• Home
  • »
  • News
  • »
  • district
  • »
  • ತುಮಕೂರು ಕೆಡಿಪಿ ಸಭೆಯಲ್ಲಿ ಸಚಿವ ಮಾಧುಸ್ವಾಮಿ, ಶಾಸಕ ರಂಗನಾಥ್ ಮಾತಿನ ಜಟಾಪಟಿ

ತುಮಕೂರು ಕೆಡಿಪಿ ಸಭೆಯಲ್ಲಿ ಸಚಿವ ಮಾಧುಸ್ವಾಮಿ, ಶಾಸಕ ರಂಗನಾಥ್ ಮಾತಿನ ಜಟಾಪಟಿ

ಸಚಿವ ಜೆಸಿ ಮಾಧುಸ್ವಾಮಿ

ಸಚಿವ ಜೆಸಿ ಮಾಧುಸ್ವಾಮಿ

ತುಮಕೂರಿನ ಕೆಡಿಪಿ ಸಭೆಯಲ್ಲಿ ಚರ್ಚೆ ನಡೆಯುವಾಗ ಶಾಸಕ ರಂಗನಾಥ್ ಅವರು ಜಿಲ್ಲೆಯಲ್ಲಿ ಜನರಿಗೆ ಮನೆ ಕಟ್ಟಲು ಹಣ ಕೊಟ್ಟಿಲ್ಲವೆಂಬ ವಿಚಾರವನ್ನು ಪ್ರಸ್ತಾಪ ಮಾಡಿದಾಗ ಸಚಿವ ಮಾಧುಸ್ವಾಮಿ ಕೋಪಗೊಂಡರು.

  • Share this:

ತುಮಕೂರು: ಇಲ್ಲಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಿನ್ನೆ ನಡೆದ 2020-21ನೇ ಸಾಲಿನ ಪ್ರಗತಿ ಪರಿಶಿಲಾ ನ ಸಭೆ ಕೋಲಾಹಲವೇ ಜರುಗಿತು. ಕುಣಿಗಲ್ ಶಾಸಕ ಡಾ. ರಂಗನಾಥ್ ತಮ್ಮ ಕ್ಷೇತ್ರದಲ್ಲಿ ಎಸ್ಸಿ ಎಸ್ಟಿ ಸೇರಿದಂತೆ ಇತರೆ ವರ್ಗದ ಜನರಿಗೆ ಮನೆ ಕಟ್ಟಲು ಹಣ ಕೊಟ್ಟಿಲ್ಲ ಎಂದು ಸಭೆಯಲ್ಲಿ ಗಂಭೀರ ಆರೋಪ ಮಾಡಿದಾಗ ವಾಗ್ಯುದ್ಧ ಪ್ರಾರಂಭವಾಯಿತು. ಸಭೆ ನಡೆಸುತ್ತಿದ್ದ ಸಚಿವ ಮಾದುಸ್ವಾಮಿ ಹಾಗೂ ಕುಣಿಗಲ್ ಶಾಸಕ ಡಾ. ರಂಗನಾಥ್ ನಡುವೆ ಮಾತಿನ ಚಕಮಕಿ ನಡೆದೇಹೋಯಿತು.


ಕುಡಿಯುವ ನೀರು, ಉದ್ಯೋಗ ಖಾತ್ರಿ ಯೊಜನೆ ಹಾಗೂ ಕೋವಿಡ್ ನಿಯಂತ್ರಣ ಸೇರಿದಂತೆ ಹೀಗೆ ಹಲವಾರು ವಿಚಾರಗಳು ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆಯಾಗುತ್ತಿದ್ದವು. ಆದರೆ, ಕ್ಷೇತ್ರದಲ್ಲಿ ಮನೆ ಕಟ್ಟಲು ಹಣ ಕೊಟ್ಟಿಲ್ಲ ಎಂಬ ವಿಚಾರವನ್ನು ಶಾಸಕರು ಪ್ರಸ್ತಾಪಿಸಿದ್ದಕ್ಕೆ ಸಚಿವ ಮಾಧುಸ್ವಾಮಿ ಕೋಪಗೊಂಡಿದ್ದಾರೆ. ನಿಮ್ಮ ಕ್ಷೇತ್ರದಲ್ಲೇ ಫ್ರಾಡ್ ಆಗಿದೆ ಎಂದು ಕುಟುಕಿದ್ದಾರೆ.


ಇದನ್ನೂ ಓದಿ: Karnataka Dam Water Level: ಆಲಮಟ್ಟಿ ಡ್ಯಾಂನಲ್ಲಿ 1 ಲಕ್ಷ ಕ್ಯೂಸೆಕ್ಸ್​ ದಾಟಿದ ಒಳಹರಿವು; ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ


ಯು ಹ್ಯಾವ್ ಕಮಿಟೆಡ್ ಫ್ರಾಡ್. ನೀವು ಫ್ರಾಡ್ ಮಾಡಿದ್ರಿಂದಲೇ ರಾಜ್ಯಾದ್ಯಂತ ಎರಡು ತಿಂಗಳು ಹಣ ರಿಲೀಸ್ ಮಾಡೋದು ವಿಳಂಬ ಆಯ್ತು‌‌. ತನಿಖೆಯಲ್ಲಿ ನಿಮ್ಮ ತಾಲೂಕು ಒಂದರಲ್ಲೇ 38 ಮನೆಗಳು ಫ್ರಾಡ್ ಆಗಿವೆ ಎಂದು ಸಚಿವ ಮಾಧುಸ್ವಾಮಿ ಏರುಧ್ವನಿಯಲ್ಲಿ ಶಾಸಕ ರಂಗನಾಥ್‌ಗೆ ತರಾಟೆಗೆ ತೆಗೆದುಕೊಂಡರು.


ಒಂದೆಡೆ ಕೂಲ್ ಆಗಿ ನಡೆಯುತ್ತಿದ್ದ ಸಭೆ ಶಾಸಕರ ಮತ್ತು ಸಚಿವರ ಮಾತಿನ ಚಕಮಕಿಗೆ ಕಾರಣವಾಗಿದ್ದು ಕುಣಿಗಲ್ ಕ್ಷೇತ್ರದಲ್ಲಿ ಬಡವರು ಮನೆ ಕಟ್ಟಲು ಹಣ ಬಿಡುಗಡೆಯಾಗಿಲ್ಲ ಎಂಬ ವಿಚಾರಕ್ಕೆ. ಇದಕ್ಕೆ ಪ್ರತಿಕ್ರೆಯೆ ನೀಡಿದ ಕುಣಿಗಲ್ ಶಾಸಕ ಡಾ.ರಂಗನಾಥ್, ಮೂರು ತಿಂಗಳಿಂದ ನಿಮ್ಮ ಸರ್ಕಾರದಲ್ಲಿ ಹಣ ಇಲ್ಲ, ಕೊಡೋಕಾಗ್ತಿಲ್ಲ ಅಂತ ಹೇಳಿ ಒಪ್ಪಿಕೊಳ್ತೀವಿ. ಆದ್ರೆ ಕೊಟ್ಟಿದ್ದೀವಿ ಅಂತ ಸುಳ್ಳು ಹೇಳ್ಬೇಡಿ. ಇನ್ನೂ ನಿಮಗೆ ಸಮಾಧಾನ ಇಲ್ಲ ಅಂದ್ರೆ ತನಿಖೆ ಮಾಡಿಕೊಳ್ಳಿ. ಇದು ಬರೀ ನಮ್ಮ ಕ್ಷೇತ್ರದ ಸಮಸ್ಯೆ ಅಲ್ಲ ಇಡಿ ಜಿಲ್ಲೆಯ ಸಮಸ್ಯೆ ಎಂದು ಹೇಳಿದರು.


ಸಚಿವರು ಫ್ರಾಡ್ ಆಗಿದೆ ಎಂದು ಮಾಡಿದ ಆರೋಪದ ಬಗ್ಗೆ ಮಾತನಾಡಿದ ಶಾಸಕ ಡಾ. ರಂಗನಾಥ್, ಸಚಿವರು ತಮಗೆ ವೈಯಕ್ತಿಕವಾಗಿ ಹಾಗಂದಿಲ್ಲ. ತಾಲೂಕಿನಿಂದ ಫ್ರಾಡ್ ಆಗಿದೆ ಎಂದರು ಎಂದು ಸ್ಪಷ್ಟಪಡಿಸಿದರು.


ಇದನ್ನೂ ಓದಿ: ಕೋಲಾರದ ಟೊಮೆಟೋ ಬೆಳೆಗಾರರಿಗೆ ಸಂಕಷ್ಟ ತಂದಿಟ್ಟ ಮುಂಬೈ ಮಹಾಮಳೆ


ಒಟ್ಟಾರೆಯಾಗಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್-19ರ ಸಮಸ್ಯೆ ನಡುವೆ ನಡೆದ ಈ ಬಾರಿಯ ಮೊದಲ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಇದಾಗಿದೆ. ಆದರೆ ಇಂತಹ ಗಂಭೀರ ಪರಿಸ್ಥಿತಿಯಲ್ಲಿ ತುಮಕೂರು ನಗರ ಶಾಸಕ ಜ್ಯೋತಿಗಣೇಶ್, ಪಾವಗಡ ಶಾಸಕ ವೆಂಕಟರಮಣಪ್ಪ, ತುರುವೆಕೆರೆ ಶಾಸಕ ಮಸಾಲೆ ಜಯರಾಮ್ ಹಾಗೂ ಕುಣಿಗಲ್ ಶಾಸಕ ಡಾ.ರಂಗನಾಥ್ ಸೇರಿದಂತೆ ಕೇವಲ ನಾಲ್ಕು ಮಂದಿ ಶಾಸಕರು ಮಾತ್ರ ಹಾಜರಾಗಿದ್ದು, ಇತರೆ ಶಾಸಕರ ಗೈರು ಎದ್ದು ಕಾಣುತ್ತಿತ್ತು. ಜಿಲ್ಲೆಯಲ್ಲಿ 2020-21ನೇ ಸಾಲಿನ ಮೊದಲ ತ್ರೈಮಾಸಿಕ ಕೆಡಿಪಿ ಸಭೆಗೆ ಅದ್ಯಾಕೆ ಉಳಿದ ಶಾಸಕರು ಗೈರಾಗಿದರೋ ಅವರೇ ಉತ್ತರಿಸಬೇಕಿದೆ.

Published by:Vijayasarthy SN
First published: