news18-kannada Updated:November 22, 2020, 7:24 AM IST
ಕಾರ್ಮಿಕ ಮತ್ತು ಸಕ್ಕರೆ ಸಚಿವರಾದ ಶಿವರಾಮ್ ಹೆಬ್ಬಾರ್
ಕಾರವಾರ; ತೀವ್ರ ಕುತೂಹಲ ಕೆರಳಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಬೆಂಬಲಿತ ಹಾಗೂ ಸಹಕಾರ ಭಾರತಿ ನೇತೃತ್ವದ ತಂಡಕ್ಕೆ ಒಲಿದಿದೆ. ಸಚಿವ ಶಿವರಾಮ ಹೆಬ್ಬಾರ್ ಅಧ್ಯಕ್ಷ ರಾದ್ರೆ ಉಪಾಧ್ಯಕ್ಷ ರಾಗಿ ಸ್ಥಳೀಯ ಮೋಹನದಾಸ್ ನಾಯಕ್ ಆಗಿದ್ದಾರೆ. ರಾಜ್ಯ ವಿಧಾನಸಭಾ ಕ್ಷೇತ್ರದ ಚುನಾವಣೆಕ್ಕಿಂತಲೂ ಹೆಚ್ಚು ಬಿರುಸು ಪಡೆದು ಅಷ್ಟೇ ಕುತೂಹಲ ಕೆರಳಿಸಿದ್ದ ಕೆಡಿಸಿಸಿ ಬ್ಯಾಂಕಿನ ಚುನಾವಣೆ ಕೊನೆಗೂ ಅಂತ್ಯ ಕಂಡು ಹೆಬ್ಬಾರ್ ಪಾರುಪತ್ಯ ಮೆರೆದಿದ್ದಾರೆ.
ಹೇಗಿತ್ತು ಪೈಪೋಟಿ?ಕೆಡಿಸಿಸಿ ಬ್ಯಾಂಕ್ ಚುನಾವಣೆ ಇಷ್ಟು ವರ್ಷ ಅದರ ಪಾಡಿಗೆ ಅದು ನಡೆಯುತ್ತಿತ್ತು, ಇಲ್ಲಿ ಬಣ ರಾಜಕೀಯ ಪ್ರತಿಷ್ಠೆ ಮುಂದೆ ಬರುತ್ತಿರಲಿಲ್ಲ, ಆದರೆ ಈ ಬಾರಿ ಎಮ್.ಎಲ್.ಸಿ ಎಸ್.ಎಲ್ ಘೊಟ್ನೇಕರ್ ಮತ್ತು ಶಿವರಾಮ್ ಹೆಬ್ಬಾರ ನಡುವೆ ಭಾರಿ ಪೈಪೋಟಿ ಇತ್ತು. ಕೊನೆಗೂ ಹೆಬ್ಬಾರ್ ಸಹಕಾರ ಭಾರತಿ ಸಂಘಟನೆ ಮೂಲಕ ಅವಿರೋಧವಾಗಿ ಆಯ್ಕೆ ಆದರು. ಆರಂಭದಲ್ಲಿ ಎಸ್.ಎಲ್ ಘೋಟ್ನೇಕರ್ ಪ್ರತಿರೋಧ ಒಡ್ಡಿದರಾದರೂ ಕೊನೆಯಲ್ಲಿ ಹೆಬ್ಬಾರ್ ಅವಿರೋಧವಾಗಿ ಆಯ್ಕೆಯಾದರು.
ಏನಂತಾರೆ ಹೆಬ್ಬಾರ್?
ನನ್ನ ಕಳೆದ 30 ವರ್ಷಗಳ ಸಹಕಾರಿ ಕ್ಷೇತ್ರದ ಹಾಗೂ 4 ಅವಧಿಗಳ ಡಿಸಿಸಿ ಬ್ಯಾಂಕ್ ಸದಸ್ಯನಾದ ಅನುಭವವದೊಂದಿಗೆ, ಎಲ್ಲ ನಿರ್ದೇಶಕರ ಸಹಯೋಗದಿಂದ ಜಿಲ್ಲೆಯ ರೈತರ ಹಾಗೂ ಬ್ಯಾಂಕ್ ಗ್ರಾಹಕರಿಗೆ ಇನ್ನೂ ಹೆಚ್ಚಿನ ಗುಣಮಟ್ಟದ, ಪ್ರಾಮಾಣಿಕ ಸೇವೆಯನ್ನು ನೀಡುತ್ತೇನೆ. ಈ ಮೂಲಕ ಕೆಡಿಸಿಸಿ ಬ್ಯಾಂಕ್ನಿಂದ ಇನ್ನಷ್ಟು ಸದೃಢ, ಸಕ್ಷಮ ಆಡಳಿತ ನೀಡುವ ಮೂಲಕ ರಾಜ್ಯಕ್ಕೆ ಮಾದರಿ ಡಿಸಿಸಿ ಬ್ಯಾಂಕ್ ಮಾಡುವ ಗುರಿ ಹೊಂದಿದ್ದೇನೆ ಎಂಬ ಅಭಿಪ್ರಾಯವನ್ನು ಗೆಲುವಿನ ಬಳಿಕ ವ್ಯಕ್ತಪಡಿಸಿದರು.
ಇದನ್ನು ಓದಿ: ಆಡಳಿತ ನಡೆಸುವವರಿಗೆ ಸಂವಿಧಾನ ಗೊತ್ತಿರಬೇಕು, ಆರ್ಎಸ್ಎಸ್ ಅಲ್ಲ; ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಟಾಂಗ್
ಪ್ರತಿಷ್ಠೆ ಬಿಡದ ಹೆಬ್ಬಾರ್
ಹೆಬ್ಬಾರ್ ಕಾಂಗ್ರೆಸ್ ನಲ್ಲಿ ಇದ್ದಾಗ ಕೆಡಿಸಿಸಿ ಭದ್ರಕೋಟೆಯನ್ನು ತಮ್ಮಲ್ಲಿ ಉಳಿಸಿಕೊಂಡಿದ್ದರು. ಆದರೆ ಇವರು ಕಳೆದ ವರ್ಷ ಬಿಜೆಪಿ ಸೇರ್ಪಡೆ ಆದ ಬಳಿಕ ಕೆಡಿಸಿಸಿ ಕೈ ತಪ್ಪುವ ಎಲ್ಲ ಲಕ್ಷಣಗಳು ಇತ್ತು. ಆದ್ರೆ ಜಿದ್ದಿಗೆ ಬಿದ್ದ ಹಬ್ಬಾರ್ ಸಹಕಾರ ಭಾರತಿ ಸಂಘಟನೆಯನ್ನು ಮುಂದಿಟ್ಟುಕೊಂಡು ಈ ಮೂಲಕ ಗೆಲವು ಪಡೆದಿದ್ದಾರೆ, ಕೊನೆಗೂ ಕೆಡಿಸಿಸಿ ತಮ್ಮ ಕಪಿಮುಷ್ಟಿಯಲ್ಲೇ ಉಳಿಸಿಕೊಂಡಿದ್ದಾರೆ.
Published by:
HR Ramesh
First published:
November 22, 2020, 7:24 AM IST