ಮರಾಠಿ ಪ್ರೇಮ ಮೆರೆದಿದ್ದ ಸಚಿವ ಶ್ರೀಮಂತ ಪಾಟೀಲ ಯೂಟರ್ನ್‌; ತಪ್ಪು ಮುಚ್ಚಿಕೊಳ್ಳಲು ಸಮಜಾಯಿಷಿ

ಕನ್ನಡದ ನೆಲದಲ್ಲಿ ಸಚಿವರ ಮರಾಠಿ ಪ್ರೇಮದ ಕುರಿತು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳು ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಸಚಿವ ಶ್ರೀಮಂತ ಪಾಟೀಲ  ಸಮಜಾಯಿಷಿ ನೀಡಿ ಜಾರಿಕೊಳ್ಳಲು ಯತ್ನಿಸಿದ್ದಾರೆ.

news18-kannada
Updated:August 2, 2020, 2:28 PM IST
ಮರಾಠಿ ಪ್ರೇಮ ಮೆರೆದಿದ್ದ ಸಚಿವ ಶ್ರೀಮಂತ ಪಾಟೀಲ ಯೂಟರ್ನ್‌; ತಪ್ಪು ಮುಚ್ಚಿಕೊಳ್ಳಲು ಸಮಜಾಯಿಷಿ
ಸಚಿವ ಶ್ರೀಮಂತ ಪಾಟೀಲ್.
  • Share this:
ಬೆಳಗಾವಿ: ಕರ್ನಾಟಕದ ನೆಲದಲ್ಲೆ ಇದ್ದು ಕನ್ನಡ ಬಳಕೆ ಮಾಡದೆ ಕೊರೋನಾ ಸಂದರ್ಭದಲ್ಲಿ ಸಾಮಾಜಿಕ ಅಂತರ ಗಾಳಿಗೆ ತೂರಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳಿಗೇರಿ ಗ್ರಾಮದ ಹೊರ ವಲಯದಲ್ಲಿ ಸಕ್ಕರೆ ಕಾರ್ಖಾನೆಗೆ ಭೂಮಿ ಪೂಜೆ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು. 

ಕರ್ನಾಟಕ ಹಾಗೂ ಮಹಾರಾಷ್ಟ್ರದ  ಗಡಿಯಲ್ಲಿ ಮಹಾರಾಷ್ಟ್ರದ ಕೃಷಿ ಮಂತ್ರಿ ವಿಶ್ವಜೀತ ಕದಮ್ ಒಡೆತನದ ಸಕ್ಕರೆ ಕಾರ್ಖಾನೆಗೆ ಮಹಾರಾಷ್ಟ್ರದ ಎಮ್ ಎಲ್ ಸಿ ಮೋಹನರಾವ್ ಕದಮ್, ಜತ್ತ ಶಾಸಕ ವಿಕ್ರಮ ಸಾವಂತ, ಸೇರಿದಂತೆ ಹಲವಾರು ಗಣ್ಯರು ಆಗಮಿಸಿದ್ದರು

ಅದೆ ಕಾರ್ಯಕ್ರಮಲ್ಲಿ ನಮ್ಮ ರಾಜ್ಯದ ಜವಳಿ ಮತ್ತು ಅಲ್ಪ ಸಂಖ್ಯಾತ ಸಚಿವ ಶ್ರೀಮಂತ ಪಾಟೀಲ ಕೂಡ ಭಾಗಿಯಾಗಿದ್ದರು. ಇನ್ನು ಕಾರ್ಯಕ್ರಮ ಕರ್ನಾಟಕ ರಾಜ್ಯದಲ್ಲೆ ನಡೆದರು ಒಂದೆ ಒಂದು ಬೋರ್ಡ್ ಕೂಡ ಕನ್ನಡದಲ್ಲಿ ಹಾಕಿರಲಿಲ್ಲ. ಸ್ವಾಗತ ಕೋರುವ ಬೋರ್ಡ್ ನಿಂದ ಹಿಡಿದು ಸ್ಟೇಜ್ ಮೇಲೆ ಹಾಕಲಾದ ಬೋರ್ಡ್ ವರೆಗೆ ಸಂಪೂರ್ಣ ಮರಾಠಿಮಯ ವಾಗಿತ್ತು. ಇನ್ನು ನಮ್ಮ ಸಚಿವರು ಸಹ ಮರಾಠಿಗರನ್ನ ಮೆಚ್ಚಿಸಲು ಕನ್ನಡ ಮರೆತು ಈಡಿ ಕಾರ್ಯಕ್ರದಲ್ಲಿ ಮರಾಠಿ ಪ್ರೇಮವನ್ನ ಮೇರೆದಿದ್ದದ್ದರು. ತಮ್ಮ ಭಾಷಣವನ್ನು ಮರಾಠಿಯಲ್ಲೆ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.

ಕನ್ನಡದ ನೆಲದಲ್ಲಿ ಸಚಿವರ ಮರಾಠಿ ಪ್ರೇಮದ ಕುರಿತು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳು ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಸಚಿವ ಶ್ರೀಮಂತ ಪಾಟೀಲ  ಸಮಜಾಯಿಷಿ ನೀಡಿ ಜಾರಿಕೊಳ್ಳಲು ಯತ್ನಿಸಿದ್ದಾರೆ. ಮಹಾರಾಷ್ಟ್ರದಿಂದ ಬಂದಿದ್ದ ಅವರಿಗೆ ಗೊತ್ತಿಲ್ಲದೆ ಹೀಗೆ ಮಾಡಿದ್ದಾರೆ ನಾನು ಅವರಿಗೆ ಬುದ್ದಿ ಹೇಳಿದ್ದೇನೆ, ಇಲ್ಲಿ ಕನ್ನಡ ಬಳಕೆ ಮಾಡಬೇಕು, ಪ್ರತಿಯೊಂದು ಬೋರ್ಡ್ ಗಳನ್ನು ಕನ್ನಡದಲ್ಲೇ ಹಾಕಬೇಕು ಜೊತೆಗೆ ಕನ್ನಡ ಮಾತನಾಡುವವರನ್ನ ಕೆಲಸಕ್ಕೆ ಇಟ್ಟುಕೊಳ್ಳಿ ಎಂದು ಅವರಿಗೆ ಹೇಳಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ : ಹಾವೇರಿಯಲ್ಲೊಂದು ಮನಕಲಕುವ ಘಟನೆ; ಹಬ್ಬಕ್ಕೆಂದು ಊರಿಗೆ ಬಂದಿದ್ದ ಇಬ್ಬರು ಯುವತಿಯರು ತುಂಗೆಯ ಪಾಲು

ಇನ್ನು ಮರಾಠಿಯಲ್ಲಿ ಭಾಷಣ ಮಾಡಿದ ವಿಚಾರವಾಗಿ ಮಾತನಾಡಿದ ಪಾಟೀಲ, "ಮರಾಠಿ ಮಾತನಾಡಿದ್ರೆ ತಪ್ಪೆನಿಲ್ಲ. ಕೆಲವರಿಗೆ ಭಾಷೆ ತಿಳಿಯಲ್ಲ ಅಂತಲ್ಲಿ ಮರಾಠಿ ಮಾತನಾಡುತ್ತೇನೆ. ಕೆಲವರಿಗೆ ಕನ್ನಡ ಮರಾಠಿ ಎರಡು ಬರಲ್ಲ ಅಂತಲ್ಲಿ ಹಿಂದಿ ಮಾತಾಡುತ್ತೇನೆ. ಮುಂದೆ ಯಾರು ಹೇಗೆ ಬರುತ್ತಾರೊ ಹಾಗೆ ಮಾತನಾಡುತ್ತೆನೆ. ಯಾವುದೇ ಭಾಷೆಯನ್ನ ದ್ವೇಷ ಮಾಡಲ್ಲ. ಆದರೆ, ನನ್ನ ಮಾತೃ ಭಾಷೆ ಕನ್ನಡ" ಎನ್ನುವ ಮೂಲಕ ಕನ್ನಡಿಗರ ಆಕ್ರೋಶದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ಒಟ್ಟಿನಲ್ಲಿ ಕನ್ನಡದ ನೆಲದಲ್ಲಿ ನಿಂತು ಕನ್ನಡ ಬಳಕೆ ಮಾಡದೆ ಮರಾಠಿ ಪ್ರೇಮ ಮೇರೆದಿದ್ದ ಸಚಿವ ಶ್ರೀಮಂತ ಪಾಟೀಲ, ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಯೂ ಟರ್ನ್ ಹೊಡೆದಿದ್ದಾರೆ. ಇನ್ನಾದರೂ ನಮ್ಮ ರಾಜಕಾರಣಿಗಳು ಕನ್ನಡ ಪ್ರೇಮ ಮೆರೆಯಲಿ, ಕುಂಟು ನೆಪಗಳನ್ನು ಹೇಳದೆ ಕನ್ನಡವನ್ನೇ ಬಳಸಲಿ ಎಂಬುದು ನಮ್ಮ ಆಶಯ.
Published by: MAshok Kumar
First published: August 2, 2020, 2:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading