HOME » NEWS » District » MINISTER SRIMANTA PATIL CRITICIZES SHIV SENA FOR STATEMENT ON BELAGAVI LSC SNVS

ಉದ್ಧವ್ ಠಾಕ್ರೆಗೆ ಕೆಲಸವಿಲ್ಲ, ಅದಕ್ಕೆ ಬೆಳಗಾವಿ ನಮ್ಮದು ಎನ್ನುತ್ತಾರೆ: ಸಚಿವ ಶ್ರೀಮಂತ ಪಾಟೀಲ್ ಕಿಡಿ

ಬೆಳಗಾವಿ, ಕಾರವಾರ, ನಿಪ್ಪಾಣಿ ಮೊದಲಾದ ಮರಾಠಿ ಭಾಷಿಗರ ಪ್ರಾಬಲ್ಯ ಇರುವ ಪ್ರದೇಶಗಳನ್ನ ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ ಎಂದು ಉದ್ಧವ್ ಠಾಕ್ರೆ ನೀಡಿದ ಹೇಳಿಕೆಯನ್ನು ಸಚಿವ ಶ್ರೀಮಂತ ಪಾಟೀಲ್ ಬಲವಾಗಿ ಖಂಡಿಸಿದ್ದಾರೆ.

news18-kannada
Updated:January 21, 2021, 10:04 AM IST
ಉದ್ಧವ್ ಠಾಕ್ರೆಗೆ ಕೆಲಸವಿಲ್ಲ, ಅದಕ್ಕೆ ಬೆಳಗಾವಿ ನಮ್ಮದು ಎನ್ನುತ್ತಾರೆ: ಸಚಿವ ಶ್ರೀಮಂತ ಪಾಟೀಲ್ ಕಿಡಿ
ಶ್ರೀಮಂತ ಪಾಟೀಲ್
  • Share this:
ಬೆಳಗಾವಿ: ರಾಜ್ಯದ ವಿರುದ್ದ ನಾಲಿಗೆ ಹರಿ ಬಿಟ್ಟಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ ಠಾಕ್ರೆ ವಿರುದ್ಧ ಅಲ್ಪಸಂಖ್ಯಾತ ಹಾಗೂ ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ್ ಹರಿ ಹಾಯ್ದಿದ್ದಾರೆ. ಉದ್ದವ ಠಾಕ್ರೆ ಖಾಲಿ ಇದ್ದಾರೆ. ಕೆಲಸವಿಲ್ಲದೆ ಏನೇನೂ ಮಾತನಾಡುತ್ತಿದ್ದಾರೆ ಎಂದು ಸಚಿವರು ತಿರುಗೇಟು ನೀಡಿದ್ದಾರೆ. ತಮ್ಮ ಸ್ವ ಕ್ಷೇತ್ರ ಕಾಗವಾಡದಲ್ಲಿ ಮಾತನಾಡಿದ ಶ್ರೀಮಂತ ಪಾಟೀಲ, ಠಾಕ್ರೆ ಖಾಲಿ ಇದ್ದಾರೆ. ಹಾಗಾಗಿ ಬೆಳಗಾವಿ, ನಿಪ್ಪಾಣಿ ನಮ್ಮದು ಎಂದು ಟ್ವೀಟ್ ಮಾಡುತ್ತಿದ್ದಾರೆ. ಖಾಲಿ ಇದ್ದವರು ಮಾಡುವಂತಹ ಕೆಲಸ ಇದು. ಅದೇನೂ ಆಗುವ ಕೆಲಸ ಅಲ್ಲ. ಇದೊಂದು ರಾಜಕೀಯ ಹೇಳಿಕೆ ಅಷ್ಟೇ. ಯಾವುದೂ ಲೆಕ್ಕಕ್ಕಿಲ್ಲ. ಇಂತಹ ಹೇಳಿಕೆಗಳನ್ನ ಯೋಚನೆ ಮಾಡುವ ಅಗತ್ಯವೂ ಇಲ್ಲ ಎಂದು ಹೇಳಿದ್ದಾರೆ.

ಎರಡು ದಿನಗಳ ಹಿಂದೆ ಪುಂಡ ಶಿವಸೇನೆ ತನ್ನ ಉದ್ದಟತನ ತೋರಲು ಮುಂದಾಗಿತ್ತು. ಬೆಳಗಾವಿ ನಗರದಲ್ಲಿ ಉದ್ದಟತನ ತೋರಲು ಮುಂದಾಗಿದ್ದ ಶಿವಸೇನೆ ಎಂ.ಈ.ಎಸ್ ಕಾರ್ಯಕರ್ತರ ಹುತಾತ್ಮ ದಿನಾಚರಣೆ ನಡೆಸಲು ಮುಂದಾಗಿತ್ತು. ಇದೇ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಂದ್ರ ಯಡ್ರಾಂವಕರ್ ಕೂಡಾ ಭಾಗಿಯಾಗಲು ಆಗಮಿಸಿದ್ದರು. ಆದರೆ ಕರ್ನಾಟಕ ಗಡಿಯ ನಿಪ್ಪಾಣಿ ತಾಲೂಕಿನ ಕುಗನೊಳ್ಳಿ ಟೋಲ್ ಬಳಿಯೆ ಅವರನ್ನ ತಡೆಯಲಾಗಿತ್ತು. ಇಷ್ಟಕ್ಕೆ ಕೆರಳಿದ ಪುಂಡ ಶಿವಸೇನೆ ಗಡಿಯಲ್ಲಿ ನಿಂತು ರಾಜ್ಯದ ವಿರುದ್ದ ನಾಲಿಗೆ ಹರಿಬಿಟ್ಟಿದ್ದರು. ಎಷ್ಟೇ ಪುಂಡಾಟ ಪ್ರದರ್ಶನ ಮಾಡಿದರೂ ಸಹ ಪೊಲೀಸರು ಸೊಪ್ಪು ಹಾಕದಿದ್ದಾಗ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ತೆರಳಿ ಕರ್ನಾಟಕ ವಿರುದ್ಧ ಹರಿಹಾಯ್ದಿದ್ದಾರೆ. ನಮ್ಮ ಸಚಿವರನ್ನ ಬೆಳಗಾವಿಗೆ ಬಿಟ್ಟಿಲ್ಲ ಎಂದೆಲ್ಲಾ ಸುಳ್ಳು ಹೇಳುತ್ತಲೇ ತನ್ನ ರಾಜಕೀಯ ಬೇಳೆ ಬೆಯಿಸಿಕೊಳ್ಳಲು ಶಿವಸೇನೆ ಮುಂದಾಗಿತ್ತು. ಇದಕ್ಕೆ ಸ್ವತಃ ಮುಖ್ಯ ಮಂತ್ರಿ ಉದ್ದವ ಠಾಕ್ರೆ ಕೂಡ ದನಿಗೂಡಿಸಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಹೇಳಿಕೆ ನೀಡುವ ಮೂಲಕ ಕಿಡಿ ಹೊತ್ತಿಸಿದ್ದರು.

ಇದನ್ನೂ ಓದಿ: ಮಗನ ಸಿನಿಮಾ ಚಿತ್ರೀಕರಣಕ್ಕೆ ಸುಮಲತಾ ರಾಜಕೀಯ ಪ್ರಭಾವ ಆರೋಪ; ಮಂಡ್ಯ ಸಂಸದೆ ವಿರುದ್ದ ರೈತ ಹೋರಾಟಗಾರರ ಆಕ್ರೋಶ

ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಶ್ರೀಮಂತ ಪಾಟೀಲ್, ಅದು ದೊಡ್ಡ ವಿಷಯವಾಗಿದ್ದು, ನಾನು ಅದರ ಬಗ್ಗೆ ಏನು ಹೇಳಲಿ ಎಂದು ನಗುತ್ತಲೆ ಜಾರಿಕೊಂಡಿದ್ದಾರೆ. ತಮ್ಮ ಖಾತೆ ಬದಲಾವಣೆ ಆಗುವ ಸಾಧ್ಯತೆ ಬಗ್ಗೆ ಇರುವ ಸುದ್ದಿ ಕುರಿತು ಪ್ರತಿಕ್ರಿಯಿಸಿದ ಅವರು, ಖಾತೆ ಬದಲಾವಣೆಯ ವಿಚಾರ ನನಗೆ ಗೊತ್ತಿಲ್ಲ. ಅಲ್ಪಸಂಖ್ಯಾತ ಖಾತೆಯಲ್ಲಿ ಒಳ್ಳೆಯ ಕೆಲಸ ಮಾಡಿದ್ದೇನೆ. ಒಳ್ಳೆಯ ಖಾತೆ ಇದ್ದು ಇನ್ನೂ ಹೆಚ್ಚಿನ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡಬೇಕಿದೆ. ಈ ಹಿಂದಿನ ಸಚಿವರು ಅಲ್ಪಸಂಖ್ಯಾತರಿಗೆ ಎಸ್.ಎಸ್.ಎಲ್‌.ಸಿ ಹಾಗೂ ಪಿ.ಯು.ಸಿ ಕಾಲೇಜಗಳಿಗೆ ಮಾತ್ರ ಆಸಕ್ತಿ ತೋರಿಸಿದ್ದಾರೆ. ಆದ್ರೆ, ಈ ಬಾರಿ ನಾನು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ 30 ಐಟಿಐ ಹಾಗೂ ಪಾಲಿಟೆಕ್ನಿಕ್ ಸರ್ಕಾರಿ ಕಾಲೇಜು ಪ್ರಾರಂಭಿಸುವ ಚಿಂತನೆ ನಡೆಸಿದ್ದೇವೆ ಎಂದಿದ್ದಾರೆ.

ವರದಿ: ಲೋಹಿತ್ ಶಿರೋಳ
Published by: Vijayasarthy SN
First published: January 21, 2021, 10:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories