ಮುಂದಿನ ದಿನಗಳಲ್ಲಿ ಕೊರೋನಾ ನೆಗಡಿ, ಜ್ವರದಂತೆ ಬಂದು ಹೋಗುತ್ತೆ, ಯಾರೂ ಹೆದರಬೇಡಿ; ಧೈರ್ಯ ತುಂಬಿದ ಸಚಿವೆ ಶಶಿಕಲಾ ಜೊಲ್ಲೆ

ಯಾರೂ ಕೊರೋನಾ ಬಗ್ಗೆ ಭಯ ಬೀಳಬೇಡಿ. ಎಲ್ಲರೂ ಕೊರೋನಾದೊಂದಿಗೆ ಬದುಕುವುದನ್ನು ಕಲಿಯಬೇಕಿದೆ.  ಕೊರೋನಾ ಕೂಡ ನಾಳೆ ದಿನ ನೆಗಡಿ ಮತ್ತು ಜ್ವರದಂತೆ ಬಂದು ಹೋಗುತ್ತೆ ಅಷ್ಟೆ.  ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಿಕೊಂಡು ಅದರೊಂದಿಗೆ ಬದುಕೋದು ಕಲಿತರೆ ಏನೂ ಸಮಸ್ಯೆ ಇಲ್ಲ ಎಂದರು.

news18-kannada
Updated:May 27, 2020, 10:41 PM IST
ಮುಂದಿನ ದಿನಗಳಲ್ಲಿ ಕೊರೋನಾ ನೆಗಡಿ, ಜ್ವರದಂತೆ ಬಂದು ಹೋಗುತ್ತೆ, ಯಾರೂ ಹೆದರಬೇಡಿ; ಧೈರ್ಯ ತುಂಬಿದ ಸಚಿವೆ ಶಶಿಕಲಾ ಜೊಲ್ಲೆ
ಸಚಿವೆ ಶಶಿಕಲಾ ಜೊಲ್ಲೆ
  • Share this:
ವಿಜಯಪುರ (ಮೇ. 27): ಕೊರೋನಾ ಬಂದಾಗಿನಿಂದ ಚಹಾ ಸೇವನೆ ಬಿಟ್ಟಿದ್ದೇನೆ.  ಅದರ ಬದಲು ಪ್ರತಿನಿತ್ಯ ಬೆಳಿಗ್ಗೆ ಬಿಸಿ ನೀರು, ಲಿಂಬೆಹಣ್ಣು ಅರಿಶಿಣ ಮಿಶ್ರಿತ ಕಾಡೆ ಅಂದರೆ ಆಯುರ್ವೇದಕ ದ್ರವ ಸೇವಿಸಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುತ್ತಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ವಿಜಯಪುದಲ್ಲಿ ಅಪೌಷ್ಠಿಕ ಮಕ್ಕಳಿಗೆ ಸಿದ್ಧ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೊರೋನಾ ಬಂದಾಗಿನಿಂದ ಚಹಾ ಸೇವನೆ ಮರೆತಿದ್ದೇನೆ. ಯಾರೂ ಕೊರೋನಾ ಬಗ್ಗೆ ಭಯ ಬೀಳಬೇಡಿ. ಎಲ್ಲರೂ ಕೊರೋನಾದೊಂದಿಗೆ ಬದುಕುವುದನ್ನು ಕಲಿಯಬೇಕಿದೆ.  ಕೊರೋನಾ ಕೂಡ ನಾಳೆ ದಿನ ನೆಗಡಿ ಮತ್ತು ಜ್ವರದಂತೆ ಬಂದು ಹೋಗುತ್ತೆ ಅಷ್ಟೆ.  ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಿಕೊಂಡು ಅದರೊಂದಿಗೆ ಬದುಕೋದು ಕಲಿತರೆ ಏನೂ ಸಮಸ್ಯೆ ಇಲ್ಲ ಎಂದರು.

ಭಾರತೀಯ ಜನರಿಗೆ ಕೊರೋನಾದಿಂದ ಯಾವುದೇ ರೀತಿಯಿಂದ ಸಮಸ್ಯೆಯಾಗುವುದಿಲ್ಲ.  ವಿದೇಶಿಗರಿಗೆ ರೋಗ ನಿರೋಧಕ ಶಕ್ತಿ ಇಲ್ಲದಿರುವುದರಿಂದ ಅಲ್ಲಿ ಸಾವು-ನೋವುಗಳು ಹೆಚ್ಚಾಗಿವೆ. ಕಳೆದ ಮೂರು ತಿಂಗಳಿನಿಂದ ನಾನು ಚಹಾ ಕುಡಿಯೋದೆ ಮರೆತಿದ್ದೇನೆ.  ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಭಾರತೀಯ ಪದ್ಧತಿಯಾದ ತುಳಸಿ, ಅರಿಶಿಣ, ಶುಂಟಿ, ದಾಲ್ಚಿನ್ನಿ ಮುಂತಾದ ಪದಾರ್ಥಗಳನ್ನು ಸೇವಿಸಬೇಕು ಎಂದು ಶಶಿಕಲಾ ಜೊಲ್ಲೆ ಹೇಳಿದರು.

ಬಾಗಲಕೋಟೆಯಲ್ಲಿ ಬಿತ್ತನೆ ಕೂರಿಗೆಗೂ ಮಡಿಲು ಶಾಸ್ತ್ರ; ಈ ವಿಶೇಷ ಆಚರಣೆ ಯಾಕೆ ಗೊತ್ತಾ?

ಈಗ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಕೊರೋನಾ ಕೆಲಸದಲ್ಲಿ ನಿರತರಾಗಿದ್ದಾರೆ.  ಈ ಕೆಲಸ ಮುಗಿದ ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಕೊರೋನಾ ಬಗ್ಗೆ ಹಾಗೂ ಆರೋಗ್ಯದ ಕುರಿತು ಜನಜಾಗೃತಿ ಮೂಡಿಸಲಾಗುವುದು.  ಕೊರೋನಾ ಜೊತೆ ಹೇಗೆ ಬದುಕಬೇಕು ಎಂಬುದರ ಬಗ್ಗೆಯೂ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಲಾಕ್​ಡೌನ್ ಮುಗಿದ ಬಳಿಕ ಪ್ರಧಾನಿ ಬಳಿಗೆ ತೆರಳಿ ಅಂಗನವಾಡಿ ಕಾರ್ಯಕರ್ತರ ನಾನಾ ಬೇಡಿಕೆಗಳ ಈಡೇರಿಸುವ ಬಗ್ಗೆ ಮನವಿ ಮಾಡಲಾಗುವುದು.  ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಿಗೆ ಈ ಕುರಿತು ಪತ್ರವನ್ನು ಬರೆದಿದ್ದೇನೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ, ಎಸ್ಪಿ ಅನುಪಮ ಅಗ್ರವಾಲ, ಜಿಲ್ಲಾ ಪಂಚಾಯಿತಿ ಸಿಇಓ ಗೋವಿಂದ ರೆಡ್ಡಿ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
First published: May 27, 2020, 10:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading