Viral Video: ದಾರಿ ಮಧ್ಯೆ ಕೈಕೊಟ್ಟ ಜೀಪ್, ಕೆಸರುಮಯ ರಸ್ತೆಯಲ್ಲಿ ನಡೆದುಕೊಂಡೇ ಹೋಗಿ ಜನರ ಸಮಸ್ಯೆ ಕೇಳಿದ ಸಚಿವ ಎಸ್​.ಅಂಗಾರ..!

ಕೆಸರುಮಯ ಏರು‌ ರಸ್ತೆಯಲ್ಲಿ ಸಚಿವರು ಪ್ರಯಾಣಿಸಿದ ಜೀಪು ಕೆಸರಿನಲ್ಲಿ ಹೂತು ರಸ್ತೆ ಮಧ್ಯೆ ಮುಂದಕ್ಕೆ ಚಲಿಸಲಾಗದೆ ಅಲ್ಲೇ ಉಳಿಯಿತು. ಬಳಿಕ ಸಚಿವರು ಜೀಪಿನಿಂದ ಇಳಿದು ನಡೆದುಕೊಂಡೇ ಮೇಲೆ ಸಾಗಿದ್ದಾರೆ.

ಕೆಸರುಮಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಚಿವ ಎಸ್​.ಅಂಗಾರ

ಕೆಸರುಮಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಚಿವ ಎಸ್​.ಅಂಗಾರ

  • Share this:
ದಕ್ಷಿಣ ಕನ್ನಡ(ಆ.09):  ಗ್ರಾಮದ ಜನರ ಭೇಟಿಗೆ ಹೊರಟ ರಾಜ್ಯದ ಮೀನುಗಾರಿಕಾ ಮತ್ತು ಬಂದರು ಸಚಿವ ಎಸ್.ಅಂಗಾರ ಅವರು ಸರಿಯಾದ ರಸ್ತೆಯಿಲ್ಲದ‌ ಕಾರಣ ಕಾಲ್ನಡಿಗೆಯಲ್ಲೇ ಜನರ ಭೇಟಿ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಕುಗ್ರಾಮಗಳನ್ನೇ ಹೆಚ್ಚು ಹೊಂದಿರುವ ಸುಳ್ಯದ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಅಂಗಾರ ಸಚಿವರಾಗಿ ಆಯ್ಕೆಯಾದ ಬಳಿಕ ತಮ್ಮ ಕ್ಷೇತ್ರದ ಗ್ರಾಮ ಗ್ರಾಮಗಳಿಗೆ ಭೇಟಿ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಇದೇ ರೀತಿ ಸುಳ್ಯದ ಆಲೆಟ್ಟಿಯಿಂದ ಕೂಟೇಲು ಗ್ರಾಮಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಗ್ರಾಮವನ್ನು ಸಂಪರ್ಕಿಸುವ ರಸ್ತೆ ಭಾರೀ ಮಳೆಯಿಂದಾಗಿ ಸಂಪೂರ್ಣ ಹೆದಗೆಟ್ಟಿತ್ತು. ಇದರಿಂದಾಗಿ ತಮ್ಮ ಕಾರನ್ನು ಬಿಟ್ಟು ಸಚಿವರು ಜೀಪ್ ಮೂಲಕ ಕೂಟೇಲು ಗ್ರಾಮಕ್ಕೆ ಹೊರಟಿದ್ದರು. ಆದರೆ ಮಳೆಯಿಂದಾಗಿ ಕೆಸರುಮಯವಾಗಿದ್ದ ರಸ್ತೆಯಲ್ಲಿ ಸಚಿವರಿದ್ದ ಜೀಪ್ ಕೂಡಾ ಹೋಗಲಾಗದೆ, ಸಚಿವರು ಕಾಲ್ನಡಿಗೆಯಲ್ಲೇ ಗ್ರಾಮದ ಜನರನ್ನು ಭೇಟಿ ಮಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿತ್ತು.

ಈ ರಸ್ತೆಯ ಸುಮಾರು ಒಂದು ಕಿಲೋಮೀಟರ್ ರಸ್ತೆ ಇದೇ ರೀತಿ ಹದಗೆಟ್ಟಿದ್ದು, ಇಲ್ಲಿ ರಸ್ತೆ ನಿರ್ಮಿಸಲು ಶಾಸಕ ಅಂಗಾರ ಈಗಾಗಲೇ ಅನುದಾನವನ್ನು ಬಿಡುಗಡೆ ಮಾಡಿದ್ದು, ಒಂದು ಕಿಲೋಮೀಟರ್ ರಸ್ತೆ ಕಾಮಗಾರಿ ಮಳೆಯ ಕಾರಣಕ್ಕಾಗಿ ನಿಂತಿತ್ತು.  ಆದರೆ ಇದೇ ಒಂದು ಕಿಲೋಮೀಟರ್ ರಸ್ತೆಯಲ್ಲಿ ಸಚಿವ ಅಂಗಾರರ ಜೀಪ್ ಸಂಚರಿಸಲಾಗದ ಕಾರಣ ಸಚಿವರು ಜೀಪ್ ನಿಂದ ಇಳಿದು ಕಾಲ್ನಡಿಗೆಯಲ್ಲಿ ಸಾಗಿದ್ದರು. ಈ ಸಂದರ್ಭದಲ್ಲಿ ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಿಸಲಾಗಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಸಚಿವ ಎಸ್​.ಅಂಗಾರ


ಇದನ್ನೂ ಓದಿ:Karnataka Weather Today: ಇಂದು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ; ಬೆಂಗಳೂರಿನ ವಾತಾವರಣ ಹೇಗಿರಲಿದೆ?

ಕೆಸರುಮಯ ಏರು‌ ರಸ್ತೆಯಲ್ಲಿ ಸಚಿವರು ಪ್ರಯಾಣಿಸಿದ ಜೀಪು ಕೆಸರಿನಲ್ಲಿ ಹೂತು ರಸ್ತೆ ಮಧ್ಯೆ ಮುಂದಕ್ಕೆ ಚಲಿಸಲಾಗದೆ ಅಲ್ಲೇ ಉಳಿಯಿತು. ಬಳಿಕ ಸಚಿವರು ಜೀಪಿನಿಂದ ಇಳಿದು ನಡೆದುಕೊಂಡೇ ಮೇಲೆ ಸಾಗಿದ್ದಾರೆ. ಜೀಪನ್ನು  ಸ್ಥಳೀಯರು ತಳ್ಳಿ ಮೇಲೆ ತಲುಪಿಸಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ, ಡಿಜಿಟಲ್ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದ್ದು ಪರ ವಿರೋಧ ಚರ್ಚೆಗಳು ನಡೆಯುತ್ತಿದೆ.

ನೆಟ್ಟಿಗರು ವಿವಿಧ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಗ್ರಾಮೀಣ ಭಾಗದ ರಸ್ತೆಯ ನರಕ ಸದೃಶ್ಯ ರಸ್ತೆಯ ಸ್ಥಿತಿ ಸಚಿವರಿಗೆ ಪ್ರತ್ಯಕ್ಷ ದರ್ಶನವಾಯಿತು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಲ್ಲಿ‌ ತಾಲೂಕು ಹಿಂದೆ  ಬಿದ್ದಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಪ್ಯಾಕೇಜ್ ಘೋಷಣೆ ಮಾಡಿಸಲು ಸಚಿವರು ಪ್ರಯತ್ನ ನಡೆಸಬೇಕು ಎಂಬ ಅಭಿಪ್ರಾಯ  ವ್ಯಕ್ತವಾಗಿದೆ.

ದುರ್ಗಮ ರಸ್ತೆಯಲ್ಲಿ ಸಚಿವರು ಪ್ರಯಾಣ ಮಾಡಿರುವುದಕ್ಕೆ ಶ್ಲಾಘನೆಯೂ ವ್ಯಕ್ತವಾಗಿದೆ. ಕಾರು ಹೋಗದ ರಸ್ತೆಯಲ್ಲಿ ಹೋಗಲು ಹಿಂದೇಟು ಹಾಕದೆ ಜೀಪಿನಲ್ಲಿ ಹೋಗಿ, ಜೀಪು ರಸ್ತೆಯಲ್ಲಿ ಉಳಿದಾಗ ಹಿಂದಕ್ಕೆ ಬಾರದೆ ನಡೆದು ಕೊಂಡು ಹೋಗಿ ರಸ್ತೆ ವೀಕ್ಷಣೆ ಮಾಡಿರುವುದು ಉತ್ತಮ ಕಾರ್ಯ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಆಗಸ್ಟ್​ 15ರಿಂದ ಸಂಚರಿಸಲಿರುವ ಮುಂಬೈ ಲೋಕಲ್​ ರೈಲುಗಳು; ಈ ಪ್ರಯಾಣಿಕರಿಗೆ ಮಾತ್ರ ಅವಕಾಶ..!

ಕೂಟೇಲು ರಸ್ತೆ ಸೇರಿ ಗ್ರಾಮೀಣ ರಸ್ತೆಗಳು ಸದ್ಯದಲ್ಲಿ ಅಭಿವೃದ್ಧಿ ಆಗುವ ಆಶಾಭಾವನೆಯನ್ನು ಕೆಲವರು ವ್ಯಕ್ತಪಡಿಸಿದ್ದರೆ, ಕೂಟೇಲು ರಸ್ತೆಗೆ ಅನುದಾನ ಇದೆ ಸದ್ಯದಲ್ಲಿಯೇ ಅಭಿವೃದ್ಧಿ ಆಗಲಿದೆ ಎಂದು ಕೆಲವರು ಹೇಳಿದ್ದಾರೆ. ವೀಡಿಯೋ ಸಾಕಷ್ಟು ಟ್ರೋಲ್ ಗೂ ಪಾತ್ರವಾಗಿದೆ. ರಸ್ತೆ ಅಭಿವೃದ್ಧಿ ಮಾಡಬೇಕು ಎಂದು ಸ್ಥಳೀಯರು ಈ ಸಂದರ್ಭದಲ್ಲಿ ಮನವಿಯನ್ನೂ ಸಲ್ಲಿಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Latha CG
First published: