ನಿಪ್ಪಾಣಿ ಕ್ಷೇತ್ರದ ಜನರಿಗೆ ದೀಪಾವಳಿ ಬಂಪರ್ ಗಿಫ್ಟ್ ನೀಡಿದ ರಾಜ್ಯ ಸರ್ಕಾರ; 2052 ಮನೆಗಳ ನಿರ್ಮಾಣಕ್ಕೆ ಶಂಕು ಸ್ಥಾಪನೆ
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರಕ್ಕೆ ವಸತಿ ಇಲಾಖೆ ದೊಡ್ಡ ಗಿಫ್ಟ್ ನೀಡಿದೆ. ನಿಪ್ಪಾಣಿ ನಗರದ ಬಡವರಿಗೆ ಬರೊಬ್ಬರಿ 2052 ಮನೆ ಕಟ್ಟಿಕೊಡಲು ಇಲಾಖೆ ಮುಂದಾಗಿದೆ
news18-kannada Updated:November 11, 2020, 10:23 PM IST

ಮನೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿದ ಸಚಿವ ವಿ ಸೊಮಣ್ಣ
- News18 Kannada
- Last Updated: November 11, 2020, 10:23 PM IST
ಚಿಕ್ಕೋಡಿ(ನವೆಂಬರ್. 11): ದೀಪಾವಳಿ ಎರಡು ದಿನಗಳು ಇರುವಾಗಲೇ ವಸತಿ ಇಲಾಖೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಕ್ಷೇತ್ರದ ಜನರಿಗೆ ಬಂಪರ ಉಡುಗೊರೆಯನ್ನ ನೀಡಿದೆ. ಕಳೆದ ಒಂದು ದಶಕದಿಂದ ನೆನೆಗುದಿಗೆ ಬಿದ್ದಿದ್ದ ಮನೆಗಳ ನಿರ್ಮಾಣದ ಕಾರ್ಯಕ್ರಮ ಇಂದು ಅಧಿಕೃತ ಚಾಲನೆ ಸಿಕ್ಕಿದೆ. ಸ್ವತಃ ವಸತಿ ಇಲಾಖೆ ಸಚಿವರೆ ಬಂದು ಜಿ- 2 ಮಾದರಿಯ ಮನೆಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಕರ್ನಾಟಕದ ಹೆಬ್ಬಾಗಿಲು ಎಂದೆ ಕರೆಸಿಕೊಳ್ಳುವ ನಿಪ್ಪಾಣಿ ನಗರಕ್ಕೆ ವಸತಿ ಇಲಾಖೆ ದೊಡ್ಡ ಗಿಫ್ಟ್ ನೀಡಿದೆ. ನಿಪ್ಪಾಣಿ ನಗರದ ಬಡವರಿಗೆ ಬರೊಬ್ಬರಿ 2052 ಮನೆ ಕಟ್ಟಿಕೊಡಲು ಇಲಾಖೆ ಮುಂದಾಗಿದೆ. ಇದಕ್ಕಾಗಿ 141 ಕೋಟಿ ಮೊತ್ತ ವೆಚ್ಚದ ಯೋಜನೆಗೆ ಹಸಿರು ನಿಶಾನೆ ಸಿಕ್ಕಿದೆ. ನಿಪ್ಪಾಣಿ ನಗರದ ಶಿಂಧೆ ನಗರದಲ್ಲಿ ಇದಕ್ಕಾ 22 ಎಕರೆ ಭೂಮಿಯನ್ನು ನಗರಸಭೆ ನೀಡಿದ್ದು, ಜಿ- 2 ಮಾದರಿಯಲ್ಲಿ ಒಟ್ಟು 2052 ಮನೆಗಳನ್ನ ನಿರ್ಮಾಣ ಮಾಡಿ ಬಡವರಿಗೆ ನೀಡಲು ಇಲಾಖೆ ಮುಂದಾಗಿದೆ.
ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಚಿವ ವಿ ಸೋಮ್ಮಣ್ಣ ನಮ್ಮ ಸರ್ಕಾರ ಬಂದಾದ ಮೇಲೆ ರಾಜ್ಯದ ಪ್ರತಿಯೊಬ್ಬರಿಗೂ ಸೂರು ಒದಗಿಸುವ ಕೆಲಸ ಒಂದು ವರ್ಷದಲ್ಲಿ ಮುಗಿಸುವ ಯೋಜನೆ ಹಾಕಿದ್ದೇವೆ. ಯಡಿಯೂರಪ್ಪನವರು ನನಗೆ ವಸತಿ ಖಾತೆ ಕೊಟ್ಟ ಮೇಲೆ ರಾಜ್ಯದಲ್ಲಿ 47 ಸಾವಿರ ಮನೆ ಕಟ್ಟುವ ಯೋಜನೆಗಳಿಗೆ ಚಾಲನೆ ಕೊಟ್ಟಿದ್ದೇನೆ ಎಂದರು. ಇನ್ನು 67 ಸಾವಿರ ಮನೆಗಳನ್ನ ಪಟ್ಟಣದ ವ್ಯಾಪ್ತಿಯಲ್ಲಿ ಒಂದು ವರ್ಷದಲ್ಲಿ ಕಟ್ಟುವ ನಿರ್ಧಾರ ಇದೆ. ನಗರ ಪ್ರದೇಶಗಳಲ್ಲಿ ಸರ್ಕಾರಿ ಜಾಗ ಇದ್ದರೆ ಸಾಕು ಯಾರಾದರೂ ಕೊಳ್ಳೆ ಹೊಡೆಯಲು ಯೋಚನೆ ಮಾಡುತ್ತಾರೆ. ಆದರೆ, ನಿಪ್ಪಾಣಿ ನಗರಸಭೆ 22 ಎಕರೆ ಜಮೀನನ್ನು ನಗರದಲ್ಲಿ ಕೊಟ್ಟಿದ್ದಾರೆ. ನಿಪ್ಪಾಣಿ ಮೊದಲಿನ ನಿಪ್ಪಾಣಿಯಾಗಿ ಉಳಿದಿಲ್ಲ. 20 ವರ್ಷದಲ್ಲಿ ನಿಪ್ಪಾಣಿ ಜಿಲ್ಲಾ ಕೇಂದ್ರ ಮಾಡವ ಹಂತಕ್ಕೆ ಬೆಳೆದಿದೆ. ನಗರ ವಸತಿ ಪ್ರದೇಶಗಳ ಸುಧಾರಣೆಗೆ 10 ಕೊಟ್ಟಿ ಹೆಚ್ಚುವರಿ ಹಣ ನೀಡುವ ಭರವಸೆ ನೀಡಿದರು.
ವಸತಿ ಇಲಾಖೆಯಲ್ಲಿ 35 ಸಾವಿರ ಕೋಟಿ ರೂಪಾಯಿ ಹಣವಮ್ನ ವಸತಿ ಯೋಜನೆಗೆ ಮೀಸಲಿಡಲಾಗಿದೆ. 1400 ಕೋಟಿ ರೂಪಾಯಿನ್ನ ಬರುವ ದಿನಗಳಲ್ಲಿ ಖರ್ಚು ಮಾಡಲು ನಿರ್ಧಾರ ಮಾಡಲು ನಿರ್ಧರಿಸಿದ್ದೇವೆ. ಪುರಸಭೆ ಹಾಗೂ ನಗರಸಭೆ ಬಳಿ ವಸತಿ ಯೋಜನೆಗಳಿಗೆ ದುಡ್ಡು ಕೇಳಿದರು ಕೊಡಲ್ಲ. ಇವತ್ತು ನಗರ ಹಾಗೂ ಪುರಸಭೆಗಳ ಬಳಿ ಸಿಬ್ಬಂದಿಗಳಿಗೆ ಸಂಬಳ ನೀಡಲು ದುಡ್ಡಿಲ್ಲ. ಆದರೆ, ನಿಪ್ಪಾಣಿ ನಗರಸಭೆ ಒಳ್ಳೆಯ ಕೆಲಸ ಮಾಡಿ ದುಡ್ಡು ತುಂಬಿದೆ. ವಸತಿ ಯೋಜನೆ ಅಡಿಯಲ್ಲಿ ಮನೆಗಳನ್ನ ಪಡೆದು ಮನೆಗಳ ಮಾರಾಟ ಮಾಡಬೇಡಿ ಎಂದು ಫಲಾನುಭವಿಗಳಿಗೆ ಕಿವಿ ಮಾತು ಹೇಳಿದರು.
ಇದನ್ನೂ ಓದಿ : ಚೆಲುವ ಚಾಮರಾಜನಗರಕ್ಕೆ ಮತ್ತಷ್ಟು ಪವರ್: ಜಿಲ್ಲೆಯ ಪ್ರವಾಸೋದ್ಯಮದ ಪ್ರಮೋಷನಲ್ ವಿಡಿಯೋ ಸಿದ್ದ
ಇನ್ನು ಪ್ರವಾಹ ಬಂದಾಗ ಸಾಕಷ್ಟು ಮನೆಗಳು ಬಿದ್ದಿದ್ದವು ಸಾಕಷ್ಟು ಜನರಿಗೆ ಮನೆಗಳನ್ನ ನೀಡಿದ್ದೇವೆ. ಜಿಲ್ಲೆಯಲ್ಲಿ ಇನ್ನು ಬಿಟ್ಟು ಹೋಗಿರುವ ಮನೆಗಳು ಇದಾವೆ ಮಾರ್ಚ್ ಬಳಿಕ ಮತ್ತೊಮ್ಮೆ ಸರ್ವೆ ಕೆಲಸ ಮಾಡಿಸುತ್ತೇವೆ. ಸಾಕಷ್ಟು ಪ್ರವಾಹದಲ್ಲಿ ಬಿದ್ದಿರುವ ಮನೆ ಕಟ್ಟಿಕೊಳ್ಳಲು ಮೊದಲನೆ ಕಂತಿನ ಹಣ ಪಡೆದಿದ್ದಾರೆ. ಆದರೆ, ಇದುವರೆಗೂ ಮನೆಗಳನ್ನ ಮಾತ್ರ ಕಟ್ಟಿಕೊಂಡಿಲ್ಲ. ಅಂತಹ ಫಲಾನುಭವಿಗಳು ಕೂಡಲೇ ಮನೆಗಳನ್ನ ಕಟ್ಟಲು ಮುಂದಾಗಬೇಕು. ಎರಡನೇ ಹಾಗೂ ಮೂರನೇ ಕಂತಿನ ಹಣ ಜಮಾ ಮಾಡುತ್ತೇವೆ ಎಂದಿದ್ದಾರೆ.
ಇನ್ನು ಸಚಿವ ಸೋಮಣ್ಣ ಬೆಳಗಾವಿ ಜಿಲ್ಲಾಧಿಕಾರಿಯವರನ್ನು ಹಾಡಿ ಹೊಗಳಿದರು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ನಮ್ಮ ಜಿಲ್ಲೆಯವರು. ಅವರು ಒಳ್ಳೆಯವರು ಅವರನ್ನ ಇನ್ನು ಮೂರು ವರ್ಷ ಇಲ್ಲಿಯೆ ಇಟ್ಟುಕೊಳ್ಳಿ ಒಳ್ಳೆಯ ಕೆಲಸ ಮಾಡಲಿದ್ದಾರೆ. ಹಿರೇಮಠ ಅವರ ಕೆಲಸ ಕಾರ್ಯಗಳನ್ನು ನಾನು ಕಂಡಿದ್ದೇನೆ. ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಒಳ್ಳೆಯ ಕೆಲಸ ಮಾಡಿ ಇಲ್ಲಿಗೆ ಬಂದಿದ್ದಾರೆ ಎಂದು ತಿಳಿಸಿದರು.
ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಚಿವ ವಿ ಸೋಮ್ಮಣ್ಣ ನಮ್ಮ ಸರ್ಕಾರ ಬಂದಾದ ಮೇಲೆ ರಾಜ್ಯದ ಪ್ರತಿಯೊಬ್ಬರಿಗೂ ಸೂರು ಒದಗಿಸುವ ಕೆಲಸ ಒಂದು ವರ್ಷದಲ್ಲಿ ಮುಗಿಸುವ ಯೋಜನೆ ಹಾಕಿದ್ದೇವೆ. ಯಡಿಯೂರಪ್ಪನವರು ನನಗೆ ವಸತಿ ಖಾತೆ ಕೊಟ್ಟ ಮೇಲೆ ರಾಜ್ಯದಲ್ಲಿ 47 ಸಾವಿರ ಮನೆ ಕಟ್ಟುವ ಯೋಜನೆಗಳಿಗೆ ಚಾಲನೆ ಕೊಟ್ಟಿದ್ದೇನೆ ಎಂದರು.