HOME » NEWS » District » MINISTER PRABHU CHOUHAN SPECIAL POOJA IN GADE DURGADEVI TEMPLE AT YADAGIRI NMPG HK

ಸಚಿವ ಸ್ಥಾನ ಉಳಿಸಿಕೊಳ್ಳಲು ದೇವರ ಮೊರೆ ಹೋದ ಸಚಿವ ಪ್ರಭು ಚವ್ಹಾಣ : ಗಡೇ ದುರ್ಗಾದೇವಿಗೆ ವಿಶೇಷ ಪೂಜೆ

ಅರ್ಚಕ ಮರಿಸ್ವಾಮಿ ನೇತೃತ್ವದಲ್ಲಿ ಸಚಿವ ಸಚಿವ ಪ್ರಭು ಚವ್ಹಾಣ ಅವರು ವಿಶೇಷ ಪೂಜೆ ನಡೆಸಿದರು. ಮಂದಿರದಲ್ಲಿ ಪೂಜೆ ಮಾಡಿದ ನಂತರ ಅರ್ಚಕರ ನಿವಾಸದಲ್ಲಿ ವಿಶೇಷ ಮಾಡಿದ್ದಾರೆ

news18-kannada
Updated:November 23, 2020, 9:15 PM IST
ಸಚಿವ ಸ್ಥಾನ ಉಳಿಸಿಕೊಳ್ಳಲು ದೇವರ ಮೊರೆ ಹೋದ ಸಚಿವ ಪ್ರಭು ಚವ್ಹಾಣ : ಗಡೇ ದುರ್ಗಾದೇವಿಗೆ ವಿಶೇಷ ಪೂಜೆ
ದೇವರ ದರ್ಶನ ಪಡೆದ ಸಚಿವ ಪ್ರಭು ಚವ್ಹಾಣ
  • Share this:
ಯಾದಗಿರಿ(ನವೆಂಬರ್​. 23): ಸಂಕಷ್ಟ ನಿವಾರಣೆಗಾಗಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ದೇವಿಯ ಮೊರೆ ಹೋಗಿದ್ದಾರೆ. ಸಚಿವ ಸಂಪುಟದಿಂದ ಕೈಬಿಡುತ್ತಾರೆಂದು ಸಚಿವ ಸ್ಥಾನ ಉಳಿಸಿಕೊಳ್ಳಲು ಗಡೇ ದುರ್ಗಾದೇವಿ ದರ್ಶನ ಭಾಗ್ಯ ಪಡೆದಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿ ಶಕ್ತಿ ದೇವತೆಯಾಗಿದ್ದು ಹೀಗಾಗಿ ಸಂಕಷ್ಟ ಸಂದರ್ಭದಲ್ಲಿ ಸಚಿವ ಪ್ರಭು ಚವ್ಹಾಣ ಅವರು ಮಂದಿರದ ಗರ್ಭ ಗುಡಿಯೊಳಗೆ ತೆರಳಿ ದೇವಿಗೆ ವಿಶೇಷ ನಡೆಸಿದ್ದಾರೆ. ಈ ವೇಳೆ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಕೂಡ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ. ಅರ್ಚಕ ಮರಿಸ್ವಾಮಿ ನೇತೃತ್ವದಲ್ಲಿ ಸಚಿವರು ವಿಶೇಷ ಪೂಜೆ ನಡೆಸಿದರು. ಮಂದಿರದಲ್ಲಿ ಪೂಜೆ ಮಾಡಿದ ನಂತರ ಅರ್ಚಕರ ನಿವಾಸದಲ್ಲಿ ವಿಶೇಷ ಮಾಡಿದ್ದಾರೆ. ಅರ್ಚಕ ಮರಿಸ್ವಾಮಿ ಅವರು ಸಂಕಷ್ಟ ನಿವಾರಣೆ ಹಾಗೂ ಒಳಿತಾಗಲಿ ಎಂದು ಹಾರೈಸಿದರು. ಈ ವೇಳೆ ಸಚಿವರನ್ನು ಸನ್ಮಾನಿಸಿ ಗೌರವಿಸಿ ನಿಮಗೆ ಯಾವುದೇ ಸಮಸ್ಯೆಯಾಗಲ್ಲ ರಾಜಕೀಯದಲ್ಲಿ ಒಳಿತಾಗಲಿದೆ ಎಂದು ಹಾರೈಸಿದರು.

ಡಿಕೆಶಿ ಹಾಗೂ ರಾಮುಲು ನಂತರ ಚವ್ಹಾಣ ದರ್ಶನ...!

ಕಳೆದ ವರ್ಷ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಗಡೇದುರ್ಗಾದೇವಿ ಜಾತ್ರೆ ಮಹೋತ್ಸವಕ್ಕೆ ಆಗಮಿಸಿ ದೇವಿಯ ದರ್ಶನ ಭಾಗ್ಯ ಪಡೆದ ನಂತರ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ  ಸ್ಥಾನ ಪಡೆದಿದ್ದರು. ಅದೆ ರೀತಿ ಡಿಕೆಶಿ ಸಂಕಷ್ಟ ಸಂದರ್ಭದಲ್ಲಿ ದೇವಿಯ ಅರ್ಚಕ ಮಹಾದೇವಪ್ಪ ಅವರು ಬೆಂಗಳೂರಿನ ಡಿಕೆಶಿ ನಿವಾಸದಲ್ಲಿ ಹಲವಾರು ಬಾರಿ ಗಡೇ ದುರ್ಗಾದೇವಿ ಪೂಜೆ ನಡೆಸಿದ್ದರು. ಅನೇಕ ಬಾರಿ ಗೋನಾಲ ಗ್ರಾಮದ ಗಡೇದುರ್ಗಾದೇವಿ ಮಂದಿರದಲ್ಲಿ ‌ಕೂಡ ಡಿಕೆಶಿಗೆ ಸಂಕಷ್ಟ ನಿವಾರಣೆಯಾಗಬೇಕು ಹಾಗೂ ರಾಜಕೀಯದಲ್ಲಿ ಒಳಿತಾಗಬೇಕೆಂದು ಪೂಜೆ ಮಾಡಲಾಗಿತ್ತು. ಡಿಕೆಶಿ ಗಡೇ ದುರ್ಗಾದೇವಿ ಪರಮ ಭಕ್ತರಾಗಿದ್ದಾರೆ.

ಇದನ್ನೂ ಓದಿ : ಡಿಸಿಎಂ, ಶಾಸಕರಿಗೆ ಚಿನ್ನದ ಕಿರೀಟ ತೊಡಿಸಿದ ಗ್ರಾಮಸ್ಥರು: ಕೊರೋನಾ ನಿಯಮ ಪಾಲಿಸೋದನ್ನೇ ಮರೆತರು

ಅದೆ ರೀತಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಕೂಡ ಸಂಕಷ್ಟ ನಿವಾರಣೆಗಾಗಿ ಹಾಗೂ ರಾಜಕೀಯದಲ್ಲಿ ಒಳಿತಾಗಲಿ ಎಂದು ಗಡೇದುರ್ಗಾದೇವಿ ಮಂದಿರದಲ್ಲಿ ವಿಶೇಷ ಮಾಡಿದರು. ಇಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ದೇವಿ ಕೃಪೆಗೆ ಪಾತ್ರರಾಗಿದ್ದಾರೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಅರ್ಚಕ ಮರಿಸ್ವಾಮಿ ಮಾತನಾಡಿ, ಸಂಕಷ್ಟ ನಿವಾರಣೆ ಹಾಗೂ ರಾಜಕೀಯದಲ್ಲಿ ಯಾವುದೇ ಸಮಸ್ಯೆಯಾಗದಂತೆ ಪೂಜೆ ಮಾಡಲಾಗಿದ್ದು ದೇವಿಯ ಕೃಪೆಯಿಂದ ಯಾವುದೇ ತೊಂದರೆಯಾಗಲ್ಲವೆಂದರು.
Published by: G Hareeshkumar
First published: November 23, 2020, 8:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading