HOME » NEWS » District » MINISTER SHASHIKALA JOLLE ORGANIZED GRAMA SHILPI PROGRAM FOR WOMEN SELF RELIANCE RHHSN

ಸಚಿವೆ ಶಶಿಕಲಾ ಜೊಲ್ಲೆ ಸಹಕಾರದೊಂದಿಗೆ ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಾಥ್ ನೀಡಿದ ಗ್ರಾಮ ಶಿಲ್ಪಿ!

ರಾಜ್ಯದ ವಿವಿಧ ಕಡೆಗಳಿಂದ ಆಯಾ ಭಾಗಗಳ ವೈವಿಧ್ಯಮಯ ಕಲೆಗಳನ್ನೊಳಗೊಂಡ ಕರಕುಶಲ ವಸ್ತುಗಳು ಮತ್ತು ಅದರ ಕಾರ್ಮಿಕರು ಇವತ್ತಿನ ಗ್ರಾಮ ಶಿಲ್ಪಿ ಕಾರ್ಯಕ್ರಮದಲ್ಲಿ ಗಮನ ಸೆಳೆದರು. ಇಂಥದೊಂದು ವಿನೂತನ ಯೋಜನೆ ಮೂಲಕ ಗ್ರಾಮಗಳ ಶಿಲ್ಪಿಗಳನ್ನ ಪರಿಚಯಿಸುತ್ತಿರುವ ಲಘು ಉದ್ಯೋಗ ಭಾರತ್ ಅವರ ಕಾರ್ಯಕ್ಕೆ ಸರ್ವರೂ ಮೆಚ್ಚುಗೆ ವ್ಯಕ್ತಪಡಿಸಿದರು.

news18-kannada
Updated:April 9, 2021, 8:37 PM IST
ಸಚಿವೆ ಶಶಿಕಲಾ ಜೊಲ್ಲೆ ಸಹಕಾರದೊಂದಿಗೆ ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಾಥ್ ನೀಡಿದ ಗ್ರಾಮ ಶಿಲ್ಪಿ!
ಗ್ರಾಮಶಿಲ್ಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಶಶಿಕಲಾ ಜೊಲ್ಲೆ.
  • Share this:
ಹುಬ್ಬಳ್ಳಿ: ನಿಮಗೆ ಮನೆಯಲ್ಲಿ ಕೂತು ಕೂತು ಬೇಜಾರಾಗ್ತಿದೆಯಾ..? ಗಂಡಸರಂತೆ ನಿಮಗೂ ಸಂಪಾದನೆ ಮಾಡುವ ಆಸೆ ಇದೆಯಾ..? ನಿಮ್ಮ ಮನೆಯವರು ಒಬ್ಬರೇ ದುಡಿದು ತರೋ ಹಣ ಸಂಸಾರ ನಡೆಸೋದಕ್ಕೆ ಸಾಕಾಗ್ತಿಲ್ವಾ..? ಹಾಗಾದ್ರೆ ತಡ ಯಾಕೆ ಲಘು ಉದ್ಯೋಗ ಭಾರತಿಯೆಡೆಗೆ ಕೊಂಚ ಗಮನ ಹರಿಸಿ ಸಾಕು. ಯೆಸ್.. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆಯವರು ಇಂಥದ್ದೊಂದು ಸದಾವಕಾಶವನ್ನು ನಾಡಿನ ಮಹಿಳೆಯರಿಗೆ ಒದಗಿಸಿಕೊಡುತ್ತಿದ್ದಾರೆ. ಮಹಿಳೆಯರು ಇನ್ಮುಂದೆ ಸ್ವಾವಲಂಬಿಗಳಾಗಿ, ಸ್ವತಂತ್ರವಾಗಿ ತಮ್ಮ ಕಾಲ ಮೇಲೆ ತಾವು ನಿಲ್ಲೋದಕ್ಕೆ ಸರ್ವಶಕ್ತರು ಎಂಬುದನ್ನ ತೋರಿಸಿಕೊಡೋದಕ್ಕೆ ಇದು ಸಕಾಲ. ಹಾಗಾದರೆ ಹೆಣ್ಮಕ್ಕಳು ಏನ್ ಮಾಡಬೇಕು.? ಈ ಸ್ಟೋರಿ ನೋಡಿ.

ದುಡಿಯೋದಕ್ಕೆ ವಯಸ್ಸು ಮುಖ್ಯವಲ್ಲ ಮನಸ್ಸು ಮುಖ್ಯ ಎನ್ನುವುದಕ್ಕೆ ಈ ಮಹಿಳೆಯರೇ ಸಾಕ್ಷಿ. ಇಲ್ಲಿ ಎಲ್ಲ ಮಹಿಳೆಯರು ಸ್ವಾವಲಂಬಿಗಳೇ. ಸ್ವತಂತ್ರವಾಗಿ ಹುದ್ದೆಗಳನ್ನು ಆರಿಸಿಕೊಂಡವರೆ. ಒಬ್ಬರು ನೇಕಾರಿಕೆ ವೃತ್ತಿ ಆಯ್ದುಕೊಂಡರೆ, ಮತ್ತೊಬ್ಬರು ಬೊಂಬೆ, ಮೂರ್ತಿಗಳನ್ನು ಮಾಡುವ ಕಾಯಕ, ಮಗದೊಬ್ಬರು ಬಿದಿರಿನ ಬುಟ್ಟಿ ತಯಾರಿಸೋದು, ತರ ತರ ಭಕ್ಷ್ಯಗಳನ್ನು, ತಿಂಡಿ -ತಿನಿಸುಗಳನ್ನು ಮಾಡುವ ಕಾಯಕ, ಅಗರ್ ಬತ್ತಿ, ಚಟ್ನಿ ಪುಡಿ, ದೇಶಿ ಹಪ್ಪಳ, ಹೀಗೆ ಅನೇಕ ರೀತಿಯ ವಿವಿಧ ವಸ್ತುಗಳನ್ನ ತಯಾರಿಸಿ ಮಾರಾಟ ಮಾಡುವುದರ ಮುಖಾಂತರ ಪುರುಷರಿಗಿಂತ ನಾವೇನು ಕಮ್ಮಿ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅಷ್ಟಕ್ಕೂ ಈ ಸ್ವಾವಲಂಬಿ ಮಹಿಳೆಯರು ಕಂಡು ಬಂದಿದ್ದು, ಎಲ್ಲಿ ಅಂತಿರಾ..? ಹುಬ್ಬಳ್ಳಿಯ ಸಾಮ್ರಾಟ್ ಹಾಲ್ ನಲ್ಲಿ ನಡೆದ ಗ್ರಾಮ ಶಿಲ್ಪಿ ಎಂಬ ವಿನೂತನ ಕಾರ್ಯಕ್ರಮದಲ್ಲಿ.

ಲಘು ಉದ್ಯೋಗ ಭಾರತ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹುಬ್ಬಳ್ಳಿಯ ಗೋಕುಲ್ ರಸ್ತೆಯ ಸಾಮ್ರಾಟ್ ಹಾಲ್ ನಲ್ಲಿ ಗ್ರಾಮ ಶಿಲ್ಪಿ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದೊಂದು ಪಾರಂಪರಿಕ ಕರಕುಶಲ ವಸ್ತು ಪ್ರದರ್ಶನ ಕಾರ್ಯಕ್ರಮವಾಗಿದ್ದು, ಮಹಿಳೆಯರಿಗೆ ಮತ್ತು ಕರಕುಶಲ ಕಾರ್ಮಿಕರಿಗೆ ಉತ್ತೇಜನ ನೀಡುವ ಹತ್ತು ಹಲವು ವಿಷಯಗಳು ಇಲ್ಲಿ ಪ್ರಸ್ತಾಪವಾದವು. ಸಚಿವ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಂಸದೀಯ ವ್ಯಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಮಾತನಾಡಿ ಜಗತ್ತಿನಲ್ಲೇ ದೊಡ್ಡದಾದ ಭಾರತದ ಮಾರುಕಟ್ಟೆಯಲ್ಲಿ ದೇಶೀಯ ಕರಕುಶಲ ವಸ್ತುಗಳ ಮಾರಾಟ ಹೆಚ್ಚಳವಾಗಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆಯವರು ಮಾತನಾಡಿ, ರಾಜ್ಯದಲ್ಲಿ ಹೇರಳ ಸಂಖ್ಯೆಯಲ್ಲಿ ಕರಕುಶಲ ವಸ್ತುಗಳನ್ನು, ಆಹಾರ ಪದಾರ್ಥಗಳನ್ನು ಮಾಡುವ ಮನೆತನಗಳಿವೆ. ಇವುಗಳನ್ನು ನಾವು ಬೆಳೆಸಿದರೆ ಪ್ರಧಾನಿಯವರ ಆತ್ಮ ನಿರ್ಭಾರ್ ಭಾರತದ ಕನಸು ನನಸಾಗುವುದರಲ್ಲಿ ಯಾವ ಸಂದೇಹವಿಲ್ಲ ಎಂದರು. ಮುಂದುವರೆದು ನಮ್ಮ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಈ ಬಾರಿ ಬಜೆಟ್ ನಲ್ಲಿ ಐತಿಹಾಸಿಕವಾಗಿ ಮಹಿಳೆಯರ ಅಭಿವೃದ್ಧಿಗೋಸ್ಕರವಾಗಿಯೇ 37.188 ಕೋಟಿ ರೂಪಾಯಿಗಳನ್ನ ಮೀಸಲಿಟ್ಟಿದ್ದಾರೆ ಎಂದರು.

ಇದನ್ನು ಓದಿ: CoronaVirus; ಕೊರೋನಾ ಮಾರ್ಗಸೂಚಿ: ರಾತ್ರಿ‌ ಅನಗತ್ಯವಾಗಿ ಹೊರಬಂದರೆ ಎಚ್ಚರ...!!

ರಾಜ್ಯದ ವಿವಿಧ ಕಡೆಗಳಿಂದ ಆಯಾ ಭಾಗಗಳ ವೈವಿಧ್ಯಮಯ ಕಲೆಗಳನ್ನೊಳಗೊಂಡ ಕರಕುಶಲ ವಸ್ತುಗಳು ಮತ್ತು ಅದರ ಕಾರ್ಮಿಕರು ಇವತ್ತಿನ ಗ್ರಾಮ ಶಿಲ್ಪಿ ಕಾರ್ಯಕ್ರಮದಲ್ಲಿ ಗಮನ ಸೆಳೆದರು. ಇಂಥದೊಂದು ವಿನೂತನ ಯೋಜನೆ ಮೂಲಕ ಗ್ರಾಮಗಳ ಶಿಲ್ಪಿಗಳನ್ನ ಪರಿಚಯಿಸುತ್ತಿರುವ ಲಘು ಉದ್ಯೋಗ ಭಾರತ್ ಅವರ ಕಾರ್ಯಕ್ಕೆ ಸರ್ವರೂ ಮೆಚ್ಚುಗೆ ವ್ಯಕ್ತಪಡಿಸಿದರು. ಸಚಿವೆ ಜೊಲ್ಲೆಯವರಂತೂ ಇವರ ಪ್ರತಿಯೊಂದು ಕಾರ್ಯ ಯೋಜನೆಗಳಿಗೆ ವೈಯಕ್ತಿಕವಾಗಿ ಮತ್ತು ಇಲಾಖೆ ಪರವಾಗಿ ಸಾಥ್ ನೀಡುವುದಾಗಿ ವಾಗ್ದಾನ ನೀಡಿದರು.
ಒಟ್ಟಿನಲ್ಲಿ ಗ್ರಾಮೀಣ ಕರಕುಶಲ ಕಲೆಯನ್ನು ಉಳಿಸಿ ಬೆಳೆಸುವಲ್ಲಿ, ಮತ್ತು ಮಹಿಳೆಯರ ಸ್ವಾವಲಂಬಿ ಬದುಕಿಗೆ ಸರ್ಕಾರದ ಸಚಿವೆಯಾಗಿ ಶಶಿಕಲಾ ಜೊಲ್ಲೆಯವರ ನಿರ್ಧಾರ ಹಾಗೂ ಕಾರ್ಯ ನಿಜಕ್ಕೂ ಮೆಚ್ಚುವಂತಹದ್ದು.
Published by: HR Ramesh
First published: April 9, 2021, 8:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories