ಕೆಡಿಪಿ ಸಭೆಯಲ್ಲಿ ಮೊಬೈಲ್​ನಲ್ಲಿ ಮಗ್ನವಾಗಿದ್ದ ಅಧಿಕಾರಿ; ತರಾಟೆಗೆ ತೆಗೆದುಕೊಂಡ ಸಚಿವೆ ಶಶಿಕಲಾ ಜೊಲ್ಲೆ!

ಯಾವುದೇ ಇಲಾಖೆಯಲ್ಲಿ ಏನೇ ಪ್ರಸ್ತಾವನೆ ಸಲ್ಲಿಸಿದ್ದರೂ ಅದು ವಿಳಂಬವಾಗುತ್ತಿದ್ದರೆ ಕೂಡಲೇ ನಮ್ಮನ್ನು ಸಂಪರ್ಕಿಸಿ. ಕೃಷಿ ಇಲಾಖೆಯವರೂ ಏನೇ ಸಮಸ್ಯೆ ಇದ್ದರೂ ನಮ್ಮನ್ನು ಸಂಪರ್ಕಿಸುತ್ತಾರೆ. ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಿ ಬೇಡ. ಈ ವಿಷಯವಾಗಿ ಆಯಾ ಇಲಾಖೆಯ ಅಧಿಕಾರಿಗಳು ನನ್ನೊಂದಿಗೆ ಮುಕ್ತವಾಗಿ ಚರ್ಚೆ ಮಾಡಬಹುದು ಎಂದು ಸಚಿವೆ ಶಶಿಕಲಾ ಜೊಲ್ಲೆ ಅವರು ಸಭೆಯಲ್ಲಿ ಹೇಳಿದರು.

ವಿಜಯಪುರದ ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದ ಶಶಿಕಲಾ ಜೊಲ್ಲೆ.

ವಿಜಯಪುರದ ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದ ಶಶಿಕಲಾ ಜೊಲ್ಲೆ.

 • Share this:
  ವಿಜಯಪುರ: ಕೆಡಿಪಿ ಸಭೆ ವೇಳೆ ಮೊಬೈಲ್ ನಲ್ಲಿ ಮುಳುಗಿದ್ದ ಸರ್ವೇ ಅಧಿಕಾರಿಯನ್ನು, ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ನಗರದ ಜಿಪಂ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಸರ್ವೇ ಅಧಿಕಾರಿಯೊಬ್ಬರು ಮೊಬೈಲ್ ನೋಡುತ್ತ ಕುಳಿತ್ತಿದ್ದನ್ನು ಕಂಡ ಸಚಿವೆ ಶಶಿಕಲಾ ಜೊಲ್ಲೆ, ಏನ್ರಿ ಇವರೆ ನೀವು ಯಾವ ಇಲಾಖೆ, ಮೊಬೈಲ್ ನಲ್ಲಿ ಏನ್ ಮಾಡ್ತಾಯಿದಿರಿ? ಮಹತ್ವದ ಕೆಡಿಪಿ ಸಭೆ ನಡೆಸುತ್ತಿದ್ದೇವೆ, ನೀವೇನು ಮಾಡ್ತಾ ಇದಿರಿ? ಈ ರೀತಿ ಮಾಡಿದ್ದರೆ ಜನರಿಗೆ ಏನು ನ್ಯಾಯ ಒದಗಿಸುತ್ತಿರಿ? ನಾವೇನು ಇಲ್ಲಿ ಆಟ ಆಡಲು ಬಂದಿದ್ದೇವಾ? ಎಂದು ತರಾಟೆಗೆ ತೆಗೆದುಕೊಂಡರು. ಸಚಿವರು ಏಕಾಏಕಿ ಹೀಗೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಸರ್ವೇ ಅಧಿಕಾರಿ ಕ್ಷಣ ಹೊತ್ತು ತಬ್ಬಿಬ್ಬಾಗಿ, ಕ್ಷಮಿಸಿ ಮೇಡಂ ಇನ್ನೊಮ್ಮೆ ಹೀಗೆ ಮಾಡೋದಿಲ್ಲ ಎಂದು ಕ್ಷಮಾಪಣೆ ಕೇಳಿದರು.

  ಸಭೆಯಲ್ಲಿ ಅಧಿಕಾರಿಗಳ ಸಖತ್ ನಿದ್ದೆ

  ಇನ್ನು ಕೆಡಿಪಿ ಸಭೆಯಲ್ಲಿ ಗಂಭೀರವಾದ ಚರ್ಚೆ ನಡೆಯುತ್ತಿರುವಾಗ ಕೆಲ ಅಧಿಕಾರಿ ಮಹಾಶಯರು ಸಖತ್ ನಿದ್ದೆಗೆ ಜಾರಿದ್ದರು. ಸಭೆಯಲ್ಲಿ ನಿದ್ದೆಯ ಮಂಪರಲ್ಲೆ ಕೆಲ ಅಧಿಕಾರಿಗಳು ಕುಳಿತಿದ್ದರು. ಇನ್ನು ಕೆಲ ಅಧಿಕಾರಿಗಳು ಪೋನ್​ನಲ್ಲಿ ಬಿಜಿಯಾಗಿದ್ದರು.  ಸಭೆಯಲ್ಲಿ ಚರ್ಚೆ ನಡೆಯುತ್ತಿರುವಾಗಲೇ ಮೊಬೈಲ್​ ಫೋನ್​ನಲ್ಲಿ ಸರ್ವೆ ಅಧಿಕಾರಿ ಪ್ರಕಾಶ ಕಾಂಬಳೆ ಮಾತನಾಡುತ್ತಾ ಕುಳಿತಿದ್ದರು. ಇದನ್ನು ಗಮನಿಸಿದ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಗರಂ ಆದರು.

  ಯಾವುದೇ ಇಲಾಖೆಯಲ್ಲಿ ಏನೇ ಪ್ರಸ್ತಾವನೆ ಸಲ್ಲಿಸಿದ್ದರೂ ಅದು ವಿಳಂಬವಾಗುತ್ತಿದ್ದರೆ ಕೂಡಲೇ ನಮ್ಮನ್ನು ಸಂಪರ್ಕಿಸಿ. ಕೃಷಿ ಇಲಾಖೆಯವರೂ ಏನೇ ಸಮಸ್ಯೆ ಇದ್ದರೂ ನಮ್ಮನ್ನು ಸಂಪರ್ಕಿಸುತ್ತಾರೆ. ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಿ ಬೇಡ. ಈ ವಿಷಯವಾಗಿ ಆಯಾ ಇಲಾಖೆಯ ಅಧಿಕಾರಿಗಳು ನನ್ನೊಂದಿಗೆ ಮುಕ್ತವಾಗಿ ಚರ್ಚೆ ಮಾಡಬಹುದು ಎಂದು ಸಚಿವೆ ಶಶಿಕಲಾ ಜೊಲ್ಲೆ ಅವರು ಸಭೆಯಲ್ಲಿ ಹೇಳಿದರು.

  https://www.facebook.com/watch/?v=282109779998339

  ಗುರುವಾರ ಸಚಿವೆ ಶಶಿಕಲಾ ಜೊಲ್ಲೆ ಅವರು ಜಿಲ್ಲೆಯ ಸಿಂದಗಿಯಲ್ಲಿ ಸಾರ್ವಜನಿಕರ ಕುಂದು-ಕೊರತೆ ಪರಿಶೀಲನಾ ಸಭೆ ನಡೆಸಿದ್ದರು. ವಿಕಲಚೇತನರ ಮಾಸಾಶನ, ವೃದ್ದಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಹಲವು ಸಮಸ್ಯೆಗಳ ಅಹವಾಲನ್ನು ಸಮಾಧಾನ ಚಿತ್ತವಾಗಿ ಸಾರ್ವಜನಿಕರಿಂದ ಆಲಿಸಿದ ಸಚಿವೆ ಜೊಲ್ಲೆ ಅವರು, ಕೆಲವರಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದರು. ಉಳಿದ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಪಟ್ಟ ಆಯಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

  ಇದನ್ನು ಓದಿ: ಭೀಮಾತೀರ ಜನರ ಕುಂದು-ಕೊರತೆ ಆಲಿಸಿ, ನೊಂದವರಿಗೆ ನೆರವಾದ ಸಚಿವೆ ಶಶಿಕಲಾ ಜೊಲ್ಲೆ

  ಆಲಮೇಲ ತಾಲೂಕಿನಲ್ಲಿ ಸರ್ಕಾರಿ ಕಚೇರಿಗಳು ಪ್ರಾರಂಭಿಸುವುದು, ತೋಟಗಾರಿಕೆ ವಿಶ್ವ ವಿದ್ಯಾಲಯ ಸ್ಥಾಪನೆ, ಭೀಮಾ ಪ್ರವಾಹದಿಂದ ಜಲಾವೃತಗೊಂಡಿದ್ದ ತಾರಾಪುರ ಗ್ರಾಮ ಸ್ಥಳಾಂತರ ಮಾಡಿ, ಸಂತ್ರಸ್ತರಿಗೆ 9 ನಂಬರ್ ಪುಸ್ತಕದಡಿಯ ಜೆಎಂಸಿ ಪ್ರಕಾರ ಹಕ್ಕು ಪತ್ರ ವಿತರಣೆ, ಸಿಂದಗಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಅರೆಬರೆಯಾಗಿ ಉಳಿದಿರುವ ಚರಂಡಿ, ಗಟಾರನ್ನು ನಿರ್ಮಿಸಿ, ನೈರ್ಮಲ್ಯ ಕಾಪಾಡುವುದು, ರೈತರ ಹೊಲಗಳಿಗೆ ಹೋಗಲು ದಾರಿ ಸಮಸ್ಯೆಯ ತೊಡಕನ್ನು ನಿವಾರಿಸುವುದು, ಜಿಲ್ಲೆಯನ್ನು ಸಮಗ್ರ ನೀರಾವರಿಗೆ ಒಳಪಡಿಸಿ, ಕೃಷ್ಣ ಕೊಳ್ಳವನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಬೇಕು ಎನ್ನುವುದು ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಅಹವಾಲನ್ನು ಜನರು ಸಲ್ಲಿಸಿದರು. ಇದರಲ್ಲಿ 60 ಕ್ಕೂ ಹೆಚ್ಚು ಪ್ರಕರಣಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಿದರೆ, ಇನ್ನು ತಾಂತ್ರಿಕ ಕಾರಣಗಳಿಂದಾಗಿ ಇನ್ನುಳಿದ ಅಹವಾಲನ್ನು ಕೂಡಲೇ ಪರಿಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
  Published by:HR Ramesh
  First published: