ರಾಜ್ಯೋತ್ಸವ ದಿನ ಕನ್ನಡ ಹಾಡು ಹೇಳಿ ಗಮನ ಸೆಳೆದ ಸಚಿವೆ: ಮಮ್ಮಿ, ಡ್ಯಾಡಿ ಬೇಡ, ಅಪ್ಪ, ಅಮ್ಮ ಹೇಳಿ ಎಂದ ಶಶಿಕಲಾ ಜೊಲ್ಲೆ

ಎಲ್ಲವೂ ಬದಲಾಗುತ್ತಿದೆ. ಬದಲಾವಣೆ ಜಗದ ನಿಯಮ. ಆದರೆ, ಕನ್ನಡ ನಾಡಿಗಾಗಿ ಹೋರಾಟ ನಡೆಸಿದರನ್ನು ನೆನಪಿಡಬೇಕು. ಮಕ್ಕಳಿಗೆ ಮಮ್ಮಿ, ಡ್ಯಾಡಿ ಬದಲು ಅಪ್ಪ ಅಮ್ಮ ಎಂದು ಹೇಳುವುದನ್ನು ಕಲಿಸುವ ಮೂಲಕ ಕನ್ನಡವನ್ನು ಉಳಿಸಬೇಕು.

ಸಚಿವೆ ಶಶಿಕಲಾ ಜೊಲ್ಲೆ

ಸಚಿವೆ ಶಶಿಕಲಾ ಜೊಲ್ಲೆ

  • Share this:
ವಿಜಯಪುರ(ನವೆಂಬರ್​ 01): ಕನ್ನಡ ರಾಜ್ಯೋತ್ಸವದ ದಿನ ಕನ್ನಡ ಹಾಡು ಹೇಳುವ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಗಮನ ಸೆಳೆದಿದ್ದಾರೆ. ವಿಜಯಪುರ ಜಿಲ್ಲೆಯ ತೊರವಿ ಬಳಿ ಮಹಿಳಾ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು, ನಾನಾ ಪದಾತಿ ದಳಗಳನ್ನು ವೀಕ್ಷಿಸಿದರು. ಬಳಿಕ ಗೌರವ ವಂದನೆ ಸ್ವೀಕರಿಸಿದರು. ನಂತರ ತಮ್ಮ ಭಾಷಣ ಆರಂಭಿಸಿದ ಅವರು ಹಚ್ಚೆವು ಕನ್ನಡದ ದೀಪ. ಕರನಾಡ ದೀಪ. ಬಾ ಬೆಳಗು ದೀಪ ಎಂದು ಹಾಡು ಹೇಳಿ ಮಾತು ಆರಂಭಿಸಿದರು. ದೂರವಾಣಿ ಬಂತು, ಓಲೆ ಎಲ್ಲಿ ಹೋಯ್ತು? ದೂರದರ್ಶನ ಬಂತು, ಆಕಾಶವಾಣಿ ಎಲ್ಲಿ ಹೋಯ್ತು? ಪಾಪ್ ಸಂಗೀತ ಬಂತು, ಜಾನಪದ ಎಲ್ಲಿ ಹೋಯ್ತು? ಡಿಸ್ಕೋ ಡಾನ್ಸ್ ಬಂತು, ಭರತ ನಾಟ್ಯ ಎಲ್ಲಿ ಹೋಯ್ತು? ಕಂಪ್ಯೂಟರ್ ಬಂತು, ಬೆರಳಚ್ಚು ಎಲ್ಲಿ ಹೋಯ್ತು? ಯಂತ್ರ ಮಾನವ ಬಂದ, ಸ್ವತಂತ್ರ ಮನ ಎಲ್ಲಿ ಹೋಯ್ತು? ಎಂದು ಪ್ರಶ್ನಿಸಿದರು.

ಎಲ್ಲವೂ ಬದಲಾಗುತ್ತಿದೆ. ಬದಲಾವಣೆ ಜಗದ ನಿಯಮ. ಆದರೆ, ಕನ್ನಡ ನಾಡಿಗಾಗಿ ಹೋರಾಟ ನಡೆಸಿದರನ್ನು ನೆನಪಿಡಬೇಕು. ಮಕ್ಕಳಿಗೆ ಮಮ್ಮಿ, ಡ್ಯಾಡಿ ಬದಲು ಅಪ್ಪ ಅಮ್ಮ ಎಂದು ಹೇಳುವುದನ್ನು ಕಲಿಸುವ ಮೂಲಕ ಕನ್ನಡವನ್ನು ಉಳಿಸಬೇಕು. ಅಷ್ಟೇ ಅಲ್ಲ, ವ್ಯವಹಾರಿಕವಾಗಿ ಮಕ್ಕಳಿಗೆ ಬೇರೆ ಭಾಷೆ ಕಲಿಸಿ. ಆದರೆ, ಕನ್ನಡಕ್ಕೂ ಪ್ರಾಧಾನ್ಯತೆ ನೀಡಿ ಎಂದು ಶಶಿಕಲಾ ಜೊಲ್ಲೆ ಕರೆ ನೀಡಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಬಿ. ಎಸ್. ಯಡಿಯೂರಪ್ಪ ಮೂರು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಆದರೆ, ಯತ್ನಾಳ್​ ಅಣ್ಣನವರು ಯಾಕೆ ಹೀಗೆ ಹೇಳುತ್ತಿದ್ದಾರೆ ಗೊತ್ತಾಗುತ್ತಿಲ್ಲ ಎಂದು ತಿಳಿಸಿದರು.

ಬಿ ಎಸ್ ವೈ ಸಿಎಂ ಆಗಿ ಮೂರು ವರ್ಷ ಮುಂದುವರೆಯುತ್ತಾರೆ ಎಂದು ಹೇಳುವ ಮೂಲಕ ಸಿಎಂ ಆಗಿ ಯಡಿಯೂರಪ್ಪ 3 ವರ್ಷ ಮುಂದುವರೆಯುತ್ತಾರೆ ಎಂದು ಹೇಳೋದಿಲ್ಲ ಎಂದ ಯತ್ನಾಳ್ ಹೇಳಿಕೆ ಕುರಿತು ಅವರು ಪ್ರತಿಕ್ರಿಯೆ ನೀಡಿದರು.

ಬಿ ಎಸ್ ವೈ 3 ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ, ಇದರಲ್ಲಿ ಅನುಮಾನ ಇಲ್ಲ. ಆದರೆ, ಯತ್ನಾಳ್ ಅಣ್ಣನವರು ಯಾಕೆ ಹೀಗೆ ಹೇಳುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ‌. ಅವರು ಹಿರಿಯ ಶಾಸಕರಾಗಿದ್ದಾರೆ. ಅವರ ಬಗ್ಗೆ ಗೌರವ ಇದೆ. ಅವರು ಹೀಗೆ ಮಾತನಾಡಬಾರದು. ನಾನು ಇಂದು ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ ಎಂದು ತಿಳಿಸಿದರು.

ನಾನು ಮಾತನಾಡಿದ್ದರಿಂದಲೇ ಅನುದಾನ ಬಿಡುಗಡೆ ಆಯ್ತು ಎಂದು ಯತ್ನಾಳ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕೊರೋನಾದಿಂದ ಅನುದಾನದ ಬಿಡುಗಡೆಯಲ್ಲಿ ಸಮಸ್ಯೆ ಆಗಿತ್ತು. ಈಗ ಅನುದಾನ ಬಿಡುಗಡೆಯಾಗಿದೆ. ಅಭಿವೃದ್ಧಿ ಆಗುತ್ತೆ ಎಂದರು.

ಇದನ್ನೂ ಓದಿ : Ekalavya Award: ಏಕಲವ್ಯ, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪ್ರಕಟ: 64 ಸಾಧಕರ ಪ್ರಶಸ್ತಿಯ ಪಟ್ಟಿ ಬಿಡುಗಡೆ ಮಾಡಿದ ಸಚಿವ ಸಿಟಿ ರವಿ

ಮಳೆ ಮತ್ತು ಪ್ರವಾಹ ಪರಿಹಾರದಲ್ಲಿ ತಾರತಮ್ಯ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರು ಮಳೆ ಸಂತ್ರಸ್ತರಿಗೆ 25 ಸಾವಿರ ರೂ ಮತ್ತು ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಕೇವಲ 10 ಸಾವಿರ ರೂ ಪರಿಹಾರ ನೀಡಿರುವ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಹೀಗಾಗಿದ್ದರೆ ಸರಿಯಲ್ಲ. ಈ ಕುರಿತು ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಮಹಿಳಾ ವಿಶ್ವವಿದ್ಯಾಲಯದಲ್ಲಿ ಸಿಬ್ಬಂದಿ ಕೊರತೆ ಕುರಿತು ವಿಶ್ವವಿದ್ಯಾಲಯದ ಕುಲಪತಿ ಜೊತೆ ಸಭೆ ನಡೆಸಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಾದಿಗಿ ಅವರು ತಿಳಿಸಿದರು.
Published by:G Hareeshkumar
First published: