Pralhad Joshi V/S HDK: ಮುಸ್ಲಿಮರ ಮತ ಸೆಳೆಯಲು RSSನ ಬೈಯುತ್ತಿದ್ದಾರೆ; ಸಚಿವ ಪ್ರಹ್ಲಾದ್ ಜೋಶಿ

ಬಿಜೆಪಿ ಮತ್ತು RSS ಎರಡನ್ನೂ ಭೂತದಂತೆ ಬಿಂಬಿಸಲು ಈ ಇಬ್ಬರು ನಾಯಕರು ಸ್ಪರ್ಧೆಗೆ ಇಳಿದಿದ್ದಾರೆ. ಮುಸ್ಲಿಂ ಮತಗಳ ಓಲೈಕೆಗಾಗಿ ನಮ್ಮನ್ನು ಬೈಯುತ್ತಿದ್ದಾರೆ. ಅವರಿಗೆ ಬೇರೆ ವೋಟ್ ಬ್ಯಾಂಕ್ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಪ್ರಹ್ಲಾದ್ ಜೋಶಿ

ಪ್ರಹ್ಲಾದ್ ಜೋಶಿ

 • Share this:
  ಧಾರವಾಡ: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (Siddaramaiah) ಮತ್ತು ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ಹೇಳಿಕೆಗಳಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಧಾರವಾಡದಲ್ಲಿ ಪ್ರತಿಕ್ರಿಯಿಸಿದ್ದಾರೆ. ನಾವು ಮುಸ್ಲಿಂ ವಿರೋಧಿಗಳಲ್ಲ. ಯಾವ ಸಮುದಾಯವನ್ನು ವಿರೋಧಿಸಲ್ಲ. ಆದ್ರೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅಲ್ಪಸಂಖ್ಯಾತರ ಮತಗಳನ್ನು ಪಡೆಯರಲು ಬಿಜೆಪಿ (BJP) ಮತ್ತು RSSನ ಬೈಯುತ್ತಿದ್ದಾರೆ. ಬಿಜೆಪಿ ಮತ್ತು RSS ಎರಡನ್ನೂ ಭೂತದಂತೆ ಬಿಂಬಿಸಲು ಈ ಇಬ್ಬರು ನಾಯಕರು ಸ್ಪರ್ಧೆಗೆ ಇಳಿದಿದ್ದಾರೆ. ಮುಸ್ಲಿಂ ಮತಗಳ ಓಲೈಕೆಗಾಗಿ ನಮ್ಮನ್ನು ಬೈಯುತ್ತಿದ್ದಾರೆ. ಅವರಿಗೆ ಬೇರೆ ವೋಟ್ ಬ್ಯಾಂಕ್ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಜನಸಂಖ್ಯೆ ನಿಯಂತ್ರಣ ಬಗ್ಗೆ ಮೋಹನ್ ಭಾಗವತ್ ನೀಡಿರುವ ಹೇಳಿಕೆ ಸತ್ಯವಾಗಿದೆ. ಸಂಬಂಧಿಸಿದ ಎಲ್ಲ ರಾಜ್ಯ ಸರ್ಕಾರಗಳು ಚಿಂತನೆ ನಡೆಸಬೇಕಿದೆ ಎಂದರು.

  ಹೆಚ್‍ಡಿಕೆಗೆ ಉತ್ತರ ನೀಡಿದ ಕಟೀಲ್ 

  ಮಾಜಿ ಸಿಎಂ ಕುಮಾರಸ್ವಾಮಿಯವರು ಕುರುಡರು. ಆರ್‍ಎಸ್‍ಎಸ್ ಬಗ್ಗೆ ತಿಳಿದುಕೊಳ್ಳಬೇಕಾದ್ರೆ ನಾಲ್ಕು ದಿನ ನಮ್ಮ ಶಾಖೆಗೆ ಬರಲಿ. ಆರ್‍ಎಸ್‍ಎಸ್ ನವರು ಯನಿವರ್ಸಿಟಿಗಳಲಿದ್ರೆ ಆ ಸಂಸ್ಥೆಗಳು ಅಭಿವೃದ್ಧಿಯಾಗಲಿವೆ. ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಇಡೀ ಆಡಳಿತ ಅವರ ಮನೆಯಲ್ಲಿತ್ತು. ಗೃಹ ಇಲಾಖೆ ಸೇರಿದಂತೆ ಎಲ್ಲಾ ಕಡೆ ಅವರ ಕುಟುಂಬ ವರ್ಗದವರಿದ್ದರು. ಇಡೀ ರಾಜ್ಯವನ್ನು ಲೂಟಿ ಮಾಡಿದವರು ಆರ್‍ಎಸ್‍ಎಸ್ ಬಗ್ಗೆ ಮಾತನಾಡಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಸುಬ್ರಹ್ಮಣ್ಯದಲ್ಲಿ ಕಿಡಿಕಾರಿದರು.

  ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ - Hangal Byelection Siddaramaiah Campaign

  ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಲಗುಂದ ಗ್ರಾಮದಲ್ಲಿ ಹಾನಗಲ್ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ (Congress Candidate Sirnivas Mane) ಪರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಉರಿಬಿಸಿಲಿನಲ್ಲೂ ಇಷ್ಟೊಂದು ಜನರು ಸೇರಿದ್ದೀರಿ. ಚುನಾವಣಾ ಆಯೋಗದವರು ಇಷ್ಟೆ ಖರ್ಚು ಮಾಡಬೇಕು, ಸಭೆ ಇದೆ ರೀತಿಯಲ್ಲಿ ನಡೆಯಬೇಕು ಎಂಬ ಸೂಚನೆ ನೀಡಿದ್ದಾರೆ. ಮಾಸ್ಕ್ ತೆಗಿಬೇಕಾ ಎಂದು ಸಿದ್ದರಾಮಯ್ಯನವರು ಕೇಳುತ್ತಿದ್ದಂತೆ ಸಭೆಯಲ್ಲಿ ಹೌದು ಹುಲಿಯಾ ಘೋಷಣೆ ಮೊಳಗಿತು.

  ಯಡಿಯೂರಪ್ಪ ಪ್ರಚಾರಕ್ಕೆ ಬರಬಹುದು

  ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬಹುಮತ ಬರಲಿಲ್ಲ. ಕೋಮುವಾದಿ ಶಕ್ತಿಗಳು ಅಧಿಕಾರಕ್ಕೆ ಬರಬಾರದು ಅಂತಾ ಜೆಡಿಎಸ್ ಬೆಂಬಲಿಸಿದೆವು. ಈ ಗಿರಾಕಿ ಬಿ.ಎಸ್.ಯಡಿಯೂರಪ್ಪ ನಮ್ಮವರನ್ನೇ ತಗೊಂಡು ಸರಕಾರ ಮಾಡಿದರು. ಯಡಿಯೂರಪ್ಪ ಪ್ರಚಾರಕ್ಕೆ ಬರಬಹುದು, ಅಧಿಕಾರಕ್ಕಂತೂ ಬರಲು ಸಾಧ್ಯವಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿ.ಎಲ್.ಸಂತೋಷ ಹೋಗಿ ಗೋಗರೆದಿದ್ದರಿಂದ ಯಡಿಯೂರಪ್ಪ ಪ್ರಚಾರಕ್ಕೆ ಬರಬಹುದು ಎಂದು ಹೇಳಿದರು.

  ಇದನ್ನೂ ಓದಿ: HD Kumaraswamy ಒಂದೇ ಮಾತಿಗೆ ಸಿಡಿದೆದ್ದ ಬಿಜೆಪಿ ನಾಯಕರು; RSS ವಿರುದ್ಧ HDK ನಿರಂತರ ವಾಗ್ದಾಳಿ ಮರ್ಮವೇನು?

  ಇಂತಹವರಿಗೆ ವೋಟ್ ಕೊಡಬೇಕಾ?

  ಕಾಂಗ್ರೆಸ್ ಸರ್ಕಾರದಲ್ಲಿ ಏಳು ಕೆ.ಜಿ. ಅಕ್ಕಿ ಕೊಡುತ್ತಿದ್ದೆ. ಆದ್ರೆ ಯಡಿಯೂರಪ್ಪ ಐದು ಕೆಜಿ ಮಾಡಿದರು. ಏಳು ಕೆಜಿ ಅಕ್ಕಿ ಕೊಟ್ಟರೆ ಇವರಪ್ಪನ ಮನೆ ಗಂಟು ಹೋಗುತ್ತಾ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಈಗ ಸಿಎಂ ಬೊಮ್ಮಾಯಿ ಸಹ ಐದು ಕೆಜಿ ನೀಡೋದನ್ನು ಮುಂದುವರಿಸಿದ್ದಾರೆ. ನಾವು ಮಕ್ಕಳಿಗೆ ಹಾಲು ಕೊಡುತ್ತಿದ್ದೇವು. ವರ್ಷಕ್ಕೆ ಮೂರು ಲಕ್ಷಗಳಂತೆ ಐದು ವರ್ಷದಲ್ಲಿ 15 ಲಕ್ಷ ಮನೆಗಳನ್ನು ಕೊಟ್ಟಿದ್ದೇವೆ. ಈ ಪುಣ್ಯಾತ್ಮರು ಅಧಿಕಾರಕ್ಕೆ ಬಂದ್ಮೇಲೆ ಒಂದಾದ್ರೂ ಮನೆ ಕೊಟ್ಟಿದ್ರೆ ಹೇಳಲಿ. ಇದು ಬಡವರ ಪರ ಸರ್ಕಾರನಾ? ಇಂತಹವರಿಗೆ ವೋಟ್ ಕೊಡಬೇಕಾ? ನಾವು ಮಾಡಿದ ಎಲ್ಲ ಕಾರ್ಯಕ್ರಮಗಳನ್ನ ನಿಲ್ಲಿಸಿದ್ರು. ಎಮ್ಮೆ, ಕುರಿ ಸತ್ತೋದ್ರೆ ಪರಿಹಾರ ಕೊಡಬೇಕು ಅಂತಾ ಮಾಡಿದ್ದೆ. ಬಿಜೆಪಿಯವರು ಅಧಿಕಾರಕ್ಕೆ ಬಂದ್ಮೇಲೆ ಅದನ್ನೆಲ್ಲ ನಿಲ್ಲಿಸಿದ್ರು. ಬಿಜೆಪಿಯವರಿಗೆ ಏತಕ್ಕೆ ವೋಟು ಹಾಕಬೇಕು ಎಂದು ಜನರನ್ನು ಪ್ರಶ್ನೆ ಮಾಡಿ

  ವರದಿ: ಮೊಹ್ಮದ್​ ರಫೀಕ್​ ಕೆ 
  Published by:Kavya V
  First published: