ಡ್ರಗ್‌ ಮಾಫಿಯಾವನ್ನು ಬೇರು ಸಮೇತ ಕಿತ್ತು ಹಾಕುತ್ತೇವೆ; ಸಚಿವ ಶ್ರೀರಾಮುಲು ವಿಶ್ವಾಸ

ಇನ್ನೂ ಡ್ರಗ್ಸ್‌ ಜಾಲವನ್ನು ಬೇರು ಸಮೇತ ಕಿತ್ತು ಹಾಕಲು ಗೃಹ ಸಚಿವರು, ಮುಖ್ಯಮಂತ್ರಿಗಳು ಕೆಲಸ ಮಾಡುತ್ತಿದ್ದು, ಈ ಪ್ರಕರಣದಲ್ಲಿ ಯಾವುದೇ ರಾಜಕಾರಣಿಗಳ ಪುತ್ರರಿದ್ದರೂ ತನಿಖೆ ನಡೆಬೇಕು ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಸಚಿವ ಶ್ರೀರಾಮುಲು.

ಸಚಿವ ಶ್ರೀರಾಮುಲು.

  • Share this:
ಚಿತ್ರದುರ್ಗ: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾವನ್ನ ಬೇರು ಸಮೇತ ಕಿತ್ತು ಹಾಕುತ್ತೇವೆ, ಒಬ್ಬರು ಇಬ್ಬರು ಮಾಡಿದ ತಪ್ಪಿನಿಂದಾಗಿ ಚಿತ್ರರಂಗಕ್ಕೆ ಕಳಂಕ ಬರುತ್ತಿದೆ, ಯಾರೇ ತಪ್ಪು ಮಾಡಿರಲಿ ನಿಸ್ಪಕ್ಷಪಾತವಾಗಿ ತನಿಖೆಯಾಗಬೇಕು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿಕೆ ನೀದ್ದಾರೆ. ರಾಜನಹಳ್ಳಿಗೆ ತೆರಳುವ ವೇಳೆ ಚಿತ್ರದುರ್ಗದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಶ್ರೀರಾಮುಲು "ರಾಜ್ಯದಲ್ಲಿ ಡ್ರಗ್ಸ್ ಹಣದಿಂದಲೇ ಮೈತ್ರಿ ಸರ್ಕಾರ ಪಥನವಾಗಿದ್ದು ಎಂಬ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಡ್ರಗ್ಸ್ ನಿನ್ನೆ ಮೊನ್ನೆಯದಲ್ಲ ಎಂಬುದನ್ನ ಕುಮಾರಸ್ವಾಮಿಯವರು ನೆನಪು ಮಾಡಿಕೊಳ್ಳಬೇಕು. ಈಗ ಚಿತ್ರರಂಗದಲ್ಲಿ ಡ್ರಗ್ಸ್ ವಿಷಯ ದೊಡ್ಡ ಸುದ್ದಿಯಾಗಿ ಹರಡುತ್ತಿದೆ. ಯಾರೋ ಒಬ್ಬರು ಇಬ್ಬರು ಮಾಡಿದ ತಪ್ಪಿಗೆ ಇಡೀ ಚಿತ್ರರಂಗಕ್ಕೆ ಕಳಂಕ ಬರುತ್ತಿದೆ. ಇದರಿಂದಾಗಿ ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗಬೇಕು ನಿಸ್ಪಕ್ಷಪಾತವಾಗಿ ತನಿಕೆಯಾಗಬೇಕು" ಎಂದು ಹೇಳಿದ್ದಾರೆ.

ಇನ್ನೂ ಡ್ರಗ್ಸ್‌ ಜಾಲವನ್ನು ಬೇರು ಸಮೇತ ಕಿತ್ತು ಹಾಕಲು ಗೃಹ ಸಚಿವರು, ಮುಖ್ಯಮಂತ್ರಿಗಳು ಕೆಲಸ ಮಾಡುತ್ತಿದ್ದು, ಈ ಪ್ರಕರಣದಲ್ಲಿ ಯಾವುದೇ ರಾಜಕಾರಣಿಗಳ ಪುತ್ರರಿದ್ದರೂ ತನಿಖೆ ನಡೆಬೇಕು ಎಂದಿದ್ದಾರೆ. ಇನ್ನೂ ನಾಯಕ ಸಮುದಾಯದ ಬೇಡಿಕೆಯಾಗಿರುವ ಶೇ.7.5 ಮೀಸಲಾತಿ ಕುರಿತು ನಾಗಮೋಹನ್ ದಾಸ್ ವರದಿ ಸರ್ಕಾರಕ್ಕೆ ತಲುಪಿದ್ದು, ಇವತ್ತು ನಮ್ಮ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಚರ್ಚೆ ಮಾಡಿ ನಮ್ಮೆಲ್ಲ ಶಾಸಕರು ತೀರ್ಮಾನಿಸುತ್ತೇವೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

ರಾಜ್ಯದಲ್ಲಿ ಡ್ರಗ್ಸ್‌ ಜಾಲದ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಲ್ಲದೆ, ಈ ಜಾಲದ ಹಿಂದೆ ಇರುವವರು ವಿದೇಶಿಗರು ಎಂದು ಹೇಳಲಾಗುತ್ತಿದೆ. ಈಗಾಗಲೇ ನಗರದ ಪ್ರಮುಖ ಡ್ರಗ್ಸ್‌ ಪೆಡ್ಲರ್‌ಗಳ ಜೊತೆಗೆ ಪೊಲೀಸರು ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿಯನ್ನೂ ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಹೊರಮಾವು ಬಳಿ ನಡೆದಿದ್ದ ಆಫ್ರಿಕನ್‌ ಮೂಲದ ಪ್ರಜೆಗಳ ಆಫ್ರಿಕನ್‌ ಕಿಚನ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರ ದಾಳಿ ವೇಳೆ ವಿದೇಶಿ ಪ್ರಜೆಗಳು ದಿಕ್ಕಾಪಾಲಾಗಿ ಓಡಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅಲ್ಲದೆ, ಈ ವೇಳೆ ಓರ್ವ ಆಫ್ರಿಕನ್‌ ವ್ಯಕ್ತಿಯನ್ನು ಬಂಧಿಸಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ಆಫ್ರಿಕನ್‌ ಪ್ರಜೆಗಳ ಪಾರ್ಟಿ ಮೇಲೆ ಪೊಲೀಸ್‌ ರೇಡ್‌; ದಿಕ್ಕಾಪಾಲಾಗಿ ಓಡಿದ ವಿದೇಶಿಗರು, ಓರ್ವನ ಬಂಧನ

ಆಫ್ರಿಕನ್‌ ಕಿಚನ್ ಪಾರ್ಟಿ ನಡೆಸಲು ಯಾವುದೇ ಅನುಮತಿ ಪಡೆಯದ ಕಾರಣ ಹೆಣ್ಣೂರು ಠಾಣಾ ಪೊಲೀಸರು ನಿನ್ನೆ ರಾತ್ರಿ ನಡೆದ ಪಾರ್ಟಿ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ, ಘಟನೆ ಸಂಬಂಧ ಜಾನ್ಸನ್‌ ಎಂಬ ಓರ್ವ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿಯೂ ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ, ನಗರದ ಡ್ರಗ್ಸ್‌ ಜಾಲಕ್ಕೂ ಈ ಆಫ್ರಿಕನ್‌ ಪ್ರಜೆಗಳಿಗೂ ನಂಟಿದೆಯಾ? ಎಂಬುದು ವಿಚಾರಣೆಯ ನಂತರವಷ್ಟೇ ಬೆಳಕಿಗೆ ಬರಲಿದೆ.
Published by:MAshok Kumar
First published: