ಶಾಲೆಯನ್ನೇ ಕೋವಿಡ್ ಆಸ್ಪತ್ರೆ ಮಾಡಿದ ಸಚಿವೆ ಶಶಿಕಲಾ ಜೊಲ್ಲೆ: ಸೋಂಕಿತರಿಗೆ ಉಚಿತ ಚಿಕಿತ್ಸೆ

ಸಚಿವೆ ಜೊಲ್ಲೆ ತಮ್ಮ ಒಡೆತನದ ಶಿಕ್ಷಣ ಸಂಸ್ಥೆಯ ಸಿಬಿಎಸ್ ಸಿ ಶಾಲೆಯ ಕಟ್ಟಡವನ್ನೆ ಈಗ ಕೋವಿಡ್ ಕೇರ್ ಸೆಂಟರ್ ಮಾಡಿ ಬದಲಾವಣೆ ಮಾಡಿದ್ದಾರೆ. ನಿಪ್ಪಾಣಿಯಲ್ಲಿ 43 ಆರೋಗ್ಯ ಸಿಬ್ಬಂದಿ ಹಾಗೂ 6 ಜನ ವೈದ್ಯರು ಇಲ್ಲಿ ಕೆಲಸ ಮಾಡುತ್ತಿದ್ದಾರೆ.

ಶಶಿಕಲಾ ಜೊಲ್ಲೆ

ಶಶಿಕಲಾ ಜೊಲ್ಲೆ

  • Share this:
ಬೆಳಗಾವಿ: ರಾಜ್ಯದಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಸಿಗದೆ, ವೆಂಟಿಲೇಟರ್ ಬೆಡ್ ಹಾಗೂ ಆಕ್ಸಿಜನ್ ಸಿಗದೆ ಜನ ಪರದಾಡುತ್ತಿದ್ದಾರೆ. ಇದನ್ನು ಅರಿತ ಸಚಿವೆ ಶಶಿಕಲಾ ಜೊಲ್ಲೆ ಶಾಲೆಯನ್ನೇ ಕೋವಿಡ್​ ಆಸ್ಪತ್ರೆಯನ್ನಾಗಿ ಮಾಡಿ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ತಮ್ಮ ಸಂಸ್ಥೆಯ ಮೂಲಕ ಸಂಕಷ್ಟದಲ್ಲಿರುವ ರೋಗಿಗಳಿಗೆ ಆಸರೆಯಾಗಿ ನಿಂತಿದ್ದಾರೆ. ನಿಪ್ಪಾಣಿ ಪಟ್ಟಣದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿಪ್ಪಾಣಿ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಒಡೆತನದ ಜೊಲ್ಲೆ ಉದ್ಯೋಗ ಸಮೂಹದ ನೇತೃತ್ವದಲ್ಲಿ ಕೋವಿಡ್ ರೋಗಿಗಳಿಗೆ ಉಚಿತ ಸೇವೆ ಒದಗಿಸುವ ವ್ಯವಸ್ಥೆ ಮಾಡಲಾಗಿದೆ.‌

ಸಚಿವೆ ಜೊಲ್ಲೆ ತಮ್ಮ ಒಡೆತನದ ಶಿಕ್ಷಣ ಸಂಸ್ಥೆಯ ಸಿಬಿಎಸ್ ಸಿ ಶಾಲೆಯ ಕಟ್ಟಡವನ್ನೆ ಈಗ ಕೋವಿಡ್ ಕೇರ್ ಸೆಂಟರ್ ಮಾಡಿ ಬದಲಾವಣೆ ಮಾಡಿದ್ದಾರೆ. ನಿಪ್ಪಾಣಿಯಲ್ಲಿ 43 ಆರೋಗ್ಯ ಸಿಬ್ಬಂದಿ ಹಾಗೂ 6 ಜನ ವೈದ್ಯರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಈ ಕೋವಿಡ್ ಕೇರ್ ಸೆಂಟರ್ ಯಾವ ಖಾಸಗಿ ಆಸ್ಪತ್ರೆಗೂ ಕಮ್ಮಿ ಇಲ್ಲಾ. ಎಲ್ಲಾ ವ್ಯವಸ್ಥೆಗಳನ್ನ ಶಶಿಕಲಾ ಜೋಲ್ಲೆಯೆ ಒದಗಿಸಿದ್ದಾರೆ. ಅಲ್ಲದೆ ಇನ್ನು ಕಲವು ದಾನಿಗಳು ಸಹ ಈ ಆಸ್ಪತ್ರೆಗೆ ತಮ್ಮ ಕೈಲಾದ ವ್ಯವಸ್ಥೆಯನ್ನ ಮಾಡಿದ್ದಾರೆ. ಇನ್ನು ಈ ಆಸ್ಪತ್ರೆಯನ್ನ ಸಚಿವೆ ಮುತುವರ್ಜಿ ವಹಿಸಿ ಎಲ್ಲಾ ವ್ಯವಸ್ಥೆಗಳನ್ನ ನೋಡಿಕೊಂಡು ನಿಪ್ಪಾಣಿಯಲ್ಲಿ ಇದ್ದಾಗ ತಾವೆ ಖುದ್ದು ಭೇಟಿ ನೀಡಿ ವೈದ್ಯರ ಜೋತೆ ಚರ್ಚೆ ನಡೆಸುತ್ತಾರೆ.

ಇನ್ನು ಆಸ್ಪತ್ರೆ ಆರಂಭವಾಗಿ ಕೇವಲ ಎರಡೇ ದಿನದಲ್ಲಿ ೪೦ ಹಾಸಿಗಗಳಲ್ಲಿ ಈಗಾಗಲೇ ೩೩ ಹಾಸಿಗೆ ಫುಲ್ ಆಗಿದೆ.. ಅದರಲ್ಲಿ ೧೫ ಜನರಿಗೆ ಆಕ್ಸಿಜನ್ ಬೆಡ್ ನಲ್ಲಿ ಚಿಕಿತ್ಸೆ ನೀಡುತ್ತಿದ್ದು ಮೂರು ಜನರಿಗೆ ಕಾನ್ಸಂಟ್ರೇಟರ್ ಆಕ್ಸಿಜನ್ ಬೆಡ್ ನಲ್ಲಿ ಚಕಿತ್ಸೆ ನೀಡಲಾಗುತ್ತಿದೆ. ಇನ್ನು ತಮ್ಮ ಸಂಸ್ಥೆಯಲ್ಲಿ ಈ ಹಿಂದೆಯೂ ಸಹ ಕೋವಿಡ್ ಕೇರ್ ಸೆಂಟರ್ ಆರಂಭಿಸಿದ್ದ ಸಚಿವೆ ಶಶಿಕಲಾ‌ ಜೊಲ್ಲೆ  ಕಳೆದ ಬಾರಿಯೂ ಸಹ ತಮ್ಮ ಸಂಸ್ಥೆಯಿಂದ  ೨೦೦ ಕ್ಕೂ ಹೆಚ್ಚು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದರು. ಅದೇ ನಿಟ್ಟಿನಲ್ಲಿ ಈ ಬಾರಿಯೂ ಸಹ ತಮ್ಮ ಪ್ರಯತ್ನ ಮುಂದುವರೆಸಿದ್ದು ಎಲ್ಲಾ ಆರೋಗ್ಯ ಸಿಬ್ಬಂದಿಗಳು ಮತ್ತು ವೈದ್ಯರಿಗೆ ಅವರೇ ಸಂಬಳ‌ ನೀಡ್ತಿದ್ದಾರೆ.

ಇನ್ನು ಈ ಕೋವಿಡ್ ಕೇರ್ ಸೆಂಟರ್ ನಲ್ಲಿ ಬಂದಿರುವ ರೋಗಿಗಳಿಗೆ ವಿಶೇಷ ಕಾಳಜಿಯ ಜೋತೆಗೆ ನಿತ್ಯ ಯೋಗವನ್ನು ಮಾಡಿಸಲಾಗುತ್ತದೆ. ಆರೋಗ್ಯಕರ ಊಟವನ್ನು ಇಲ್ಲಿ ನೀಡಲಾಗುತ್ತದೆ. ಇನ್ನು ಇಲ್ಲಿನ ಮೇನು ನೋಡುವುದಾದರೆ.  ಬೆಳಿಗ್ಗೆ 7 ಗಂಟೆಗೆ ಆಯುರ್ವೇದಿಕ ಕಾಡಿಯನ್ನ ನೀಡುತ್ತಾರೆ 8:30 ಕ್ಕೆ ಚಹಾ ಹಾಗೂ ತಿಂಡಿ, 11  ಗಂಟೆಗೆ ಹಣ್ಣು 12.30 ಕ್ಕೆ ಊಟ, ಮತ್ತೆ ಸಂಜೆ 4: 00  ಗಂಟೆಗೆ ತಿಂಡಿ, ಚಹಾ ರಾತ್ರಿ 8:00 ಗಂಟೆಗೆ ಊಟ ಹಾಗೂ ರಾತ್ರಿ ಮಲಗುವ ವೇಳೆ ಅರಿಶಿನ ಹಾಲು ನೀಡುತ್ತಾರೆ.

ಒಟ್ಟಿನಲ್ಲಿ ಶಿವಶಂಕರ್ ಜೊಲ್ಲೆ ಶಾಲೆಯಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಸೆಂಟರ್ ಕೇವಲ ನಿಪ್ಪಾಣಿ ತಾಲೂಕಿನ ಜನರಿಗಷ್ಟೆ ಅಲ್ಲದೆ ಬೇರೆ ತಾಲೂಕಿನ ಜನರಿಗೂ ಸಹ ಉಪಯೋಗವಾಗ್ತಿರೋದು ಶ್ಲಾಘನೀಯ ಸಂಗತಿ. ಇನ್ನು ಮುಂದಾಳತ್ವ ವಹಿಸಿ ಕೊರೊನಾ ಸಂಕಷ್ಟದ ಸಮಯದಲ್ಲಿ ತಮ್ಮ ಶಾಲೆಯನ್ನೆ ಆಸ್ಪತ್ರೆಯನ್ನಾಗಿಸಿ ಮಾಡಿರುವ ಸಚಿವೆ ಶಶಿಕಲಾ ಜೋಲ್ಲೆ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ
Published by:Kavya V
First published: