ಯಡಿಯೂರಪ್ಪರನ್ನು ಕೆಳಗಿಳಿಸುವುದು ಹಗಲುಗನಸು, ಸಿದ್ದರಾಮಯ್ಯಗೆ ಮತಿ ಭ್ರಮಣೆ; ಶ್ರೀರಾಮುಲು ಕಿಡಿ

ವಿಶ್ವವಾಪ್ತಿ ಸಂಕಷ್ಟ ತಂದಿದ್ದ ಕೊರೋನಾ ಸಂದರ್ಭದಲ್ಲಿ ಸಿಎಂ 24 ಗಂಟೆ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಅವರನ್ನ ಕೆಳಗಿಳಿಸುವುದು ಹಗಲು ಗನಸು ಬಾಯಿ ಚಟಕ್ಕಾಗಿ ಮಾತನಾಡುವುದು ಸರಿಯಲ್ಲ ಎಂದು ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.

ಸಚಿವ ಶ್ರೀರಾಮುಲು ಹಾಗೂ ಮಾಜಿ ಸಿಎಂ 
 ಸಿದ್ದರಾಮಯ್ಯ

ಸಚಿವ ಶ್ರೀರಾಮುಲು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ

  • Share this:
ಚಿತ್ರದುರ್ಗ: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಯೂರಪ್ಪರನ್ನ ಬದಲಾವಣೆ ಮಾಡುತ್ತಾರೆ ಎಂದು ಹೇಳುವ ಮಾಜಿ ಸಿಎಂ ಸಿದ್ದರಾಮಯ್ಯ ಮೊದಲು ಅವರ ಕಾಂಗ್ರೇಸ್ ನಲ್ಲಿ ಮೂರು ಭಾಗ ಆಗಿದೆ. ಆ ಮನೆಯನ್ನ ಸರಿ ಮಾಡಿಕೊಳ್ಳಲಿ ಎಂದು ಚಿತ್ರದುರ್ಗ ದಲ್ಲಿ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಿರುಗೇಟು ನೀಡಿದ್ದಾರೆ. ನಗರದದಲ್ಲಿ ನಡೆದ ಜನಸೇವಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಚಿವ ಬಿ.ಶ್ರೀರಾಮುಲು, ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿ, "ಮಾಜಿ ಸಿಎಂ ಸಿದ್ದರಾಮಯ್ಯ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗೆ ಇಳಿಯಲಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ನಲ್ಲಿಯೇ ಮೂರು ಭಾಗ ಆಗಿ ಕಚ್ಚಾಟ ನಡೆಯುತ್ತಿದೆ. ಡಿಕೆ ಶಿವಕುಮಾರ್, ಪರಮೇಶ್ವರ, ಸಿದ್ದರಾಮಯ್ಯ ಬಣಗಳಿಂದ ಪಕ್ಷದಲ್ಲಿ ಮೂರು ಭಾಗ ಆಗಿದೆ. ಅವರ ನಡುವೆಯೇ ಸಿಎಂ ಹುದ್ದೆಗಾಗಿ ಕಚ್ಚಾಟ ನಡೆಸುತ್ತಿದ್ದಾರೆ. ಮೊದಲು ಅವರ ಮನೆಯನ್ನ ಸರಿ ಮಾಡಿಕೊಳ್ಳಲಿ" ಎಂದು ಟಾಂಗ್ ನೀಡಿದರು.

"ಇನ್ನೂ ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ  ಬಾದಮಿಯಲ್ಲಿ ಗೆಲ್ಲೋದು ಕಷ್ಟ ಮೈಸೂರಲ್ಲಿ ಸೋತು ಬಾದಾಮಿಗೆ ಹೋದ್ರು, ಅಲ್ಲಿಗೆದ್ದಿದ್ದಾರೆ. ಆದರೇ ಮುಂದಿನ ಸಾರಿ ಗೆಲ್ಲಲು ಕಷ್ಟ ಎಂದು ಹೇಳಿದ್ದಾರೆ. ಇನ್ನೂ ಮಾಜಿ ಸಿಎಂ ಹೆಚ್.ಡಿ ಕುಮಾರ್ ಸ್ವಾಮಿ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು, ಸಿದ್ದರಾಮಯ್ಯ, ನಿಮ್ಮ ಮನೆ ನೀವು ಸರಿ ಮಾಡಿಕೊಂಡು ನಮ್ಮ ಬಗ್ಗೆ ಮಾತನಾಡಿ ಎಂದಿದ್ದು, ಸಿದ್ದರಾಮಯ್ಯ ಗೆ ಅಧಿಕಾರ ಸಿಕ್ಕಿಲ್ಲ ಎಂಬ ಮತಿ ಭ್ರಮಣೆಯಿಂದ ಹೀಗೆ ಮಾತನಾಡುತ್ತಿದ್ದಾರೆ" ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ಇನ್ನೆರಡು ವಾರದಲ್ಲಿ ಬಿಡುಗಡೆಯಾಗಲಿದ್ದಾರೆ ಶಶಿಕಲಾ; ಎಚ್ಚರವಹಿಸುವಂತೆ ಗುಪ್ತಚರ ಇಲಾಖೆ ಮಾಹಿತಿ 

"ವಿಶ್ವವಾಪ್ತಿ ಸಂಕಷ್ಟ ತಂದಿದ್ದ ಕೊರೋನಾ ಸಂದರ್ಭದಲ್ಲಿ ಸಿಎಂ 24 ಗಂಟೆ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಅವರನ್ನ ಕೆಳಗಿಳಿಸುವುದು ಹಗಲು ಗನಸು ಬಾಯಿ ಚಟಕ್ಕಾಗಿ ಮಾತನಾಡುವುದು ಸರಿಯಲ್ಲ ಎಚ್ಚರಿಕೆ ನೀಡಿದ್ದಾರೆ. ಇನ್ನೂ ಬಿಎಸ್​ವೈ ಸಂಪುಟದಲ್ಲಿ ಸಚಿವನಾಗಲ್ಲ ಎಂಬ ಯತ್ನಾಳ್ ಅವರದ್ದು ವೈಯುಕ್ತಿಕ ನಿಲುವಾಗಿದೆ. ಅದು ಬಿಜೆಪಿಯ ನಿಲುವಲ್ಲ. ಪಕ್ಷಕ್ಕೆ ಬಂದ ಎಲ್ಲರಿಗೂ ಮುಖ್ಯಮಂತ್ರಿಗಳು ಒಳ್ಳೆಯ ಸ್ಥಾನಮಾನ ನೀಡಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ.

ಮತ್ತೆ ಸಿಎಂ ಆದರೆ ರಾಮರಾಜ್ಯ ಮಾಡುವೆ ಎಂಬ ಹೆಚ್​.ಡಿ. ಕುಮಾರಸ್ವಾಮಿ ಮಾತಿಗೆ ಪ್ರತಿಕ್ರಿಯಿಸಿರುವ ರಾಮುಲು, "ಮಾಜಿ ಸಿಎಂ ಕುಮಾರಸ್ವಾಮಿ ಎರಡು ಬಾರಿ ಸಿಎಂ ಆದಾಗ ನಾನು ಕೆಲಸ ಮಾಡಿದ್ದೇನೆ. ಒಳ್ಳೆಯ ಕೆಲಸ ಮಾಡಿದ್ರೆ, ಜನರೇ ತೀರ್ಮಾನ ಮಾಡುತ್ತಾರೆ" ಎಂದು ಕುಟುಕಿದ್ದಾರೆ.
Published by:MAshok Kumar
First published: