ಸಚಿವ ಪ್ರಭು ಚವ್ಹಾಣ್ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಆಯ್ಕೆ : ಮಾಜಿ ಸಚಿವ ಹೆಚ್ ಆಂಜನೇಯ

ಪ್ರಭು ಚವ್ಹಾಣ ಅವರು ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಮೂರು ಭಾರಿ ಆಯ್ಕೆ ಆಗಿ ಸಚಿವರಾಗಿದ್ದಾರೆ‌. ಇವರನ್ನು ಸಚಿವ ಸ್ಥಾನದಿಂದ ಹಾಗೂ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಮಾಜಿ ಸಚಿವ ಹೆಚ್ ಆಂಜನೇಯ ಆಗ್ರಹಿಸಿದರು.

news18-kannada
Updated:September 23, 2020, 5:46 PM IST
ಸಚಿವ ಪ್ರಭು ಚವ್ಹಾಣ್ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಆಯ್ಕೆ : ಮಾಜಿ ಸಚಿವ ಹೆಚ್ ಆಂಜನೇಯ
ಮಾಜಿ ಸಚಿವ ಹೆಚ್. ಆಂಜನೇಯ
  • Share this:
ಚಿತ್ರದುರ್ಗ(ಸೆಪ್ಟೆಂಬರ್​. 23): ರಾಜ್ಯದಲ್ಲಿ ಮೀಸಲಾತಿಯ ಹಗಲು ದರೋಡೆ ನಡೆಯುತ್ತಿದೆ. ಮೂಲ ಪರಿಶಿಷ್ಟ ಜಾತಿ ಲಂಬಾಣಿಗರ ಮೀಸಲಾತಿಯನ್ನ ಪಶು ಸಂಗೋಪನಾ ಇಲಾಖೆ ಸಚಿವ ಪ್ರಭು ಚವ್ಹಾಣ್ ಲಪಟಾಯಿಸಿದ್ದಾರೆ. ರಾಜ್ಯದಲ್ಲಿ ನಕಲಿ‌ ಜಾತಿ ಪ್ರಮಾಣ ಪತ್ರ ಪಡೆದು ಸ್ಪರ್ಧಿಸಿ ಮಂತ್ರಿಗಿರಿ ಪಡೆದಿದ್ದಾರೆ. ಇವರನ್ನ ಕೂಡಲೇ ಸಚಿವ ಸ್ಥಾನದಿಂದ ಹಾಗೂ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಮಾಜಿ ಸಚಿವ ಹೆಚ್. ಆಂಜನೇಯ ಮುಖ್ಯ ಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮವಾಗಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವ ಕುರಿತು ವಾಗ್ದಾಳಿ ನಡೆಸಿದ್ದು, ಸಚಿವ ಪ್ರಭು ಚವ್ಹಾಣ್ ಮಹಾರಾಷ್ಟ್ರದಲ್ಲಿ ಲಂಬಾಣಿ ಜನಾಂಗಕ್ಕೆ ಸೇರಿದವರು. ಅಲ್ಲಿ ಲಂಬಾಣಿ ಜನಾಂಗ ಪರಿಶಿಷ್ಟ ಪಂಗಡಕ್ಕೆ ಸೇರಿದೆ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗೆ ಸೇರಿದೆ. ಹಾಗಾಗಿ ಇಲ್ಲಿ ಚುನಾವಣೆಗೆ ಎಸ್​ಸಿ ಮೀಸಲಾತಿ ಇದೆ ಎಂಬುದನ್ನ ತಿಳಿದು ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಮೋಸ ಮಾಡಿ ಬೀದರ್ ಜಿಲ್ಲೆಯ ಔರಾದ್ ಕ್ಷೇತ್ರದಿಂದ ವಿಧಾನ ಸಭೆಗೆ ಸ್ಪರ್ಧಿಸಿ ಶಾಸಕರಾಗಿ ಆಯ್ಕೆ ಆಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಅಲ್ಲದೇ ಈ ಕುರಿತು ಚುನಾವಣೆಯಲ್ಲಿ ಸಚಿವ ಪ್ರಭು ಚವ್ಹಾಣ್ ವಿರುದ್ದ ಸ್ಪರ್ಧಿಸಿದ್ದ ವಿಜಯಕುಮಾರ್ ಕೌಡಾಳ್ ಅವರು ಆಗಲೇ ಆಕ್ಷೇಪಣೆ ವ್ಯಕ್ತಮಾಡಿದ್ದರು. ಅಲ್ಲದೇ, ಶಂಕರ್ ದೊಡ್ಡಿ ಎಂಬುವರಿಂದ ಆಕ್ಷೇಪಣಾ ಅರ್ಜಿ ಸಲ್ಲಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಹೈ ಕೋರ್ಟ್​ನಲ್ಲಿ ಇನ್ನೇನು ತೀರ್ಪು ಬರುವ ವೇಳೆಗೆ ಶಂಕರ್ ದೊಡ್ಡಿ ಯಾವುದೋ ಪ್ರಭಾವಕ್ಕೆ ಒಳಗಾಗಿ ಪ್ರಕರಣ ವಾಪಸ್ ಪಡೆದರು ಎಂದರು

ಆದರೆ, ಇಷ್ಟಕ್ಕೆ ಪ್ರಕರಣ ಕೈ ಬಿಡದೆ ವಿಜಯಕುಮಾರ್ ಕೌಡಾಳ್ ಅವರು ಹೈಕೋರ್ಟ್, ಸಿಆರ್ ಸೆಲ್, ಸಮಾಜ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಿದ್ದರು. ಇದರ ಹಿನ್ನಲೆಯಲ್ಲಿ ಹೈಕೋರ್ಟ್, ಸಿಆರ್ ಸೆಲ್, ಸಮಾಜ ಕಲ್ಯಾಣ ಇಲಾಖೆಯಿಂದ ಬೀದರ್ ಡಿಸಿಗೆ ನಿರ್ದೇಶನ ಬಂದಿದ್ದರಿಂದ ಹಿಂದೆ ಇದ್ದ ಬೀದರ್ ಜಿಲ್ಲೆಯ ಡಿಸಿ ಮಹದೇವ್ ಅವರು ಸಚಿವ ಪ್ರಭು ಚೌಹಾಣ್ ಗೆ ನೋಟೀಸ್ ಜಾರಿ‌ ಮಾಡಿದ್ದರು. ಬಳಿಕ ನೋಟೀಸ್ ಜಾರಿ ಮಾಡಿದ ಡಿಸಿಯವರನ್ನ ತಕ್ಷಣವೇ ವರ್ಗವಣೆ ಮಾಡಿದರು. ಈಗ ಬೇರೆ ಡಿಸಿಯವರು ಬಂದಿದ್ದು, ಸಚಿವ ಪ್ರಭು ಚೌವ್ಹಾಣ್ ಅವರಿಗೆ ನೋಟೀಸ್ ನೀಡುವ ಗೋಜಿಗೆ ಹೋಗಿಲ್ಲ ಎಂದರು.

ಇದನ್ನೂ ಓದಿ : ಅಭಿಯಾನದ ಬಳಿಕವೂ ನನಸಾಗದ ಶೃಂಗೇರಿ ಜನರ ಕನಸು; ಸುಸಜ್ಜಿತ ಆಸ್ಪತ್ರೆಗೆ ಹಲವು ವಿಘ್ನ

ಇನ್ನೂ  ರಾಜ್ಯದಲ್ಲಿ ಮೀಸಲಾತಿಯ ಹಗಲು ದರೋಡೆ ನಡೆಯುತ್ತಿದೆ, ಮೂಲ ಲಂಬಾಣಿಗರ ಮೀಸಲಾತಿಯನ್ನ ಪ್ರಭು ಚೌವ್ಹಾಣ್ ಲಪಟಾಯಿಸಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸ್ಪರ್ಧೆ ಮಾಡಿ ಮಂತ್ರಿಗಿರಿ ಪಡೆದಿದ್ದಾರೆ. ಈ ಕುರಿತು ಇವರನ್ನ ಶಾಸಕ, ಸಚಿವ ಸ್ಥಾನದಿಂದ ವಜಾ ಮಾಡಿ ಎಂದು ಲಂಬಾಣಿ ಸಮುದಾಯ ಹೇಳಬೇಕಿತ್ತು. ಆದರೆ, ಅವರು ಇದು ನಮಗೆ ಸಂಬಂಧವಿಲ್ಲ ಎಂಬಂತೆ ಇದ್ದಾರೆ ಎಂದು ತಿಳಿಸಿದರು.

ಮುಂಚಿನಿಂದಲೂ ಡಾ.ಅಂಬೇಡ್ಕರ್ ಕಲ್ಪಿಸಿದ ಸಂವಿಧಾನದ ಹಕ್ಕುಗಳು ಉಲ್ಲಂಘನೆ ಆದಾಗ, ಪರಿಶಿಷ್ಟರಿಗೆ ಅನ್ಯಾಯಗಳಾದಗ ಬೀದಿಗಿಳಿದು ಹೋರಾಡುವವರು ಹೊಲೆ ಮಾದಿಗರು. ಪ್ರಭು ಚೌವ್ಹಾಣ್ ಪರಿಶಿಷ್ಟ ಜಾತಿ ಅಲ್ಲದ ಲಂಬಾಣಿ ಮಹಾರಾಷ್ಟ್ರದಲ್ಲಿ ಪರಿಶಿಷ್ಟ ಪಂಗಡವರು. ಆದರೂ ರಾಜ್ಯದಲ್ಲಿ ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಮೂರು ಭಾರಿ ಆಯ್ಕೆ ಆಗಿ ಸಚಿವನಾಗಿದ್ದಾರೆ‌. ಇವರನ್ನು ಸಚಿವ ಸ್ಥಾನದಿಂದ ಹಾಗೂ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಮಾಜಿ ಸಚಿವ ಹೆಚ್ ಆಂಜನೇಯ ಆಗ್ರಹಿಸಿದರು.
Published by: G Hareeshkumar
First published: September 23, 2020, 5:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading