ಆಶಾ ಕಾರ್ಯಕರ್ತೆಯರಿಗೆ ಆಸರೆಯಾದ ಸಚಿವೆ ಶಶಿಕಲಾ ಜೊಲ್ಲೆ; ಬೆಳಗಾವಿಯ1480 ಕೊರೋನಾ ವಾರಿಯರ್ಸ್​ಗೆ ಪ್ರೋತ್ಸಾಹ ಧನ

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಒಟ್ಟು 44.40 ಲಕ್ಷ ಮೊತ್ತದ ಚೆಕ್ ಗಳನ್ನ ಆಶಾ ಕಾರ್ಯಕರ್ತೆಯರಿಗೆ ವಿತರಿಸಲಾಗಿದೆ.

ಆಶಾ ಕಾರ್ಯಕರ್ತೆಯರೊಂದಿಗೆ ಸಚಿವೆ ಶಶಿಕಲಾ ಜೊಲ್ಲೆ ಮತ್ತಿತರರು

ಆಶಾ ಕಾರ್ಯಕರ್ತೆಯರೊಂದಿಗೆ ಸಚಿವೆ ಶಶಿಕಲಾ ಜೊಲ್ಲೆ ಮತ್ತಿತರರು

  • Share this:
ಬೆಳಗಾವಿ(ಜು.15): ಕೊರೋನಾ ಮಹಾಮಾರಿ ಬಂದಾಗಿನಿಂದ ಆಶಾ ಕಾರ್ಯಕರ್ತೆಯರು ಹಗಲಿರುಳು ಸೈನಿಕರಂತೆ ಕೆಲಸ ಮಾಡುತ್ತಿದ್ದಾರೆ. ಕೊರೋನಾ ಕಾಣಿಸಿಕೊಂಡ ಪ್ರದೇಶಗಳಲ್ಲಿ ಯಾರು ಓಡಾಡುತ್ತಾರೋ ಅಂತಹ ಏರಿಯಾಗಳಿಗೆ ತೆರಳಿ ಜರನ ಮಾಹಿತಿ ಸಂಗ್ರಹಿಸುವುದರಿಂದ ಹಿಡಿದು ಪ್ರತಿಯೊಂದು ಕೆಲಸವನ್ನು ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದಾರೆ. ಅದರಲ್ಲೂ ತಮ್ಮ ಕುಟುಂಬವನ್ನು ಲೆಕ್ಕಿಸದೆ ಸದಾ ಜನರ ಆರೋಗ್ಯಕ್ಕೋಸ್ಕರ ದುಡಿಯುವ ಸಂದರ್ಭದಲ್ಲಿ ಅದೆಷ್ಟೋ ಆಶಾ ಕಾರ್ಯಕರ್ತೆಯರು ಸಹ ಕೊರೋನಾ ರೋಗಕ್ಕೆ ತುತ್ತಾಗಿದ್ದಾರೆ. ಹಗಲಿರುಳು ದುಡಿಯುವ ಆಶಾ ಕಾರ್ಯಕರ್ತೆಯರಿಗೆ ನೆರವಾಗಲು ಸಹಕಾರ ಇಲಾಖೆ ಮುಂದಾಗಿದೆ.

ರಾಜ್ಯದ ಎಲ್ಲಾ  ಆಶಾ ಕಾರ್ಯಕರ್ತೆಯರಿಗೆ ತಲಾ ಮೂರು ಸಾವಿರ ರೂಪಾಯಿಗಳ ಸಹಾಯಧನ ನೀಡಲು ಸಹಕಾರ ಇಲಾಖೆ ಮುಂದಾಗಿದೆ. ಹೀಗಾಗಿ ರಾಜ್ಯದ ಎಲ್ಲಾ ಸಹಕಾರ ಕ್ಷೇತ್ರ ಹಾಗೂ ಎಪಿಎಂಸಿಗಳಿಂದ 12.7 ಕೋಟಿ ಹಣವನ್ನ ಕೂಡಿಸಿ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ನೀಡಲು ನಿರ್ಧರಿಸಿದೆ. ಇನ್ನು ಮಾತೃ ಇಲಾಖೆಯ ಸಚಿವರು ಕೂಡ ಹಿಂದೆ ಸರಿಯದೆ ತಮ್ಮ ಸ್ವಂತ ಖರ್ಚಿನಲ್ಲೇ ಆಶಾ ಕಾರ್ಯರ್ತೆಯರಿಗೆ ಸಹಾಯಧನ ನೀಡಲು ಮುಂದೆ ಬಂದಿದ್ದಾರೆ.

‘RIL AGM 2020: 13 ಲಕ್ಷ ಕೋಟಿ ಮೌಲ್ಯದ ಮೊದಲ ಭಾರತೀಯ ಕಂಪನಿ ರಿಲಾಯನ್ಸ್‘ - ಮುಕೇಶ್ ಅಂಬಾನಿ

ಸರ್ಕಾರದ ಹಣಕ್ಕಾಗಿ ಕಾಯದೆ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದಾರೆ. ತಮ್ಮ ಒಡೆತನದ ಜೊಲ್ಲೆ ಉದ್ಯೋಗ ಸಮೂಹದ ಶ್ರೀ ಬೀರೇಶ್ವರ ಕೋ ಆಪರೇಟಿವ್ ಸೊಸೈಟಿ ಮೂಲಕ ಬೆಳಗಾವಿ ಜಿಲ್ಲೆಯ 1480 ಆಶಾಗಳಿಗೆ ತಲಾ ಮೂರು ಸಾವಿರದಂತೆ ಚೆಕ್ ಮೂಲಕ ಸಹಾಯ ಮಾಡಿದ್ದಾರೆ. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಒಟ್ಟು 44.40 ಲಕ್ಷ ಮೊತ್ತದ ಚೆಕ್ ಗಳನ್ನ ಆಶಾ ಕಾರ್ಯಕರ್ತೆಯರಿಗೆ ವಿತರಿಸಿದ್ದಾರೆ.

ಆಶಾ ಕಾರ್ಯರ್ತೆಯರು ನಮ್ಮ ರಾಜ್ಯದ ಹೆಮ್ಮೆಯ ಮಹಿಳೆಯರು. ಸದಾಕಾಲವೂ ತಮ್ಮ ಪರಿವಾರದ ಜೊತೆ ಜೊತೆಗೆ ಸಮಾಜದ ಕಾಳಜಿಯ ಜವಾಬ್ದಾರಿ ಅವರ ಹೆಗಲಿಗೆ ಇದೆ. ಎಲ್ಲಾ ಸಂದರ್ಭದಲ್ಲೂ ಆಶಾ ಕಾರ್ಯಕರ್ತೆಯರು ಮುಂದೆ ಬಂದು ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ನಾನೂ ಕೂಡ ಒಬ್ಬ ಮಹಿಳಾ ಮತ್ತು ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿ ಅವರ ಕಷ್ಟಗಳನ್ನ ಚೆನ್ನಾಗಿ ತಿಳಿದುಕೊಂಡಿದ್ದೇನೆ. ಅಂತಹ ಆಶಾ ಕಾರ್ಯಕರ್ತೆಯರಿಗೆ ಇದೊಂದು ನಮ್ಮ ಸಣ್ಣ ಅಳಿಲು ಸೇವೆ  ಅಂತಾರೆ ಸಚಿವೆ ಶಶಿಕಲಾ ಜೊಲ್ಲೆ.
Published by:Latha CG
First published: