HOME » NEWS » District » MINISTER SUDHAKAR DOES NOT GET THE PHONE CALL RAMANAGAR PEOPLE CRY IN PANDEMIC SITUATION RRK MAK

Minister Sudhakar: ಸಚಿವ ಸುಧಾಕರ್ ಪೋನ್ಗೆ ಸಿಗುತ್ತಿಲ್ಲ, ಕೋವಿಡ್ ಸೋಂಕಿತರ ಕಷ್ಟ ಕೇಳೋರಿಲ್ಲ; ಕೋಲಾರ ಜನರ ಅಳಲು!

ಕೋಲಾರ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಹಲವು ಸಮಸ್ಯೆಗಳು ಜನರನ್ನ ಕಾಡುತ್ತಿದ್ದು, ಕಷ್ಟಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಆಸ್ಪತ್ರೆಗಳಲ್ಲಿನ ಪರಿಸ್ಥಿತಿಯನ್ನ ಯಾರು ನಿಯಂತ್ರಣ ಮಾಡಲಾಗದಂತಾಗಿದೆ ಎಂದು ಸಚಿವ ಸುಧಾಕರ್ ವಿರುದ್ದ ಮಾಲೂರು ಶಾಸಕ ಕೆ.ವೈ. ನಂಜೇಗೌಡ ಕಿಡಿಕಾರಿದ್ದಾರೆ.

news18-kannada
Updated:May 2, 2021, 8:47 AM IST
Minister Sudhakar: ಸಚಿವ ಸುಧಾಕರ್ ಪೋನ್ಗೆ ಸಿಗುತ್ತಿಲ್ಲ, ಕೋವಿಡ್ ಸೋಂಕಿತರ ಕಷ್ಟ ಕೇಳೋರಿಲ್ಲ; ಕೋಲಾರ ಜನರ ಅಳಲು!
ಡಾ.ಕೆ. ಸುಧಾಕರ್.
  • Share this:
ಕೋಲಾರ: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಪ್ರಕರಣ ಹೆಚ್ಚಳ ಆಗುತ್ತಿದ್ದು, ಜಿಲ್ಲೆಯಲ್ಲಿನ ಕಷ್ಟಗಳನ್ನ ಕೇಳೋರ್ಯಾರು ಇಲ್ಲ. ಅಧಿಕಾರಿಗಳು ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ, ನಮ್ಮ ಕಷ್ಟ ಹೇಳಿಕೊಳ್ಳಲು ಯಾರೊಬ್ಬ ಸಚಿವರು ಸ್ಪಂದಿಸುತ್ತಿಲ್ಲ ಎಂದು ಶಾಸಕ ನಂಜೇಗೌಡ ವಾಗ್ದಾಳಿ ನಡೆಸಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೊಮ್ಮನಹಳ್ಳಿ ಗ್ರಾಮದ ನಿವಾಸದಲ್ಲಿ ಈ ಬಗ್ಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೋಲಾರ ಜಿಲ್ಲೆಗೆ ಉಸ್ತುವಾರಿ ಸಚಿವರನ್ನೇ ನೇಮಿಸಲು ಮರೆತಂತಿದೆ. ಸಚಿವ ಸಂಪುಟ ವಿಸ್ತರಣೆ ನಂತರ, ಎಚ್ ನಾಗೇಶ್ ಅವರು ಸಚಿವ ಸ್ತಾನವನ್ನ ಕಳೆದುಕೊಂಡರು. ಹೀಗಾಗಿ ಜಿಲ್ಲೆಗಿದ್ದ ಉಸ್ತುವಾರಿ ಸಚಿವ ಸ್ತಾನವೂ ಖಾಲಿಯಿದೆ. ಕೋಲಾರ ಜಿಲ್ಲೆಯಲ್ಲಿ ಕೊರೊನಾ ಹರಡುವಿಕೆ ಮಿತಿ ಮೀರಿದ್ದು, ಜಿಲ್ಲಾಸ್ಪತ್ರೆ ಸೇರಿದಂತೆ ಹಲವೆಡೆ ಬೆಡ್, ಆಕ್ಸಿಜನ್, ವೆಂಟಿಲೇಟರ್ ಸಿಗದೆ ಹಲವು ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಯಾರೂ ಗಮನ ಹರಿಸೋರೆ ಇಲ್ಲದಂತಾಗಿದೆ ಎಂದು ಕಿಡಿಕಾರಿದ್ದಾರೆ.

ಕೋಲಾರ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಹಲವು ಸಮಸ್ಯೆಗಳು ಜನರನ್ನ ಕಾಡುತ್ತಿದ್ದು, ಕಷ್ಟಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಆಸ್ಪತ್ರೆಗಳಲ್ಲಿನ ಪರಿಸ್ಥಿತಿಯನ್ನ ಯಾರು ನಿಯಂತ್ರಣ ಮಾಡಲಾಗದಂತಾಗಿದೆ ಎಂದು  ಆರೋಗ್ಯ ಸಚಿವ ಡಾ ಸುಧಾಕರ್ ವಿರುದ್ದ ಮಾಲೂರು ಶಾಸಕ ಕೆ.ವೈ. ನಂಜೇಗೌಡ ಕಿಡಿಕಾರಿದ್ದಾರೆ.

ಕಳೆದ 3 ದಿನದಿಂದ ಆರೋಗ್ಯ ಸಚಿವರಿಗೆ ಕರೆ ಮಾಡುತ್ತಿದ್ದರು ಸ್ಪಂದಿಸುತ್ತಿಲ್ಲ, ಜಿಲ್ಲೆಯಲ್ಲಿ ಪಾಸಿಟಿವ್ ಕೇಸ್, ಸಾವು ಪ್ರಕರಣ ಹೆಚ್ಚುತ್ತಿದ್ದು, ರಾಜಿನಾಮೆ ಕೊಟ್ಟು ಜನರ ಜತೆಗೂಡಿ ಸರ್ಕಾರದ ವಿರುದ್ದ ಹೊರಾಟ ಮಾಡುವಂತ ಮನಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಜಿಲ್ಲೆಯಲ್ಲಿನ ಆರೋಗ್ಯ ಇಲಾಖೆಯ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕು, ಸಿಎಂ ಯಡಿಯೂರಪ್ಪ ರನ್ನ ಕಾಣುವುದು ಬಹಳ ಸುಲಭದ ಕೆಲಸ, ಆದರೆ ಸಚಿವರುಗಳು ಕೈಗೆ ಸಿಗುತ್ತಿಲ್ಲ, ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಸರ್ಕಾರ ನೇಮಿಸಲಿ ಎಂದು ಶಾಸಕ ಕೆವೈ ನಂಜೇಗೌಢ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Supreme Court: ಶೇ.100 ರಷ್ಟು ಲಸಿಕೆಯನ್ನು ನೀವೆ ಏಕೆ ಖರೀದಿಸಬಾರದು?; ಮೋದಿ ಸರ್ಕಾರದ ಎದುರು 10 ಪ್ರಶ್ನೆಗಳನ್ನಿಟ್ಟ ಸುಪ್ರೀಂ

ಕೆಜಿಎಪ್ ತರಕಾರಿ ಮಾರುಕಟ್ಟೆ ಸ್ತಳಾಂತರ ಮಾಡಿ ಅಧ್ಯಕ್ಷ್ಯ ವಲ್ಲಾಲ್ ಮುನಿಸ್ವಾಮಿ ಆದೇಶ:

ಕೋಲಾರ ಜಿಲ್ಲೆಯ ಕೆಜಿಎಪ್ ನಗರದಲ್ಲಿ ಕೊರೊನಾ ಕೇಸ್ ಹೆಚ್ಚಳ ಹಿನ್ನಲೆ, ಜಿಲ್ಲೆಯ ಅತಿದೊಡ್ಡ ಮಾರುಕಟ್ಟೆ ಎಂದು ಹೆಸರು ವಾಸಿ ಪಡೆದಿರುವ ಎಂಜಿ ಮಾರುಕಟ್ಟೆಯನ್ನು ಬೇರೆಡೆಗೆ ಸ್ತಳಾಂತರ ಮಾಡಲಾಗಿದೆ, ಎಮ್‍ಜಿ ಮಾರುಕಟ್ಟೆಯಲ್ಲಿನ ತರಕಾರಿ ಹಾಗು ಹಣ್ಣು ಹಂಪಲು ಮಳಿಗೆಗಳನ್ನ, ನಗರದ ಮಲೆಯಾಳಿ ಕ್ರೀಡಾಂಗಣಕ್ಕೆ ಸ್ತಳಾಂತರ ಮಾಡುವಂತೆ, ಕೆಜಿಎಪ್ ನಗರಸಭೆ ಅಧ್ಯಕ್ಷ್ಯ ವಲ್ಲಾಲ್ ಮುನಿಸ್ವಾಮಿ ಆದೇಶಿಸಿದ್ದಾರೆ.
Youtube Video
ಈ ಬಗ್ಗೆ ಮಾತನಾಡಿರುವ ಅಧ್ಯಕ್ಷ್ಯ ವಲ್ಲಾಲ್ ಮುನಿಸ್ವಾಮಿ, ಮಾರುಕಟ್ಟೆಯಲ್ಲಿ ಜನರು ಸಾಮಾಜಿಕ ಅಂತರ ಮರೆತು ವರ್ತಿಸುತ್ತಿದ್ದಾರೆ, ಎಷ್ಟು ಬಾರಿ ದಂಡ ವಿಧಿಸಿದರು ಮಾಸ್ಕ್ ಧರಿಸದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನಗರದಲ್ಲಿ ದಿನೇ ದಿನೇ ಕೊರೊನಾ ಸಂಖ್ಯೆ ಹೆಚ್ಚುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಮಾರುಕಟ್ಟೆಯನ್ನ ಸ್ತಳಾಂತರ ಮಾಡಲಾಗಿದೆ. ದಯವಿಟ್ಟು ಜನರು ಸಹಕರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
Published by: MAshok Kumar
First published: May 2, 2021, 7:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories