಮ್ಮನಹಳ್ಳಿ ವಲಯಕ್ಕೆ ಕೋವಿಡ್-19 ಸೋಂಕಿತ ರೋಗಿಗಳಿಗಾಗಿ ಪ್ರತೀ ವಾರ್ಡ್​ಗೆ ತಲಾ ಒಂದರಂತೆ ಆಂಬುಲೆನ್ಸ್ ವಾಹನದ ವ್ಯವಸ್ಥೆ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.

ಪ್ರಸ್ತುತ ಕೋವಿಡ್ ಪರೀಕ್ಷೆ ಫಲಿತಾಂಶ ಬರಲು ಸರಾಸರಿ ನಾಲ್ಕರಿಂದ ಐದು ದಿನಗಳಾಗುತ್ತಿದೆ. ಇದರಿಂದ ಜನರಿಗೆ ಸಾಕಷ್ಟು ತೊಂದರೆ ಆಗುತ್ತಿದೆ.  ಮುಂದೆ ಒಂದು ದಿನದಲ್ಲಿ ಫಲಿತಾಂಶ ಬರುವಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಇದನ್ನೂ ಓದಿ: Lockdown - ಬೆಂಗಳೂರೊಂದೇ ಅಲ್ಲ, 10-12 ಜಿಲ್ಲೆಗಳಲ್ಲೂ ಲಾಕ್​ಡೌನ್​ಗೆ ಸರ್ಕಾರ ಗಂಭೀರ ಚಿಂತನೆ

ಕೊರೋನಾ ನಿಯಂತ್ರಣ ಮಾಡಲು ಖಾಸಗಿ ಆಸ್ಪತ್ರೆಗಳು ಸರಕಾರದ ಸೂಚನೆಯಂತೆ ನಿಗದಿತ ಸಂಖ್ಯೆಯ ಬೆಡ್​ಗಳನ್ನು ನೀಡುತ್ತಿಲ್ಲದಿರುವ ಬಗ್ಗೆ ಸಚಿವ ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂಬಂಧ ಅಪೋಲೋ, ಪೋರ್ಟೀಸ್, ಪ್ರಶಾಂತ್, ನಾರಾಯಣ ಹೃದಯಾಲಯ ಮುಂತಾದ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಚಿವರು ವಿಡಿಯೋ ಸಂವಾದ ನಡೆಸಿದರು. ಕೂಡಲೇ ಬೆಡ್ ವ್ಯವಸ್ಥೆ ಮಾಡಬೇಕು. ತಪ್ಪಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಸಚಿವರು  ಎಂದು ತಿಳಿಸಿದರು.

ಇಂದು ನಡೆದ ಸಭೆಯಲ್ಲಿ ಬಿಜೆಪಿ ಸಂಸತ್ ಸದಸ್ಯ ತೇಜಸ್ವಿ ಸೂರ್ಯ, ಶಾಸಕರಾದ ಎಂ. ಕೃಷ್ಣಪ್ಪ, ಸತೀಶ್ ರೆಡ್ಡಿ, ಐಎಎಸ್ ಅಧಿಕಾರಿ ಕ್ಯಾಪ್ಟನ್ ಮಣಿವಣ್ಣನ್‌, ಬಿ.ಬಿ.ಎಂ.ಪಿ. ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.ಇದನ್ನೂ ಓದಿ: ಕೋವಿಡ್​​-19 ತಡೆಗೆ ಬೂತ್​​ ಮಟ್ಟದ ಟಾಸ್ಕ್​​ ಫೋರ್ಸ್​​: ಯಲಹಂಕದಲ್ಲಿ ಶಾಸಕ ಎಸ್​ ಆರ್​​ ವಿಶ್ವನಾಥ್​​ ಮನೆ ಮನೆ ಭೇಟಿಬೆಂಗಳೂರಿನಲ್ಲಿ ಕೊರೋನಾ ವೈರಸ್ ಸೋಂಕು ಮಿತಿಮೀರಿ ವ್ಯಾಪಿಸುತ್ತಿದೆ. ದಿನಕ್ಕೆ ಕನಿಷ್ಠ 1 ಸಾವಿರ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಇದೇ ಮಂಗಳವಾರ ರಾತ್ರಿಯಿಂದ ಬೆಂಗಳೂರಿನಲ್ಲಿ ಒಂದು ವಾರ ಕಾಲ ಕಟ್ಟುನಿಟ್ಟಿನ ಲಾಕ್​ಡೌನ್ ಮಾಡಲು ಸರ್ಕಾರ ನಿರ್ಧರಿಸಿದೆ. ನಾಳೆ ಸೋಮವಾರ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
Published by: Vijayasarthy SN
First published: July 12, 2020, 5:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories