HOME » NEWS » District » MINISTER SRIRAMULU SERVES FODDER TO GODS AXES IN CHITRADURGA LG

ಮೇವಿಲ್ಲದೆ ನರಳುತ್ತಿದ್ದ ದೇವರ ಎತ್ತುಗಳಿಗೆ ಮೇವು ಪೂರೈಸಿದ ಸಚಿವ ಶ್ರೀರಾಮುಲು

ಸತತ ಬರಕ್ಕೆ ತುತ್ತಾಗಿರುವ ಈ ಜಿಲ್ಲೆಯಲ್ಲಿ ಗೋಶಾಲೆ ತೆರೆದರೂ ಇವುಗಳಿಗೆ ಸಮರ್ಪಕ ಹುಲ್ಲು ಸಿಗುವುದಿಲ್ಲ. ಇವೆಲ್ಲಾ ಸಮಸ್ಯೆಗಳ ನಡುವೆ ಜಿಲ್ಲೆ ಅರಣ್ಯ ಪ್ರದೇಶಗಳಲ್ಲಿ ಮೇವಿಲ್ಲದೇ ಹೊಣ ಹುಲ್ಲಿನ ಸರಬರಾಜು ಇಲ್ಲದೆ ದೇವರ ಎತ್ತುಗಳು ಉಪವಾಸವೇ ನರಳುವಂತಾಗಿದೆ.

news18-kannada
Updated:June 2, 2020, 8:05 AM IST
ಮೇವಿಲ್ಲದೆ ನರಳುತ್ತಿದ್ದ ದೇವರ ಎತ್ತುಗಳಿಗೆ ಮೇವು ಪೂರೈಸಿದ ಸಚಿವ ಶ್ರೀರಾಮುಲು
ಮೇವು ಒದಗಿಸಿರುವ ಶ್ರೀರಾಮುಲು
  • Share this:
ಚಿತ್ರದುರ್ಗ(ಜೂ.02): ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಇಲಾಖೆ ಸಚಿವ ಬಿ.ಶ್ರೀರಾಮುಲು ಅವರ ಸ್ವ ಕ್ಷೇತ್ರ ಮೊಳಕಾಲ್ಮೂರು ತಾಲ್ಲೂಕಿನ ರಾಯಪುರ ಮ್ಯಾಸರ ಹಟ್ಟಿ ಗ್ರಾಮದ ಬಳಿ  ಸಮರ್ಪಕ ಮೇವು ನೀರಿಲ್ಲದೆ ನರಳುತ್ತಿದ್ದ  ದೇವರ ಎತ್ತುಗಳಿಗೆ ಸೋಮವಾರ ಸಚಿವ ಶ್ರೀರಾಮುಲು ಮೇವು ಕಳುಹಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ  ಬುಡಕಟ್ಟು ಸಂಸ್ಕೃತಿ ಹೊಂದಿರುವ ಸಮುದಾಯಗಳೇ ಹೆಚ್ಚಾಗಿವೆ. ಒಂದೊಂದು ಸಮುದಾಯವೂ ಒಂದೊಂದು ದೇವರಿಗೆ ನಡೆದುಕೊಂಡು, ಅದರ ವಿಭಿನ್ನ ಆಚರಣೆಗಳನ್ನ ತಾತ ಮುತ್ತಾನ ಕಾಲದಿಂದಲೂ ಆಚರಿಸುತ್ತಲೇ ಬಂದಿದ್ದಾರೆ. ಅದರಲ್ಲಿ ಮ್ಯಾಸ ನಾಯಕ ಸಮುದಾಯದ ಜನರು ಗ್ರಾಮೀಣ ಸಂಸ್ಕೃತಿಯಂತೆ  ಒಂದು ಕಟ್ಟೆ ಮನೆಯ ಮನೆ ವದೇವರಿಗೆ ಇಷ್ಟಾರ್ಥ ಸಿದ್ದಿಗಾಗಿ ಹರಕೆ ಹೊತ್ತು ಅದು ಈಡೇರಿದ ಮೇಲೆ ಆ ಹರಕೆಯನ್ನ  ತೀರಿಸುವುದು ವಾಡಿಕೆ.

ಅದರಂತೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ ಸೇರಿದಂತೆ ಹಲವೆಡೆ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯನ್ನ ಪೂಜಿಸಲಾಗಿದೆ. ಹೀಗೆ ಪೂಜಿಸುವ ಮನೆದೇವರಿಗೆ ಹರಕೆಯ ರೂಪದಲ್ಲಿ ಮನೆಯಲ್ಲಿಯೇ ಹುಟ್ಟಿದ ಹಸುವಿನ ಕರು, ಅಥವಾ ಹೋರಿ ಕರುವನ್ನ ಹರಕೆ ತೀರಿಸಲು ಬಿಟ್ಟಿದ್ದಾರೆ. ಆದರೆ ಹೀಗೆಬಿಟ್ಟ ಹಸುಗಳಿ ಅರಣ್ಯ ಭೂಮಿಯೇ ಆಸರೆ. ವರ್ಷದ ಮೊದಲಿಂದ ಕೊನೆಯವರೆಗೂ ಆ ಕಾಡು ಅರಣ್ಯ ಭೂಮಿಯ ಮೇವು ಮಾತ್ರವೇ ಇವುಗಳಿಗೆ ಆಸರೆ.

ಆದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಐದಾರು ವರ್ಷಗಳಿಂದ ಮಳೆಯೇ ಸಮರ್ಪಕವಾಗಿ ಬಂದಿಲ್ಲ. ಹಾಗಾಗಿ ಅಷ್ಟೋ ಇಷ್ಟೂ ಬೆಳೆಯುತ್ತಿದ್ದ ಹುಲ್ಲೂ ಕೂಡಾ ಬೆಳೆದಿಲ್ಲ. ಅಲ್ಲದೆ ದೇವರ ಎತ್ತುಗಳ ರಕ್ಷಣೆಗಾಗಿ  ಭಕ್ತರು ನೀಡಿದ ಹುಲ್ಲು ಸಪ್ಪೆಯೂ ಖಾಲಿಯಾಗಿ ಬಿಡುತ್ತೆ. ಇವೆಲ್ಲಾ ಕಾರಣಗಳಿಂದ ದೇವರ ಎತ್ತುಗಳು ಮೇವು ಇಲ್ಲದೆ ಪರದಾಡುವಂತಾಗಿದೆ.

ಸತತ ಬರಕ್ಕೆ ತುತ್ತಾಗಿರುವ ಈ ಜಿಲ್ಲೆಯಲ್ಲಿ ಗೋಶಾಲೆ ತೆರೆದರೂ ಇವುಗಳಿಗೆ ಸಮರ್ಪಕ ಹುಲ್ಲು ಸಿಗುವುದಿಲ್ಲ. ಇವೆಲ್ಲಾ ಸಮಸ್ಯೆಗಳ ನಡುವೆ ಜಿಲ್ಲೆ ಅರಣ್ಯ ಪ್ರದೇಶಗಳಲ್ಲಿ ಮೇವಿಲ್ಲದೇ ಹೊಣ ಹುಲ್ಲಿನ ಸರಬರಾಜು ಇಲ್ಲದೆ ದೇವರ ಎತ್ತುಗಳು ಉಪವಾಸವೇ ನರಳುವಂತಾಗಿದೆ. ಅಷ್ಟೆ ಅಲ್ಲದೇ  ಮೇವು ನೀರಿನ ಕೊರತೆಯಿಂದ ಕಳೆದ ಒಂದು ತಿಂಗಳಿನಿಂದ ಐದಾರು ರಾಸುಗಳು ಸಾವನ್ನಪ್ಪಿವೆ. ಈ ಕುರಿತು ಜಿಲ್ಲಾಡಳಿತದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ರೂ ಸಮಸ್ಯೆ ಮಾತ್ರ ಬಗೆಹರಿದಿರಲಿಲ್ಲ.

ಬೀದರ್‌ನಲ್ಲಿ ನೂತನ ಕೋವಿಡ್-19 ಪ್ರಯೋಗಾಲಯ ಉದ್ಘಾಟಿಸಿದ ಸಚಿವ ಪ್ರಭು ಚವ್ಹಾಣ್

ಈ ದೇವರ ಎತ್ತುಗಳ ಸಮಸ್ಯೆ ಕುರಿತು ನ್ಯೂಸ್ನ18 ಕನ್ನಡದಲ್ಲಿ ವರದಿ ಪ್ರಸಾರ ಆಗಿತ್ತು. ವರದಿ ಪ್ರಸಾರದ ಬೆನ್ನಲೇ ಎಚ್ಚೆತ್ತ ಸಚಿವ ಬಿ.ಶ್ರೀ ರಾಮುಲು ಕೂಡಲೇ ಮಾನವೀಯತೆಯಿಂದ ನಾಲ್ಕು ಲೋಡ್ ರಾಗಿ, ಹುಲ್ಲು ಸೇರಿದಂತೆ, ಮೆಕ್ಕೆ ಜೋಳದ ಸಪ್ಪೆ, ಬತ್ತದ ಹುಲ್ಲನ್ನ ಕಳುಹಿಸಿದ್ದಾರೆ. ಅಷ್ಟೇ ಅಲ್ಲದೇ ಮೂಕ ಪ್ರಾಣಿಗಳ ರೋಧನೆ ಮತ್ತೆಂದೂ ಕಾಣದಂತೆ ಮೇವು ನೀಡುವ ಭರವಸೆ ನೀಡಿದ್ದಾಂತೆ.ಈ ಕುರಿತು ಮಾತನಾಡಿರುವ ದೇವರ ಎತ್ತುಗಳನ್ನು ಆರೈಕೆ ಮಾಡುವ ಕಿಲಾರಿಗಳು ಹಾಗೂ ಗ್ರಾಮಸ್ಥರು ಸಮರ್ಪಕ ಮೆರವು ಕಳುಹಿಸುವುದಾಗಿ ಸಚಿವ ಶ್ರೀರಾಮುಲು ಅವರು ಹೇಳಿ ಭರವಸೆ ನೀಡಿದ್ದಾರೆ ಎಂದಿದ್ದಾರೆ. ಒಟ್ಟಾರೆ ಅರಣ್ಯ ಪ್ರದೇಶ, ಹಾಗೂ ದಾನಿಗಳ, ಭಕ್ತರಿಂದಲೂ ಮೇವು ಸಿಗದೆ ರೋಧಿಸುತ್ತಿದ್ದ ಮೂಕ ಪ್ರಾಣಿಗಳಿಗೆ  ಸಚಿವ ಶ್ರೀ ರಾಮುಲು ಮೇವು ಪೂರೈಕೆ ಮಾಡಿ ಸಮಯ ಪ್ರಜ್ಞೆಯ ಜೊತೆ ಕರ್ತವ್ಯದ ಮಾನವೀಯತೆಯನ್ನೂ ಮೆರೆದಿದ್ದಾರೆ

ಮೇವಿಲ್ಲದೆ ನರಳುತ್ತಿದ್ದ ದೇವರ ಎತ್ತುಗಳು ಈಗ ಹೊಟ್ಟೆ ತುಂಬಾ ಮೇವು ತಿನ್ನಬಹುದಾಗಿದೆ. ಇನ್ನು ಮುಂದಾದರೂ ಗೋ ಶಾಲೆಗಳ ಮೂಲಕ ದೇವರ ಎತ್ತುಗಳಿಗೆ ಮೇವು ಸಿಗುವಂತೆ ಆಗಲಿ ಎಂಬುದು ಸ್ಥಳಿಯರ ಆಗ್ರಹ.
First published: June 2, 2020, 7:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories